ಹಣಕಾಸಿನ ವಿಚಾರದಲ್ಲಿ ಖರ್ಚುವೆಚ್ಚಗಳು ಅಧಿಕ !

ದಿನ ಭವಿಷ್ಯ

          

ವಿಕಾರಿನಾಮ ಸಂವತ್ಸರ / ದಕ್ಷಿಣಾಯನ /
ವರ್ಷ ಋತು / ಭಾದ್ರಪದ ಮಾಸ/
ಶುಕ್ಲಪಕ್ಷ/ನವಮಿ ತಿಥಿ/

ಶನಿವಾರ/ಜ್ಯೇಷ್ಠ ನಕ್ಷತ್ರ /

ದಿನಾಂಕ 07.09.2019

  °~•~°~•~°~•~°~•~°~•~°

ಮೇಷ

ಕೆಲಸಕಾರ್ಯಗಳಲ್ಲಿ ವಿಗ್ರಗಳು ಕಂಡು ಬರುವ ಲಕ್ಷಣಗಳು ಇರುವುದರಿಂದ ಜಾಗ್ರತೆಯಿಂದಿರಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಅಭಿವೃದ್ಧಿ ಕಂಡುಬರಬಹುದು



ಪರಿಹಾರ:
ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು.

ಜಪಿಸಲು :
ನಮಸ್ತೇ ಶರಣ್ಯೇ ಶಿವೇ ಸಾನುಕಮ್ಪೇ 

ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ ।
ನಮಸ್ತೇ ಜಗದ್ವನ್ದ್ಯಪಾದಾರವಿನ್ದೇ 

ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ ॥

°~•~°~•~°~•~°~•~°~•~°

   

ವೃಷಭ

ಯುವಕ-ಯುವತಿಯರಿಗೆ ವಿವಾಹಯೋಗ  ಭಾಗ್ಯ ಒದಗಿ ಬರುತ್ತದೆ. ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುವುದು. ವಿದ್ಯಾರ್ಥಿಗಳಿಗೆ ಮುನ್ನಡೆ ಕಂಡುಬರುವುದು
ಪರಿಹಾರ
ಗೋಮಾತೆಯ ದರ್ಶನ ಹಾಗೂ ಸೇವೆಯನ್ನು ಮಾಡಿ.

ಜಪಿಸಲು :
ಸರ್ವದೇವಮಯೇ ದೇವಿ 

ಸರ್ವದೇವೈರಲಂಕೃತೇ |
ಮಾತರ್ಮಮಾಭಿಲಷಿತಮ್

ಸಫಲಂ ಕುರು ನಂದಿನಿ ||

°~•~°~•~°~•~°~•~°~•~°



ಮಿಥುನ


      ಆರೋಗ್ಯ ಸಂಬಂಧದ ತೊಂದರೆಗಳನ್ನು ಎದುರಿಸಬೇಕಾಗುವ  ಲಕ್ಷಣ ಇರುವುದರಿಂದ ಜಾಗರೂಕತೆಯಿಂದ ಇರಬೇಕು. ಹಣಕಾಸಿನ ವಿಚಾರದಲ್ಲಿ ಖರ್ಚುವೆಚ್ಚಗಳು ಅಧಿಕವಾಗಿ ಒದಗಿಬರುತ್ತದೆ

ಪರಿಹಾರ 
ನರಸಿಂಹನ ಆರಾಧನೆಯನ್ನು ಮಾಡಿ.

ಜಪಿಸಲು :
ದೇವತಾಕಾರ್ಯಸಿದ್ಧ್ಯರ್ಥಮ್ 

ಸಭಾಸ್ತಂಭಸಮುದ್ಭವಮ್ |
ಶ್ರೀನೃಸಿಂಹಮಹಾವೀರಮ್ 

ನಮಾಮಿ ಋಣಮುಕ್ತಯೇ ||

   °~•~°~•~°~•~°~•~°~•~°



ಕರ್ಕಾಟಕ

 ಮಾಡುವಂತಹ ಕೆಲಸ ಕಾರ್ಯದಲ್ಲಿ ಉತ್ತಮ ಪರಿಶ್ರಮದಿಂದ  ಶ್ರದ್ಧೆಯಿಂದ ಮುನ್ನಡೆಸಿ ದಾಂಪತ್ಯ ಜೀವನದಲ್ಲಿ ಸುಖ-ಶಾಂತಿ ನೆಲೆಗೊಳ್ಳುತ್ತದೆ.

ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ದೇವಿಯ ಆರಾಧನೆಯಿಂದ ಶುಭ.

ಜಪಿಸಲು :
ಶ್ರೀದುರ್ಗಾಯೈ ನಮಃ / ಶ್ರೀಶಾಂತ್ಯೈ ನಮಃ / ಶ್ರೀಶಾಂಭವ್ಯೈ ನಮಃ / ಶ್ರೀಭೂತಿದಾಯಿನ್ಯೈ ನಮಃ / ಶ್ರೀಶಂಕರಪ್ರಿಯಾಯೈ ನಮಃ / ಶ್ರೀನಾರಾಯಣ್ಯೈ ನಮಃ / ಶ್ರೀಭದ್ರಕಾಲ್ಯೈ ನಮಃ / ಶ್ರೀಶಿವದೂತ್ಯೈ ನಮಃ / ಶ್ರೀಮಹಾಲಕ್ಷ್ಮ್ಯೈ ನಮಃ / ಶ್ರೀಮಹಾಮಾಯಾಯೈ ನಮಃ / ಶ್ರೀಯೋಗನಿದ್ರಾಯೈ ನಮಃ / ಶ್ರೀಚಂಡಿಕಾಯೈ ನಮಃ ||

  °~•~°~•~°~•~°~•~°~•~°



ಸಿಂಹ

ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಕೆಲಸಕಾರ್ಯಗಳಲ್ಲಿ ಉತ್ತಮ ಮನಸ್ಸಿನಿಂದ ಮುನ್ನಡೆಯಿರಿ. ದಾಂಪತ್ಯ ಜೀವನದಲ್ಲಿ ಸುಖ-ಶಾಂತಿ ನೆಲೆಸಲಿದೆ
ಪರಿಹಾರ
ಶಿವನ ಆರಾಧನೆ ಅಗತ್ಯ.

ಜಪಿಸಲು :
ಕರಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಮ್ |
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ದೇ ಶ್ರೀಮಹಾದೇವ ಶಂಭೋ||

    °~•~°~•~°~•~°~•~°~•~°     


ಕನ್ಯಾ


      ಮಾಡುವಂತಹ ಕೆಲಸಕಾರ್ಯಗಳಲ್ಲಿ ಅಡೆತಡೆಗಳು ಕಷ್ಟನಷ್ಟಗಳು ಇದಿರಾಗುತ್ತದೆ. ಜಾಗರೂಕತೆಯಿಂದ ತಮ್ಮ ಕರ್ತವ್ಯವನ್ನು ನಿಭಾಯಿಸಿ



ಪರಿಹಾರ
ಶ್ರೀಕೃಷ್ಣ ದೇವರ ಆರಾಧನೆಯಿಂದ ಶುಭ

ಜಪಿಸಲು :
ವಸುದೇವಸುತಂ  ದೇವಮ್  

ಕಂಸಚಾಣೂರಮರ್ದನಮ್  |
ದೇವಕೀಪರಮಾನಂದಮ್ 

ಕೃಷ್ಣಂ ವಂದೇ  ಜಗದ್ಗುರುಮ್ ||

  °~•~°~•~°~•~°~•~°~•~°      


ತುಲಾ


        ಹಣಕಾಸಿನ ವಿಚಾರದಲ್ಲಿ ಉತ್ತಮ ಅಭಿವೃದ್ಧಿ ಕಂಡುಬರಲಿದೆ ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುನ್ನಡೆದಲ್ಲಿ ತಮ್ಮ ಗುರಿಯನ್ನು ತಲುಪುತ್ತೀರಿ.


ಪರಿಹಾರ 
ದುರ್ಗಾದೇವಿಯ ಆರಾಧನೆಯಂದ ಶುಭ.

ಜಪಿಸಲು :
ಸರ್ವರೂಪಮಯೀ ದೇವೀ 

ಸರ್ವಂ ದೇವೀಮಯಂ ಜಗತ್ ।
ಅತೋಽಹಂ ವಿಶ್ವರೂಪಾಂ ತ್ವಾಮ್ 

ನಮಾಮಿ ಪರಮೇಶ್ವರೀಮ್ ||


  °~•~°~•~°~•~°~•~°~•~°


ವೃಶ್ಚಿಕ


 
ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡು ಬರುತ್ತದೆ. ಕೆಲಸಕಾರ್ಯಗಳಲ್ಲಿ ಉತ್ತಮ ಅಭಿವೃದ್ಧಿ ದೊರೆಯಲಿದೆ.ಹಣಕಾಸಿನ ವಿಚಾರದಲ್ಲಿ  ನಿಧಾನಗತಿಯ ಅಭಿವೃದ್ಧಿ ಕಂಡುಬರುವುದು.

ಪರಿಹಾರ
ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಶುಭವಾಗಲಿದೆ.

 


ಜಪಿಸಲು:
ಶರಣ್ಯಂ ಸರ್ವಲೋಕಾನಾಮ್ 

ಅಗ್ರಗಣ್ಯಂ ದಿವೌಕಸಾಮ್ |
ವರೇಣ್ಯಂ ದೇವಸೇನಾಯಾಃ 

ಸುಬ್ರಮಣ್ಯಮುಪಾಸ್ಮಹೇ ||

°~•~°~•~°~•~°~•~°~•~°


ಧನು


   
  ಆರೋಗ್ಯ ಸಂಬಂಧಿ ತೊಂದರೆಗಳು ಕಂಡು ಬರುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಇರಬೇಕು. ವಿದ್ಯಾರ್ಥಿಗಳಿಗೆ ನಿಧಾನಗತಿ ಅಭಿವೃದ್ಧಿ ಕಂಡುಬರಲಿದೆ


ಪರಿಹಾರ
ತಂದೆ ತಾಯಿಯರ ಹಾಗೂ ಗುರುವಿನ ಆಶೀರ್ವಾದವನ್ನು ಪಡೆಯಿರಿ.

ಜಪಿಸಲು :
ಅಖಂಡಮಂಡಲಾಕಾರಮ್ 

ವ್ಯಾಪ್ತಂ ಯೇನ ಚರಾಚರಮ್ |
ತತ್ಪದಂ ದರ್ಶಿತಂ ಯೇನ 

ತಸ್ಮೈ ಶ್ರೀಗುರವೇ ನಮಃ ||

      °~•~°~•~°~•~°~•~°~•~°


ಮಕರ


     
ವ್ಯವಹಾರ ಕ್ಷೇತ್ರಗಳಲ್ಲಿ ಉತ್ತಮ ಅಭಿವೃದ್ಧಿ ಕಂಡುಬರುವುದು ನೂತನ ಬದಲಾವಣೆಗಳು ಕಂಡು ಬರುತ್ತದೆ,  ಉತ್ತಮ ಪರಿಶ್ರಮದಿಂದ ಮುನ್ನಡೆಯಬೇಕು. ಹಣಕಾಸಿನ ವಿಚಾರದಲ್ಲಿ ಉತ್ತಮ ಅಭಿವೃದ್ಧಿ ಕಂಡುಬರುವುದು

ಪರಿಹಾರ
ಶಿವಾಲಯ ದರ್ಶನ, ರುದ್ರಾಭಿಷೇಕ ಸೇವೆ ಮಾಡುವುದರಿಂದ ಶುಭ ಆಗಲಿದೆ. 

ಜಪಿಸಲು :
ಶುದ್ಧಸ್ಫಟಿಕಸಂಕಾಶಮ್
ಶುದ್ಧವಿದ್ಯಾಪ್ರದಾಯಕಮ್ |
ಶುದ್ಧಂ ಪೂರ್ಣಂ ಚಿದಾನಂದಮ್
ಸದಾಶಿವಮಹಂ ಭಜೇ ||

    °~•~°~•~°~•~°~•~°~•~°         


ಕುಂಭ  

 
      ನೂತನ ಉದ್ಯೋಗ ಆಕಾಂಕ್ಷಿಗಳಿಗೆ ಉತ್ತಮ ಅವಕಾಶ ದೊರೆಯಲಿದೆ ಹಾಗೂ ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಗೌರವಗಳು ದೊರೆಯುತ್ತದೆ. ವಿದ್ಯಾರ್ಥಿಗಳಿಗೆ  ಉತ್ತಮ ಅಭಿವೃದ್ಧಿ ದೊರೆಯಲಿದೆ. ಜೀವನದಲ್ಲಿ ಸುಖ-ಶಾಂತಿ ನೆಲೆಸಲಿದೆ

ಪರಿಹಾರ 
ಶಿವದೇವಸ್ಥಾನ ದರ್ಶನ, ಆಂಜನೇಯ ಸ್ವಾಮಿಯ ಆರಾಧನೆಯಿಂದ ಶುಭವಾಗಲಿದೆ.

ಜಪಿಸಲು :
ಅಂಜನಾಗರ್ಭಸಂಭೂತ
ಕಪೀಂದ್ರಸಚಿವೋತ್ತಮ |
ರಾಮಪ್ರಿಯ ನಮಸ್ತುಭ್ಯಮ್
ಹನೂಮಾನ್ ರಕ್ಷ ಮಾಂ ಸದಾ ||

°~•~°~•~°~•~°~•~°~•~°


ಮೀನ   


    ಆರೋಗ್ಯ ಸಂಬಂಧವಾದ ತೊಂದರೆಗಳು ಎದುರಾಗುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಇರಬೇಕು. ಉತ್ತಮ ಪರಿಶ್ರಮದಿಂದ ಮುನ್ನಡೆಯಿರಿ. ಕೆಲಸಕಾರ್ಯಗಳಲ್ಲಿ ನಿಧಾನಗತಿ ಅಭಿವೃದ್ಧಿ ಕಂಡುಬರುವುದು


ಪರಿಹಾರ
ಶ್ರೀಮಹಾವಿಷ್ಣುದೇವರ ಆರಾಧನೆಯಿಂದ ಶುಭ. ಅಶ್ವತ್ಥಮರ ಪ್ರದಕ್ಷಿಣೆ ಬರುವುದರಿಂದ ಶುಭ ಕುಲದೇವತಾ ಆರಾಧನೆಯು ಅತ್ಯಗತ್ಯವಾಗಿದೆ.

 


ಜಪಿಸಲು :   
ಶ್ರೀಕೇಶವಾಯ ನಮಃ / ಶ್ರೀನಾರಾಯಣಾಯ ನಮಃ / ಶ್ರೀಮಾಧವಾಯ ನಮಃ / ಶ್ರೀಗೋವಿಂದಾಯ ನಮಃ / ಶ್ರೀವಿಷ್ಣವೇ ನಮಃ / ಶ್ರೀಮಧುಸೂದನಾಯ ನಮಃ /  ಶ್ರೀತ್ರಿವಿಕ್ರಮಾಯ ನಮಃ / ಶ್ರೀವಾಮನಾಯ ನಮಃ / ಶ್ರೀಶ್ರೀಧರಾಯ ನಮಃ / ಶ್ರೀಹೃಷಿಕೇಶಾಯ ನಮಃ / ಶ್ರೀಪದ್ಮನಾಭಾಯ ನಮಃ / ಶ್ರೀದಾಮೋದರಾಯ ನಮಃ ||

°~•~°~•~°~•~°~•~°~•~°

 

{ವಿ. ಸೂ. : 

ಮೇಲೆ ಕೊಟ್ಟ ಪರಿಹಾರ ಶ್ಲೋಕ ಮತ್ತು ನಾಮಗಳನ್ನು ಸ್ನಾನದ ಅನಂತರ ಶುಚಿಯಾಗಿ ದೇವರ ಮುಂದೆ ದೀಪ ಹಚ್ಚಿ ನಿರ್ಮಲ ಮನಸ್ಸಿನಿಂದ 48 ಸಲ ಪಠಿಸಬೇಕು.}

Author Details


Srimukha

Leave a Reply

Your email address will not be published. Required fields are marked *