ಸ್ವರ್ಣವಲ್ಲಿ ಶ್ರೀಗಳೇ, ನೀವು ಸಮಾಜಕ್ಕೆ ಆದರ್ಶವಾಗಬೇಕಿತ್ತಲ್ಲವೇ??

ಲೇಖನ

~
ಮೊಟ್ಟಮೊದಲು ಆದಿಗುರು ಶಂಕರರಿಗೂ, ಏಕೈಕ ಅವಿಚ್ಛಿನ್ನ ಶಂಕರ ಗುರುಪರಂಪರೆಯ ರಾಜಯೋಗ ಪೀಠವನ್ನು ಅಲಂಕರಿಸಿರುವ, ನನ್ನ ಕುಲಗುರುಗಳಾದ ಜಗದ್ಗುರು ಶಂಕರಾಚಾರ್ಯ ಗೋಕರ್ಣ‌ ಮಂಡಲಾಧೀಶ್ವರ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರಿಗೆ ಹೃನ್ಮನಪೂರ್ವಕ ನಮಿಸುತ್ತಾ..

 

ನಾನು ಹುಟ್ಟಿ ಬೆಳೆದಿದ್ದು ಶಿರಸಿಯಲ್ಲಿ ಆದ್ದರಿಂದ ನನಗೆ ಬುದ್ಧಿ ಬರುವ ಕಾಲದಿಂದಲೂ ಸ್ವರ್ಣವಲ್ಲಿ ಮಠ/ಮಠದವರ ಒಡನಾಟವೇ ಜಾಸ್ತಿ ಇತ್ತು. ಶ್ರೀಗಳ ಬಗ್ಗೆ ಗೌರವವೂ ಇತ್ತು.

 

ಆದರೆ ಇತ್ತೀಚಿನ ರಾಮಚಂದ್ರಾಪುರ ಮಠ ಹಾಗೂ ರಾಘವೇಶ್ವರಭಾರತಿ ಶ್ರೀಗಳ ಮೇಲಿನ ಮಿಥ್ಯಾರೋಪದ ಪ್ರಕರಣಗಳು ಕಾವೇರುತ್ತಿದ್ದಂತೆ, ಈ ಷಡ್ಯಂತ್ರಗಳ ಹಿಂದೆ ಸ್ವರ್ಣವಲ್ಲಿ ಶ್ರೀಗಳ ಕೈವಾಡ ಇದೆ ಎಂಬ ಮಾತು ಜೋರಾಗಿ ಕೇಳಿ‌ ಬರುತ್ತಿತ್ತು. ಹಲವರು ನನ್ನ ಬಳಿ ಈ ವಿಷಯ ಹೇಳಿದರು ಸಹ. ಅಷ್ಟಕ್ಕೇ ಅದನ್ನು ನಾನು ನಂಬಬಹುದಿತ್ತು. ಆದರೆ ಸ್ವರ್ಣವಲ್ಲಿ ಶ್ರೀಗಳು ನೇರವಾಗಿ ಎಲ್ಲಿಯೂ ಏನನ್ನು ಹೇಳದಿದ್ದ ಕಾರಣ… ಶ್ರೀಗಳು ಇಂತಹ ಕೆಲಸ ಮಾಡಲಾರರು ಎಂದು ನಾನು ಅಂದುಕೊಂಡೆ.

 

ಮಿಥ್ಯಾರೋಪದ ಪ್ರಕರಣಗಳು ಜಾಸ್ತಿ ಆಗುತ್ತಿದ್ದಂತೆ ಮತ್ತೆ ಮತ್ತೆ ಸ್ವರ್ಣವಲ್ಲಿ ಶ್ರೀಗಳ ಕೈವಾಡದ ಬಗ್ಗೆ ಅನುಮಾನ ಬರಲಾರಂಭಿಸಿತು, ಆಗಲೂ ನನಗೆ ಇವರು ಹೀಗೆ ಮಾಡಿಯಾರು ಎಂದೆನಿಸಲಿಲ್ಲ. ಸ್ವಾಮಿಗಳು ಮಾಡಲಿಕ್ಕಿಲ್ಲ, ಯಾರೋ ಶಿಷ್ಯರು ಪಿತೂರಿ ಮಾಡುತ್ತಿರಬಹುದು ಎಂದು ಕೊಂಡೆ, ಯಾಕೆಂದರೆ ಮೊದಲನೆಯದಾಗಿ ಅವರ ಕೈವಾಡವನ್ನು ನಾನು ಪ್ರತ್ಯಕ್ಷವಾಗಿ ಕಂಡಿಲ್ಲ. ಎರಡನೆಯದಾಗಿ, ಅವರ ಕೈವಾಡ ಇದೆಯೋ ಇಲ್ಲವೋ ಎಂಬುದನ್ನು ತಿಳಿಯಬೇಕಾದರೆ ಖುದ್ದು ಅವರಲ್ಲೇ ಕೇಳಬೇಕಿತ್ತು. ಪೀಠಾಧಿಪತಿಗಳನ್ನೆಲ್ಲ ಪ್ರಶ್ನೆಮಾಡಬಾರದೆಂಬ ಸಂಸ್ಕಾರ ನನ್ನಲ್ಲಿತ್ತು, ಹಾಗಾಗಿ ಸುಮ್ಮನಾದೆ.

 

ಆದರೆ‌ ಇತ್ತೀಚಿನ ಬೆಳವಣಿಗೆಗಳಿಂದ ಸ್ವರ್ಣವಲ್ಲಿ ಶ್ರೀಗಳ ಮೇಲಿನ ಅನುಮಾನ ದಟ್ಟವಾಗುತ್ತಾ ಹೋಯಿತು..
ಯಾವಾಗ ಹವ್ಯಕ ಸಮ್ಮೇಳನಕ್ಕೆ ನಮ್ಮ ಗುರುಗಳನ್ನು ಹೊರಗಿಟ್ಟರೆ ತಾವು ಬರುವುದಾಗಿ ತಮ್ಮ ಶಿಷ್ಯವೃಂದ ಹೇಳಿತೊ ಅಲ್ಲಿಗೆ ಖಚಿತವಾಯಿತು, ಇದು ಸಮಾಜವನ್ನು ಒಡೆದಾಳುವ ಕಾರ್ಯ ಎಂಬುದು.. ಆದರೂ, ಶ್ರೀಗಳು ಖುದ್ದಾಗಿ ಹೇಳಿಲ್ಲ, ಬಹುಶಃ ಶಿಷ್ಯವೃಂದದ ಆದೇಶಕ್ಕೆ ಮಣಿದಿರಬೇಕು, ಪರಿಸ್ಥಿತಿಯ ಕೈಗೊಂಬೆಯಾಗಿರಬೇಕು ಎಂದುಕೊಂಡೆ…

 

ಆದರೆ ತಮ್ಮ ಮೊನ್ನೆಯ ಮಾತುಗಳು ಎಲ್ಲವನ್ನೂ ಬಟಾಬಯಲು ಮಾಡಿತು.. ಸತ್ಯವೇ ಅವತಾರವೆತ್ತಿದಂತಿರುವ ನನ್ನ ಕುಲಗುರುವಿನ ಕುರಿತು ಕೀಳಾಗಿ ಮಾತನಾಡಿದ ಮೇಲೆಯೂ ಪ್ರಶ್ನೆ ಕೇಳದೆ ಇರುವಷ್ಟು ನಿರ್ವೀರ್ಯತೆ ನಮ್ಮಲ್ಲಿಲ್ಲ, ಅಧರ್ಮವನ್ನು ಪ್ರಶ್ನಿಸುವುದು ನಮ್ಮ‌‌ ರಕ್ತದಲ್ಲೇ ಇದೆ.‌

 

ಏನೇನೇನೇನೇನೇನೇನೂ ಷಡ್ಯಂತ್ರ ಇಲ್ಲ ಎಂಬುದನ್ನು ಹೇಳಿದಿರಲ್ಲ, ಏನು ಸಾಕ್ಷಿ ಇದೆ ತಮ್ಮ ಬಳಿ?? ಸಂತ್ರಸ್ತೆ ಮತ್ತು ಕೆಲವು ಶಿಷ್ಯರು ಹೇಳಿದ ಮಾತುಗಳು/ಪತ್ರಗಳು???
ನಮ್ಮ ಬಳಿ, ಈ ಪ್ರಕರಣ ಒಂದು ದುರುದ್ದೇಶಪೂರ್ವಕ ಷಡ್ಯಂತ್ರ ಎಂಬುದಾಗಿ ಸ್ವತಃ ದೂರುದಾರರು ಹೇಳಿದ, ಹೇಳಿಕೆಯನ್ನು ದಾಖಲಿಸಿದ ಪತ್ರ ಇದೆ ಪಂಚನಾಮೆಯ ರೂಪದಲ್ಲಿ..! ಖುದ್ದು ಸಂತ್ರಸ್ಥೆಯ ಗಂಡ ಹೇಳಿದ್ದು, ತನ್ನ ಹೆಂಡತಿ ಯಾವ ರೀತಿ ಯೋಜನೆ ರೂಪಿಸಿದ್ದಳು ಎಂಬುದನ್ನು..!

 

ಪ್ರಕರಣಗಳು ಶೀಘ್ರ ನಿರ್ಣಯ ಪ್ರಕಟಿಸಬೇಕು ಎಂದು ಹೇಳಿದಿರಲ್ಲಾ, ನ್ಯಾಯಾಲಯ ಕೇವಲ ಆರು ತಿಂಗಳಲ್ಲಿ ತೀರ್ಪಿತ್ತಿತ್ತಲ್ಲಾ, ಇದೊಂದು ದುರುದ್ದೇಶಪೂರ್ವಕವಾದ ಫೇಕ್‌ ಕೇಸ್, ರಾಘವೇಶ್ವರ ಶ್ರೀಗಳು ನಿಷ್ಕಳಂಕರು, ದೂರುದಾರರು,‌ ಸಿಐಡಿ, ಎಫ್.ಎಸ್.ಲ್ ಸಂಸ್ಥೆಯವರು ವರದಿಗಳನ್ನು ತಿರುಚಿ ಸ್ವಾಮೀಜಿಯವರ ಹೆಸರಿಗೆ ಕಳಂಕ ತರುವ ಪ್ರಯತ್ನ ಇದು ಎಂದು…‌
ಅದು ತಮ್ಮ ಗಮನಕ್ಕೆ ಬರಲಿಲ್ಲವೇ ಶ್ರೀಗಳೇ?

 

ಸನ್ಯಾಸಧರ್ಮದಿಂದ ಪತಿತರು?? ತಾವು ಹೇಗೆ ಹೇಳ್ತೀರಿ ಅವರು ಸನ್ಯಾಸಧರ್ಮದಿಂದ ಪತಿತರು ಎಂದು.. ತಾವು ಎಲ್ಲಾದರೂ ಕಣ್ಣಾರೆ ಕಂಡಿದ್ದೀರಾ ಪತಿತರಾದದ್ದನ್ನು??
ಸಂತ್ರಸ್ಥೆಯ ಮಾತಿನಿಂದ ನಿರ್ಧಾರಕ್ಕೆ ಬಂದಿರಾ?
ಬೆರಳೆಣಿಕೆಯಷ್ಟು ಮಹಿಳೆಯರು ಹೇಳಿದ್ದನ್ನು ನಂಬುವ ನೀವು, ರಾಘವೇಶ್ವರ ಶ್ರೀಗಳು ನಿಷ್ಕಳಂಕರು ಎಂದು ಸಾರಿಸಾರಿ ಹೇಳುವ ಸಾವಿರ ಸಾವಿರ ಮಾತೆಯರ ಮಾತನ್ನೇಕೆ ನಂಬುವುದಿಲ್ಲ.
ಮಹಿಳಾ ಆಯೋಗದ ಅಂಕಿಅಂಶಗಳನ್ನು ನೋಡಿ ಒಮ್ಮೆ, ಎಷ್ಟು ದೊಡ್ಡಮಟ್ಡದಲ್ಲಿ ಮಿಥ್ಯಾರೋಪಗಳು ದಾಖಲಾಗುತ್ತಿವೆ ಎಂದು. ಒಬ್ಬ ವ್ಯಕ್ತಿಯ ಮೇಲೆ‌ ಸುಳ್ಳು ದೂರು ಕೊಡುವುದು ಅತ್ಯಂತ ಸುಲಭದ ಕೆಲಸ, ದುಡ್ಡು ಮಾಡುವ ಪರಿಣಾಮಕಾರಿ ಮಾರ್ಗ ಎಂಬುದು ಗೊತ್ತಿರದಷ್ಟು ಮುಗ್ಧರೇ ತಾವು?

 

ಧ್ವನಿ ಎತ್ತುವ ಅನಿವಾರ್ಯತೆ ಇದಾಗಿದೆ ಎಂದಿರಲ್ಲ.. ಯಾವುದು ಆ ಅನಿವಾರ್ಯತೆ, ತಮಗಿರುವ ಒತ್ತಡವೇ? ಯಾಕೆ ಕೇಳುತ್ತಿದ್ದೀನೆಂದರೆ…
ಹವ್ಯಕ ಸಮಾವೇಶಕ್ಕೆ ತಮ್ಮನ್ನು ಆಹ್ವಾನಿಸಿದಾಗ, ತಾವು ಆಶೀರ್ಮಂತ್ರಾಕ್ಷತೆಯೊಂದಿಗೆ ಸಾನಿಧ್ಯವಹಿಸುವುದಾಗಿ ತಿಳಿಸಿದ್ದಿರಿ, ತಮ್ಮ ಕಾರ್ಯಕ್ರಮ ಪಟ್ಟಿಯಲ್ಲೂ ಅದು ನಮೂದಾಗಿತ್ತು. ಆಗೆಲ್ಲ ತಮಗೆ ದನಿ ಎತ್ತುವ ಅನಿರ್ವಾಯತೆ ಇರಲಿಲ್ಲ. ಸಮಾವೇಶಕ್ಕೆ ೨-೩ ದಿನದ ಮುಂಚೆ, ತಮ್ಮ ಶಿಷ್ಯವೃಂದದ ಮೂಲಕ ಪತ್ರಿಕಾ ಪ್ರಕಟಣೆ ಹೊರಡಿಸಿದಿರಿ. ಸಂವರ್ಧಿನಿ ಸಭೆಯ ನಿರ್ಣಯದಲ್ಲಿ ರಾಘವೇಶ್ವರ ಶ್ರೀಗಳ ಹೆಸರು ಇರಲಿಲ್ಲ ಆದರೂ ಆ ನಿರ್ಣಯವನ್ನು ಮಹಾಸಭೆ ಖಂಡಿಸಿದ್ದು(ಫೆಬ್ರವರಿಯಲ್ಲಿ) ತಮಗೆ ಮಾಡಿದ ಅವಮಾನ ಎಂದೂ (ಹೇಳಿದ್ದು ಡಿಸೆಂಬರ್ ಕೊನೆಯ ವಾರ), ಆ ಖಂಡನಾ ನಿರ್ಣಯವನ್ನು ವಾಪಸ್ ಪಡೆಯಬೇಕೆಂದೂ ಅದರಲ್ಲಿ ಉಲ್ಲೇಖಿಸಲಾಗಿತ್ತು. ಹಾಗೆಯೇ ಕಳಂಕಿತ ಪೀಠಾಧಿಪತಿಗಳನ್ನು ಕಾರ್ಯಕ್ರಮದಿಂದ ಹೊರಗಿಟ್ಟರೆ ಮಾತ್ರ ಸ್ವರ್ಣವಲ್ಲಿ ಶ್ರೀಗಳು ಭಾಗವಹಿಸುತ್ತಾರೆ ಎಂದೂ ಶಿಷ್ಯವೃಂದ ಸೂಚಿಸಿತ್ತು. ಭಾಗವಹಿಸುವ ಪೀಠಾಧಿಪತಿಗಳು ಕಳಂಕಿತರು ಅನ್ನುವ ನಿರ್ಧಾರಕ್ಕೆ ಬಂದಿದ್ದಿರಾ? ಇನ್ನೊಮ್ಮೆ ಅದೇ ಪ್ರಶ್ನೆ ಕೇಳಬೇಕು, ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಾವ ಪೀಠಾಧಿಪತಿಗಳು ಕಳಂಕಿತರು ಅಂರ ನೀವು ಹೇಗೆ ನಿರ್ಧಿರಿಸಿದಿರಿ?
ಅದರಲ್ಲಿದ್ದ ಇನ್ನೊಂದು ಅಂಶವೆಂದರೆ, ಮಹಾಸಭೆ ಕ್ಷಮೆ ಕೇಳಿದರೆ ಮಾತ್ರ ಸಮಾವೇಶ ಸುಖಾಂತ್ಯ ಕಾಣಲಿದೆ ಎಂಬ(ಬೆದರಿಕೆ?) ಸಾಲುಗಳು.. ಅರಿಷಡ್‌‍ವರ್ಗಗಳನ್ನು ಮೀರಿದ ಪೀಠಾಧಿಪತಿಗಳಿಗೆ, ಸ್ವಂತವನ್ನು ತ್ಯಜಿಸಿದ‌ ಸಂತರಿಗೆ ಇದೆಲ್ಲ ತರವೆ?

 

ಫೆಬ್ರವರಿಯ ಸಂವರ್ಧಿನಿ ಸಭೆಯ ನಂತರ ಮಹಾಸಭೆಯಿಂದ ಭಿಕ್ಷಾ ಸೇವೆ ಸ್ವೀಕರಿಸಿದ್ದೀರಿ, ಪಾದಪೂಜೆಗಳನ್ನು ಸ್ವೀಕರಿಸಿದ್ದೀರಿ, ಸ್ವರ್ಣವಲ್ಲಿ ಮಠ-ಮಹಾಸಭೆಯ ಆಶ್ರಯದಲ್ಲಿ, ಮಹಾಸಭೆಯ ಜಾಗದಲ್ಲಿ ಕಾರ್ಯಕ್ರಮ ಮಾಡಲಾಗಿದೆ.. ಆಗೆಲ್ಲ ಅವಮಾನ ಆಗಿರಲಿಲ್ಲವೋ ಅಥವಾ ದನಿ ಎತ್ತುವ ಅನಿವಾರ್ಯತೆ ಬಂದಿರಲಿಲ್ಲವೋ?
ಅದ್ಹೇಗೆ ಹವ್ಯಕ ಕಾರ್ಯಕ್ರಮಕ್ಕೆ ಭಾಗವಾಹಿಸಬಾರದು ಎಂಬ ಒತ್ತಡ ಬಂದಾಗ ದನಿ ಎತ್ತುವ ಪರಿಸ್ಥಿತಿ ನಿರ್ಮಾಣವಾಯಿತೇ?

 

ಕೊಟ್ಟ ಗೌರವ ಸಾಕಾಗಲಿಲ್ಲ ಎಂಬ ಅಭಿಪ್ರಾಯ ಬಂದಿದೆಯಂತೆ.. ತಾವು ಹವ್ಯಕ ಕಾರ್ಯಕ್ರಮದಲ್ಲಿ ತಾವೇ ಒಪ್ಪಿಕೊಂಡಂತೆ ಭಾಗವಹಿಸಿಬಿಟ್ಟಿದ್ದರೆ‌, ಸಮಾಜಕ್ಕೆ ಆದರ್ಶವಾಗಿದ್ದಿದ್ದರೆ ಬಹುಶಃ ರಾಮಚಂದ್ರಾಪುರ ಮಠದ ಶಿಷ್ಯರೆಲ್ಲರೂ ತಮ್ಮನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರೇನೋ.. ಒಟ್ಟುಗೂಡಿಸುವುದು ಹಿರಿತನವೇ ಹೊರತು ಒಡಕು ಮೂಡಿಸುವುದಲ್ಲ. ನಮ್ಮದೇ ಸಮಾಜದ ಕಾರ್ಯಕ್ರಮಕ್ಕೆ ಯಾರಯಾರದೋ ಮಾತು ಕೇಳಿ ಅನುಪಸ್ಥಿತಿ ಅನುಗ್ರಹಿಸಿದಿರಲ್ಲ ನೀವು.. ಬಂದಿದ್ದರೆ ಅವಮಾನ ಆಗುತ್ತಿತ್ತು ಹಾಗಾಗಿ ಬರಲಿಲ್ಲ ಎನ್ನುವುದು ಕೈಗೆಟುಕದ ದ್ರಾಕ್ಷಿ ಹುಳಿ ಎಂದಂತಾಯಿತಲ್ಲವೆ..

 

ಇಷ್ಟು ಸಾಲದು ಎಂಬಂತೆ.. ಶಂಕರನಮನ ಕಾರ್ಯಕ್ರಮ..! ಆದಿಶಂಕರರ ಹೆಸರಿನಲ್ಲಿ ಶಂಕರರ ಅವಹೇಳನ, ಅವಮಾನ ನಡೆದಿದೆ ಅಲ್ಲಿ.. ಪೀಠವನ್ನು ಏರುವವರು ಸಾಕ್ಷಾತ್ ಶಂಕರರೇ ಆಗುತ್ತಾರೆ ಎಂಬ ಆದಿಶಂಕರರ ಉಕ್ತಿಯೇ ಇದೆ. ಒಬ್ಬ ಶಂಕರಪೀಠಾದಿಪತಿ ಇನ್ನೊಂದು ಶಂಕರಪೀಠಾಧಿಪತಿಯ ಬಗ್ಗೆ ಈ ರೀತಿಯ ಮಾತುಗಳನ್ನಾಡುವುದೇ? ಹಾ, ಶಂಕರಾ.. ನೀನೇ ಕಾಪಾಡು.

 

ಅದರಲ್ಲಿ ಉಪಸ್ಥಿತರಿದ್ದದ್ದು ಯಾರೆಲ್ಲ?
ಯಾರೆಲ್ಲ ರಾಮಚಂದ್ರಾಪುರ ಮಠದ ವಿರುದ್ಧದ ಷಡ್ಯಂತ್ರದಲ್ಲಿ ಕೈಜೋಡಿಸಿದ್ದಾರೆಂದು ಜಗಜ್ಜಾಹಿರಾಗಿದೆಯೋ ಅವರನ್ನೇಲ್ಲ ಒಂದೆಡೆ ಸೇರಿಸಲಾಗಿದೆ. ಈ ಕಾರ್ಯಕ್ರಮದ ಅಜೆಂಡಾ ಏನಿರಬಹುದೆಂದು ಯಾರಾದರೂ ಊಹಿಸಬಹುದಾಗಿತ್ತು. ಎಲ್ಲರ ಊಹೆಯಂತಲೇ ಕಾರ್ಯಕ್ರಮ ನಡೆದಿದೆ. ‌ಬುಡದಿಂದ ತುದಿಯವರೆಗೂ ಒಬ್ಬರಾದ ಮೇಲೆ ಒಬ್ಬರು ರಾಘವೇಶ್ವರ ಶ್ರೀಗಳ (ಹೆಸರು ಹೇಳುವ ನೈತಿಕತೆ ಇಲ್ಲದಿದ್ದರೂ) ಕುರಿತು ಇಲ್ಲಸಲ್ಲದ ಚಾರಿತ್ರ್ಯಹಾನಿಯ ಮಾತುಗಳು. ಇಡಿಯ ಸಮಷ್ಟಿ ಸಮಾಜದೆದುರು ಹವ್ಯಕ ಸಮಾಜವನ್ನು ಎಷ್ಟು ಕೆಳಮಟ್ಟಕ್ಕೆ ತರಲಾಯಿತು. ಉಳಿದ ಸಮಾಜದವರು ಆಡಿಕೊಂಡು ನಗುವಂತಾಯಿತಲ್ಲವೆ.. ಸ್ವರ್ಣವಲ್ಲಿ ಮಠದವರ ಅವಸ್ಥೆ‌ ಕಂಡು..

 

ನಿಮ್ಮ ಈ ಶಂಕರನಮನ ಕಾರ್ಯಕ್ರಮದಿಂದ ಯಾರೊಬ್ಬರೊಳಗಿನ ರಾಘವೇಶ್ವರ ಶ್ರೀಗಳೆಡೆಗಿನ ಭಕ್ತಿಯನ್ನು ಕಿಂಚಿತ್ತೂ ಕಡಿಮೆ ಮಾಡಲಾಗಲಿಲ್ಲ. ಬದಲಿಗೆ ನಮ್ಮ ಸಂಘಟನಾ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿತು. ಅದರ ಅರಿವು ತಮಗೆ ಈಗಾಗಲೇ ಆಗಿರಬೇಕು. ಮರ ಕಡಿಯುವವ ತಾನು ಕುಳಿತ ಕೊಂಬೆಯನ್ನೇ ಕಡಿದುಕೊಂಡಿದ್ದು ನೋಡಿ ಸಮಾಜ ನಕ್ಕಿತು. ಇದರ ಅರಿವು ಕೆಲದಿನಗಳಲ್ಲಿ ಆಗಬಹುದು‌‌. ಜನನ

Author Details


Srimukha

Leave a Reply

Your email address will not be published. Required fields are marked *