ಗೋ ಪ್ರೇಮ ;ರಾಮಕೃಷ್ಣ ಹೆಗಡೆ ಕಲ್ಲಬ್ಬೆ

ಲೇಖನ

ಇದು ಇತ್ತೀಚಿಗೆ ನಡೆದ ಸಂಭಾಷಣೆ, ಗೋ ಸಂಭಾಷಣೆ ಎನ್ನಬಹುದು. ಯಾವುದೇ ವಿಷಯದ ಬಗ್ಗೆ ಮಾತಾಡಿದರೂ, ವಿಷಯ ಎಲ್ಲೇ ಹೋದರೂ ಮತ್ತೆ ಗೋವಿನ ವಿಷಯಕ್ಕೇ ಬರುತ್ತಿತ್ತು. ಅಷ್ಟರಮಟ್ಟಿಗೆ ಗೋವು ಈ ತಂಗಿಯ ಜೀವನದ ಮೇಲೆ ಪ್ರಭಾವ ಬೀರಿತ್ತು.

ಅಕ್ಕ ಪಕ್ಕದ ಮನೆಯ ಮಹಡಿಯ ಮೇಲೆ ನಿಂತು ಮಾತಾಡಿದ ರೀತಿ ನೋಡಿ.


ಅಕ್ಕ: ತಂಗಿಮರಿ, ಊರಿಂದ ಯಾವಾಗ್ ಬಂದ್ಯೇ?

ತಂಗಿ: ಬೆಳಿಗ್ಗೆ ಬಂದ್ನೇ ಅಕ್ಕಯ್ಯ, ನಾ ಬರಕಾದ್ರೆ ಒಂದು ಆಕ್ಳು ಕರು ಹಾಕ್ತು ಅಕ್ಕ 😀😀

ಅಕ್ಕ: ಊರಲ್ಲಿ ಆಯಿ ಅಪ್ಪಯ್ಯ ಎಲ್ಲ ಆರಾಮಿದ್ವಾ, ಫುಲ್ ಮಜಾ ಮಾಡ್ಕಂಡ್ ಬಂದ್ಯಾ?

ತಂಗಿ: ಅಕ್ಕ, ನಾ ಬರಕಾದ್ರೆ ಆಕಳು ಕರು ಹಾಕಿತ್ತಲೆ, ಮಾಂಸ ಬಿತ್ತು, ನಾನೇ ಎಲ್ಲ ಚೊಕ್ಕ ಮಾಡಿಕ್ಕಿ ಬಂದೆ.  

ಅಕ್ಕ: ಆಯಿಗೆ ಕಾಲು ನೋವು ಹೆಂಗಿದ್ದೆ?

ತಂಗಿ: ಚಂದ್ರಿಕಾ ಕರು ಇತ್ತಲೇ, ಅಕ್ಕಾ, ಅದ್ಕೆ ಈಗ ಒಂದು ವರ್ಷ ಆತು. ಪಾಪ,‌ ಅದರ ಅಮ್ಮ ಈಗ ಮುದ್ಕಾಗೋಯ್ದು. ನಂಗ ಹಾಲು ಕರೆತ್ವಿಲ್ಲೆ,  ಒಂದು ವರ್ಷ ಆತು ಅದು ಕರು ಹಾಕಿ, ಹಾಲು ಕುಡ್ದು ಕುಡ್ದು ಹೆಂಗಾಯ್ದು ಗೊತ್ತಿದ್ದಾ 😊, ಕಾಲು ಊರ್ಕಂಡಿ ಹಾಲು ಕುಡಿತು, ಅದನ್ನೆಲ್ಲ ನೋಡುದೇ ಚಂದ. ಎಷ್ಟು ಖುಷಿ ಆಗ್ತು ಗೊತ್ತಿದ್ದಾ ಅಕ್ಕಾ?

ಅಕ್ಕ:  ನಿಮ್ಮನೆ ತಮ್ಮಂಗೆ ಭಯಂಕರ ಖುಷಿ ಆತನ ಅಲ್ದಾ, ಅಣ್ಣನ ಮಕ್ಕಳ ಸಂತಿಗೆ ಆಟ ಆಡ್ತಿದ್ನಾ ಇಡೀ ದಿನಾ?

ತಂಗಿ: ನಮ್ಮನೆ ತಮ್ಮ ಇಡೀ ದಿನ ಕೊಟ್ಟಿಗೆಲೇ ಇರ್ತಿದ್ದ ಗೊತ್ತಿದ್ದಾ? ಕರು ಸಂತಿಗೆ ಆಟ ಆಡಕತ್ನೇ ಇಪ್ದೇಯಾ ಅವಾ. ಆ ಚಂದ್ರಿಕಾ ಇತ್ತಲೇ, ಅದು ಇವನ್ನ ರಾಶೀ ಪ್ರೀತಿ ಮಾಡ್ಕತ್ತಿತ್ತು. ಆದರೆ ದೂಡಿ ಹಾಕ್ಬುಡ್ತಿತ್ತು.

ಅಕ್ಕ:  ಜೋರನ ನಿಂದು, ಎಷ್ಟೆಲ್ಲ ತೇರಿಗೆ ಹೋಗಿ ಬಂದೆ ಊರಲ್ಲಿ?

ತಂಗಿ: ಅಕ್ಕ ಅದಿರ್ಲಿ, ಗೋರೆಗೆ ಹೋಗಿದ್ದೆ, ಅಲ್ಲಿ ಗಣಪತಿ ಪೂಜೆ ಮಾಡಕಾದ್ರೆ, ಸುಮಾರು ನಾಲೈದು ಆಕಳು ಕರು ಬಂದು ನಿಂತ್ಕತ್ತಿತ್ತು.ಪೂಜೆ ಮುಗಿಸಿ, ಪ್ರಸಾದ ತಿಂದ್ಕಂಡೇ ಹೋಪ್ದಡಾ ಅವು, ಯಾರು ಕರೆದ್ರೂ ಎಲ್ಲೂ ನೋಡ್ತಿತ್ತಿಲ್ಲೆ, ಪೂಜೆ ಕಡೆ ಮಾತ್ರ ಅವ್ಕಳ ಗಮನ ಇತ್ತು, ಅಕ್ಕ ಎಂತ ಖುಷಿ ಆತು ಹೇಳ್ತೆ, ಎಷ್ಟು ಚೆಂದಕ್ಕಿದ್ದು ಆ ಆಕಳು ಕರು ಎಲ್ಲ.

ಅಕ್ಕ: ಅಣ್ಣ ಅತ್ತಿಗೆ ಮಕ್ಕೊ ಎಲ್ಲ ಯಾವಾಗ್ ಬೆಂಗಳೂರಿಗೆ ಬತ್ವಡಾ? ಮಕ್ಕೊಗೆಲ್ಲ ಪರೀಕ್ಷೆ ಆತ?

ತಂಗಿ:  ಓ ಅಕ್ಕಯ್ಯ, ನಮ್ಮನೆ ವಿಶ್ವನಾಥಂಗೆ ಮಲೆನಾಡು ಗಿಡ್ಡ ಹಬ್ಬದಲ್ಲಿ ಫಸ್ಟ್ ಪ್ರೈಜ್ ಬಂತೇ ಅಕ್ಕ.ಎಸ್ಟ್ ಚೆಂದ ಮಾಡ್ಕಂಡು ಅವನ್ನ ಕರ್ಕಂಡ್ ಹೋಗಿದ್ದ ಗೊತ್ತಿದ್ದ, ಚೆಂದಿ ಗೆಜ್ಜೆ,ಮಾಲೆ ಹಾಕಿ, ಗಂಟೆ ಕಟ್ಕಂಡು,  ಚಂದ‌ ಚಂದ ಮಾಡ್ಕಂಡು ಹೋಗಿದ್ದ. ನಿಂಗೊತ್ತಿದ್ದ ಅಕ್ಕ, ಅವ ನಮ್ಮನೆ ಅಪ್ಪಯ್ಯ ಕಾಶಿ ಹೋಗಿ ಬಂದ ದಿನನೇ ನಮ್ಮನೆ ಕೊಟ್ಟಿಗೆಲೇ ಹುಟ್ಟಿದ್ದ. ಅವನೇ ನಮ್ಮನೆ ಕೊಟ್ಟಿಗೆ ಲೀಡರ್. ಒಟ್ಟು ಇಪ್ಪತ್ತು ಬಾಲ ಇದ್ದು ನಮ್ಮನೆ ಕೊಟ್ಟಿಗೆಲಿ. ಎಲ್ರನ್ನೂ ಅವನೇ ಕಂಟ್ರೋಲ್ ಮಾಡುದು.

ಅಕ್ಕ:  ಮಕ್ಕೊಗೆ ಪರೀಕ್ಷೆ ಎಲ್ಲಾ ಮುಗತ್ತಾ, ಅಣ್ಣನ ಹತ್ತಿರ ಆಯಿನೂ ಕರ್ಕಂಬಾ ಹೇಳು ಅಕಾ?

ತಂಗಿ: ಅಕ್ಕ, ನಮ್ಮನೆ ಶುಕ್ರಿ ಮಲೆನಾಡು ಗಿಡ್ಡ ಹಬ್ಬಕ್ಕೆ ಹೋಗಿ ಬರಕಾದ್ರೆ ರಾತ್ರೆ ೧೨ ಘಂಟೆ ಆಗಿತ್ತಡ, ಸಿಟ್ಟು ಬಂದ್ಕಂಡು ಬೆಟ್ಟಕ್ಕೆ ಓಡಿ ಹೋಗದ್ದು, ಮರ್ದಿನ ಮಧ್ಯಾಹ್ನ ಮನೆಗೆ ಬಂತು. ಸುಮಾರು ಹುಡ್ಕಿದ್ರೂ ಸಿಕ್ಕಿತ್ತಿಲ್ಯಾಗಿತ್ತಡ ಶುಕ್ರಿ.

ಅಕ್ಕ:  ಅದೆಂತದೆ ಶುಕ್ರಿ?

ತಂಗಿ: ಅಕ್ಕ ಶುಕ್ರಿ ಗೊತ್ತಿಲ್ಯ, ಅಯ್ಯೋ ಆ ಶುಕ್ರಿನೂ ನಮ್ಮನೆ ಕೊಟ್ಟಿಗೆಲೇ ಹುಟ್ಟದ್ದು, ಸಿಕ್ಕಾಪಟ್ಟೆ ಹುಷಾರಿದ್ದು, ಯಾವ ದಣಪೆ, ಪಾಗಾರ ಎಂತದೂ ತಾಗ್ತಿಲ್ಲೆ ಅದ್ಕೆ, ಹೆಂಗ್ ಹಾರ್ತು ಗೊತ್ತಿದ್ದ, ಹೈಜಂಪ್ ಕಾಂಪಿಟೇಷನ್ ಇಟ್ಟರೆ, ಅದ್ಕೇ ಫಸ್ಟ್ ಪ್ರೈಜ್.

ಅಕ್ಕ: ನೋಡು ನಿಮ್ಮನೆ ತಮ್ಮ ಕೂಗ್ತಿದ್ದ, ಅವಂಗೆ ಹೊಟ್ಟೆಗಾಕು.   

ತಂಗಿ: ಓ, ನಾ  ಮಠದ ಕಡೆ ತಮ್ಮನ್ ಕರ್ಕಂಡು ಹೊರಟೇ, ನೀ ಬೇಗ ಬಾ, ಹೊಸ ದನ ಬಂದಡಾ, ನೋಡ್ಕ ಬಪ್ಪ.


ಈ ಸಂಭಾಷಣೆ ಕೇಳಿ, ಎಲ್ಲರಿಗೂ ಗೋವಿನ ಮೇಲಿನ ಪ್ರೀತಿ ಹೀಗೆ ಇರಬಾರದೇ ಎಂದು ಅನಿಸಿತು.


🙏 ವಂದೇ ಗೋಮಾತಾರಮ್ 🙏


Author Details


Srimukha

Leave a Reply

Your email address will not be published. Required fields are marked *