ಮುಗಿಯಿತೇ ಕರ್ತವ್ಯ ಮತ ಚಲಾಯಿಸಿದಲ್ಲಿಗೇ?

ದೇಶದೆಲ್ಲೆಡೆ ನಡೆದ ಏಳು ಹಂತಗಳ ಚುನಾವಣೆ ಮುಗಿದಿದೆ. ಮತ ಚಲಾಯಿಸಿದವರು, ಮತ ಚಲಾಯಿಸಲಾಗದೇ ಉಳಿದವರು, ಮತ ಚಲಾಯಿಸದಿದ್ದವರು… ಹೀಗೆ ನಾವು ಈ ಯಾವುದೇ ಕೆಟಗರಿಯಲ್ಲಿದ್ದರೂ ಕೂಡ ಚುನಾವಣೆಯ ಫಲಿತಾಂಶ, ಅದರಿಂದಾಗುವ ಬದಲಾವಣೆಗಳು ಹಾಗೂ ಅದೆಲ್ಲದರ ಒಟ್ಟು ಪರಿಣಾಮ ಎಲ್ಲರ ಮೇಲೂ ಆಗಲಿದೆ. ಹಾಗಾಗಿ ನಮ್ಮೆಲ್ಲರ ಕಣ್ಣು ಕಿವಿಗಳು ಫಲಿತಾಂಶದ ದಿನಕ್ಕಾಗಿ ಕಾಯುತ್ತಿವೆ. ಈ ಹೊತ್ತಿನಲ್ಲಿ ಯೋಚಿಸಬೇಕಾದ ಒಂದು ಅಂಶವಿದೆ. ನಾವು ಮತ ಚಲಾಯಿಸಿದ್ದೇವೆ. ಆದರೆ ಅಷ್ಟಕ್ಕೇ ಮುಗಿಯಿತೇ ನಮ್ಮ ಕರ್ತವ್ಯ? ದೇಶದ ಪ್ರಜೆಗಳಾಗಿ ನಮ್ಮದೊಂದಷ್ಟು ಕರ್ತವ್ಯಗಳಿವೆ. ಈ […]

Continue Reading

ಬದಲಿಸಬೇಕು ಬದುಕಿನ ನಕ್ಷೆ

ಇದೀಗ ಫಲಿತಾಂಶಗಳ ಸಮಯ. ಫಲಿತಾಂಶಕ್ಕೆ, ಪರೀಕ್ಷೆಗೆ ಮಕ್ಕಳು ಹೆದರುವುದು, ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದು ಬೆಚ್ಚಿಬೀಳುವಂತೆ ಮಾಡುತ್ತವೆ. ಅದಕ್ಕೆ ಕಾರಣವೇನು ಎಂಬುದನ್ನು ನಾವು ಅರಿತಿದ್ದೇವೆಯೇ? ಅರಿತಿದ್ದೇವಾದರೆ ಪರಿಹಾರವೇಕೆ ಸಿಕ್ಕಿಲ್ಲ ಇನ್ನೂ?   ಈ ಸಮಸ್ಯೆ ಇಂದಿನದಲ್ಲ. ಅಂದರೆ ಈಗ ಇದ್ದಕ್ಕಿದ್ದಂತೆ ಆರಂಭವಾದದ್ದಲ್ಲ. ಯಾವುದೇ ಸಮಸ್ಯೆ ಒಂದು ಕ್ಷಣದಲ್ಲಿ ಇದ್ದಕ್ಕಿದ್ದಂತೆ ಉದ್ಭವ ಆಗುವುದೂ ಇಲ್ಲ. ನಮ್ಮ ದೇಹದ ರೋಗಗಳಂತೆ, ನಮ್ಮ ಸಮಾಜದ ರೋಗಗಳೂ ನಿಧಾನಕ್ಕೆ ಮೊಳೆತು ಬೆಳೆಯುವಂಥವು. ಅದನ್ನು ನಾವು ಮೊಳೆಯಲು ಬಿಟ್ಟದ್ದೇ ಸರಿ ಅಲ್ಲ. ಬೆಳೆಯಲು ಬಿಟ್ಟದ್ದು ಅಪರಾಧ. […]

Continue Reading

*ನಡೆಯುತ್ತಿರಲಿ ಬದುಕು – ಯಾರಿದ್ದರೂ; ಇರದಿದ್ದರೂ*

ಶಾಲೆಗೂ ನಮ್ಮ‌ ಬಡಾವಣೆಗೂ ಬಹುಶಃ ಒಂದೂವರೆ ಕಿಲೋಮೀಟರ್ ಇದ್ದಿರಬಹುದು. ಮಧ್ಯಮವರ್ಗದವರೇ ಬರುತ್ತಿದ್ದ ಶಾಲೆ. ಹೆಚ್ಚಿನ ಮಕ್ಕಳು ನಡೆದುಕೊಂಡೇ ಬರುತ್ತಿದ್ದುದು. ನಾವೊಂದು ನಾಲ್ಕೈದು ಜನ ಮಕ್ಕಳದ್ದು ಮನೆ ಇದ್ದುದು ಒಂದೇ ಬಡಾವಣೆಯಲ್ಲಿ. ಪರಸ್ಪರ ಮಾತನಾಡಿಕೊಂಡು ಒಟ್ಟಿಗೇ ಹೊರಡಲು ಈಗಿನಂತೆ ಸಂಪರ್ಕ ಸಾಧನಗಳೇನೂ ಇರಲಿಲ್ಲವಾಗಿ ಬೆಳಗ್ಗೆ ನಮ್ಮ ನಮ್ಮ ಸಮಯಕ್ಕೆ ನಾವು ಹೊರಡುತ್ತಿದ್ದೆವು. ಸಿಕ್ಕರೆ ಜೊತೆ ಇರುತ್ತಿತ್ತು. ಇಲ್ಲದಿದ್ದರೆ ಒಂಟಿ ಪಯಣ. ಆದರೆ ಸಂಜೆ ಹಾಗಲ್ಲ. ಎಲ್ಲರೂ ಒಟ್ಟಿಗೇ ಹೊರಡುತ್ತಿದ್ದೆವು ಶಾಲೆಯಿಂದ. ಬಡಾವಣೆಗೆ ತಲುಪಿದ ಅನಂತರ ಒಬ್ಬೊಬ್ಬರದು ಒಂದೊಂದು ರಸ್ತೆಯ […]

Continue Reading

ನಡೆಯುತ್ತಾರವರು – ನಾವು ಬಿಡಬೇಕು ಅಷ್ಟೇ !

1) ನನ್ನ ಮಗನಿಗೆ ಕಲಿಯುವುದರಲ್ಲಿ ಆಸಕ್ತಿ ಇಲ್ಲ. ಎಷ್ಟೇ ಪ್ರಯತ್ನಪಟ್ಟರೂ ಅಕ್ಷರ, ಸಂಖ್ಯೆಗಳು ಮತ್ತು ಪದಗಳನ್ನು ಬರೆಯುತ್ತಿಲ್ಲ. ಬರೆಯಲು ಕೂರಿಸಿದ ತಕ್ಷಣ ಬೇರೆ ಆಟಕ್ಕೆ ಹೊರಡುತ್ತಾನೆ. ಅವನಿಗೆ ಕಲಿಯುವಿಕೆಯ ಸಮಸ್ಯೆಗಳಿವೆ ಅನಿಸುತ್ತಿದೆ. ಏನು ಮಾಡುವುದು? ಅವನ ವಯಸ್ಸು ನಾಲ್ಕು ವರ್ಷ. 2) ಮೂರು ವರ್ಷದ ನನ್ನ ಮಗಳಿಗೆ ಸರಿಯಾಗಿ ತಿನ್ನಲು ಬರುವುದಿಲ್ಲ. ಸುತ್ತಲೂ ಚೆಲ್ಲುತ್ತಾಳೆ. She is messy. How do I discipline her? 3) ನನ್ನ ಮಗನಿಗೆ ಪೆನ್ಸಿಲ್ ಹಿಡಿದು ನೀಟಾಗಿ ಬರೆಯಲು ಬರುವುದಿಲ್ಲ. […]

Continue Reading

ಸೇರಿನಿಂದ ಅಳೆಯಲಾದೀತೇ ದೂರವನ್ನು?

  ದೇವಸ್ಥಾನ ಕ್ಕೆ ನಾವೇಕೆ ಹೋಗಬೇಕು? ಇಲ್ಲಿದೆ ವೈಜ್ಞಾನಿಕ‌ ಕಾರಣ. ವಿವಾಹಿತ ಸ್ತ್ರೀಯರು ಕರಿಮಣಿಯ ಸರ ಮತ್ತು ಕಾಲುಂಗುರ ಧರಿಸುವುದರ ವೈಜ್ಞಾನಿಕ ಕಾರಣ ಗೊತ್ತೇ? ಹಣೆಗೆ ಕುಂಕುಮ, ವಿಭೂತಿ, ಗಂಧ ಹಚ್ಚುವ ಸಂಪ್ರದಾಯದ ಹಿಂದಿನ ವೈಜ್ಞಾನಿಕ ಕಾರಣವೇನು? ಮರಕ್ಕೆ ಪ್ರದಕ್ಷಿಣೆ ಬರುವುದರ ವೈಜ್ಞಾನಿಕ‌ ಹಿನ್ನೆಲೆ. ದಶಾವತಾರವು ವೈಜ್ಞಾನಿಕವಾದ ವಿಕಾಸವಾದವನ್ನು ಪ್ರತಿಪಾದಿಸುತ್ತದೆ.   ಹೀಗಿರುವ ನೂರೆಂಟು ‘ವೈಜ್ಞಾನಿಕ’ ಸಂಶೋಧನೆಗಳನ್ನು ದಿನನಿತ್ಯ ಕಾಣುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ನಮ್ಮ ಇನ್ಬಾಕ್ಸಿನಲ್ಲಿ. ವೈಜ್ಞಾನಿಕ ಎಂದ ತಕ್ಷಣ ನಮ್ಮ ಕುತೂಹಲ ಚಿಗುರುತ್ತದೆ. ಓದುತ್ತೇವೆ. […]

Continue Reading

*ಸೇರಿನಿಂದ ಅಳೆಯಲಾದೀತೇ ದೂರವನ್ನು?*

ದೇವಸ್ಥಾನಕ್ಕೆ ನಾವೇಕೆ ಹೋಗಬೇಕು? ಇಲ್ಲಿದೆ ವೈಜ್ಞಾನಿಕ‌ ಕಾರಣ. ವಿವಾಹಿತ ಸ್ತ್ರೀಯರು ಕರಿಮಣಿಯ ಸರ ಮತ್ತು ಕಾಲುಂಗುರ ಧರಿಸುವುದರ ವೈಜ್ಞಾನಿಕ ಕಾರಣ ಗೊತ್ತೇ? ಹಣೆಗೆ ಕುಂಕುಮ, ವಿಭೂತಿ, ಗಂಧ ಹಚ್ಚುವ ಸಂಪ್ರದಾಯದ ಹಿಂದಿನ ವೈಜ್ಞಾನಿಕ ಕಾರಣವೇನು? ಮರಕ್ಕೆ ಪ್ರದಕ್ಷಿಣೆ ಬರುವುದರ ವೈಜ್ಞಾನಿಕ‌ ಹಿನ್ನೆಲೆ. ದಶಾವತಾರವು ವೈಜ್ಞಾನಿಕವಾದ ವಿಕಾಸವಾದವನ್ನು ಪ್ರತಿಪಾದಿಸುತ್ತದೆ. ಹೀಗಿರುವ ನೂರೆಂಟು ‘ವೈಜ್ಞಾನಿಕ’ ಸಂಶೋಧನೆಗಳನ್ನು ದಿನನಿತ್ಯ ಕಾಣುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ನಮ್ಮ ಇನ್ಬಾಕ್ಸಿನಲ್ಲಿ. ವೈಜ್ಞಾನಿಕ ಎಂದ ತಕ್ಷಣ ನಮ್ಮ ಕುತೂಹಲ ಚಿಗುರುತ್ತದೆ. ಓದುತ್ತೇವೆ. ನಮ್ಮ ಪರಿಚಿತರೊಂದಷ್ಟು ಜನಕ್ಕೆ […]

Continue Reading

ಅಸಾಮಾನ್ಯರಿಗೆ ಸಮಾನತೆಯ ನ್ಯಾಯ!

ಮನೆ ಮನೆಯಲಿ ದೀಪ ಉರಿಸಿ ಹೊತ್ತು ಹೊತ್ತಿಗೆ ಅನ್ನ ಉಣಿಸಿ ತಂದೆ ಮಗುವ ತಬ್ಬಿದಾಕೆ ನಿನಗೆ ಬೇರೆ ಹೆಸರು ಬೇಕೇ ಸ್ತ್ರೀ ಎಂದರೆ ಅಷ್ಟೇ ಸಾಕೇ… ಈ ನಾಲ್ಕು ಸಾಲು ಎಲ್ಲವನ್ನೂ ಹೇಳಿಬಿಡುತ್ತವೆ. ಜೀವವೊಂದು ಭೂಮಿಗಿಳಿಯಬೇಕಾದರೆ ಅವಳ ಗರ್ಭವೇ ಮಾರ್ಗ. ಮನೆಯೊಂದು ಬೆಳಗುವುದು ಹಚ್ಚಿದ ದೀಪದಿಂದ ಮಾತ್ರವಲ್ಲ. ಆ ದೀಪದ ಬೆಳಕನ್ನು ಪ್ರತಿಬಿಂಬಿಸುವ ಅವಳ ಹೊಳೆವ ಕಂಗಳಿಂದಲೂ. ಬೆಳಕು ಅವಳು; ಕುಟುಂಬಕ್ಕೂ, ಸಮಾಜಕ್ಕೂ. ಅವಳು ಭೂಮಿಯಂತೆ. ಅದಕ್ಕಿಂತ ಹೆಚ್ಚೇನು ಹೇಳುವುದು ಅವಳ ಬಗ್ಗೆ! ಹೀಗಿರುವ ಅವಳಿಗೆ ಒಂದು […]

Continue Reading

ಯೋಧರ ಬಲಿದಾನಕ್ಕೆ‌ ಯೋಗ್ಯರೇ ನಾವು?

  ಜಗತ್ತಿನ ಅತಿ ಪುರಾತನ ಮತ್ತು ಸನಾತನ ಸಂಸ್ಕೃತಿ ನಮ್ಮದು. ನಮ್ಮ ಇತಿಹಾಸ, ನಮ್ಮ ಕಲೆ, ನಮ್ಮ ಸಾಹಿತ್ಯ, ನಮ್ಮ ಭಾಷೆ ಎಲ್ಲವೂ ಜಗತ್ತಿಗೆ ಎಂದಿಗೂ ಅಚ್ಚರಿಯೇ. ಸಾವಿರ ವರ್ಷಕ್ಕೂ ಹೆಚ್ಚು ಕಾಲದಿಂದ ಆಕ್ರಮಣಕ್ಕೊಳಗಾಗಿಯೂ ತನ್ನತನವನ್ನು ಇನ್ನೂ ಉಳಿಸಿಕೊಂಡಿರುವ ಯಾವುದಾದರೂ ಬೇರೆ ದೇಶ ಇದೆಯೇ ಜಗತ್ತಿನಲ್ಲಿ? ಅಲೆಕ್ಸಾಂಡರನಿಂದ ಆರಂಭವಾಗಿ ಮೊನ್ನೆ ಪುಲ್ವಾಮಾದಲ್ಲಿ ನಡೆದ ಆಕ್ರಮಣದ ವರೆಗೆ, ಸಾವಿರವೇನು ಲಕ್ಷಕ್ಕೂ ಅಧಿಕ ಸಣ್ಣ-ದೊಡ್ಡ, ವಿವಿಧ ರೂಪದ ದಾಳಿಗಳು ನಡೆದಿವೆ ನಮ್ಮ ಮೇಲೆ. ಅದೆಲ್ಲದರ ಹೊರತಾಗಿಯೂ ಇಂದು ನಾವು ತಲೆ […]

Continue Reading

ಏರದಿರಲಿ ಮನಸ್ಸು – ಭ್ರಮೆಯ ಬಲೂನನ್ನು

ಪ್ಲಾಸಿಬೊ ಇಫೆಕ್ಟ್ ಬಗ್ಗೆ ಕೇಳಿದ್ದೀರಾ? ಔಷಧಿಯಲ್ಲದ ಔಷಧಿ, ಚಿಕಿತ್ಸೆಯಲ್ಲದ ಚಿಕಿತ್ಸೆ. ಕೊಡುವ ಔಷಧಿಯಲ್ಲಿ ಯಾವುದೇ ಔಷಧೀಯ ಅಂಶವೇ ಇರುವುದಿಲ್ಲ. ಆದರೆ ಅದರಿಂದಾಗಿ ಔಷಧ ತೆಗೆದುಕೊಂಡ ವ್ಯಕ್ತಿಗೆ ಸಮಸ್ಯೆ ಪರಿಹಾರವಾಗಲೂಬಹುದು. ಪ್ಲಾಸಿಬೊ ತೆಗೆದುಕೊಂಡ ವ್ಯಕ್ತಿಯು ತಾನು ಔಷಧಿಯನ್ನೇ ತೆಗೆದುಕೊಂಡಿದ್ದೇನೆ ಎಂದುಕೊಂಡಿರುವಾಗ ಅವನಿಗೆ ತನ್ನ ಸಮಸ್ಯೆ ಕಡಿಮೆಯಾಗಿದೆ ಅನಿಸಬಹುದು. ಕಡಿಮೆಯೂ ಆಗಬಹುದು!   ಹೈಪೊಕಾಂಡ್ರಿಯಾ ಎಂಬೊಂದು ಸಮಸ್ಯೆ ಇದೆ. ಅದರಲ್ಲಿ ವ್ಯಕ್ತಿ ತನಗೆ ಯಾವುದೋ ಅನಾರೋಗ್ಯವಿದೆ ಎಂದುಕೊಂಡಿರುತ್ತಾನೆ. ತನಗೆ ಮಧುಮೇಹ, ಕ್ಯಾನ್ಸರ್, ಹೃದ್ರೋಗ ಹೀಗೆ ಏನೇನೋ ಇದೆಯೆಂದು ಭಾವಿಸಿಕೊಳ್ಳುತ್ತಾನೆ ಅವನು. […]

Continue Reading

ಯಾರೂ ನೋಡದ್ದನ್ನು ನಾನೂ ನೋಡಿಲ್ಲವೇ?

She lost her legs in an accident, a day before the wedding.   The next day he lost his spine.     ಹೀಗೊಂದು ಸಣ್ಣ ಕಥೆ. ಎಲ್ಲೋ ಓದಿದ್ದು. ಇದರಲ್ಲಿ ಎರಡನೆಯ ಸಾಲು ಕಾಡುವಂಥದ್ದು. ಮೊದಲನೆಯ ಸಾಲು ಯೋಚನೆಗೆ ನೂಕುವಂಥದ್ದು. ಅದರಲ್ಲಿ ಯೋಚಿಸುವಂಥದ್ದೇನಿದೆ? ರಸ್ತೆಗಿಳಿದ ಪ್ರತಿಯೊಬ್ಬನೂ ಇನ್ನೊಂದು ಕಡೆಗೆ ಸುರಕ್ಷಿತವಾಗಿ ತಲುಪುತ್ತಾನೆಯೇ ಅಥವಾ ಮಧ್ಯದಲ್ಲಿಯೇ ಯಮನ ದೂತರು ಅವನನ್ನು ತಮ್ಮ ವಾಹನದಲ್ಲಿ ಹೇರಿಕೊಂಡು ಹೋಗಿಬಿಡುತ್ತಾರೆಯೇ. ಅಥವಾ ಅಂಗಾಂಗ ಕಳೆದುಕೊಂಡು […]

Continue Reading

ಕತ್ತಲಿನ ಪ್ರಶ್ನೆಗೆ ಬೆಳಕಿನ ಉತ್ತರ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಒಂದು ಸಂದೇಶ ಹೀಗಿದೆ: 80-90ರ ದಶಕದ ಮಕ್ಕಳು ಅದೃಷ್ಟವಂತರು. ನಾವು ರಸ್ತೆಯಲ್ಲಿ ಆಡುತ್ತಿದ್ದೆವು. ನಮಗೆ google ಇಲ್ಲದೆಯೇ ಪ್ರಾಜೆಕ್ಟ್ ರೆಡಿ ಮಾಡುವುದು ಗೊತ್ತಿತ್ತು. ನಾವು ಈಗಿನ ಮಕ್ಕಳಂತೆ cell phone, tabಗಳಿಗೆ ಅಂಟಿಕೊಂಡಿರಲಿಲ್ಲ. ನಾವು ಹಳ್ಳಿಗಳಲ್ಲಿ ಬೆಳೆದೆವು. ನಾವು ಮಣ್ಣಿನಲ್ಲಿ ಆಡಿದೆವು. ಈಗಿನ ಮಕ್ಕಳಿಗೆ ಇದೆಲ್ಲ ಅವಕಾಶ ಇಲ್ಲ. ಹೀಗೇ ಏನೋ ಒಂದಷ್ಟು ಉದಾಹರಣೆಗಳು. ನಾವು 80-90ರ ದಶಕದಲ್ಲಿ ಕಳೆದ ಬಾಲ್ಯದ ನೆನಪುಗಳು ಮಧುರವೇ. ಆದರೆ ಇಂದಿನವರ ಬಾಲ್ಯ ಚೆನ್ನಾಗಿಲ್ಲ ಎಂಬುದಾಗಿ ನಾವೇ […]

Continue Reading

ನಿಮಗೊಂದು ಕರೆ ಮಾಡಿ

90ರ ದಶಕ ಅದು. ಟೆಲಿಫೋನು ಎಲ್ಲ ಮನೆಗಳಿಗೂ ಬಂದಿರಲಿಲ್ಲ. ಪತ್ರ ಬರೆಯುವುದೇ ಸಂಭ್ರಮ ಅಂದು. ಇಂದು ಬರೆದರೂ ಅಷ್ಟೇ ಪ್ರೀತಿಯಿಂದ ಬರೆಯಬಲ್ಲೆನೇ? ಎಂದು ನನ್ನನ್ನೇ ಪ್ರಶ್ನಿಸಿಕೊಳ್ಳುತ್ತೇನೆ. ಪತ್ರ ಬರೆಯುವುದಕ್ಕೆ ವಿಷಯವಾದರೂ ಎಲ್ಲಿದೆ ಈಗ? ಎಂದು ಕೇಳುತ್ತದೆ ಬುದ್ಧಿ. ಆ ಕ್ಷಣದಲ್ಲಿ ವಾಟ್ಸಾಪ್ ಪಾರಿವಾಳದ ಮೂಲಕ ಹಾರಿಸಿಬಿಡುತ್ತೇವೆಲ್ಲ! ಅಷ್ಟಕ್ಕೂ ಬರೆಯುವುದಕ್ಕೆ ಸಮಯವಾದರೂ ಎಲ್ಲಿದೆ ಇಂದು? ಬರೆಯುವುದಕ್ಕಿರಲಿ, ಬಂದ ಸಂದೇಶಗಳನ್ನು ಓದುವುದಕ್ಕೂ ನಮಗಿಂದು ಸಮಯವಿಲ್ಲ. ಅಂದೂ ಇದ್ದುದು 24 ಗಂಟೆಗಳು. ಇಂದಿರುವುದೂ ಅಷ್ಟೇ. ಗಡಿಯಾರದ ಮುಳ್ಳುಗಳನ್ನು ಮೀರಿಸಿ ನಾವು ಬೆಳೆದಿದ್ದೇವೆ […]

Continue Reading