ಚಂದಳಿಕೆ ಸರಕಾರಿ ಶಾಲೆಯಲ್ಲಿ, ನಂತೂರು ಭಾರತೀ ಕಾಲೇಜಿನ ಏಳು‌ ದಿನಗಳ ಎನ್ನೆಸ್ಸೆಸ್ ಶಿಬಿರ

ಪ್ರಕಟಣೆ

ವಿಟ್ಲ : ಶ್ರೀಭಾರತೀ ಸಮೂಹ ಸಂಸ್ಥೆಗಳ ಶ್ರೀಭಾರತೀ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರವು ವಿಟ್ಲ ಸಮೀಪದ ಚಂದಳಿಕೆ ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯಲ್ಲಿ ಡಿಸೆಂಬರ್ 8ರಿಂದ 14ರ ತನಕ ನಡೆಯಲಿದೆ.

 

ಡಿಸೆಂಬರ್ 8ರಂದು ಸಂಜೆ 4.30ಕ್ಕೆ ಪುತ್ತೂರು ಶಾಸಕ ಶ್ರೀ ಸಂಜೀವ ಮಠಂದೂರು ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಶ್ರೀಭಾರತೀ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾರಕರೆ ಶ್ರೀ ನಾರಾಯಣ ಭಟ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಚಂದಳಿಕೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀ ನಾರಾಯಣ ಪೂಜಾರಿ ಚಪುಡಿಯಡ್ಕ ಶ್ರಮದಾನ ಉದ್ಘಾಟಿಸಲಿದ್ದಾರೆ. ಶ್ರೀಭಾರತೀ ಪದವಿ ಕಾಲೇಜು ಪ್ರಾಂಶುಪಾಲ ಡಾ| ಈಶ್ವರಪ್ರಸಾದ ಎ., ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಶಿವಪ್ರಕಾಶ್ ಎನ್., ಆಲಂಗಾರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವರ್ಮುಡಿ ಶ್ರೀಮತಿ ಪದ್ಮಿನಿ, ಶ್ರೀ ರಾಮ ಭಟ್ ಆಲಂಗಾರು,  ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶ್ರೀ ಎಲ್. ಎನ್. ಕೂಡೂರು, ಪ.ಪಂ.ಸದಸ್ಯ ಶ್ರೀ ಮಂಜುನಾಥ ಕಲ್ಲಕಟ್ಟ, ಚಂದಳಿಕೆ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಶ್ರೀಮತಿ ಭವಾನಿ ರೈ ಕೊಲ್ಯ, ವಿಟ್ಲ ಗ್ರಾ.ಪಂ. ಮಾಜಿ ಅಧ್ಯಕ್ಷ ಶ್ರೀ ರಮಾನಾಥ ವಿಟ್ಲ, ವಿಟ್ಲ ಅಧ್ಯಾಪಕರ ಸಹಕಾರಿ ಸಂಘದ ಗೌರವ ಸಲಹೆಗಾರ ಶ್ರೀ ರಮೇಶ್ ನಾಯಕ್ ರಾಯಿ, ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಶ್ರೀ ಶಂಕರ ಪಾಟಾಳಿ, ಉದ್ಯಮಿಗಳಾದ ಶ್ರೀ ಸತೀಶ್ ಕುಮಾರ್ ಆಳ್ವ ಇರಾ ಬಾಳಿಕೆ, ಶ್ರೀ ಸದಾಶಿವ ಆಚಾರ್ಯ ಕೈಂತಿಲ, ಶ್ರೀ ದೇಜಪ್ಪ ಪೂಜಾರಿ ನಿಡ್ಯ, ಇವರುಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

 

ಡಿಸೆಂಬರ್ 9ರಂದು ಗ್ರಾಮ ಸಮೀಕ್ಷೆ, 10ರಂದು ಶುಭಾಂಗಿ ಪದ್ಮರಾಜ್ ಅವರಿಂದ ವಸ್ತು ಕೌಶಲ್ಯ ಕಾರ್ಯಾಗಾರ, 11ರಂದು ವಿಟ್ಲ ಠಾಣಾಧಿಕಾರಿ ಶ್ರೀ ಯಲ್ಲಪ್ಪ ಎಸ್. ಮತ್ತು ನ್ಯಾಯವಾದಿಗಳಾದ ಶ್ರೀ ಮೋಹನ ಎ. ಮೈರ, ಶ್ರೀ ಗೋವಿಂದಮೂರ್ತಿ ಮಂಜುಕೋಡಿ, ಶ್ರೀ ಗೋವಿಂದರಾಜ್ ಪೆರುವಾಜೆ ಅವರಿಂದ ಸೈಬರ್‌ಕ್ರೈಂ ಮತ್ತು ಮಾದಕದ್ರವ್ಯ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಮತ್ತು ವಿದ್ಯಾರ್ಥಿಗಳಿಂದ ಬೀದಿ ನಾಟಕ, 12ರಂದು ವಿಟ್ಲ ಪ.ಪೂ.ಕಾಲೇಜಿನ ಉಪನ್ಯಾಸಕ ಶ್ರಾಇ ಅಣ್ಣಪ್ಪ ಸಾಸ್ತಾನ ಅವರಿಂದ ವ್ಯಕ್ತಿತ್ವಕ್ಕೊಂದು ಕನ್ನಡಿ, 13ರಂದು ಸಿಪಿಸಿಆರ್‌ಐಯಲ್ಲಿ ಡಾ. ಎನ್. ಆರ್. ನಾಗರಾಜ್, ಶ್ರೀ ಪುರಂದರ ಕೂಟೇಲು, ಬದನಾಜೆ ಶ್ರೀ ಶಂಕರ ಭಟ್ ಅವರಿಂದ ಕೃಷಿ ವೈವಿಧ್ಯ, 14ರಂದು ಶ್ರೀ ಯೋಗೀಶ್ ಶೆಟ್ಟಿ ಮತ್ತು ಶ್ರೀ ಚೇತನ್ ಜಿ. ಪಿಲಾರ್ ಅವರಿಂದ ರಂಗಭೂಮಿ ಮತ್ತು ಜೀವನ ವಿಚಾರಗಳ ಬಗ್ಗೆ ಶೈಕ್ಷಣಿಕ ಕಾರ್ಯಾಗಾರ ನಡೆಯಲಿದೆ.

 

ಡಿಸೆಂಬರ್ 14ರಂದು ಸಮಾರೋಪ ಸಮಾರಂಭದಲ್ಲಿ ಶ್ರೀ ಬಿ.ಆರ್‌.ಪಿ. ನಾರಾಯಣ ಗೌಡ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಟ್ಲ ಪ.ಪಂ.ಅಧ್ಯಕ್ಷ ಶ್ರೀ ಅರುಣ್ ಎಂ. ವಿಟ್ಲ, ಉಪಾಧ್ಯಕ್ಷ ಶ್ರೀ ಜಯಂತ್ ನಾಯ್ಕ, ವಿಟ್ಲ ಅರಮನೆಯ ಶ್ರೀ ಕೃಷ್ಣಯ್ಯ ಕೆ. ವಿಟ್ಲ, ಉದ್ಯಮಿ ಶ್ರೀ ಎಂ. ರಾಧಾಕೃಷ್ಣ ನಾಯಕ್, ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಡಾ. ಚರಣ್ ಕಜೆ, ಜಿಲ್ಲೆಯ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಶ್ರೀ ಬಾಬು ಕೆ. ವಿ., ಉದ್ಯಮಿ ಶ್ರೀ ಸಂಜೀವ ಪೂಜಾರಿ, ಶಿಕ್ಷಣ ಸಂಯೋಜಕ ಶ್ರೀ ಯು. ಎಸ್. ವಿಶ್ವೇಶ್ವರ ಭಟ್, ಚಂದಳಿಕೆ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ವಿಶ್ವನಾಥ ಗೌಡ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Author Details


Srimukha

Leave a Reply

Your email address will not be published. Required fields are marked *