Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ನಮ್ಮ ಅನೇಕ ಸಂಶೋಧನಾ ಪ್ರಕಾರ ಮಾಂಸಾಹಾರ ಮನುಷ್ಯನ ಆಹಾರ ಪದ್ಧತಿ ಅಲ್ಲವೆಂಬುದನ್ನು ಪ್ರಕೃತಿ ನಮ್ಮ ಶಾರೀರಿಕ ರಚನೆಯಿಂದಲೇ ತೋರಿಸಿಕೊಟ್ಟಿದೆ ಶಾಖಾಹಾರ ಆತನ ದೈಹಿಕ ಮತ್ತು ಸಾಂಸ್ಕೃತಿಕ ಸ್ವಭಾವಗಳನ್ನು ಮೃದುಗೊಳಿಸಿ ಮಿತ್ರ ಭಾವವನ್ನು ಸೂಚಿಸುತ್ತದೆ.   ಗೋವು ಅಂದು ದಾರಿಯಲ್ಲಿ,ಮನೆ ಎದುರು ಎಲ್ಲಾ ಕಡೆ ನೋಡುವ ಅವಕಾಶ ಇತ್ತು ಆದರೆ ಇಂದು ಹುಡುಕಿಕೊಂಡು ಹೋದರು ಸಿಗದು ಹಾಗಾಗಿ ಗೋಗ್ರಾಸ ಕೊಡಲು ನಾವು ಗೋಶಾಲೆಗೆ ಹೋಗಬೇಕಾದ ಪರಿಸ್ಥಿತಿ ಅಥವಾ ರಾತ್ರಿ ಗೋವು ಸಿಗದೆ ಚಲ್ಲುವ ಕೆಟ್ಟ ಸ್ಥಿತಿ.   ಗೋವು […]

Read More

ಕೈಲಾಸದಿಂದ ಮರಳುವಾಗ ಸಾಕಷ್ಟು ಕಾಲವೂ ಕಳೆದಿತ್ತು.ಇತ್ತ ಆಶ್ರಮಗಳ ಪರಿಸ್ಥಿತಿ ಆತಂಕಕಾರಿಯಾಗಿತ್ತು. ಕಾರ್ತವೀರ್ಯನ ಮರಣದಿಂದ ಕುದಿದುಹೋದ ಕ್ಷತ್ರಿಯರು ಮತ್ತೆ ಸಮಸ್ತ ಋಷಿಪರಂಪರೆಯಮೇಲೇ ಮತ್ಸರಿಗಳಾಗಿದ್ದರು.ರಾಮನಮೇಲಿನ ಆಕ್ರೋಶ ಆಗಾಗ ಜಮದಗ್ನಿಗಳ ಆಶ್ರಮದಮೇಲಾಗುತ್ತಿತ್ತು.ಇತರ ಭೃಗುಗಳಮೇಲೂ ಇದರ ಪರಿಣಾಮ ವಿಪರೀತವಾಗಿತ್ತು. ಸ್ವತಃ ದಾಳಿ ಇಡುವುದು ,ದಾಳಿಕೋರರನ್ನು ಪ್ರಚೋದಿಸುವುದು ,ಅರಣ್ಯದ ಬೇಡರುಗಳನ್ನು ಎತ್ತಿಕಟ್ಟಿ ಅಪಹರಣ ದರೋಡೆಗಳಿಗೆ ಪ್ರಚೋದನೆ ನೀಡುವುದು ಹೀಗೆ ಪರೋಕ್ಷ ಹಿಂಸೆ ಅವ್ಯಾಹತವಾಗಿತ್ತು.ಕಾರ್ತವೀರ್ಯನ ಹಂತಕನಾದ ರಾಮನ ಪ್ರಳಯಾಂತಕ ಪರಾಕ್ರಮದ ವಿಚಾರ ತಿಳಿದ ಕಾರಣ ಪ್ರಚ್ಛನ್ನ ಸಮರ ನಿರಂತರವಾಗಿ ಸಾಗಿತ್ತು.ತಮ್ಮ ಕುಲಕ್ಕಾದ ಘೋರ ಅವಮಾನವನ್ನು ಈ […]

Read More

ವಿಕಾರಿ ನಾಮ ಸಂವತ್ಸರ ಆಶಾಢ ಮಾಸ ಶುಕ್ಲ ಪಕ್ಷ ಪೂರ್ಣಿಮಾ ತಿಥಿ 16.7.2019 ಮಂಗಳವಾರ ಉತ್ತರ ಆಷಾಢ ನಕ್ಷತ್ರ ಧನು/ ಮಕರ ರಾಶಿ ಎಲ್ಲಿ ಕೇತುಗ್ರಸ್ತ ಖಂಡಗ್ರಾಸ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದರಿಂದ ಆಚರಿಸ ತಕ್ಕದ್ದು   16ನೇ ತಾರೀಕು ರಾತ್ರಿ ಗಂಟೆ 01:32:35 ನಿಮಿಷ ಗ್ರಹಣ ಸ್ಪರ್ಶ ವಾಗುವುದು. 3: 1.12 ಕ್ಕೆ ಮಧ್ಯಕಾಲಮಧ್ಯಕಾಲ 4.29:50 ಕ್ಕೆಮೋಕ್ಷಕಾಲ   ಗ್ರಹಣ ಕಾಲಗಳಲ್ಲಿ ಮಾಡಬೇಕಾದ ಕರ್ತವ್ಯಗಳು   ಭೋಜನ ವಿಚಾರ 16.07.2019 ಮಂಗಳವಾರ ಮಧ್ಯಾಹ್ನ ಗಂಟೆ 03:55 ರಿಂದ […]

Read More

ಆಶ್ರಮದ ಕಡೆ ಹೊರಟ ರಾಮನಿಗೆ ಈ ಸಾಹಸಕ್ಕೆ ಕಾರಣವಾದುದು ಹರನ ಅನುಗ್ರಹ.ದರ್ಶನ ಪಡೆದು ಹರಕೆಗೊಂಡೇ ಆಶ್ರಮಕ್ಕೆ ಮರಳೋಣ ಅನ್ನಿಸಿತು .   ಅಕೃತವ್ರಣನೊಂದಿಗೇ ಕೈಲಾಸದತ್ತ ತಿರುಗಿದ.ತನ್ನ ತಪಶ್ಶಕ್ತಿಯ ಒಂದಂಶವನ್ನು ಅವನಿಗೂ ನೀಡಿ ಇಚ್ಛಾಗಮನ ಶಕ್ತಿಯನ್ನು ಆತನಿಗೂ ನೀಡಿದ. ಕೈಲಾಸವನ್ನು ತಲುಪಿ ಅಲ್ಲಿಯ ಯಕ್ಷಗಂಧರ್ವ ಸೇವಾ ನದಿ ಅಲಕನಂದಾದಲ್ಲಿ ಮಿಂದೆದ್ದು ಮುಂದುವರಿದರು.ಭವ್ಯ ಮಂದಿರ ,ಪ್ರಮಥರ ಕಾವಲು …ದಾಟಿ ಮುಂದೆ ಬಂದರೆ ನಂದಿಕೇಶ್ವರ ಎದುರಾದ.ಆತನ ಅಪ್ಪಣೆ ಪಡೆದು ಒಳಕ್ಕೆ ಪ್ರವೇಶಿಸಿದರು.   ಬಾಲಕರಂತೆ ಆಟವಾಡುತ್ತಾ ಪ್ರಮಥರೊಂದಿಗೆ ವಿಹರಿಸುತ್ತಿದ್ದ ಸ್ಕಂಧ – […]

Read More

  ಬ್ರಹ್ಮಾಸ್ತ್ರಗಳ ನಿರಸನದಿಂದ ಕಾರ್ತವೀರ್ಯ ಬೆರಗಾಗಿಹೋದ. ಬದುಕಿನುದ್ದಕ್ಕೂ ಕಾಣದ ಪವಾಡವನ್ನು ಕಂಡ. ಕ್ಷಾತ್ರದ ಹುಚ್ಚು ಸಾಹಸ ಸುಮ್ಮನಿರಗೊಡುವುದೆ? ಆವೇಶದಿಂದ ಅಬ್ಬರಿಸಿ ಆಗ್ನೇಯಾಸ್ತ್ರವನ್ನು ಅಭಿಮಂತ್ರಿಸಿದ‌. ರಾಮ ಅದನ್ನು ವಾರುಣಶರದಿಂದ ನಿಷ್ಕ್ರಿಯಗೊಳಿಸಿದಾಗ ತನ್ನಲ್ಲಿರುವ ದಿವ್ಯಮಹಾಮಂತ್ರಾಸ್ತ್ರಗಳನ್ನೆಲ್ಲ ತೆಗೆತೆಗೆದು ಬಿಡಲಾರಂಭಿಸಿದ. ಅವುಗಳನ್ನೆಲ್ಲ ಅಷ್ಟೇ ಲಾಘವದಿಂದ ಪರಿಹರಿಸಿಕೊಂಡು ರಾಮ ನೆಟ್ಟ ಬಾಣ ಸಹಸ್ರಾರ್ಜುನನ ಕಿವಿಯನ್ನೇ ಕತ್ತರಿಸಿತು. ಜೊತೆಗೆ ಅವನ ಕುಂಡಲವೂ ನೆಲಸೇರಿತು. ದತ್ತಾತ್ರೇಯ ದತ್ತ ಕುಂಡಲವದು! ಮತ್ತೆ ಅರಸನಿಗೆ ಗುರುವಿನ ನೆನಪಾಯಿತು. ಅಂತರಂಗದಿಂದಲೇ ಸ್ಮರಿಸಿಕೊಂಡ. ಅನೇಕ ಯುದ್ಧ ಸಂದರ್ಭಗಳಲ್ಲಿ ಆತ ರಣದ ಮಧ್ಯೆಯೇ ಸ್ಮರಿಸಿವುದಿತ್ತು. […]

Read More

  ಬಂಗಾರದ ಭವ್ಯ ರಥವೇರಿ ಹೊರಟಿದ್ದ ಅರ್ಜುನ.ಅವನನ್ನು ಬಳಸಿ ಆತನ ನೂರು ಮಕ್ಕಳು ರಣಗರ್ಜನೆಯೊಂದಿಗೆ ಬಳಸಿ ಬರುತ್ತಿದ್ದರು. ದಿವ್ಯ ಧನುಸ್ಸು,ರಥದಲ್ಲಿ ತುಂಬಿಸಿದ ದಿವ್ಯಾಸ್ತ್ರಗಳು,ಬಗೆಬಗೆಯ ಆಯುಧಗಳು.ಜೊತೆಗೆ ವಿಶೇಷವಾದ ಅನುಭವವಿರುವ ಮೂಲಬಲ.ವೈರಿಗಳ ಎದೆ ಬಿರಿಯುವ ಆರ್ಭಟ! ಸೈನ್ಯದ ಶಿಸ್ತುಬದ್ಧ ಚಲನೆ,ಆಯುಧಗಳ ವರಸೆ ಧನುಷ್ಟಂಕಾರ,ಸಿಂಹನಾದ . ಫಕ್ಕನೆ ಕಾರ್ತವೀರ್ಯ ಯಾರೋ ಒಬ್ಬ ಪ್ರಬಲ ವಿರೋಧಿಯಮೇಲೆ ದಾಳಿ ಇಡುತ್ತಾನೋ ಎಂಬ ಸಂದೇಹ ಬರುವಂತಿತ್ತು. ಒಬ್ಬ ಮುನಿಕುಮಾರನನ್ನೆದುರಿಸಲು ಮಾಹಿಷ್ಮತಿಯ ಮಹಾಬಲವೇ ಹೊರಟು ನಿಂತಿತ್ತು. ಇಷ್ಟೆಲ್ಲ ಬಲವಿರುವವ ಮುನಿಯನ್ನಾದರೂ ಏಕೆ ಲಕ್ಷಿಸಬೇಕು ಎಂಬುದಕ್ಕೆ ಪುಷ್ಟಿಕೊಡುವಂತಿತ್ತು ಆ […]

Read More

ಇದು ಇತ್ತೀಚಿಗೆ ನಡೆದ ಸಂಭಾಷಣೆ, ಗೋ ಸಂಭಾಷಣೆ ಎನ್ನಬಹುದು. ಯಾವುದೇ ವಿಷಯದ ಬಗ್ಗೆ ಮಾತಾಡಿದರೂ, ವಿಷಯ ಎಲ್ಲೇ ಹೋದರೂ ಮತ್ತೆ ಗೋವಿನ ವಿಷಯಕ್ಕೇ ಬರುತ್ತಿತ್ತು. ಅಷ್ಟರಮಟ್ಟಿಗೆ ಗೋವು ಈ ತಂಗಿಯ ಜೀವನದ ಮೇಲೆ ಪ್ರಭಾವ ಬೀರಿತ್ತು. ಅಕ್ಕ ಪಕ್ಕದ ಮನೆಯ ಮಹಡಿಯ ಮೇಲೆ ನಿಂತು ಮಾತಾಡಿದ ರೀತಿ ನೋಡಿ. ಅಕ್ಕ: ತಂಗಿಮರಿ, ಊರಿಂದ ಯಾವಾಗ್ ಬಂದ್ಯೇ? ತಂಗಿ: ಬೆಳಿಗ್ಗೆ ಬಂದ್ನೇ ಅಕ್ಕಯ್ಯ, ನಾ ಬರಕಾದ್ರೆ ಒಂದು ಆಕ್ಳು ಕರು ಹಾಕ್ತು ಅಕ್ಕ 😀😀 ಅಕ್ಕ: ಊರಲ್ಲಿ ಆಯಿ […]

Read More

ಪ್ರಾಮಾಣಿಕತೆಗೆ ವಿಧಿಯೂ ವಿಲವಿಲನೆ ಒದ್ದಾಡೀತು. ಜಗತ್ತು ಅವರನ್ನು ಕಂಡು ಮುದ್ದಾಡೀತು. ಓದಬೇಕಿಂದಿಲ್ಲ ದಿನಪತ್ರಿಕೆಗಳಲ್ಲಿ ಬರುವ ಸುದ್ದಿಗಳನ್ನು. ಅದರೆ ನೊಡಲೇಬೇಕು ಅವುಗಳಲ್ಲಿ ಕೆಲವನ್ನು. ದಿನಪತ್ರಿಕೆಗಳಲ್ಲಿ ಇರುತ್ತವೆ ಹೆಚ್ಚು ಇನ್ಪರ್ಮೇಷನ್, ಅಲ್ಲಲ್ಲಿ ಜ್ಞಾನವೂ. ಜ್ಞಾನ ಸೂಚಿಸುತ್ತವವು ಹೊಸತನ್ನು, ಖುಷಿಯಾಗಿಡುತ್ತವೆ ದಿನವನ್ನು. ಅವಕ್ಕಿರುವ ವೈಶಿಷ್ಟ್ಯವದು. ಸುದ್ದಿಯ ನಡುವೆ ಇದ್ದು, ಬುದ್ಧಿಗೆ ಕೆಲಸಕೊಡುವ ಸುದ್ದಿ ಇದು. ಅಮೆರಿಕ ನೈಜ ಘಟನೆ ಇದೊಂದು. ಮೊರಾ ಗ್ರೆಗ್ ಗೆ ಆಗಿನ್ನು ವರ್ಷ ಮೂರು. ಆಕೆಯ ತಾಯಿ 1946ರಲ್ಲಿ ಅಮೆರಿಕದ ಮಾಂಟ್ ಗೊಮೆರಿ ಕೌಂಟಿಯ ಸಿಲ್ವರ್ ಸ್ಟ್ರಿಂಗ್ […]

Read More

ಹೀಗನಿಸುತ್ತಿತ್ತು ಆಗಾಗ. ಇರಲಿಲ್ಲ ಆದರೆ ಸ್ಪಷ್ಟತೆ. ಸ್ಪಷ್ಟವಾಗಿಸಿತು ಪಾರಿವಾಳ ನನ್ನ ಅಸ್ಪಷ್ಟತೆಯನ್ನು. ಓದುತ್ತಿದ್ದೆ ನನ್ನಷ್ಟಕ್ಕೆ ನಾನು ಒಂದು ರೂಮಿನಲ್ಲಿ ಕುಳಿತು. ಹಾರುತ್ತಿದ್ದವು ಹೊರಗಡೆ ಪಾರಿವಾಳಗಳು. ನೋಡುತ್ತಿದ್ದೆ ಆಗಾಗ ಅವುಗಳನ್ನೂ. ಪ್ರಯತ್ನಿಸುತ್ತಿದ್ದವು ಅವು ಕಿಟಕಿಯ ಮೂಲಕ ಒಳ ಬರಲು. ಬರುತ್ತಿರಲಿಲ್ಲ, ಬರಲಾಗುತ್ತಿರಲಿಲ್ಲ. ಅಲ್ಲಿ ನಾನಿದ್ದೆ ಹಾಗಾಗಿ. ಕುತೂಹಲ ನನಗೆ, ಇವೇಕೆ ಇಲ್ಲಿ ಬರುತ್ತಿವೆ ಎಂದು. ನೋಡಿದೆ ಸ್ವಲ್ಪ ಸಮಯ. ಎಲ್ಲೆ ಮೀರಿತು ಕುತೂಹಲ. ಕಣ್ಣಾಡಿಸಿದೆ ರೂಮಿನ ಸುತ್ತ. ಕಡ್ಡಿಗಳಿದ್ದವು ಮೂಲೆಯಲ್ಲಿ. ಅರ್ಥಮಾಡಿಕೊಂಡೆ ಎಲ್ಲವನ್ನೂ. ಎದ್ದು ಹೋಗಲಿಲ್ಲ. ಬಾರದಂತೆ ತಡೆಯುವುದು […]

Read More

ರಾಷ್ಟ್ರಕವಿಗಳು ‘ಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’ ಎಂದು ಹಾಡಿಹೊಗಳಿದರು.   ಇನ್ನೊಬ್ಬ ಕವಿ, ‘ನಿತ್ಯೋತ್ಸವ ತಾಯೇ ನಿತ್ಯೋತ್ಸವ’ ಎಂದು ಹಾಡಿದರು.   ಹಾಗಾದರೆ ಕನ್ನಡದ ಭುವನೇಶ್ವರಿಗೆ ನಿತ್ಯೋತ್ಸವ ನಡೆಯುವ ಕ್ಷೇತ್ರ ಯಾವುದು? ಕನ್ನಡದ ತಾಯಿ ಭುವನೇಶ್ವರಿಯು ನೆಲೆ ನಿಂತಿರುವುದೆಲ್ಲಿ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಎತ್ತರದ ಭುವನಗಿರಿ. ಹೌದು, ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗರಿ ಭುವನೇಶ್ವರೀದೇವಿಯ ಸಿದ್ಧಿಕ್ಷೇತ್ರ. ಇಲ್ಲಿ ದಿನವೂ ತ್ರಿಕಾಲ ಪೂಜೆ, ಅಭಿಷೇಕ, ನೈವೇದ್ಯಗಳು ನಡೆಯುತ್ತವೆ. ಹಚ್ಚ ಹಸುರಿನ […]

Read More

ಹೀಗನಿಸಿದ್ದು ನಿಜ. ಕೇಂದ್ರೀಯ ವಿದ್ಯಾಲಯಗಳಲ್ಲಿ ಸಂಸ್ಕೃತ ಮತ್ತು ಹಿಂದಿಯಲ್ಲಿ ಪ್ರಾರ್ಥನೆ ಮಾಡಬಾರದು. ಅದು ವಿದ್ಯಾರ್ಥಿ ಹಾಗು ಪಾಲಕರ ಧಾರ್ಮಿಕ ನಂಬಿಕೆಗೆ ಧಕ್ಕೆ ಬರುತ್ತದೆ ಎನ್ನುತ್ತಾ ಯಾರೋ ಒಬ್ಬ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾನೆ. ಇದನ್ನು ವಿಚಾರಿಸಬೇಕೆಂದು ಕೋರ್ಟ್ ಹೇಳಿದೆ. ಅದಿರಲಿ, ನನಗನಿಸಿದ್ದು ಕೋರ್ಟ್ ನ ಬಗ್ಗೆ ಅಲ್ಲ. ಅರ್ಜಿದಾರನ ಕುರಿತು. ಭಾರತೀಯತೆಯ ಕುರಿತು, ಅದೂ ಭಾರತದಲ್ಲಿ ಇದು ಬೇಕು, ಅದು ಬೇಡ ಎನ್ನುವ ಮಟ್ಟಕ್ಕೆ ಮಾತನಾಡುತ್ತಾರೆ; ವಿರೋಧಿಸುತ್ತಾರೆ; ಪ್ರತಿಭಟಿಸುತ್ತಾರೆ. ನಿಮಗೆ ಬೇಕಾದಂತೆ ಭಾರತವನ್ನು ಬದಲಿಸಲು ಭಾರತ ನಿಮ್ಮ ಸ್ವಂತದ್ದಾ? ಭಾರತಕ್ಕೆ […]

Read More

ದೀಪ ಉರಿಸಬೇಕು ಚಿಕ್ಕವರಿದ್ದಾಗ ಒಲೆಯ ಬುಡದಲ್ಲಿ ಕುಳಿತು ಛಳಿ ಕಾಯಿಸಿದ ನೆನಪುಂಟೇ? ಶಾಲಾಕಾಲೇಜಿನ ದಿನಗಳ ಪ್ರವಾಸಗಳಲ್ಲಿ campfire ಹಚ್ಚಿ ಸುತ್ತಲೂ ಕುಳಿತು ಹಾಡಿದ ಹಾಡುಗಳು ಹಾಗೂ ಕೇಳಿದ ಕಥೆಗಳು ನೆನಪಿವೆಯೇ? ಜೀವನದಲ್ಲಿ ಇತ್ತೀಚಿಗೆ ನಡೆದಿರುವ ಹಲವಾರು ಘಟನೆಗಳು ಈಗಾಗಲೇ ಮರೆತಿದ್ದರೂ ಸಹ ಬಹಳ ಹಿಂದೆಯೇ ನಡೆದ ಆ ಘಟನೆಗಳು ಇನ್ನೂ ಮನಸ್ಸಿನ ಪಟಲದಲ್ಲಿ ಉಳಿದಿರಲು ಕಾರಣವೇನು? ಅಗ್ನಿ. ಅದಕ್ಕೆ ಕಾರಣ ಅಗ್ನಿ. ಉರಿಯುತ್ತಿರುವ ಅಗ್ನಿಯ ಮುಂದೆ ನಡೆದ ಘಟನೆಗಳು ಮನದಲ್ಲಿ ಅಚ್ಚೊತ್ತಲ್ಪಡುತ್ತವೆ. ಯಜ್ಞದಲ್ಲಿ ಮಾಡಿದ ಪ್ರಾರ್ಥನೆಗಳು ಫಲಿಸಲು, […]

Read More

  ನಮ್ಮ ಭಾರತದ ಭೂಷಣವೇ ಸಂತರು..!! ಸ್ವಂತಕ್ಕಾಗಿ ಏನನ್ನೂ ಇಟ್ಟುಕೊಳ್ಳದೇ ಸಮಾಜಕ್ಕಾಗಿ ಸರ್ವಸ್ವವನ್ನೂ ಧಾರೆಯೆರೆಯುವ ದೈವೀಶಕ್ತಿಯ ಖನಿಗಳು ಸಂತರು…!!! ರಾಮ-ಕೃಷ್ಣರು ನಡೆದಾಡಿದ ಈ ಭೂಮಿಯಲ್ಲಿ ಸಂತರೇ ನಡೆದಾಡಿದರೆ ಚೆಂದ…!!! ಯಾಕೆ..? ಸಂತರಾಗಿ ಮಾರ್ಪಡುವುದೇ ತಮ್ಮ ಆಂತರಂಗಿಕಸಾಧನೆಯಿಂದ..!!! ಆ ಆಂತರಂಗಿಕಸಾಧನೆಯೇ ಲೋಕಕ್ಷೇಮಕ್ಕಾಗಿ ವಿನಿಯೋಗಿಸಲ್ಪಡುತ್ತದೆ..!!! ಭಗವಾನ್ ವೇದವ್ಯಾಸರಿಂದ ಆಚಾರ್ಯಶಂಕರರ ವರೆಗೆ, ಶಂಕರಾದಿಗಳಿಂದ ವಿವೇಕಾನಂದರ ವರೆಗೆ ಅನೇಕ ಸಂತ-ಮಹಾಂತರು ದೇಶಕ್ಕೆ ವಿಶೇಷವಾದ ಶೋಭೆಯನ್ನು ತಂದಿಟ್ಟರು..!!! ತದನಂತರದ ಕಾಲದಲ್ಲಿ ಶಾಂಕರಪರಂಪರೆಯಲ್ಲಿ ಹಾಗೂ ಜಂಗಮಪರಂಪರೆಯಲ್ಲಿ ಬಂದ ಅನೇಕ ಸಂತರು-ಪೀಠಾಧಿಪತಿಗಳು ದೇಶಕ್ಕಾಗಿ ತನುವನ್ನು ತೆತ್ತರು…!!! ಪ್ರಕೃತ […]

Read More

1998ರಲ್ಲಿ ನಮ್ಮ ಸಂಸ್ಥಾನ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಪೀಠಾರೋಹಣ. 2000ದಲ್ಲಿ ಶ್ರೀಗಳಿಂದ ಘೋಷಣೆಯೊಂದು ಹೊರಬಿತ್ತು `ಗೋವಿಗಾಗಿ ನಾವು, ಗೋವಿರುವಲ್ಲಿ ನಾವು, ಗೋವೊಂದೇ ನಮ್ಮ ಗಮ್ಯ, ಗುರಿ’. ಹಿರಿಯರೊಬ್ಬರು ಇದರ ಬಗ್ಗೆ ತಮ್ಮ ಅನಿಸಿಕೆಯನ್ನು ಹೇಳಿದ್ದರು. ಅದು ಇಂದಿಗೂ ನನ್ನ ಕಿವಿಯಲ್ಲಿ ಮಾರ್ದನಿಗೊಳ್ಳುತ್ತಿದೆ, `ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ. ಅಂಬಿಕಾತನಯದತ್ತರ ಈ ಸಾಲು ಬುದ್ಧನನ್ನು ಉದ್ದೇಶಿಸಿದ್ದಾದರೂ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳಿಗೆ ಬಹಳ ಚೆನ್ನಾಗಿ ಹೊಂದುತ್ತದೆ.’   ಭಾರತಮಾತೆಯ ಪೀತಾಂಬರ ಗೋನೆತ್ತರೋಕುಳಿಯಲ್ಲಿ ಒದ್ದೆಮುದ್ದೆಯಾಗಿ ದುರ್ನಾತ ಬೀರುತ್ತಿದೆ. ಅದನ್ನು ಕಿತ್ತೊಗೆಯಬೇಕು. ಆಕೆ ಶುಭ್ರವಸನಧಾರಿಣಿಯಾಗಬೇಕು.  ಭಾರತಮಾತೆಯ ಸುಪುತ್ರರೊಳಗೆ […]

Read More

ಪ್ರಕೃತಿ ಸುಂದರ ಮುರುಡೇಶ್ವರ ಮೂರು ಕಡೆಯಿಂದ ನೀರಿನಿಂದಾವರಿಸಿದ ಕಂದುಕಗಿರಿಯ ಅಂಚಿನಲ್ಲಿ ಮುರುಡು ಮುರುಡಾಗಿದ್ದು ಭಕ್ತರನ್ನು ಹರಸುವವನು ಮೃಡೇಶ. ಮೃಡೇಶನಿಂದ ಪುನೀತವಾದ ಕಡಲತಡಿಯ ಊರು ಮುರ್ಡೇಶ್ವರ ಅಥವಾ ಮುರುಡೇಶ್ವರ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಪ್ರವಾಸಿಗರನ್ನು ಕೈಬೀಸಿ ಕರೆಯುವ ಬೃಹತ್ ಮಹಾದ್ವಾರ. ದೂರದಿಂದಲೇ ಕಣ್ಮನಗಳನ್ನು ಸೆಳೆಯುವ ರಾಜಗೋಪುರ. ಶಿರವೆತ್ತಿ ನೋಡಿದಷ್ಟೂ ನೋಡುತ್ತಿರಬೇಕೆಂಬ ಮಹಾದೇವನ ಮಹಾಮೂರ್ತಿ. ಜೀವ ಮೈದಳೆದು ಬಾಗಿಲಲ್ಲಿಯೇ ಸ್ವಾಗತಿಸುತ್ತಿರುವ ಎರಡು ದೊಡ್ಡಾನೆಗಳು. ಕೈಲಾಸದಂತೆ ಮೆಟ್ಟಿಲೇರಿ ಮಂದಿರದ ಒಳಹೊಕ್ಕಾಗ ಶಿವನ ಸಾನ್ನಿಧ್ಯವನ್ನು ಸಂಸೂಚಿಸುವ ಬೃಹತ್ ನಂದಿಯ ವಿಗ್ರಹ. ಭಕ್ತಿಯಿಂದ ಕೈಮುಗಿದು […]

Read More

  ಗೋವಿನ ಪ್ರಸ್ತುತ ಪರಿಸ್ಥಿತಿ ನೋಡುವಾಗ, ಗೋವಿನ ಜನ್ಮ ಯಾರಿಗೂ ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವ ದಿನ ಬಂದಿದೆ ಎಂದು ಅನಿಸುತ್ತದೆ. ಭಾರತ ಉದ್ದಗಲಕ್ಕೂ ಎಲ್ಲಿ ನೋಡಿದರೂ, ನಮ್ಮ ಜಗಜ್ಜನನಿ ಗೋಮಾತೆಗೆ ಚಿತ್ರಹಿಂಸೆ ಕೊಡುವಷ್ಟು ಬೇರೆಯಾವ ಜೀವಿಗೂ ಕೊಡುವುದಿಲ್ಲವೇನೋ, ಅಷ್ಟು ಕ್ರೌರ್ಯದಿಂದ ಗೋಮಾತೆಯನ್ನು ನಡೆಸಿಕೊಳ್ಳಲಾಗುತ್ತಿದೆ. ಇದಕ್ಕೆ ಕಾರಣ ಗೋವುಗಳ‌ ಮೇಲಿನ ಕ್ರೌರ್ಯವನ್ನು ನೋಡಿಯೂ ನೋಡದಂತಿರುವ ಬಹುತೇಕ ಭಾರತೀಯರ ಮೌನ. ದಿನದಿಂದ ದಿನಕ್ಕೆ ಗೋಮಾತೆಯನ್ನು ನಿರ್ಲಕ್ಷಿಸಲಾಗುತ್ತಿದೆ. ದುಡ್ಡು ಕೊಟ್ಟರೆ ನಮಗೆ ಏನು ಬೇಕೋ ಅದು ಸಿಗುತ್ತದೆ ಎನ್ನುವ ಪಟ್ಟಣ […]

Read More

~ ಮೊಟ್ಟಮೊದಲು ಆದಿಗುರು ಶಂಕರರಿಗೂ, ಏಕೈಕ ಅವಿಚ್ಛಿನ್ನ ಶಂಕರ ಗುರುಪರಂಪರೆಯ ರಾಜಯೋಗ ಪೀಠವನ್ನು ಅಲಂಕರಿಸಿರುವ, ನನ್ನ ಕುಲಗುರುಗಳಾದ ಜಗದ್ಗುರು ಶಂಕರಾಚಾರ್ಯ ಗೋಕರ್ಣ‌ ಮಂಡಲಾಧೀಶ್ವರ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರಿಗೆ ಹೃನ್ಮನಪೂರ್ವಕ ನಮಿಸುತ್ತಾ..   ನಾನು ಹುಟ್ಟಿ ಬೆಳೆದಿದ್ದು ಶಿರಸಿಯಲ್ಲಿ ಆದ್ದರಿಂದ ನನಗೆ ಬುದ್ಧಿ ಬರುವ ಕಾಲದಿಂದಲೂ ಸ್ವರ್ಣವಲ್ಲಿ ಮಠ/ಮಠದವರ ಒಡನಾಟವೇ ಜಾಸ್ತಿ ಇತ್ತು. ಶ್ರೀಗಳ ಬಗ್ಗೆ ಗೌರವವೂ ಇತ್ತು.   ಆದರೆ ಇತ್ತೀಚಿನ ರಾಮಚಂದ್ರಾಪುರ ಮಠ ಹಾಗೂ ರಾಘವೇಶ್ವರಭಾರತಿ ಶ್ರೀಗಳ ಮೇಲಿನ ಮಿಥ್ಯಾರೋಪದ ಪ್ರಕರಣಗಳು ಕಾವೇರುತ್ತಿದ್ದಂತೆ, ಈ ಷಡ್ಯಂತ್ರಗಳ […]

Read More

ಹವ್ಯಕ ಸಮಾಜದ ಎರಡು ಕಣ್ಣುಗಳು ಎನ್ನುವ ಮಾತಿಗೆ ಪ್ರತಿರೂಪವಾಗಿ ಶೋಭಿಸುತ್ತಿರುವ ಯತಿವರೇಣ್ಯರಾದ ಶ್ರೀರಾಮಚಂದ್ರಾಪುರಮಠದ ಹಾಗೂ ಶ್ರೀಸ್ವರ್ಣವಲ್ಲಿಮಠದ ಗುರುಗಳ ಬಗ್ಗೆ ವಿಶೇಷವಾದ ಗೌರವ ಇಟ್ಟವನು ನಾನು. ಆದರೆ ಇಂದು ನನ್ನ ನಂಬಿಕೆ ಹುಸಿಯಾಯಿತು. ಮೌನದಲ್ಲಿದ್ದರೂ, ಅವರು ನಮ್ಮ ಜೊತೆ ಇದ್ದಾರು ಎನ್ನುವ ನನ್ನ ಅಚಲ ವಿಶ್ವಾಸ ಹುಸಿಯಾಯಿತು.   ಪೀಠಾಧಿಪತಿಗಳು ಸಮಾಜಮುಖಿ ಕೆಲಸಕ್ಕೆ ಹೊರಟಾಗ ಆರೋಪಗಳು ಬರುವದು ಹೊಸತಲ್ಲ. ದುಷ್ಟ ವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ನಿಂತಾಗ, ಹೋರಾಟಗಾರರನ್ನು ದಮನಿಸುವ ಪ್ರವೃತ್ತಿ ಈ ದೇಶಕ್ಕೆ ಹೊಸತಲ್ಲ. ಸತ್ಯದ ವಿಜಯ ಕೊನೆಯಲ್ಲಿ […]

Read More

ಶ್ರೀಸಿಗಂದೂರುಚೌಡೇಶ್ವರಿ! ‘ನೀನೇ ಎಲ್ಲ’ ಎನ್ನುವ ಭಾವದಲ್ಲಿ ಬೇಡಿ ಬರುವ ಭಕುತರಿಗೆ ಎಂದೂ ‘ಇಲ್ಲ’ ಎನ್ನದ ಕರುಣಾಕರೀ. ಹಾಗೆಯೇ ‘ನೀನೇನಲ್ಲ’ ಎನ್ನುವ ದುರುಳರ ದುರಹಂಕಾರವನ್ನು ‘ಹುಂ’ಕಾರ ಮಾತ್ರದಿಂದಲೇ ಸಂಹರಿಸುವ ದುಷ್ಟಭಯಂಕರಿಯೂ ಹೌದು.   ಮಾತೆಯ ಶಕ್ತಿಯೇ ಅಂತಹದ್ದು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ನದಿಯ ಹಿನ್ನೀರ ಪ್ರದೇಶದ ಮೂಲೆಯಲ್ಲಿರುವ, ಗೂಗಲ್ಲಿಗೂ ಸಿಗದ ಸಿಗಂದೂರಿನ ಕಾನನದಲ್ಲಿ ತಾನು ಕುಳಿತು, ದೇಶದ ಮೂಲೆ-ಮೂಲೆಯಿಂದ ಸಾಮಾನ್ಯ ಆದ್ಮಿ-ಉದ್ಯಮಿ, ಸಂತ-ಶ್ರೀಮಂತ ಮುಂತಾದ ಯಾವುದೇ ಭೇದವಿಲ್ಲದೇ, ಲಕ್ಷಾಂತರ ಜನರನ್ನು ತನ್ನಲ್ಲಿಗೆ ಕರೆಸಿಕೊಳ್ಳುತ್ತಿರುವುದು ಆಕೆಯ ಪ್ರಭಾವವನ್ನು […]

Read More

ಸದಾ ವ್ಯಷ್ಟಿಯ, ಸಮಷ್ಟಿಯ ಒಳಿತನ್ನಷ್ಟೇ ಬಯಸುವ, ಮೊದಲ ಪ್ರಜೆಯಿಂದ ಹಿಡಿದು ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೂ ಸಮಾಭಾವದಿಂದ- ವಾತ್ಸಲ್ಯದಿಂದ “ಒಳಿತಾಗಲಿ” ಎಂದು ಹರಸುವ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಮೇಲೆ ಅಂಥ ಹೀನಾಯವಾದ, ಕಲ್ಪಿಸಲೂ ಹೇಸುವ, ಅಲ್ಲದ, ನಿಲ್ಲದ, ದಾನವರಿಂದಲೂ ಆಗದ ಮಿಥ್ಯಾಪವಾದ ಹಾಕಿದಿರಿ! ಯಾಕೆ?   ಸಮಾಜೋದ್ಧರಣವೇ ಉಸಿರಾಗಿರುವ ಆ ಶಕ್ತಿಯನ್ನು ನೋಯಿಸಿದ “ದುರ್ಗುಣಿ- ಗುರುದ್ರೋಹಿಗಳೇ”… ಏನು ಸಾಧಿಸಿದಿರಿ? ದುಷ್ಟರಾಗಿಬಿಟ್ಟಿರಿ! ಯಾಕೆ?   ಯಾವುದರಲ್ಲೂ ಗೆಲ್ಲದೇ ಹೆಜ್ಜೆಹೆಜ್ಜೆಗೂ ಸೋಲು ಕಂಡಾಗಲೂ ಅಂತರಾತ್ಮ ಎಚ್ಚರಿಸಲಿಲ್ಲವೇ! ಯಾಕೆ?   ಅದೆಷ್ಟು ಷಡ್ಯಂತ್ರಗಳು!ಕುತಂತ್ರಗಳು!! […]

Read More
1 2 3
Online news kannada regional herald regional news sports politics karavali kannada latest news breaking news upcoming news save kannada save government school karnataka udupi news kundapura news india top news