ಪ್ರತಿನಿತ್ಯವೂ ಗೋಸೇವೆ ಮಾಡುವ ಪುಣ್ಯಾವಕಾಶ ದೊರಕಿದೆ” : ಮಂಗಲಾ ನೀಲಕಂಠ ಉಪಾಧ್ಯಾಯ

ಮಾತೃತ್ವಮ್

ಹೊನ್ನಾವರ ಮಂಡಲದ ಭಟ್ಕಳ ವಲಯದ ದೇವಿಕಾನ ,ಕಾಯ್ಕಿಣಿಯ ಮಂಗಲಾ ನೀಲಕಂಠ ಉಪಾಧ್ಯಾಯ ಅವರು ನಿತ್ಯ ಗೋಸೇವೆಯಲ್ಲಿ ಸಂತೃಪ್ತಿ ಕಂಡವರು.

ಸಾಗರದ ಸಮೀಪದ ವರದಹಳ್ಳಿಯ ಎಡಜಿಗಳೆ ಮಂಗಲಾ ಅವರ ತವರುಮನೆ. ಗೃಹಿಣಿಯಾಗಿರುವ ಇವರು ತಮ್ಮ ಗೃಹಕೃತ್ಯಗಳ ನಡುವೆ ಶ್ರೀಮಠದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು.

ಭಟ್ಕಳ ವಲಯದ ಮಾತೃ ಪ್ರಧಾನೆಯಾಗಿ ಆರು ವರ್ಷಗಳ ಕಾಲ ಸೇವೆ ಮಾಡಿದ ಇವರು ಪ್ರಸ್ತುತ ವಲಯ ಬಿಂದು ಸಿಂಧು ಸಂಚಾಲಕಿಯಾಗಿ ಶ್ರೀಗುರು ಸೇವೆ ಮಾಡುತ್ತಿದ್ದಾರೆ.

” ಚಿಕ್ಕಂದಿನಿಂದಲೇ ತವರುಮನೆಯಲ್ಲಿ ಗೋವುಗಳ ಒಡನಾಟದೊಂದಿಗೆ ಬೆಳೆದವಳು ನಾನು, ಬಾಲ್ಯದಿಂದಲೂ ಗೋವುಗಳ ಆರೈಕೆಯಲ್ಲಿ ತೊಡಗಿಸಿಕೊಂಡಿರುವ ಕಾರಣ ಗೋಮಾತೆ ಎಂದರೆ ವಿಶೇಷ ಮಮತೆ. ನಮ್ಮ ಮನೆಯಲ್ಲೂ ಹಸುಗಳಿವೆ. ನಮ್ಮ ಮನೆಯ ಗೋವುಗಳ ಸೇವೆ ಮಾಡುವ ಜೊತೆ ಜೊತೆಯಲ್ಲಿಯೇ ಶ್ರೀಗುರುಗಳ ಮಾತುಗಳ ಪ್ರೇರಣೆಯಿಂದ ಮಾತೃತ್ವಮ್ ಯೋಜನೆಗೆ ಕೈ ಜೋಡಿಸಿದೆ ” ಎನ್ನುವ ಇವರು ಮಾಸದ ಮಾತೆಯಾಗಿ ಗುರಿ ತಲುಪಲು ಯಾರ ಸಹಕಾರವನ್ನೂ ಬಯಸದೆ ಒಂದು ಹಸುವಿನ ಸಂಪೂರ್ಣ ವೆಚ್ಚವನ್ನು ತಾವೇ ಭರಿಸಿದ್ದಾರೆ.

” ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಾಗ ಮನದಲ್ಲಿ ಧನ್ಯತಾ ಭಾವ ಮೂಡುತ್ತದೆ, ‘ ಅನ್ಯಥಾ ಶರಣಂ ನಾಸ್ತಿ’ ಎಂಬ ಅನನ್ಯ ಭಾವದಿಂದ ಗುರುಸೇವೆ ಮಾಡುತ್ತಿದ್ದೇನೆ. ಇದಕ್ಕೆ ನಮ್ಮ ಮನೆಯವರ ಸಂಪೂರ್ಣ ಪ್ರೋತ್ಸಾಹ ಹಾಗೂ ಸಹಕಾರ ದೊರಕಿದೆ ” ಎಂದು ನುಡಿಯುವ ಇವರು ಪ್ರತಿನಿತ್ಯವೂ ಗೋಸೇವೆಗೆಂದು ಒಂದಿಷ್ಟು ಕಾಣಿಕೆಯನ್ನು ತೆಗೆದಿಡುವವರು.

ಶ್ರೀಮಠದ ಸೇವೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಬೇಕೆಂಬ ಹಂಬಲ ಹೊತ್ತಿರುವ ಅವರಿಗೆ ಪತಿ ನೀಲಕಂಠ ಉಪಾಧ್ಯಾಯರ ಸಂಪೂರ್ಣ ಬೆಂಬಲವಿದೆ.

Author Details


Srimukha

Leave a Reply

Your email address will not be published. Required fields are marked *