ಮಹಾಗುರುಕುಲದ ಉದಯಕ್ಕೆ ಮಹಾವ್ರತದಂತೆ ನಡೆಯಲಿದೆ ರಾಮಾಯಣ ಪ್ರವಚನ

ಶ್ರೀಸಂಸ್ಥಾನ

ಹೊನ್ನಾವರ: ಶಂಕರರ ಪಾದಸ್ಪರ್ಶವಾದ ಗೋಕರ್ಣದ ಅಶೋಕೆಯಲ್ಲಿ ಪ್ರಾಚೀನ ಭಾರತದ ಸಕಲವಿದ್ಯೆಗಳನ್ನೊಳಗೊಂಡಿರುವಂತಹ ಮಹಾಗುರುಕುಲದ ಉದಯವಾಗಲಿದೆ. ನಿಜವಾದ ಅರ್ಥದಲ್ಲಿ ವಿದ್ಯಾಲಯ, ವಿಶ್ವವಿದ್ಯಾಲಯವಾಗಿ ಮಹಾಗುರುಕುಲ ಮೂಡಿ ಬರಲಿದೆ. ಇದರ ಅಂಗವಾಗಿ ಬೆಂಗಳೂರಿನಲ್ಲಿ ಸುಮಾರು 6 ತಿಂಗಳ ಕಾಲ ಮಹಾವ್ರತದಂತೆ ಪ್ರತಿನಿತ್ಯ ರಾಮಾಯಣದ ಪ್ರವಚನ ನಡೆಯಲಿದೆ ಎಂದು ಶ್ರೀಸಂಸ್ಥಾನದವರು ತಿಳಿಸಿದರು.

 

ಹೊನ್ನಾವರ ಹವ್ಯಕ ಭವನದಲ್ಲಿ ಡಾ. ಎಂ. ಪಿ. ಕರ್ಕಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವನ ನೀಡುತ್ತಾ ಷರತ್ತು ಬದ್ಧವಾದ ಪ್ರೀತಿ ಪ್ರೀತಿಯಲ್ಲ, ನಿಷ್ಕಾರಣವಾದ ಪ್ರೀತಿ ನಿಜವಾದ ಪ್ರೀತಿ. ಆತ್ಮಶುದ್ಧಿ – ಹೃದಯಶುದ್ಧಿ ಇದ್ದಾಗ ಮಾತ್ರ ಬಹಳ ಜನರ ಪ್ರೀತಿಯನ್ನು ಬಹಳಕಾಲ ಗಳಿಸಬಹುದು. ಹೃದಯವನ್ನು ಅರ್ಥ ಮಾಡಿಕೊಂಡ ಜನರಿಗೆ ಕಠೋರವಾದ ಮಾತೂ ಬೇಸರವನ್ನು ಉಂಟುಮಾಡುವುದಿಲ್ಲ. ಹಿತವನ್ನು ಬಯಸಿ ಮಾಡುವ ಕೆಲಸ ಕೆಡುಕಲ್ಲ ಎಂಬುದು ಸಮಾಜಕ್ಕೆ ಬರಬೇಕಾಗಿದೆ. ಜೀವನದಲ್ಲಿ ಸಾಧನೆ ಮಾಡಿದರೂ ಮಾಡದಿದ್ದರೂ ಎಲ್ಲರಿಗೂ ಒಳ್ಳೆಯವರಾಗಿದ್ದಾಗ ದೇವರು ಹಾಗೂ ಸಮಾಜ ಮೆಚ್ಚುತ್ತದೆ ಎಂದು ಹೇಳಿದರು.

 

ಡಾ. ಎಂ. ಪಿ. ಕರ್ಕಿ ಅವರನ್ನು ಶ್ರೀಸಂಸ್ಥಾನದವರು ಸನ್ಮಾನಿಸಿ ಆಶೀರ್ವದಿಸಿದರು. ಹೊನ್ನಾವರ ಮಂಡಲ ಕಾರ್ಯದರ್ಶಿ ಶ್ರೀ ರಾಜು ಹೆಬ್ಬಾರ್ ಅಭಿನಂದನಾ ಭಾಷಣ ಮಾಡಿದರು. ಅಧ್ಯಕ್ಷ ಶ್ರೀ ಮಂಜುನಾಥ್ ಸುವರ್ಣಗದ್ದೆ ಉಪಸ್ಥಿತರಿದರು.

 

Author Details


Srimukha

Leave a Reply

Your email address will not be published. Required fields are marked *