” ಶ್ರೀಗುರು ಎಂಬ ದಿವ್ಯಶಕ್ತಿಗೆ ಅನವರತ ಮಣಿವೆ ” : ಹೊನ್ನಮ್ಮ ಯು ಭಟ್, ಪದಾಳ

  ” ಶ್ರೀಮಠದ ಸೇವೆಯಲ್ಲಿ ದೊರಕುವ ಆತ್ಮತೃಪ್ತಿ ಬೇರೆಲ್ಲೂ ಸಿಗುವುದಿಲ್ಲ, ಶ್ರೀಗುರುಗಳ ಅನುಗ್ರಹದಿಂದ ಅದೆಷ್ಟೋ ಕಾರ್ಯಗಳು ಮನದ ಸಂಕಲ್ಪದಂತೆಯೇ ಈಡೇರಿದೆ. ಶ್ರೀಗುರುಗಳ ದಿವ್ಯಶಕ್ತಿ ನಮ್ಮನ್ನು ಬದುಕಿನ ಅದೆಷ್ಟೋ ಸಂಕಷ್ಟಗಳಿಂದ ಪಾರು ಮಾಡಿದೆ ” ಎನ್ನುತ್ತಾರೆ ಉಪ್ಪಿನಂಗಡಿ ಮಂಡಲದ, ಉಪ್ಪಿನಂಗಡಿ ವಲಯದ ಮಾತೃಪ್ರಧಾನೆಯಾಗಿರುವ ಹೊನ್ನಮ್ಮ ಯು. ಭಟ್. ಸರ್ಪಂಗಳ ಮೂಲದ ಕಾಂತಬೈಲು ಕೃಷ್ಣ ಭಟ್ ಮತ್ತು ಗಂಗಮ್ಮ ದಂಪತಿಗಳ ಪುತ್ರಿಯಾದ ಹೊನ್ನಮ್ಮ ನಡುಸಾರು ಮೂಲದ ಮಚ್ಚಿಮಲೆ ಉದಯಶಂಕರ ಭಟ್ ಅವರ ಪತ್ನಿ. ಪ್ರಸ್ತುತ ಉಪ್ಪಿನಂಗಡಿ ಸಮೀಪದ ಪದಾಳ ಎಂಬಲ್ಲಿ […]

Continue Reading

ಕೃಷಿಗೂ ಜೈ ಓದಿಗೂ ಸೈ ಎಂದ ಗಿರೀಶಕೃಷ್ಣ

  ಇತ್ತೀಚಿನ ದಿನಗಳಲ್ಲಿ ಯುವಕರು ಕೃಷಿಯೆಡೆಗೆ ವಿಮುಖರಾಗುತ್ತಿದ್ದು, ಉದ್ಯೋಗವನ್ನು ಅರಸಿ ಮಹಾನಗರದತ್ತ ವಲಸೆ ಹೋಗುತ್ತಿರುವುದು ಕಾಣುತ್ತೇವೆ. ಆದರೆ ಇಲ್ಲೊಬ್ಬರು ಓದಿನ ಜೊತೆಗೆ ಕೃಷಿಯಲ್ಲೂ ಹೆಜ್ಜೆ ಮೂಡಿಸುತ್ತಿದ್ದಾರೆ. ಗಡಿನಾಡು ಕಾಸರಗೋಡಿನ ಹರಿಪ್ರಸಾದ ಕರಣಿ ಮತ್ತು ವಿದ್ಯಾ ಸರಸ್ವತಿ ದಂಪತಿಗಳ ಪುತ್ರ ಗಿರೀಶಕೃಷ್ಣ ಕರಣಿ ಓದಿನ ಜೊತೆಗೆ ಕೃಷಿಯಲ್ಲೂ ತೊಡಗಿಸಿಕೊಂಡು ಗಮನಸೆಳೆಯುತ್ತಿದ್ದಾರೆ. ಚಿಕ್ಕಂದಿನಿಂದಲೂ ಕೃಷಿ ಕುರಿತು ಆಸಕ್ತಿ ಹೊಂದಿದ್ದ ಗಿರೀಶಕೃಷ್ಣ ಅವರು, ಇತ್ತೀಚಿನ ಕೆಲವರ್ಷಗಳಿಂದ ಮತ್ತಷ್ಟು ತೊಡಗಿಸಿಕೊಂಡಿದ್ದಾರೆ. ಅಲಸಂದೆ, ಕುಂಬಳಕಾಯಿ, ಬಾಳೆ, ಪಪ್ಪಾಯಿ, ಸೌತೆಕಾಯಿ… ಹೀಗೆ ವಿವಿಧ ಬಗೆಯ ತರಕಾರಿ, […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೮

ಅರಿವಿನ ಬೆಳಕನ್ನು ನೀಡಿ ಅಂತರಂಗವನ್ನು ಪ್ರಕಾಶಗೊಳಿಸುವುದೇ ಉದ್ದೇಶವಾದ ಅವಿಚ್ಛಿನ್ನ ಗುರುಪರಂಪರೆಯು ಹದಿಮೂರನೆಯ ಪೀಠಾಧೀಶರಾಗಿ ಶ್ರೀ ಶ್ರೀ ಅಭಿನವ ರಾಘವೇಶ್ವರಭಾರತೀ ಮಹಾಸ್ವಾಮಿಗಳಿಗೆ ಯೋಗಪಟ್ಟವನ್ನಿತ್ತಿತ್ತು. ಹಿಂದಿನ ಎಲ್ಲಾ ಗುರುಗಳಂತೆಯೇ ಬ್ರಹ್ಮವಿದ್ಯಾನಿಷ್ಠರೂ, ತಪೋನಿಧಿಗಳೂ ಆಗಿದ್ದ ಪೂಜ್ಯ ಶ್ರೀಗಳ ಮಾರ್ಗದರ್ಶನವನ್ನು ಕೆಳದಿ, ಇಕ್ಕೇರಿ, ಹಂಪೆ ಮೊದಲಾದ ಸಂಸ್ಥಾನಗಳ ಅರಸರು ಪಡೆಯುತ್ತಿದ್ದರು. ಪರಮಪೂಜ್ಯ ಶ್ರೀ ಅಭಿನವ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಕಾಲದಲ್ಲಿ  ವಿಜಯನಗರದ ವೀರನರಸಿಂಹರಾಯನು  ಪರಮಾರಾಧ್ಯಮೂರ್ತಿ ಶ್ರೀರಾಮಚಂದ್ರ ದೇವರ ಅಮೃತಪಡಿ ಮತ್ತು ಶ್ರೀರಾಮಚಂದ್ರಾಪುರ  ಅಗ್ರಹಾರಕ್ಕೆ ಭೂದಾನವಾಗಿ ಸಹಿರಣ್ಯೋದಕ ಪೂರ್ವಕವಾಗಿ ದಾನ ನೀಡುತ್ತಾನೆ (ಕ್ರಿ.ಶ ೧೫೦೭). ಈ […]

Continue Reading

” ಬದುಕಿನ ನೋವುಗಳಿಗೆ ಮುಕ್ತಿ ದೊರಕಿದ್ದು ಶ್ರೀಮಠದ ಸೇವೆಯಲ್ಲಿ” : ಪ್ರೇಮಲತಾ ಉಪ್ಪಿನಂಗಡಿ

  ” ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ಇರುವ ಕಾರಣ ಶ್ರೀಗುರುಗಳ ಕಾರುಣ್ಯದ ಬಗ್ಗೆ ತಿಳಿದಿತ್ತು. ಬದುಕಿನ ಅತ್ಯಂತ ಸಂಕಷ್ಟದ ಸಂದರ್ಭದಲ್ಲಿ ಸಂಪೂರ್ಣ ಶರಣಾಗಿದ್ದು ಶ್ರೀಗುರು ಚರಣಕ್ಕೆ. ಶ್ರೀಗುರುಗಳ ಆಶೀರ್ವಚನಗಳೇ ಭರವಸೆಯ ಸಾಂತ್ವನದ ನುಡಿಗಳಾಗಿ ಕತ್ತಲ ಬಾಳಿಗೆ ಬೆಳಕಿನ ಹಾದಿಯನ್ನು ತೋರಿದಾಗ ಸಂಪೂರ್ಣವಾಗಿ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡೆ..ಇದರಲ್ಲಿ ದೊರಕುವ ನೆಮ್ಮದಿ, ಭರವಸೆ ಬೇರೆಲ್ಲೂ ಸಿಗಲಾರದು ಎಂಬುದು ನನ್ನ ಅನುಭವದ ನುಡಿ ” ಎನ್ನುತ್ತಾರೆ ಉಪ್ಪಿನಂಗಡಿ ಮಂಡಲದ , ಉಪ್ಪಿನಂಗಡಿ ವಲಯದ ನೆಕ್ಕಿಲಾಡಿ ಘಟಕದ ಪ್ರೇಮಲತಾ ಕಾಂಚನ ಅವರು. ಮಂಚಿಕಜೆಯ […]

Continue Reading

ಶ್ರೀಮಠದಂಗಳದಲ್ಲಿ ಬೆಳೆದ ವೃಕ್ಷ : ಜೀವಿಕಾ ವಿಭಾಗ (ದಿಶಾದರ್ಶಿ)

ಯಾವಾಗಲೂ ಸಮಾಜಮುಖಿ ಕಾರ್ಯಗಳನ್ನೇ ಮಾಡುತ್ತಾ ಸಮಾಜದ ಒಳಿತನ್ನೇ ಬಯಸುವ ನಮ್ಮ ನೆಚ್ಚಿನ ಶ್ರೀ ಸಂಸ್ಥಾನದವರು ಉದ್ಯೋಗವನ್ನರಸಿ ಬರುವ ತಮ್ಮ ಶಿಷ್ಯರಿಗೆ ಅನುಗ್ರಹಿಸಲೆಂದೇ 5 ವರ್ಷಗಳ ಹಿಂದೆ ಬಿತ್ತಿದ “ದಿಶಾದರ್ಶಿ” ಯೆಂಬ ಬೀಜ, ಶ್ರೀಮಠವೆಂಬ ಅಂಗಳದ ಫಲವತ್ತಾದ ಮಣ್ಣಿನಲ್ಲಿ ಬೆಳೆದು ಹೆಮ್ಮರವಾಗಿ ಶ್ರೀಗಳ ಅನುಗ್ರಹ ಹಾಗೂ ಆಶೀರ್ವಾದಗಳೊಂದಿಗೆ ಇಂದು ರುಚಿಯಾದ ಹಣ್ಣುಗಳನ್ನು ನೀಡಲಾರಂಬಿಸಿದೆ. ಈ ಬರಹದ ಹೊತ್ತಿಗೆ ಫಲಾನುಭವಿಗಳ ಸಂಖ್ಯೆ 577….. ಹಿನ್ನಲೆ : ನಮ್ಮ ಮಠದ ಹೆಚ್ಚಿನ ಶಿಷ್ಯರ (ಹವ್ಯಕರು ಮತ್ತು ಹವ್ಯಕೇತರರು) ಮೂಲ ಉತ್ತರ ಕನ್ನಡ, […]

Continue Reading

ಯಶಸ್ಸಿನ ಹಾದಿಯತ್ತ ಯುವ ಟೆಕ್ ಉದ್ಯಮಿ ಶ್ರೀನಿಧಿ

  ವಿಜ್ಞಾನ ತಂತ್ರಜ್ಞಾನವೆಂದರೆ ಇವರಿಗೆ ಪ್ರಾಥಮಿಕ ಶಾಲಾ ದಿನಗಳಲ್ಲೇ ಅಚ್ಚುಮೆಚ್ಚು. ಅಂದಿನಿಂದಲೇ ತಂತ್ರಜ್ಞಾನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ತವಕದಿಂದ ಅಂತರ್ಜಾಲದ ಮೂಲಕ ಮಾಹಿತಿಯನ್ನು ಅನ್ವೇಷಿಸಲು ಆರಂಭಿಸಿದರು. ನಿರಂತರ ಪ್ರಯತ್ನ, ತಾಳ್ಮೆ, ಪರಿಶ್ರಮದಿಂದಾಗಿ 8ನೇ ತರಗತಿಯಲ್ಲಿರುವಾಗಲೇ ಯುವ ಟೆಕ್ ಉದ್ಯಮಿ ಎಂದು ಗುರುತಿಸಿಕೊಂಡರು! ಹೌದು. ದಕ್ಷಿಣಕನ್ನಡ ಜಿಲ್ಲೆಯ ಕಲ್ಲಡ್ಕಡ ರವಿಶಂಕರ್ ಭಟ್ ಮತ್ತು ಸರಸ್ವತಿ ದಂಪತಿಗಳ ಪುತ್ರ ಶ್ರೀನಿಧಿ ಆರ್.ಎಸ್. ಇಂದು ಯುವ ಟೆಕ್ ಉದ್ಯಮಿಯಾಗಿ ಗುರುತಿಸಿಕೊಂಡು ಗಮನಸೆಳೆಯುತ್ತಿದ್ದಾರೆ. 8ನೇ ತರಗತಿಯಲ್ಲಿರುವಾಗ ಸ್ನೇಹಿತರೊಂದಿಗೆ ವಿವಿಧ ಮಾಹಿತಿಯನ್ನು ಕಲೆ ಹಾಕುತ್ತಿದ್ದ ಶ್ರೀನಿಧಿ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೭

ಅರಿವಿನ ಪರಂಪರೆಯು ಪ್ರಥಮ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಮುಂದುವರಿಕೆಯಾಗಿ ಶ್ರೀಮದ್ರಾಮಚಂದ್ರಭಾರತೀ ಮಹಾಸ್ವಾಮಿಗಳ ರೂಪದಿಂದ ಸಾಗಿತು. ರಘೂತ್ತಮ ಮಠದ ಹನ್ನೆರಡನೆಯ ಪೀಠಾಧೀಶರಾದ ಶ್ರೀಮದ್ರಾಮಚಂದ್ರ ಭಾರತೀ ಮಹಾಸ್ವಾಮಿಗಳು ಹಿಂದಿನ ಎಲ್ಲಾ ಗುರುಗಳಂತೆಯೇ ಪರಮ ತಪಸ್ವಿಗಳೂ ಮತ್ತು ಶ್ರೇಷ್ಠ ಧಾರ್ಮಿಕ ನೇತಾರರಾಗಿದ್ದರು. ಇವರ ಅದ್ವೈತಾಮೃತ ಸವಿಯು ಕರ್ಣಾಕರ್ಣಿಕೆಯಾಗಿ ಹೊನ್ನೆಕಂಬಳಿ ಅರಸರ ಕಿವಿಗೂ ತಲುಪಿತು. ಆಗಿನ ಕಾಲದ ಅರಸರು ಸ್ವಯಂ ಶಾಸ್ತ್ರಜ್ಞರಾಗಿದ್ದರಲ್ಲದೇ ಧರ್ಮರಾಜ್ಯಕ್ಕಾಗಿಯೇ ರಾಜತ್ವದ ಅನಿವಾರ್ಯತೆ ಎಂಬುದನ್ನು ಅರಿತಿದ್ದವರಾಗಿದ್ದರು. ಧರ್ಮಸಮಾಜದ ಮೂಲ ಮತ್ತು ಅಂತಿಮ ಗುರಿಯೇ ಅರಿವಿನ ಪ್ರಾಪ್ತತೆ ಎಂಬುದು ಜನ್ಮತಃ ಅವರಿಗೆ […]

Continue Reading

ಪ್ರತಿನಿತ್ಯವೂ ಗೋಸೇವೆ ಮಾಡುವ ಪುಣ್ಯಾವಕಾಶ ದೊರಕಿದೆ” : ಮಂಗಲಾ ನೀಲಕಂಠ ಉಪಾಧ್ಯಾಯ

ಹೊನ್ನಾವರ ಮಂಡಲದ ಭಟ್ಕಳ ವಲಯದ ದೇವಿಕಾನ ,ಕಾಯ್ಕಿಣಿಯ ಮಂಗಲಾ ನೀಲಕಂಠ ಉಪಾಧ್ಯಾಯ ಅವರು ನಿತ್ಯ ಗೋಸೇವೆಯಲ್ಲಿ ಸಂತೃಪ್ತಿ ಕಂಡವರು. ಸಾಗರದ ಸಮೀಪದ ವರದಹಳ್ಳಿಯ ಎಡಜಿಗಳೆ ಮಂಗಲಾ ಅವರ ತವರುಮನೆ. ಗೃಹಿಣಿಯಾಗಿರುವ ಇವರು ತಮ್ಮ ಗೃಹಕೃತ್ಯಗಳ ನಡುವೆ ಶ್ರೀಮಠದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಭಟ್ಕಳ ವಲಯದ ಮಾತೃ ಪ್ರಧಾನೆಯಾಗಿ ಆರು ವರ್ಷಗಳ ಕಾಲ ಸೇವೆ ಮಾಡಿದ ಇವರು ಪ್ರಸ್ತುತ ವಲಯ ಬಿಂದು ಸಿಂಧು ಸಂಚಾಲಕಿಯಾಗಿ ಶ್ರೀಗುರು ಸೇವೆ ಮಾಡುತ್ತಿದ್ದಾರೆ. ” ಚಿಕ್ಕಂದಿನಿಂದಲೇ ತವರುಮನೆಯಲ್ಲಿ ಗೋವುಗಳ ಒಡನಾಟದೊಂದಿಗೆ ಬೆಳೆದವಳು ನಾನು, […]

Continue Reading

ಸಂಗೀತ ಸಾಧಕ ಶ್ರೀಚರಣ ನೀರಮೂಲೆ

9ನೇ ವಯಸ್ಸಿಗೇ ಸಂಗೀತ ಕಲೆಯತ್ತ ಆಕರ್ಷಣೆಗೊಂಡ ಈ ಪ್ರತಿಭೆ ಇಂದು ಸಂಗೀತ ಲೋಕದಲ್ಲಿ ತನ್ನದೇ ಆದ ಹೆಜ್ಜೆ ಗುರುತನ್ನು ಮೂಡಿಸುತ್ತಿದ್ದಾನೆ. ಕಲ್ಲಡ್ಕದ ನೀರಮೂಲೆಯ ಪ್ರವೀಣ್ ಕುಮಾರ್ ಮತ್ತು ಜಯಶ್ರೀ ನೀರಮೂಲೆ ದಂಪತಿಯ ಪುತ್ರ ಶ್ರೀಚರಣ ನೀರಮೂಲೆ ಸಂಗೀತ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈಯ್ಯುತ್ತಿದ್ದಾನೆ. 4ನೇ ತರಗತಿಯಲ್ಲಿದ್ದಾಗ ಕುಲದೀಪ ಎಂ. ಪೈ ಅವರ ‘ವಂದೇ ಗುರು ಪರಂಪರಾಂ’ ಸರಣಿಯಲ್ಲಿ ಹಾಡುವ ಮೂಲಕ ಸಂಗೀತ ಪಯಣ ಆರಂಭಿಸಿದ ಶ್ರೀಚರಣ್, ಈವರೆಗೆ ವಿವಿಧ ಕಡೆಗಳಲ್ಲಿ 20ಕ್ಕೂ ಅಧಿಕ ಶಾಸ್ತ್ರೀಯ ಸಂಗೀತ ಕಚೇರಿಗಳನ್ನು ನೀಡಿದ್ದಾನೆ. […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೬

ಅರಿವಿನ ನಿರರ್ಗಳ ಹರಿವಿಗಾಗಿ ಅವಶ್ಯವಾಗಿ ಅವಿಚ್ಛಿನ್ನತೆಯಿಂದ ಮುನ್ನಡೆಯಲೇಬೇಕಾದ ಗುರುಪರಂಪರೆ, ದ್ವಿತೀಯ ಚಿದ್ಬೋಧ ಭಾರತೀಯತಿಗಳಿಂದ  ಯೋಗ್ಯ ಅರಿವಿನಮೂರ್ತಿಗೆ ಪಟ್ಟಗೈದು ಶ್ರೀರಾಘವೇಶ್ವರಭಾರತೀ ಎಂಬ ಶುಭಾಭಿಧಾನವಗೈದಿತು. ಇವರೇ ಪರಂಪರೆಯ ಪ್ರಥಮ ಶ್ರೀರಾಘವೇಶ್ವರಯತಿಗಳು. ಶ್ರೀಗಳು ತಪೋಧನರೂ ವಾಗ್ಮಿಗಳೂ ಅಲ್ಲದೇ ಖಗೋಳಶಾಸ್ತ್ರಜ್ಞರೂ ಆಗಿದ್ದರೆಂಬುದು ಇತಿಹಾಸದ ಉಲ್ಲೇಖ. ಪೂಜ್ಯರ ಕಾಲ ಶಾಲಿವಾಹನ ಶಕವರ್ಷ೧೩೮೬(ಕ್ರಿ.ಶ.೧೪೮೬).ಆ ಕಾಲದ ಪ್ರಸಿದ್ಧ ವಿದ್ಯಾಕೇಂದ್ರವಾಗಿದ್ದ ವಾರಣಾಸಿಯಲ್ಲಿ ಸಾಕಷ್ಟು ಕಾಲವುಳಿದು ಅಧ್ಯಯನ ಮಾಡಿದ ಪೂಜ್ಯರು ಬರುವಾಗ ಕಾಶಿಯಿಂದ ಒಂದುಸಹಸ್ರ ಶಾಲಿಗ್ರಾಮಗಳನ್ನು ತಂದು ರಘೂತ್ತಮ ಮಠದಲ್ಲಿ ಸ್ಥಾಪಿಸಿದರು. ಇದನ್ನು ಗುರುಕೃಪಾತರಂಗಿಣಿ ಉಲ್ಲೇಖಿಸುತ್ತದೆ.. “ಬಾಲ್ಯೇ ಯೋಸಾವಲಭತ ಗುರೋಃ […]

Continue Reading

” ಶ್ರೀ ಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಆಶೀರ್ವಚನಗಳೇ ಪ್ರೇರಣೆ ” : ಮಾಲಿನಿ ಕೆ. ಭಟ್ಟ

ಹೊನ್ನಾವರ ಮಂಡಲದ ಭಟ್ಕಳ ವಲಯದ ಗುರಿ ತಲುಪಿದ ಮಾಸದ ಮಾತೆಯಾಗಿರುವ  ಮಾಲಿನಿ ಕೆ. ಭಟ್ ಬಲಸೆಯ ಕೃಷ್ಣಾನಂದ ಶಿವರಾಮ ಭಟ್ಟರ ಪತ್ನಿಯಾಗಿದ್ದಾರೆ. ಹಲವಾರು ವರ್ಷಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ಭಟ್ಕಳದ ಕಾರಗದ್ದೆಯ ವಾಸುದೇವ ವೆಂಕಟರಮಣ ಭಟ್ಟ ಹಾಗೂ ಸರಸ್ವತಿ ವಾಸುದೇವ ಭಟ್ಟ ಇವರ ಪುತ್ರಿ. ಶ್ರೀ ರಾಮಚಂದ್ರಾಪುರ ಮಠ ಹೊಸನಗರದಲ್ಲಿ ನಡೆದ ಶ್ರೀ ರಾಮಾಯಣ ಮಹಾಸತ್ರ, ವಿಶ್ವ ಗೋಸಮ್ಮೇಳನಗಳಲ್ಲಿ ಕಾರ್ಯಕರ್ತೆಯಾಗಿ ಭಾಗವಹಿಸಿದ ಅನುಭವ ಇವರಿಗಿದೆ. ” ಬಾಲ್ಯದಿಂದಲೇ ಗೋವುಗಳ ಮೇಲೆ ತುಂಬಾ ಪ್ರೀತಿಯಿತ್ತು. ಶ್ರೀಗುರುಗಳ ವಿವಿಧ […]

Continue Reading

ಶಿಕ್ಷಣ ಮತ್ತು ಸಾಂಸ್ಕೃತಿಕ ಸಾಧಕ ಶ್ರೀಗಣೇಶ ಹೆಗಡೆ

  ಶಿಕ್ಷಣ, ಯಕ್ಷಗಾನ, ಸಾಹಿತ್ಯ, ಭಾಷಣ, ಚರ್ಚಾಕೂಟ ಹೀಗೆ ವಿವಿಧ ರಂಗಗಳಲ್ಲಿ ತೊಡಗಿಸಿಕೊಂಡು ಬಹುಮುಖ ಪ್ರತಿಭೆ ಎನಿಸಿಕೊಂಡವರು ಶ್ರೀಗಣೇಶ ಹೆಗಡೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಗೋಡಿನ ಕೃಷಿ ಕುಟುಂಬದ ಹಿನ್ನೆಲೆಯ ಸುಬ್ರಾಯ ಹೆಗಡೆ ಮತ್ತು ಮಹಾಲಕ್ಷ್ಮೀ ದಂಪತಿಗಳ ಪುತ್ರ ಶ್ರೀಗಣೇಶ ಹೆಗಡೆ ಅಪರೂಪದ ಸಾಧಕರಲ್ಲೊಬ್ಬರು. ಕುಮಟಾದ ಡಾ.ಎ.ವಿ. ಬಾಳಿಗಾ ಮಹಾವಿದ್ಯಾಲಯದಲ್ಲಿ ಬಿಎ‌ಸ್ಸಿ ಪದವಿ ಪಡೆದ ಇವರು, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೇ ಪುಣೆಯ ಭಾರತೀಯ ವಿಜ್ಞಾನ ಶಿಕ್ಷಣ ಹಾಗೂ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೫

ಅರಿವಿಗಾಗಿಯೇ ಬೆಳೆದ ಗುರುಪರಂಪರೆ ಮಠೀಯ ವ್ಯವಸ್ಥೆಯನ್ನು ಚೆನ್ನಾಗಿ ಪಾಲಿಸಿಕೊಂಡು ಹಾಗೂ ಅಶಾಶ್ವತವಾದ ಈ ಪಾಂಚಭೌತಿಕ ಪ್ರಕೃತಿ ಪಾತ್ರೆಯ ಬದಲಿಕೆಯ ಅನಿವಾರ್ಯದಿಂದಾಗಿ ಇನ್ನೊಂದು ಪಾಂಚಭೌತಿಕ ಶರೀರದಲ್ಲಿ ಪಾತ್ರತ್ವವನ್ನು ನಿರ್ವಹಿಸುತ್ತಾ ಬಂದಿರುವುದನ್ನು ಇಲ್ಲಿಯವರೆಗೂ ಕಾಣುತ್ತಾ ಬಂದೆವು. ಅಂತೆಯೇ ಶ್ರೀ ಶ್ರೀ ನಿತ್ಯಾನಂದ ಭಾರತೀ ಮಹಾಸ್ವಾಮಿಗಳು ಶ್ರೀ ಶ್ರೀ ನಿತ್ಯಬೋಧಘನೇಂದ್ರ ಭಾರತಿಗಳಿಗೆ ಯೋಗಪಟ್ಟವನ್ನಿತ್ತರು. ಈ ಆರನೆಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ನಿತ್ಯಬೋಧಘನೇಂದ್ರ ಭಾರತೀ ಶ್ರೀಗಳಿಂದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳ ಮೂಲಕ ಪರಂಪರೆ ಮುಂದುವರೆದು ಎಂಟನೆಯವರಾಗಿ ಶ್ರೀ ಶ್ರೀ […]

Continue Reading

” ಮನೆಯ ಗೋವುಗಳಷ್ಟೇ ಕಾಳಜಿ ಶ್ರೀಮಠದ ಗೋವುಗಳ ಮೇಲೂ ಇದೆ ” : ವಿಜಯಲಕ್ಷ್ಮಿ ನರ್ಕಳ

ಶ್ರೀಮಠದ ಸೇವೆಯಲ್ಲಿ ಸುಮಾರು ಹತ್ತು ವರ್ಷಗಳಿಂದ ತೊಡಗಿಸಿಕೊಂಡವರು ಇವರು. ಮಾಸದ ಮಾತೆಯಾಗಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದ್ದು ಲಕ್ಷ್ಮೀ ಪ್ರಕಾಶ್ ಇಳಂತಿಲ.ಮೊದಲು ಹೋದ ಮನೆಯಲ್ಲಿ ದೊರಕಿದ್ದು ಅತ್ಯಂತ ಕಹಿ ಅನುಭವ. ಕಣ್ಣೀರು ಸುರಿಸುತ್ತಲೇ ಹೊರಗೆ ನಡೆಯಬೇಕಾಗಿ ಬಂದ ಪರಿಸ್ಥಿತಿ. ‌ಆದರೂ ಶ್ರೀಗುರು ಚರಣಗಳಲ್ಲಿ ಇರಿಸಿದ ನಂಬಿಕೆ ಹುಸಿಯಾಗಲಿಲ್ಲ. ಗೋಪ್ರೇಮಿಯೊಬ್ಬರು ಒಂದು ಹಸುವಿನ ಒಂದು ವರ್ಷದ ನಿರ್ವಹಣಾ ವೆಚ್ಚವನ್ನು ಸಂಪೂರ್ಣವಾಗಿ ನೀಡಿದರು. ಇದರಿಂದಾಗಿ ಗುರಿ ತಲುಪಲು ಕಷ್ಟವಾಗಲಿಲ್ಲ.. ಇದು ಮಂಗಳೂರು ಮಂಡಲದ ಕಲ್ಲಡ್ಕ ವಲಯದ ಮಾತೃಪ್ರಧಾನೆಯಾಗಿರುವ ವಿಜಯಲಕ್ಷ್ಮಿ ನರ್ಕಳ ಅವರ […]

Continue Reading

ಅಪರೂಪದ ಬಹುಮುಖ ಪ್ರತಿಭಾವಂತ ಅಭಿನವರಾಮ್

10 ರ ಹರೆಯದ ಈ ಪೋರನಿಗೆ ಜಾದೂ ಅಂದರೆ ಅತ್ಯಂತ ಖುಷಿ. ಜಾದುವಿನ ಹಲವು ತಂತ್ರ, ಕೈಚಳಕ ಈತನಿಗೆ ಕರಗತವಾಗಿದೆ. ಜೊತೆಗೆ ಚಿತ್ರಕಲೆ, ಕ್ರಾಫ್ಟ್, ಕಲಿಕಾ ಮಾದರಿಯ ತಯಾರಿಕೆ, ವಿಜ್ಞಾನ ಮಾದರಿಯ ತಯಾರಿಕೆಯಲ್ಲೂ ಈತ ಎತ್ತಿದ ಕೈ! ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಪಾತೂರಿನ ಸದ್ಯ ಕೊಪ್ಪಳದ ನಿವಾಸಿ ಕೆ.ರಾಘವೇಂದ್ರ ಭಟ್ ಮತ್ತು ಪ್ರಮೀಳಾ ಭಟ್ ದಂಪತಿಯ ಪುತ್ರ ಕೆ.ಆರ್.ಅಭಿನವ್‌ರಾಮ್ ಭಟ್ ಈ ಬಹುಮುಖ ಪ್ರತಿಭಾವಂತ. ಕೊಪ್ಪಳದ ಎಸ್.ಎಫ್.ಎಸ್‌. ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈತ, […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೪

ಅರಿವಿನ ಮೂರ್ತಿಗಳೆಲ್ಲರೂ ಈ ಅರಿವು ಇಂತೆಯೇ ನಿರರ್ಗಳವಾಗಿ ಮತ್ತೊಂದು ಮೂರ್ತಿವೆತ್ತು ತಲೆತಲಾಂತರಗಳವರೆಗೂ ಉಳಿದು ಗುರುಪರಂಪರೆಯನ್ನು ಮುಂದುವರೆಸಲು ಶ್ರಮಿಸಿದುದನ್ನು ಈ ಹಿಂದಿನಿಂದಲೂ ನೋಡುತ್ತಾ ಬಂದೆವು.  ಈಗ ಮಠವೆಂಬ ವ್ಯವಸ್ಥೆಯಲ್ಲಿ ಪೂಜ್ಯ ಚಿದ್ಬೋಧ ಭಾರತಿಗಳು ಸಹ ತಮ್ಮ ಅಂತ್ಯಕಾಲದಲ್ಲಿ ಶ್ರೀ ಶ್ರೀ ನಿತ್ಯಾನಂದರೆಂಬ ಯತಿಶ್ರೇಷ್ಠರಿಗೆ ಧರ್ಮಾಚಾರ್ಯ ಸ್ಥಾನವನ್ನಿತ್ತು ಪಾರಂಪರಿಕವಾದ ಎಲ್ಲ ಮಠೀಯವಾದ ಪದ್ಧತಿಗಳು, ನಡಾವಳಿಗಳ ಬಗ್ಗೆ ಸೂಕ್ತವಾದ ತಿಳುವಳಿಕೆ ನೀಡಿ, ಪರಂಪರೆಯ ಮುಂದುವರಿಕೆಗೆ ಸಾಧನರಾಗಿ ತಾವು ಬ್ರಹ್ಮೀಭೂತರಾದರು. ಅರಿವಿನ ತೋರ್ಪಡಿಕೆಯ ಸುಲಲಿತ ಮಾರ್ಗಕ್ಕಾಗಿ ಆದಿಶಂಕರರು ತಮ್ಮ ಪ್ರಧಾನ ಶಿಷ್ಯರಿಗೆ ಜ್ಞಾನ […]

Continue Reading

” ಶ್ರೀ ಗುರುಗಳ ಅಭಯಹಸ್ತವೇ ಬದುಕಿನ ಶ್ರೀರಕ್ಷೆ  ” : ಶಾರದಾ ಕೃಷ್ಣ , ಗಿರಿನಗರ

” ಶ್ರೀ ಮಠದ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವುದು ಜೀವನದ ಅತ್ಯಂತ  ಹರ್ಷದ ಕ್ಷಣಗಳು. ಆ ನೆಮ್ಮದಿಯ, ಸಂತಸದ ಕ್ಷಣಗಳನ್ನು ವರ್ಣಿಸಲು ಸಾಧ್ಯವಿಲ್ಲ. ಮನಸ್ಸಿನಲ್ಲೇ ಬೇಡಿದ್ದನ್ನೂ ನಮಗೆ ಅನುಗ್ರಹಿಸುವ ಶ್ರೀಗುರುಗಳ ಅಭಯಹಸ್ತವೇ ಬದುಕಿನ ಶ್ರೀರಕ್ಷೆ ” ಎಂದು ಭಾವಪೂರ್ಣವಾಗಿ ನುಡಿಯುತ್ತಾರೆ ಬೆಂಗಳೂರು ದಕ್ಷಿಣ ಮಂಡಲದ ಗಿರಿನಗರ ವಲಯದ ಶಾರದಾ ಕೃಷ್ಣ ಅವರು. ದೈತೋಟದ ಶಂಕರನಾರಾಯಣ ಭಟ್, ವೆಂಕಟೇಶ್ವರಿ ಅಮ್ಮ ಅವರ ಪುತ್ರಿಯಾದ ಶಾರದಾ ಅವರಿಗೆ ಬಾಲ್ಯದಿಂದಲೇ ಹಸುಕರುಗಳೆಂದರೆ ಅತ್ಯಂತ ಪ್ರಿಯ. ತವರುಮನೆಯಲ್ಲಿ ಏಳೆಂಟು ಹಸುಗಳ ಒಡನಾಟದಲ್ಲಿ ಬೆಳೆದ ಶಾರದಾ […]

Continue Reading

ಮನಮೋಹನನ ಕುಂಚದಲ್ಲಿ ಅರಳಿದ ಚಂದದ ಕಲಾಕೃತಿಗಳು

  ಪುತ್ತೂರಿನ ಯುವ ಕಲಾವಿದ ಪಿ.ಎಂ.ಮನಮೋಹನ ತನ್ನ ಕುಂಚದಲ್ಲಿ ಪ್ರತಿದಿನವೂ ವಿಭಿನ್ನ ಚಿತ್ರಗಳನ್ನು ಬಿಡಿಸುವ ಮೂಲಕ ಜನಮನ್ನಣೆ ಪಡೆಯುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಕಲೆಯ ಬಗ್ಗೆ ಅಪಾರವಾದ ಆಸಕ್ತಿ ಹೊಂದಿದ್ದ ಮನಮೋಹನ, ಚಿಕ್ಕಂದಿನಿಂದಲೇ ಬೇರೆ ಬೇರೆ ಪುಸ್ತಕಗಳನ್ನು ನೋಡಿ ಚಿತ್ರ ಬಿಡಿಸುವ, ಬಣ್ಣ ಹಚ್ಚುವ ಅಭ್ಯಾಸ ಮಾಡುತ್ತಾ ಅಂದಿನಿಂದಲೇ ಕಲೆಯ ಬಲೆಯಲ್ಲಿ ಬಂಧಿಯಾದರು. ಮೂಲತಃ ಪುತ್ತೂರು ತಾಲೂಕಿನ ಕಾವು ಪಾಲಾಶತಡ್ಕದ ಪಿ.ವಿ.ಮುರಳಿನರಸಿಂಹ ಮತ್ತು ವಿದ್ಯಾಭಾರತೀ ದಂಪತಿಯ ಪುತ್ರ ಮನಮೋಹನ, ಈಶ್ವರಮಂಗಲದ ಗಜಾನನ ವಿದ್ಯಾಸಂಸ್ಥೆಯಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೩

ಶ್ರೀಮದಾಚಾರ್ಯ ಶಂಕರ ಭಗವತ್ಪಾದರಿಂದಲೇ ರಘೂತ್ತಮ ಮಠದ ಪ್ರಥಮ ಪೀಠಾಧಿಪತಿಯಾಗಿ ಆಯ್ಕೆಗೊಂಡ ಶ್ರೀಮದಾಚಾರ್ಯ ವಿದ್ಯಾನಂದರಿಂದ ಅರಿವಿನ ದೆಸೆಗಾಗಿ ಅನೇಕ  ಲೋಕಕಲ್ಯಾಣ ಕಾರ್ಯಗಳು ಜರುಗಿದವಲ್ಲದೇ, ಅರಿವಿನ ಅವಿಚ್ಛಿನ್ನ ಹರಿವಿಗಾಗಿ ಚಿದ್ಬೋಧಭಾರತಿಗಳನ್ನು ಪರಂಪರೆಯ ಉತ್ತರಾಧಿಕಾರಿಯಾಗಿ ನೇಮಿಸುವ ಮೂಲಕ ಆ ಪರಮ ತತ್ವವನ್ನು ತೋರುವ  ಗುರುವಾಗಿರಿಸಿ ನಮಗೆ ಅನುಸರಣೀಯ ಕೇಂದ್ರವಾಗಿಸಿದರು. ನಂತರ ವಿದ್ಯಾನಂದರು ಪರಬ್ರಹ್ಮ ತತ್ವದಲ್ಲಿಯೇ ಮನವನ್ನು ನೆಲೆಗೊಳಿಸಿ ಬ್ರಹ್ಮಲೀನರಾದರು. ಈ ನಮ್ಮ ಮಠದ ಪ್ರಥಮ ಪೀಠಾಧಿಪತಿಯಾಗಿದ್ದ ಪೂಜ್ಯ ಶ್ರೀ ವಿದ್ಯಾನಂದಾಚಾರ್ಯರ ಸಮಾಧಿಯು ಗೋಕರ್ಣದ ಸಾಗರತೀರದಲ್ಲಿ ಶ್ರೀಮದ್ವಾಲ್ಮೀಕಿರಾಮಾಯಣದಲ್ಲಿ ಉಲ್ಲಿಖಿತವಾದ ವರುಣತೀರ್ಥದ ಬಳಿ ಸಂಸ್ಥಾಪಿತವಾಗಿದೆ. […]

Continue Reading

ಗೋಮಾತೆಯ ಸೇವೆಗೆ ಸಕಾರಾತ್ಮಕ ಸ್ಪಂದನೆ ದೊರಕಿದೆ : ಉಮಾ ಪಿ. ಶೇಡಿಗುಮ್ಮೆ

೨೦೧೯ ರ ಚಾತುರ್ಮಾಸ್ಯದ ಸಂದರ್ಭದಲ್ಲಿ ವಲಯ ಭಿಕ್ಷಾಸೇವೆಯ ದಿವಸ ಶ್ರೀಗುರುಗಳ ಆಶೀರ್ವಚನದ ಪ್ರೇರಣೆ ಹಾಗೂ ವಲಯ ಮಾತೃ ವಿಭಾಗ ಪ್ರಧಾನೆಯಾಗಿರುವ ಶಿವಕುಮಾರಿ ಕುಂಚಿನಡ್ಕ ಇವರ ಬೆಂಬಲದಿಂದಾಗಿ ಮಾಸದ ಮಾತೆಯಾಗಿ ಸೇವೆ ಮಾಡಲು ಮುಂದೆ ಬಂದವರು ಶ್ರೀಮತಿ ಉಮಾ ಪಿ . ಶೇಡಿಗುಮ್ಮೆ . ಮುಳ್ಳೇರಿಯ ಮಂಡಲ, ಕುಂಬಳೆ ವಲಯ ಕಣಿಪುರ ಘಟಕದವರಾದ ಇವರು ಚೆರುವತ್ತೂರಿನ ಮಾಧವ ರಾವ್ ,ಸರಸ್ವತಿ ದಂಪತಿಗಳ ಪುತ್ರಿ ಹಾಗೂ ಶೇಡಿಗುಮ್ಮೆ ಗಣೇಶ್ ಕುಮಾರ್ ಅವರ ಪತ್ನಿ. ಎಂ.ಎಸ್ಸಿ, ಬಿ.ಎಡ್ ಪಧವೀಧರರಾಗಿರುವ ಇವರು ಕುಂಬಳೆಯ […]

Continue Reading