ಭೂಮಿಗೆ ಸಂಬಂಧಿಸಿದ ವ್ಯವಹಾರವನ್ನು ಮಾಡುವವರಿಗೆ ಅಭಿವೃದ್ಧಿ ಕಂಡು ಬರಲು ಏನು ಮಾಡಬೇಕು

ದಿನ ಭವಿಷ್ಯ

ವಿಕಾರಿನಾಮ ಸಂವತ್ಸರ / ದಕ್ಷಿಣಾಯನ /
ವರ್ಷ ಋತು / ಭಾದ್ರಪದ ಮಾಸ/
ಕೃಷ್ಣಪಕ್ಷ/ದ್ವಾದಶಿ ತಿಥಿ/
ಗುರುವಾರ/ಆಶ್ಲೇಷ ನಕ್ಷತ್ರ /

ದಿನಾಂಕ 26.09.2019

°~•~°~•~°~•~°~•~°~•~°

ಮೇಷ

ಭೂಲಾಭ ವಾಹನ ಲಾಭ ಮಂತ್ರವಾದ ಶುಭ ಯೋಗಗಳು ಕಂಡುಬರುವುದು ಕೃಷಿಕರಿಗೆ ಉತ್ತಮ ಅಭಿವೃದ್ಧಿ ಕಂಡವರು ಗಳು ಭೂಮಿ ಸಂಬಂಧಿ ವ್ಯವಹಾರ ಮಾಡುವವರಿಗೆ ಉತ್ತಮ ಏಳಿಗೆ ದೊರೆಯಲಿದೆ
ಪರಿಹಾರ:
ದೇವಿಯ ಆರಾಧನೆಯಿಂದ ಶುಭ.

ಜಪಿಸಲು :
ಸರ್ವಮಂಗಲಮಾಂಗಲ್ಯೇ
ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರಿ
ನಾರಾಯಣಿ ನಮೋsಸ್ತು ತೇ ||

°~•~°~•~°~•~°~•~°~•~°

ವೃಷಭ

ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರಲಿದೆ. ದಾಂಪತ್ಯ ಜೀವನದಲ್ಲಿ ಸುಖ-ಶಾಂತಿ ನೆಲೆಗೊಳ್ಳುವುದು ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಕಂಡುಬರಲಿದೆ.

ಪರಿಹಾರ
ದೇವಿಯ ಆರಾಧನೆಯಿಂದ ಶುಭ.

ಜಪಿಸಲು :
ಶ್ರೀದುರ್ಗಾಯೈ ನಮಃ / ಶ್ರೀಶಾಂತ್ಯೈ ನಮಃ / ಶ್ರೀಶಾಂಭವ್ಯೈ ನಮಃ / ಶ್ರೀಭೂತಿದಾಯಿನ್ಯೈ ನಮಃ / ಶ್ರೀಶಂಕರಪ್ರಿಯಾಯೈ ನಮಃ / ಶ್ರೀನಾರಾಯಣ್ಯೈ ನಮಃ / ಶ್ರೀಭದ್ರಕಾಲ್ಯೈ ನಮಃ / ಶ್ರೀಶಿವದೂತ್ಯೈ ನಮಃ / ಶ್ರೀಮಹಾಲಕ್ಷ್ಮ್ಯೈ ನಮಃ / ಶ್ರೀಮಹಾಮಾಯಾಯೈ ನಮಃ / ಶ್ರೀಯೋಗನಿದ್ರಾಯೈ ನಮಃ / ಶ್ರೀಚಂಡಿಕಾಯೈ ನಮಃ ||

°~•~°~•~°~•~°~•~°~•~°

ಮಿಥುನ

ಕುಟುಂಬದಲ್ಲಿ ಉತ್ತಮ ಮನಶ್ಯಾಂತಿ ನೆಲೆಗೊಳ್ಳುತ್ತದೆ. ಹಣಕಾಸಿನ ವಿಚಾರದಲ್ಲಿ ಉತ್ತಮ ಅಭಿವೃದ್ಧಿ ಕಂಡುಬರುವುದು. ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಕಲಹಗಳನ್ನು ಎದುರಿಸಬೇಕಾಗುತ್ತದೆ
ಪರಿಹಾರ
ಶ್ರೀಕೃಷ್ಣನ ಆರಾಧನೆ,ಗುರುದೇವತಾ ಆರಾಧನೆಯಿಂದ ಶುಭ.

ಜಪಿಸಲು :
ವಸುದೇವಸುತಂ ದೇವಮ್
ಕಂಸಚಾಣೂರಮರ್ದನಮ್ |
ದೇವಕೀಪರಮಾನನ್ದಮ್
ಕೃಷ್ಣಂ ವನ್ದೇ ಜಗದ್ಗುರುಮ್ ||

°~•~°~•~°~•~°~•~°~•~°

ಕರ್ಕಾಟಕ

ಉತ್ತಮ ಆರೋಗ್ಯವನ್ನು ಹೊಂದುವಿರಿ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುವುದು. ವಿದ್ಯಾರ್ಥಿಗಳಿಗೆ ಉತ್ತಮ ಅಭಿವೃದ್ಧಿ ಕಂಡುಬರಲಿದೆ

ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ದೇವಿಯ ಆರಾಧನೆಯಿಂದ ಶುಭ.

ಜಪಿಸಲು :
ಸರ್ವಸ್ವರೂಪೇ ಸರ್ವೇಶಿ
ಸರ್ವಶಕ್ತಿಸಮನ್ವಿತೇ |
ಭಯೇಭ್ಯಸ್ತ್ರಾಹಿ ನೋ ದೇವಿ
ದುರ್ಗೇದೇವಿ ನಮೋsಸ್ತು ತೇ ||

°~•~°~•~°~•~°~•~°~•~°

ಸಿಂಹ

ಕುಟುಂಬದಲ್ಲಿ ಕಲಹಗಳು ಏರ್ಪಡುವ ಲಕ್ಷಣಗಳಿರುವ ಇದರಿಂದ ಜಾಗರೂಕತೆಯಿಂದ ಇರಬೇಕು. ಆರೋಗ್ಯದಲ್ಲಿ ವೆತ್ಯಾಸಗಳು ಸಂಭವಿಸುತ್ತದೆ ಜಾಗರೂಕರಾಗಿರಬೇಕು
ಪರಿಹಾರ
ಶಿವನ ಆರಾಧನೆ ಅಗತ್ಯ.

ಜಪಿಸಲು :
ಶ್ರೀಮಹಾದೇವಾಯ ನಮಃ / ಶ್ರೀಮಹೇಶ್ವರಾಯ ನಮಃ / ಶ್ರೀಶಂಕರಾಯ ನಮಃ / ಶ್ರೀವೃಷಭಧ್ವಜಾಯ ನಮಃ / ಶ್ರೀಕೃತ್ತಿವಾಸಸೇ ನಮಃ / ಶ್ರೀಕಾಮಾಂಗನಾಶನಾಯ ನಮಃ / ಶ್ರೀದೇವದೇವೇಶಾಯ ನಮಃ / ಶ್ರೀಶ್ರೀಕಂಠಾಯ ನಮಃ / ಶ್ರೀಹರಾಯ ನಮಃ / ಶ್ರೀಪಾರ್ವತೀಪತಯೇ ನಮಃ / ಶ್ರೀರುದ್ರಾಯ ನಮಃ / ಶ್ರೀಶಿವಾಯ ನಮಃ ||

°~•~°~•~°~•~°~•~°~•~°

ಕನ್ಯಾ

ವ್ಯವಹಾರ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಂಡುಬರುವುದು. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಅಭಿವೃದ್ಧಿ ಕಂಡು ಬರಲಿದೆ
ಪರಿಹಾರ
ಶ್ರೀರಾಮದೇವರ ಆರಾಧನೆಯಿಂದ ಶುಭ.

ಜಪಿಸಲು :
ರಾಮಾಯ ರಾಮಭದ್ರಾಯ
ರಾಮಚಂದ್ರಾಯ ವೇಧಸೇ |
ರಘುನಾಥಾಯ ನಾಥಾಯ
ಸೀತಾಯಾಃ ಪತಯೇ ನಮಃ ||

°~•~°~•~°~•~°~•~°~•~°

ತುಲಾ

ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರಲಿದೆ. ದಾಂಪತ್ಯ ಜೀವನದಲ್ಲಿ ಕಲಹ ಏರ್ಪಡುವ ಲಕ್ಷಣಗಳಿರುವ ದರಿಂದ ಜಾಗರೂಕರಾಗಿರಬೇಕು
ಪರಿಹಾರ

ದುರ್ಗಾದೇವಿಯ ಆರಾಧನೆಯಂದ ಶುಭ.

ಜಪಿಸಲು :
ಶ್ರೀದುರ್ಗಾಯೈ ನಮಃ / ಶ್ರೀಶಾಂತ್ಯೈ ನಮಃ / ಶ್ರೀಶಾಂಭವ್ಯೈ ನಮ: / ಶ್ರೀಭೂತಿದಾಯಿನ್ಯೈ ನಮಃ / ಶ್ರೀಶಂಕರಪ್ರಿಯಾಯೈ ನಮಃ / ಶ್ರೀನಾರಾಯಣ್ಯೈ ನಮಃ / ಶ್ರೀಭದ್ರಕಾಲ್ಯೈ ನಮಃ / ಶ್ರೀಶಿವದೂತ್ಯೈ ನಮ: / ಶ್ರೀಮಹಾಲಕ್ಷ್ಮ್ಯೈ ನಮಃ / ಶ್ರೀ ಮಹಾಮಾಯಾಯೈ ನಮಃ / ಶ್ರೀಯೋಗನಿದ್ರಾಯೈ ನಮಃ / ಶ್ರೀಚಂಡಿಕಾಯೈ ನಮಃ ||

°~•~°~•~°~•~°~•~°~•~°

ವೃಶ್ಚಿಕ

ಮಾಡುವಂತಹ ಕೆಲಸಕಾರ್ಯಗಳಲ್ಲಿ ನಿಧಾನಗತಿಯ ಅಭಿವೃದ್ಧಿ ಕಂಡುಬರುವುದು. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ. ವಿದ್ಯಾರ್ಥಿಗಳಿಗೆ ನಿಧಾನಗತಿ ಅಭಿವೃದ್ಧಿ ದೊರೆಯಲಿದೆ
ಪರಿಹಾರ
ದೇವೀ, ಸುಬ್ರಹ್ಮಣ್ಯಸ್ವಾಮಿಯ ಆರಾಧನೆಯಿಂದ ಶುಭ.

ಜಪಿಸಲು :
ಷಡಾನನಂ ಕುಂಕುಮರಕ್ತವರ್ಣಮ್
ಮಹಾಮತಿಂ ದಿವ್ಯಮಯೂರವಾಹಮ್ |
ರುದ್ರಸ್ಯ ಸೂನುಂ ಸುರಸೈನ್ಯನಾಥಮ್
ಗುಹಂ ಸದಾ ಶರಣಮಹಂ ಪ್ರಪದ್ಯೇ ||

°~•~°~•~°~•~°~•~°~•~°

ಧನು

ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಂಡುಬಂದರೂ ಕೂಡ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಉತ್ತಮ ಧೈರ್ಯದಿಂದ ಮುನ್ನಡೆದರೆ ಅಭಿವೃದ್ಧಿ ದೊರೆಯಲಿದೆ
ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ವಿಷ್ಣುಸಹಸ್ರನಾಮ ಪಾರಾಯಣ ಮಾಡಿ.

ಜಪಿಸಲು:
ಶ್ರೀಕೇಶವಾಯ ನಮಃ / ಶ್ರೀನಾರಾಯಣಾಯ ನಮಃ / ಶ್ರೀಮಾಧವಾಯ ನಮಃ / ಶ್ರೀಗೋವಿಂದಾಯ ನಮಃ / ಶ್ರೀವಿಷ್ಣವೇ ನಮಃ / ಶ್ರೀಮಧುಸೂದನಾಯ ನಮಃ / ಶ್ರೀತ್ರಿವಿಕ್ರಮಾಯ ನಮಃ / ಶ್ರೀವಾಮನಾಯ ನಮಃ / ಶ್ರೀಶ್ರೀಧರಾಯ ನಮಃ / ಶ್ರೀಹೃಷಿಕೇಶಾಯ ನಮಃ / ಶ್ರೀಪದ್ಮನಾಭಾಯ ನಮಃ / ಶ್ರೀದಾಮೋದರಾಯ ನಮಃ

°~•~°~•~°~•~°~•~°~•~°

ಮಕರ

ಯುವಕ-ಯುವತಿಯರಿಗೆ ವಿವಾಹಯೋಗ ಭಾಗ್ಯ ಬರುತ್ತದೆ ವ್ಯವಹಾರ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಂಡುಬರುವುದು ಕೃಷಿಕರಿಗೆ ಉತ್ತಮ ಲಾಭ ದೊರೆಯಲಿದೆ
ಪರಿಹಾರ
ಶಿವ ದೇವಸ್ಥಾನ ದರ್ಶನ, ಕುಲದೇವತಾರಾಧನೆಯಿಂದ ಶುಭ.

ಜಪಿಸಲು:
ಶ್ರೀಮಹಾದೇವಾಯ ನಮಃ / ಶ್ರೀಮಹೇಶ್ವರಾಯ ನಮಃ / ಶ್ರೀಶಂಕರಾಯ ನಮಃ / ಶ್ರೀವೃಷಭಧ್ವಜಾಯ ನಮಃ / ಶ್ರೀಕೃತ್ತಿವಾಸಸೇ ನಮಃ / ಶ್ರೀಕಾಮಾಂಗನಾಶನಾಯ ನಮಃ / ಶ್ರೀದೇವದೇವೇಶಾಯ ನಮಃ / ಶ್ರೀಶ್ರೀಕಂಠಾಯ ನಮಃ / ಶ್ರೀಹರಾಯ ನಮಃ / ಶ್ರೀಪಾರ್ವತೀಪತಯೇ ನಮಃ / ಶ್ರೀರುದ್ರಾಯ ನಮಃ / ಶ್ರೀಶಿವಾಯ ನಮಃ ||

°~•~°~•~°~•~°~•~°~•~°

ಕುಂಭ

ಆರೋಗ್ಯ ಸಂಬಂಧವಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಹಣಕಾಸಿನ ವಿಚಾರದಲ್ಲಿ ತೊಂದರೆಗಳು ಎದುರಾಗುವ ಲಕ್ಷಣಗಳು ಇರುವುದರಿಂದ ಗಳಿರುವುದರಿಂದ ಜಾಗರೂಕತೆಯಿಂದ ಇರಬೇಕು

ಪರಿಹಾರ
ಶಿವದೇವಸ್ಥಾನ ದರ್ಶನ, ರುದ್ರಾಭಿಷೇಕ ಸೇವೆ, ಕುಲದೇವತಾ ಆರಾಧನೆಯಿಂದ ಶುಭ.

ಜಪಿಸಲು:
ರುದ್ರಂ ಪಶುಪತಿಂ ಸ್ಥಾಣುಮ್
ನೀಲಕಂಠಂ ಉಮಾಪತಿಮ್ |
ನಮಾಮಿ ಶಿರಸಾ ದೇವಮ್
ಕಿಂ ನೋ ಮೃತ್ಯುಃ ಕರಿಷ್ಯತಿ ||

°~•~°~•~°~•~°~•~°~•~°

ಮೀನ

ಹಣಕಾಸಿನ ವಿಚಾರದಲ್ಲಿ ಉತ್ತಮ ಅಭಿವೃದ್ಧಿ ಕಂಡುಬರುವುದು ದಾಂಪತ್ಯ ಜೀವನದಲ್ಲಿ ಸುಖ-ಶಾಂತಿ ನೆಲೆಗೊಳ್ಳುತ್ತದೆ ವಿದ್ಯಾರ್ಥಿಗಳಿಗೆ ಉತ್ತಮ ಅಭಿವೃದ್ಧಿ ಕಂಡುಬರುವುದು

ಪರಿಹಾರ
ಶ್ರೀಮಹಾವಿಷ್ಣುದೇವರ ಆರಾಧನೆಯಿಂದ ಶುಭ. ಕುಲದೇವತಾ ಆರಾಧನೆಯು ಅತ್ಯಗತ್ಯವಾಗಿದೆ.

ಜಪಿಸಲು :
ಶಾಂತಾಕಾರಂ ಭುಜಗಶಯನಮ್
ಪದ್ಮನಾಭಂ ಸುರೇಶಮ್
ವಿಶ್ವಾಧಾರಂ ಗಗನಸದೃಶಮ್
ಮೇಘವರ್ಣಂ ಶುಭಾಂಗಮ್ |
ಲಕ್ಷ್ಮೀಕಾಂತಂ ಕಮಲನಯನಮ್
ಯೋಗಿಹೃದ್ಧ್ಯಾನಗಮ್ಯಮ್
ವಂದೇ ವಿಷ್ಣುಂ ಭವಭಯಹರಮ್
ಸರ್ವಲೋಕೈಕನಾಥಮ್ ||

°~•~°~•~°~•~°~•~°~•~°

{ವಿ. ಸೂ. : ಮೇಲೆ ಕೊಟ್ಟ ಪರಿಹಾರ ಶ್ಲೋಕ ಮತ್ತು ನಾಮಗಳನ್ನು ಸ್ನಾನದ ಅನಂತರ ಶುಚಿಯಾಗಿ ದೇವರ ಮುಂದೆ ದೀಪ ಹಚ್ಚಿ ನಿರ್ಮಲ ಮನಸ್ಸಿನಿಂದ 48 ಸಲ ಪಠಿಸಬೇಕು.

Author Details


Srimukha

Leave a Reply

Your email address will not be published. Required fields are marked *