ರಾಜ್ಯಮಟ್ಟದಲ್ಲಿ ಮಿಂಚಿದ ಪ್ರತಿಭೆ – ಪುಟಾಣಿ ಸಂವೃತಾ

  ನಮ್ಮ ಸನಾತನ ಧರ್ಮದಲ್ಲಿ ಅಗಾಧವಾದ, ಮಾನವರಾಶಿಯ ಬದುಕಿಗೆ ಅತ್ಯಂತ ಅಗತ್ಯವಾದ ಅಪಾರವಾದ ವಿಚಾರಗಳಿವೆ ಎಂಬುದನ್ನು ಅರಿತವರು ಬಹಳ ಕಡಿಮೆ ಮಂದಿ. ಅದನ್ನು ನಮ್ಮ ಬೊಗಸೆಯಲ್ಲಿ ಹಿಡಿಯುವಷ್ಟಾದರೂ ಮೊಗೆಯಬೇಕೆಂಬ ಮನಸ್ಸಿರುವವರು, ಮುಂದಿನ ಪೀಳಿಗೆಗೆ ವರ್ಗಾಯಿಸುವ ಪ್ರಯತ್ನ ಮಾಡಬೇಕೆಂಬ ಹಂಬಲ ಇರುವವರು ಇನ್ನೂ ಕಡಿಮೆ. ಅಂತಹ ಒಂದು ಉತ್ತಮ ಮನೋಭಾವ ಇರುವ ದಂಪತಿಗಳಿಂದಲಾಗಿ ಭಗವದ್ಗೀತೆಯೆಂಬ ಅಮೃತಧಾರೆಯನ್ನು ತನ್ನ ನಾಲಗೆಯ ತುದಿಯಲ್ಲಿ ಕುಣಿಸುವ ಪ್ರತಿಭೆಯಾಗಿ ಪುಟಾಣಿ ಸಂವೃತಾ ಮೂಡಿಬಂದಿದ್ದಾಳೆ. ಶ್ರೀಕೃಷ್ಣ ಭಗವಾನನು ಅರ್ಜುನನೆಂಬ ಓರ್ವ ಕ್ಷತ್ರಿಯನಿಗೆ ಉಪದೇಶಿಸಿದನು ಎಂಬುದಾಗಿ ಮೇಲ್ನೋಟಕ್ಕೆ […]

Continue Reading

ಹಿಮ್ಮೇಳದಲ್ಲಿ ಮಿಂಚುವ ಯುವ ಪ್ರತಿಭೆ ಅತುಲಕೃಷ್ಣ ಕೆ.ಪಿ.

ಮಕ್ಕಳಲ್ಲಿ ವೈವಿಧ್ಯಮಯವಾದ ಪ್ರತಿಭೆಗಳಿರುತ್ತವೆ. ಅವನ್ನು ಗುರುತಿಸಿ ಪೋಷಿಸುವ ಕೆಲಸವನ್ನು ಮನೆಯ ಹಿರಿಯರು ಮತ್ತು ಶಿಕ್ಷಕರು ಮಾಡಿದಾಗ ಮಾತ್ರ ಅದು ಪ್ರಕಾಶಕ್ಕೆ ಬರುತ್ತದೆ. ಯಕ್ಷಗಾನ ಎಂಬುದು ಅಗಾಧವಾದ ಜ್ಞಾನವನ್ನು ಒದಗಿಸುವ ವಿವಿಧ ರೀತಿಯ ಕಲೆಗಳ ಮಿಶ್ರಣ ಅಂತ ಹೇಳಬಹುದಾದ ಕಲೆಯಲ್ಲವೇ. ಆ ಕಲೆಯಲ್ಲಿ ನಾಟ್ಯ ವೈವಿಧ್ಯಕ್ಕೆ, ಕೈಚಳಕ್ಕೆ ಹೀಗೆ ಹಲವಾರು ರೀತಿಯ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶವಿದೆ. ಸಾಹಿತ್ಯ, ಕಲೆಯೇ ಮೊದಲಾದದ ವಿವಿಧ ರೀತಿಯ ಪ್ರಕಾರಗಳಲ್ಲಿ ಪ್ರತಿಭಾನ್ವಿತರಾಗಿ ಮೂಡಿಬರುವ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆ. ಅಂತಹ ಅಪೂರ್ವ ಪ್ರತಿಭೆಯಾಗಿ ಮಿಂಚುತ್ತಿರುವ […]

Continue Reading

ವೇಣುವಾದಕ ಕೃಷ್ಣ ಶೌರಿ ದೊಡ್ಡಮಾಣಿ.

ಕೊಳಲು ಕೇವಲ ಒಂದು ಬಿದಿರ ತುಂಡು. ಮತ್ತೇನೂ ಇಲ್ಲ ಎಂದು ಭಾವಿಸುವವರಿಗೆ ಅದು ಅಷ್ಟೇ. ಆದರೆ ಅದರ ಒಳಹೊರಗು ತಿಳಿದವರಿಗೆ ರಸಧಾರಾ ಸಮುದ್ರ, ಆನಂದ ಸಾಗರ, ಮಾಧುರ್ಯ ಸೂಸುವ ಸುಮ, ಸುಮಧುರು ಗಾಯನ ಸಾಧನ. ಅದನ್ನು ಅರಿತು ಅದರ ಒಳಹೊಕ್ಕು ಅಭ್ಯಾಸ ಮಾಡಿ ರಾಜ್ಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಪ್ರತಿಭೆ ಕೃಷ್ಣಶೌರಿ ದೊಡ್ಡಮಾಣಿ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲ್ಲೂಕಿನ ಎಡನಾಡು ಗ್ರಾಮದ ದೊಡ್ಡಮಾಣಿ ಕುಟುಂಬದ ಕುಡಿ ಕೃಷ್ಣಶೌರಿ ಎಂಬ ಬಾಲಕ. ಶ್ರೀಮತಿ ಆಶಾ ಮತ್ತು ಶ್ರೀ ಶ್ಯಾಮರಾಜ ದೊಡ್ಡಮಾಣಿ […]

Continue Reading

ಗುರಿಯೆಡೆಗಿನ ರಹದಾರಿಯಲ್ಲಿ ಸಾಧನೆಯ ಸಿಂಚನಾ…

  ಸಾಧನೆಯ ದಾರಿಯಲ್ಲಿ ಕಲ್ಲುಮುಳ್ಳುಗಳಿಗೆ ಏತರ ಕೊರತೆ? ಆ ಕಲ್ಲುಮುಳ್ಳುಗಳು ನಮ್ಮ ದೃಢಮನಸ್ಸನ್ನು ಪರೀಕ್ಷಿಸುತ್ತಿರುತ್ತವೆ. ಅವುಗಳಿಗೆ ಅಂಜದೆ ಗುರಿಯನ್ನು ಸಾಧಿಸಬೇಕಾದುದು ನಮ್ಮ ಕರ್ತವ್ಯ. ದೈಹಿಕ ಸಮಸ್ಯೆಯಿದ್ದರೂ ಅದನ್ನು ಮೆಟ್ಟಿನಿಂತು ತನ್ನ ಗುರಿಯನ್ನು ಸಾಧಿಸಿ ದೇಶವೇ ತನ್ನೆಡೆಗೆ ತಿರುಗಿ ನೋಡುವಂತೆ ಮಾಡಿದ ಒಬ್ಬಾಕೆ ಸಾಧಕಿ ನಮ್ಮೂರಿನಲ್ಲಿದ್ದಾರೆ…. “ಎಷ್ಟು ಹೊತ್ತು ಓದುತ್ತೇವೆಂಬುದು ಮುಖ್ಯವಲ್ಲ. ಓದುವಷ್ಟು ಹೊತ್ತು ಯಾವ ರೀತಿ ಓದುತ್ತೇವೆಂಬುದು ವಿಷಯವಾಗುತ್ತದೆ ಮತ್ತು ಓದಿನೊಂದಿಗೆ ಹೊಂದಿಕೊಂಡಿರುವುದು ಮುಖ್ಯವಾಗುತ್ತದೆ.” ಎಂಬ ಈ ಮಾತನ್ನು ಆಡಿದವರು ಸಿಂಚನಾ ಲಕ್ಷ್ಮೀ. ಈ ವರ್ಷದ NEET […]

Continue Reading

ಚಿತ್ರಕಲಾ ಪ್ರಾವೀಣ್ಯತೆಯತ್ತ ಹೆಜ್ಹೆ ಇಡುತ್ತಿರುವ ಸಂಗೀತ ಪ್ರೇಮಿ – ಶ್ರೀಚರಣ

ಮೃದಂಗ, ಸಂಗೀತ ಚಿತ್ರಕಲೆಯಲ್ಲಿ ಸಾಧನೆಗೈಯ್ಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ರಾಮಕುಂಜ ಗ್ರಾಮದ ಕೆ. ನರಸಿಂಹ ಭಟ್ ಹಾಗು ಸಂಧ್ಯಾ ಸರಸ್ವತಿಯ ಸುಪುತ್ರ ಕೆ. ಶ್ರೀ ಚರಣ. ಏಳನೇ ವಯಸ್ಸಿನಿಂದ ಮೃದಂಗ ಮತ್ತು ಸಂಗೀತ ಕಡೆ ಚಿತ್ತವನಿರಿಸಿ ವಿದ್ವಾನ್ ಕಾಂಚನ ಎ. ಈಶ್ವರ ಭಟ್ಟ ಇವರಲ್ಲಿ ಕಲಿಯುತ್ತಿದ್ದು, 2014 ರಲ್ಲಿ ಸಂಗೀತ ಜೂನಿಯರ್ ಗ್ರೇಡ್ ನ್ನು ಹಾಗು 2017 ರಲ್ಲಿ ಮೃದಂಗ ಜೂನಿಯರ್ ಗ್ರೇಡ್ ನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.ಇದೀಗ ಮೃದಂಗದಲ್ಲಿ ಸೀನಿಯರ್ ಅಭ್ಯಾಸವನ್ನು ಮುಂದುವರಿಸುತ್ತಾ […]

Continue Reading

ಭಾಗವತಿಕೆಯ ಕಣ್ಮಣಿ ಚಿಂತನಾ ಹೆಗಡೆ

  ಈ ವಾರದ ಅಂಕುರ ಸಾಧಕಿಯ ಕಂಚಿನ ಕಂಠ ಕೇಳಿದರೆ ಮತ್ತೆ ಮತ್ತೆ ಕೇಳಬೇಕೆಂಬ ಆಸೆ ಹುಟ್ಟುವುದು ಸಹಜ. ಈಗಾಗಲೇ ಯುವ ಭಾಗವತರಾಗಿ ,ಯಕ್ಷಗಾನದಲ್ಲಿ ಆಸಕ್ತಿ ಉಳ್ಳವರು ಮನವನ್ನು ಗೆದ್ದಿರುವ ಚಿಂತನ ಹೆಗಡೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಳಕೋಡಿನ ಶ್ರೀ ಉದಯ ಹೆಗಡೆ ಮತ್ತು ಶ್ರೀಮತಿ ಪಲ್ಲವಿ ಹೆಗಡೆ ಅವರ ಸುಪುತ್ರಿ. ಇವರ ತಂದೆ ಉದಯ ಹೆಗಡೆಯವರು ಯಕ್ಷಗಾನದಲ್ಲಿ ಹಿರಿಯ ಕಲಾವಿದರು. ಮನೆಯೇ ಮೊದಲ ಪಾಠಶಾಲೆ ಎಂಬಂತೆ ಇವರ ತಂದೆಯೇ ಗುರು. ಯಕ್ಷಗಾನ […]

Continue Reading

ಭಾರತೀಯ ವಾಸ್ತುಶಿಲ್ಪಾಸಕ್ತ , ಪ್ರಯೋಗಶೀಲ ಮನೋಭಾವದ ಚಿತ್ರಕಲಾವಿದ ಶ್ರೇಯಸ್

  ವಿವಿಧ ಕ್ಷೇತ್ರಗಳಲ್ಲಿ ಹೆಜ್ಜೆಗುರುತು ಮೂಡಿಸುತ್ತಿರುವ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉದಯಕುಮಾರ ಮತ್ತು ವಿಜಯಲಕ್ಷ್ಮಿ ಅವರ ಸುಪುತ್ರ ಶ್ರೇಯಸ್ ಪ್ರಸ್ತುತ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ೨-೧೦ ನೇ ತರಗತಿವರೆಗೆ ಪ್ರತಿಭಾಕಾರಂಜಿಯಲ್ಲಿ ಧಾರ್ಮಿಕ ಪಠಣ, ರಸಪ್ರಶ್ನೆ ಹಾಗೂ ಕ್ರೀಡಾ ಸ್ಪರ್ಧೆಗಳಾದ ಚದುರಂಗ ಸ್ಪರ್ಧೆ, ವಾಲಿಬಾಲ್ ಹೀಗೆ ಹತ್ತು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ತಾಲೂಕು ಮಟ್ಟ ಹಾಗೂ ಜಿಲ್ಲಾಮಟ್ಟದಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದುಕೊಂಡಿರುತ್ತಾರೆ. ಶ್ರೀಕ್ಷೇತ್ರ ಧರ್ಮಸ್ಥಳದವರು ಏರ್ಪಡಿಸಿದಂತಹ ನೈತಿಕ ಮೌಲ್ಯಾಧಾರಿತ ಪುಸ್ತಕಗಳ […]

Continue Reading

ವಿಜ್ಞಾನಿಯಾಗುವ ಹೆಬ್ಬಯಕೆಯನ್ನು ಹೊಂದಿದ ಚೆಂಡೆ ಮದ್ದಳೆಯ ಮೋಡಿ ಮಾಡುವ ಕಲಾವಿದ !

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಶ್ರೀ ಕೃಷ್ಣ ಪ್ರಸಾದ್ ಕೆ ಮತ್ತು ಸವಿತಾ ವಿ ಎಮ್ ಅವರ ಸುಪುತ್ರನಾದ ಶ್ರೀಶ ನಾರಾಯಣ.ಕೆ ಈತ ಇನ್ನೂ ಎಂಟನೇ ತರಗತಿಯ ವಿದ್ಯಾರ್ಥಿ ಆದರೇ ಈಗಾಗಲೇ ಡಾ ||ಸತೀಶ್ ಪುಣಿಂಚತ್ತಾಯ ಅವರ ಯಕ್ಷಾಂತರಂಗ ಪೆರ್ಲ ಎಂಬ ಯಕ್ಷಗಾನ ತಂಡದ ಸಕ್ರಿಯ ಸದಸ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲೇ ಯಕ್ಷಗಾನದ ಬಗ್ಗೆ ಆಸಕ್ತಿ ಇತ್ತು.. ಯಕ್ಷಗಾನವನ್ನು ವೀಕ್ಷಿಸಲು ಹೋಗುವಾಗ ಈತನನನ್ನು ಕರೆದುಕೊಂಡು ಹೋಗುತ್ತಿದ್ದೆ ಅಲ್ಲಿ ಶ್ರೀಶನಿಗೆ ತಾನು ಚಂಡೆ,ಮದ್ದಳೆ ಯನ್ನು ಕಲಿಯಬೇಕೆಂಬ ಹಂಬಲ ಉಂಟಾಯಿತು […]

Continue Reading

ಪ್ರತಿಭೆ – ಸಮಾಜಮುಖೀ ಮನೋಭಾವಗಳ ಸಮ್ಮಿಲನದ ಅನರ್ಘ್ಯ ರತ್ನ – ಅನರ್ಘ್ಯ ಟಿ.ಪಿ.

  ಚಿತ್ರಕಲೆ, ಶಿಕ್ಷಣ, ಸಾಹಿತ್ಯ, ಸಂಗೀತ ಕ್ಷೇತ್ರ ಹೀಗೆ ನಾನಾ ಬಗೆಯ ಕ್ಷೇತ್ರಗಳಲ್ಲಿ ನಿಪುಣೆಯಾಗಿರುವ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ಮೂಲದ ಪ್ರಸ್ತುತ ಬೆಂಗಳೂರಿನ ಗಿರಿನಗರದ ನಿವಾಸಿಗಳಾದ ಟಿ. ಪರಮೇಶ್ವರ ಭಟ್ ಮತ್ತು ಕುಸುಮ ಪಿ. ಭಟ್ ಅವರ ಸುಪುತ್ರಿ ಅನರ್ಘ್ಯ ಟಿ. ಪಿ ಪ್ರಸ್ತುತ ಸಂತ ಜೋಸೆಫ್ ನಲ್ಲಿ ಎಂ.ಎಸ್.ಸಿ ಗಣಿತಶಾಸ್ತ್ರದ ವಿದ್ಯಾರ್ಥಿನಿ. ಎಳೆಯ ವಯಸ್ಸಿನಿಂದಲೇ ಚಿತ್ರಕಲೆಯ ಕಡೆಗೆ ವಿಶೇಷ ಒಲವಿದ್ದರಿಂದ ಪ್ರಾಥಮಿಕ ಹಂತದ ಚಿತ್ರಕಲೆಯನ್ನು ರಶ್ಮಿ ಎಂಬವರಲ್ಲಿ, ತದನಂತರ ವರ್ಣಚಿತ್ರ, ಪರಿಸರ ಚಿತ್ರ ಹಾಗು ವ್ಯಕ್ತಿಚಿತ್ರಗಳ […]

Continue Reading

ಕಾಸರಗೋಡಿನ ಮೇಧಾ ಭಟ್ ನಾಯರ್ಪಳ್ಳರವರ ಹರಿಕಥಾ ಪಯಣ.

ಹಲವು ಕಡೆ ಹರಿಕಥಾ ಕಾರ್ಯಕ್ರಮಗಳನ್ನು ನೀಡುವ ಮೂಲಕ ಹರಿದಾಸ ಪರಂಪರೆಯಲ್ಲಿ ತನ್ನ ಛಾಪು ಮೂಡಿಸುತ್ತಿರುವ ಯುವ ಪ್ರತಿಭೆ ಮೇಧಾ ಭಟ್ ನಾಯರ್ಪಳ್ಳ. ಕಾಸರಗೋಡಿನ ಪೈವಳಿಕೆಯ ಗೋಪಾಲಕೃಷ್ಣ ಭಟ್ ಮತ್ತು ಮಾಲತಿ ಅವರ ಸುಪುತ್ರಿ ಮೇಧಾ ಭಟ್ ನಾಯರ್ಪಳ್ಳರವರರು ಕೆಲವೊಂದನ್ನು ಕೇಳಿ ತಿಳಿಯಬೇಕು ಕೆಲವೊಂದನ್ನು ನೋಡಿ ತಿಳಿಯಬೇಕು ಎಂಬಂತೆ ಹಿರಿಯರ ಹರಿಕಥೆ ಕೇಳಿ ತನಗೂ ಹರಿ ಕಥೆ ಕಲಿಯಬೇಕೆಂಬ ಹಂಬಲ ಮನದಲ್ಲಿ ಚಿಗುರಿತು ಎನ್ನುತ್ತಾರೆ. ಹೊನ್ನಾವರ , ಕುಂಬ್ಳೆ, ಕಾಸರಗೋಡು, ಬೆಳ್ತಂಗಡಿ ಅಷ್ಟೇ ಅಲ್ಲದೆ ನಮ್ಮ ದೇಶದ ರಾಜಧಾನಿಯಾದ […]

Continue Reading

ಅಸಾಧಾರಣ ಸಾಧನೆಗೈಯ್ಯುತ್ತಿರುವ ಚಿತ್ರಕಲಾವಿದೆ ಆತ್ಮಿಕ

  ಒಂದೊಂದು ವರ್ಷದಲ್ಲಿ ಒಂದೊಂದು ಸಾಧನೆಯ ಮೆಟ್ಟಲೇರುತ್ತಿರುವ ಕಾಸರಗೋಡು ಜಿಲ್ಲೆಯ ಸಿದ್ದನಕೆರೆಯ ಸಕಲೇಶಪುರ ದಲ್ಲಿ ವಿಜ್ಞಾನಿ ಯಾಗಿರುವ ಡಾ ಶ್ರೀಕೃಷ್ಣ ಮತ್ತು ಪ್ರಸನ್ನ ಕುಮಾರಿರವರ ಸುಪುತ್ರಿ ಆತ್ಮಿಕ ಚಿತ್ರಕಲಾವಿದೆಯಾಗಿ ನಮ್ಮ ಮುಂದೆ ಇದ್ದಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ತನ್ನ ಆರನೇ ವಯಸ್ಸಿನ್ನಲ್ಲೇ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.. ಹಾಸನದಲ್ಲಿ ನಡೆದಂತಹ ರಾಜ್ಯಮಟ್ಟದ ಶಾಂತಲಾ ಫೈನ್ ಆರ್ಟ್ಸ್ ಚಿತ್ರಕಲ ಸ್ಪರ್ಧೆಯಲ್ಲಿ ತೃತೀಯ ಸ್ಥಾನ,ಹಾಗು ಸುತ್ತೂರಿನಲ್ಲಿ ನಡೆದಂತಹ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನವನ್ನು ಪಡೆದು ನಂತರರದ ವರ್ಷಗಳಲ್ಲಿ […]

Continue Reading

ಕಿರಿಯ ಚಿತ್ರಕಲಾವಿದ

  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಯ ತಾಲೂಕಿನ ಪ್ರಶಾಂತ ಮತ್ತು ಸೌಮ್ಯ ಅವರ ಸುಪುತ್ರ ಸಾತ್ವಿಕ ಗಣೇಶ್ ಉಜಿರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿರೆ ಯಲ್ಲಿ 7 ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಚಿತ್ರಕಲೆಗೆ ಯಾವುದೇ ಗುರುವಿಲ್ಲದೆ ತಾನೇ ಸ್ವಯಂ ಅಭ್ಯಾಸ ಮಾಡಿ ಚಿತ್ರಕಲೆಯಲ್ಲಿ ನಿಪುಣನಾಗಿದ್ದಾರೆ. ಕೊರೋನಾ ಮಹಾಮಾರಿ ವಿಶ್ವವನ್ನು ವ್ಯಾಪಿಸಿ ಲಾಕ್ ಡೌನ್ ನಿಂದ ಚಟುವಟಿಕೆಗಳನ್ನು ನಡೆಸಲು ಅಸಾಧ್ಯವಾದಾಗ ಆ ಸಮಯದ ಸದುಪಯೋಗ ಪಡಿಸಿಕೊಂಡರು ಸಾತ್ವಿಕ್ ಗಣೇಶ. ಈ ಒಂದು ವರ್ಷದ ಅವಧಿಯಲ್ಲಿ […]

Continue Reading

ಚದುರಂಗ ಚತುರೆ ಚಿತ್ಕಲ ವಿ ಭಟ್ಟ

  ದ್ವಿತೀಯ ಪಿ. ಯು. ಸಿ ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 588 ಅಂಕ ಪಡೆದು ರಾಜ್ಯ ಕ್ಕೆ 9 ನೇ ಸ್ಥಾನ ಹಾಗು ಎಸ್. ಎಸ್ ಎಲ್ ಸಿ ಯಲ್ಲಿ 93% ಪಡೆದ ಕುಮಾರಿ ಚಿತ್ಕಲ ವಿ. ಭಟ್ಟ ಆಟಪಾಠಗಳೆರಡರಲ್ಲೂ ಸೈ ಎನಿಸಿಕೊಂಡ ಸಾಧಕಿ. ಇವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಿ ಜಿ ವೆಂಕಟೇಶ್ ಮತ್ತು ಛಾಯಾ ಅವರ ಸುಪುತ್ರಿ ಪ್ರಸ್ತುತ ಪೂರ್ಣಪ್ರಜ್ಞ ಕಾಲೇಜು ಉಡುಪಿ ಯಲ್ಲಿ ಪ್ರಥಮ ಬಿಕಾಮ್ ವ್ಯಾಸಂಗ ಮಾಡುತ್ತಿದ್ದಾರೆ. ತನ್ನ […]

Continue Reading

ಭರತನಾಟ್ಯದಲ್ಲಿ ಯಶಸ್ಸಿನ ಮೆಟ್ಟಿಲೇರುತ್ತಿರುವ ಯಶಸ್ ಭಟ್

ಭರತನಾಟ್ಯವು ಕರ್ನಾಟಕದ ಜನಪ್ರಿಯ ಶಾಸ್ತ್ರೀಯ ನೃತ್ಯ. ಅಂತಹ ನೃತ್ಯಕಲೆಯಲ್ಲಿ ಗಮನಸೆಳೆಯುತ್ತಿರುವ ಯೆಶಸ್ ಭಟ್ಟ ವೈ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಿರ್ಮಲ್ ಭಟ್ ಮತ್ತು ರೇಷ್ಮಾ ನಿರ್ಮಲ್ ಭಟ್ ಅವರ ಸುಪುತ್ರ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ಮಾತಿದೆ. ಇವರ ತಾಯಿ ವಿದುಷಿ ಶ್ರೀಮತಿ ನಿರ್ಮಲ್ ಭಟ್ ರವರೇ ಯೆಶಸ್ ಭಟ್ ವೈ ರವರ ಭರತನಾಟ್ಯದ ಗುರು. ಮಂಗಳೂರು ಮ್ಯೂಸಿಕ್ ಮತ್ತು ಕಲ್ಚರಲ್ ಅಸೋಸಿಯೇಷನ್ (ರಿ) 2011ರಲ್ಲಿ ನಡೆಸಿದ “ಕಲಾಸಂಗಮ” ನಾಟ್ಯಂಜಲಿ […]

Continue Reading

ಸಾಧನೆಯ ಹಾದಿಯತ್ತ ಚಿನ್ಮಯಿ ವಿ. ಭಟ್ಟ

  ಎನ್. ಸಿ. ಸಿ (ನೇವಿ )ನಡೆಸಿದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದ ಚಿನ್ಮಯಿ ವಿ. ಭಟ್ಟ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಿ. ಜಿ ವೆಂಕಟೇಶ್ ಮತ್ತು ಛಾಯಾ ದಂಪತಿಯ ಸುಪುತ್ರಿ. 2010 ರಲ್ಲಿ ರಾಜ್ಯ ಮಟ್ಟದ ಅಬಕಾಸ್ ನಲ್ಲಿ ಪ್ರಥಮ ಸ್ಥಾನ, ರಾಷ್ಟ್ರ ಮಟ್ಟದಲ್ಲೂ ಪ್ರಥಮ ಸ್ಥಾನ ಗಳಿಸಿದ ಇವರು ಹೀಗೆ ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕುತ್ತ ಬಂದಿದ್ದಾರೆ. ನಂತರ 2012 -ರಾಜ್ಯ ಮಟ್ಟದ science exhibition […]

Continue Reading

ಬಾಲ ಪ್ರತಿಭೆ

  ಯಕ್ಷಗಾನದಲ್ಲಿ ಚಂಡೆ, ಮದ್ದಲೆಯೂ ತನ್ನದೇ ಆದ ಮಹತ್ವ ಪಡೆದಿದೆ. ಅಂತಹ ಕಲೆಯಲ್ಲಿ ಮುನ್ನಡೆಯುತ್ತಿರುವ ಹನ್ನೆರಡು ವರ್ಷದ ಶ್ರೀವತ್ಸ. ಈತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗುಡ್ಡೆದಿಂಬ ಮಂಜುನಾಥ್ ಮತ್ತು ಅರ್ಚನಾ ಅವರ ಸುಪುತ್ರ. ಅಜ್ಜ ಸೂರ್ಯನಾರಾಯಣ ಚಂಡೆ ಹಾಗೂ ತಂದೆ ಮಂಜುನಾಥ್ ಮದ್ದಲೆ ವಾದಕರು ಹಾಗಾಗಿ ರಕ್ತಗತವಾಗಿ ಬಳುವಳಿಯಾಗಿ ಬಂದ ಕಲೆ. ಹೀಗೆ ಬಾಲ್ಯದಿಂದಲೇ ಮನೆಯಲ್ಲಿ ಕಲಾ ಸರಸ್ವತಿಯ ಆರಾಧನೆಯ ಪ್ರಭಾವದಿಂದ ಬಾಲ್ಯದಿಂದಲೇ ಚಂಡೆ, ಮದ್ದಲೆಗಳನ್ನು ನುಡಿಸುತ್ತ ಬೆಳೆದು ಬಂದಿದ್ದರಿಂದ ಚೆಂಡೆವಾದನದ ಮೇಲೆ ಹೆಚ್ಚು ಒಲವು […]

Continue Reading

ಅಕ್ಕ ತಂಗಿಯ ಯಕ್ಷಗಾನ ಪಯಣ

  ಕರ್ನಾಟಕದ ವಿಶಿಷ್ಟ ಕಲೆಗಳಲ್ಲಿ ಯಕ್ಷಗಾನ ಪ್ರಮುಖ ಸ್ಥಾನ ಪಡೆದಿದೆ. ಯಕ್ಷಗಾನ ಕಲಾವಿದರು ತೊಡುವ ವೇಷ, ಭೂಷಣ, ಅವರ ಮಾತುಗಾರಿಕೆ, ಕುಣಿತ ನೋಡುವದಕ್ಕೆ ಆನಂದ. ಅಂತಹ ಕಲೆಯಲ್ಲಿ ಸಾಧನೆಗೈಯ್ಯುತ್ತಿರುವ ಶ್ರೀಜಾ ಮತ್ತು ಶ್ರೀಪೂಜಾ ಕಾಸರಗೋಡಿನ ಬದಿಯಡ್ಕದ ಉದನೇಶ್ ಕುಂಬಳೆ ಮತ್ತು ದೇವಕಿಯ ಸುಪುತ್ರಿಯರು. ಇಬ್ಬರು ತಮ್ಮ ಏಳನೇ ವಯಸ್ಸಿನಲ್ಲೇ ರಂಗಸಿರಿ ಸಂಸ್ಕೃತಿಕ ವೇದಿಕೆ (ರಿ )ಬದಿಯಡ್ಕ ಎಂಬ ಸಂಸ್ಥೆಯಲ್ಲಿ ಗುರುಗಳಾದ ಸೂರ್ಯ ನಾರಾಯಣ ಪದಕಣ್ಣಾಯ ಬಾಯರು ಇವರಿಂದ ಯಕ್ಷಗಾನವನ್ನು ಕಲಿಯಲು ಆರಂಭಿಸಿದರು. *”ಹಲವಾರು ಕಡೆ ಸಹೋದರಿಯರ ಯಕ್ಷಗಾನ […]

Continue Reading

ನೃತ್ಯಾರಾಧಕಿ ಸುಪ್ರೀತಾ

  ದೇವಾನಾಮಿದಮಾಮನಂತಿ ಮುನಯಃ ಕಾಂತಂ ಕ್ರತುಂ ಚಾಕ್ಷುಷಮ್ | ರುದ್ರೇಣಾಭಿಮುಖಕ್ರತೌವ್ಯತಿರಕರೇ ಸ್ವಾಂಗೇ ವಿಭಕ್ತಂ ವಿಧಾ || ತ್ರೈಗುಣ್ಯೋದ್ಭವಮತ್ರಲೋಕಚರಿತಂ ನಾನಾರಸಂದೃಶ್ಯತೇ | ನಾಟ್ಯಂ ಭಿನ್ನರುಚಿರ್ಜನಸ್ಯ ಬಹುಧಾಪ್ಯೇಕಂ ಸಮಾರಾಧನಮ್ || ಎಂಬುದಾಗಿ ನೃತ್ಯವನ್ನು ತನ್ನ ಮಾಲವಿಕಾಗ್ನಿಮಿತ್ರ ಎಂಬ ನಾಟಕದಲ್ಲಿ ಕವಿಕುಲಗುರುವಾದ ಕಾಳಿದಾಸನು ಹಾಡಿಹೊಗಳಿದ್ದಾನೆ. ಅಡವು,ಮುದ್ರೆ,ಆಂಗಿಕಾಭಿನಯ,ಕುಡಿ-ಕಡೆ-ಕಿಡಿನೋಟಗಳು, ಆಭರಣಗಳು, ನೂಪುರದ ನಿನಾದ, ಸಂಗೀತದೊಂದಿಗಿನ ಸಂಬಂಧ, ಜತಿಗಳ ಜೊತೆಗಿನ ಒಡನಾಟದಿಂದ ಪರಿಪಕ್ವವಾದ ನೃತ್ಯವು ಎಂತಹವರನ್ನೇ ಆದರೂ ತನ್ನ ಒಡಲಲ್ಲಿ ಸೆಳೆದಿಟ್ಟು ಅಲೆ-ಅಲೆಯಾಗಿ ಒಳಗಿಳಿಯುತ್ತದೆ. ನಾಟ್ಯದೇವತೆಯಾದ ಶಿವನ ಆರಾಧನೆಯು ನೃತ್ಯದಿಂದಲೂ ಸಾಧ್ಯ. ತನ್ನ ಆರನೇ ವಯಸ್ಸಿನಲ್ಲಿ […]

Continue Reading

ಬೆಳೆಯುವ ಸಿರಿ ಮೊಳಕೆಯಲ್ಲಿ

  ಕಲೆಯು ಭಾವನೆಗಳ ಪ್ರತಿಬಿಂಬ. ಎಳೆವಯಸ್ಸಿನಲ್ಲಿಯೇ ಕಲೆ ಸಂಸ್ಕೃತಿಯೆಡೆಗೆ ಇರುವ ಒಲುಮೆ ಮನುಜನನ್ನು ಎತ್ತರಕ್ಕೆ ಏರಿಸುವಲ್ಲಿ ಏಣಿಯಂತೆ ಸಹಕಾರಿಯಾಗುತ್ತದೆ. ತನ್ನ ಎಳವೆಯಲ್ಲಿ ಮನಸ್ಸಿಗೆ ಮುದ ನೀಡುವ ಕಲೆಯೆಡೆಗೆ ಅಭಿರುಚಿ ಬೆಳೆಸಿಕೊಳ್ಳುತ್ತಿರುವ ಪುಟ್ಟ ಪ್ರತಿಭೆ ಅಭಿರಾಮ್.ಎಸ್.ಭಟ್. ಈತ ಬೆಂಗಳೂರು ನಿವಾಸಿಗಳಾದ ಶ್ರೀಯುತ ಸುರೇಶ್ ಕುಕ್ಕಾಜೆ ಹಾಗೂ ಶ್ರೀಮತಿ ಗೀತಾಂಜಲಿ ದಂಪತಿಯ ಸುಪುತ್ರ. ಪ್ರಸ್ತುತ ಪೂರ್ಣಪ್ರಜ್ಞಶಾಲೆಯಲ್ಲಿ ಎರಡನೇ ತರಗತಿಯಂದ ವೈಶಿಷ್ಟ್ಯ ಶ್ರೇಣಿಯೊಂದಿಗೆ ಉತ್ತೀರ್ಣನಾಗಿರುತ್ತಾನೆ. ಬಾಲ್ಯದಿಂದಲೇ ತನ್ನ ತಾಯಿಯಿಂದ ಕಥೆಗಳನ್ನು ಕೇಳುತ್ತಾ ಚಿಗುರುತ್ತಿರುವ ಅಭಿರಾಮ ತನ್ನೆದುರಿಗೆ ಇರುವವರು ಮಂತ್ರಮುಗ್ಧರಾಗುವ ಹಾಗೆ ಕಥೆ […]

Continue Reading

ಚಿತ್ರ ಜೀವಂತಿಕೆಯ ಕಲಾವಿದ ಯುವ ಉದ್ಯಮಿ ಪ್ರದೀಪ

  ಈತನ ಕೈಗಳಲ್ಲಿ ಮೂಡಿದ ಚಿತ್ರಗಳು ನೋಡುಗರ ಚಿತ್ತದಲ್ಲಿ ಬೆರಗು ಮೂಡಿಸುತ್ತದೆ. ಯಾವ ಚಿತ್ರಕಲಾ ಶಾಲೆಯಲ್ಲಿಯೂ ಅಭ್ಯಾಸ ಮಾಡಿಲ್ಲವಾದರೂ ನುರಿತ ಕಲಾವಿದನಂತೆ ಚಿತ್ರಗಳಲ್ಲಿ ಜೀವಂತಿಕೆ ಮೂಡಿಸುವ ಯುವ ಕಲಾವಿದ ಇನ್ನೊಂದೆಡೆಯಲ್ಲಿ ಯಶಸ್ವೀ ಉದ್ಯಮಿಯೂ ಹೌದು, ವಿದ್ಯಾರ್ಥಿಯೂ ಹೌದು. ಅವರೇ ಕಾಸರಗೋಡು ಜಿಲ್ಲೆಯ ಗೋಪಾಲಕೃಷ್ಣ ಭಟ್ ಮತ್ತು ಸವಿತಲಕ್ಷ್ಮೀ ಅವರ ಸುಪುತ್ರ ಪ್ರದೀಪ ಎಂ.ಜಿ. *ಸೌರಶಕ್ತಿಯನ್ನು ಸಮಾಜಕ್ಕೆ ಪರಿಚಯಿಸುತ್ತಿರುವ ಉದ್ಯಮಿ* ಎಸ್. ಎಸ್. ಎಲ್.ಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ತಮಗೆ ಆಸಕ್ತಿ ಇರುವ ಶಿಕ್ಷಣ ಕ್ಷೇತ್ರವಾದ ಎಲೆಕ್ಟ್ರಾನಿಕ್ಸ್ […]

Continue Reading