ವೈವಿಧ್ಯಮಯ ಜನ್ಮಾಷ್ಟಮಿ: ಪುಟಾಣಿಗಳಿಂದ ತಾಳ ನಮನ

ಪ್ರಕಟಣೆ

ಬೆಂಗಳೂರು: ಗಿರಿನಗರ ಶ್ರೀರಾಮಾಶ್ರಮದಲ್ಲಿ ಆ.೨೩ರಂದು ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವೈವಿಧ್ಯಮಯವಾಗಿ ಆಚರಿಸಲಾಗುತ್ತಿದೆ.

 

ಬೆಳಿಗ್ಗೆ ೧೦ ಗಂಟೆಗೆ ಪುಟಾಣಿಗಳಿಗೆ ಕೃಷ್ಣ- ರಾಧೆ ವೇಷ ಸಪರ್ಧೆ, ಮೊಸರು ಕುಡಿಕೆ, ಮಕ್ಕಳಿಗೆ ರಸಪ್ರಶ್ನೆ, ಬಾಳೆಹಣ್ಣಿನ ಗೊನೆ ಸ್ಪರ್ಧೆ, ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ಹಗ್ಗ ಜಗ್ಗಾಟ ಸ್ಪರ್ಧೆ, ಮೊಸರು ಕುಡಿಕೆ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ.

 

ಸಂಜೆ ೬.೪೫ಕ್ಕೆ ಧಾರಾ ರಾಮಾಯಣ ಪ್ರವಚನ, ಮಧ್ಯರಾತ್ರಿ ೧೨ ಗಂಟೆಗೆ ಶ್ರೀಕೃಷ್ಣ ಜನ್ಮೋತ್ಸವ ಆಚರಿಸಲಾಗುವುದು ಎಂದು ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ರಮೇಶ್ ಹೆಗಡೆ ಪ್ರಕಟಣೆಯಲ್ಲಿ ಹೇಳಿದ್ದಾರೆ.

 

ತಾಳ ನಮನ

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುಷ್ಕರ ತಂಡದ ಪುಟಾಣಿಗಳು ವಿಶಿಷ್ಟ ತಾಳ ನಮನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ವಿವಿಧ ತಾಳಗಳ ವಿನ್ಯಾಸದ ಮೂಲಕ ಹಾಗೂ ತಬಲಾ ವಾದ್ಯದ ವಿವಿಧ ರಚನೆಗಳನ್ನು ಲೆಹರಾ ಮತ್ತು ಕೊಳಲಿನ ಬಂದಿಶ್‌ಗಳ ಸಹಾಯದಿಂದ ಪ್ರಸ್ತುತಪಡಿಸುವ ವಿಶಿಷ್ಟ ಕಾರ್ಯಕ್ರಮ ಇದು. ಜತೆಗೆ ಕೊಳಲು, ಹಾರ್ಮೋನಿಯಂ, ಗಾಯನ ಮೂಲಕ ಶ್ರೀಕೃಷ್ಣನ ಹಾಗೂ ರಾಮಕೀರ್ತನೆಗಳನ್ನು ಭಕ್ತಿನಮನ ಪ್ರಸ್ತುತಪಡಿಸಲಾಗುತ್ತದೆ ಎಂದು ಸಾಕ್ಷಾತ್ ಸಂದೇಶ ವಿಭಾಗದ ಶ್ರೀಸಂಯೋಜಕಿ ಅನುರಾಧಾ ಪಾರ್ವತಿ ಹೇಳಿದ್ದಾರೆ.

 

ತಬಲಾದಲ್ಲಿ ಪ್ರದ್ಯುಮ್ನ, ಶ್ರೀಕರ, ಸ್ಕಂದ, ಲಕ್ಷ್ಯ, ಶಶಾಂಕ್, ಪ್ರೀತಿ ಪ್ರಸನ್ನ, ಪ್ರಣವ್ ಹಾಗೂ ಸುದರ್ಶನ್, ಕೊಳಲಿನಲ್ಲಿ ಕಮಲ್ ಹಾಗೂ ಹಾರ್ಮೋನಿಯಂ/ ಗಾಯನದಲ್ಲಿ ಚಿನ್ಮಯ ಸಹಕರಿಸುವರು.

Author Details


Srimukha

Leave a Reply

Your email address will not be published. Required fields are marked *