ರಾಮನ ಹಾದಿಯಲ್ಲಿ ಮುನ್ನಡೆಯೋಣ : ರಾಘವೇಶ್ವರ ಶ್ರೀ ಕರೆ

ಮಂಗಳೂರು: ಮಠವನ್ನು ಕಟ್ಟಿ ರಾಮನಿಗೆ ಕಾಣಿಕೆಯಾಗಿ ಸಮರ್ಪಿಸುವ ಪವಿತ್ರ ಸಂದರ್ಭದಲ್ಲಿ ರಾಮ ನಡೆದ ಹಾದಿಯಲ್ಲಿ ಮುನ್ನಡೆಯುವ ಪಣ ತೊಡಿ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.ಮಾಣಿ ಮಠದ ಸಪರಿವಾರ ಶ್ರೀರಾಮಚಂದ್ರದೇವರ ಶಿಲಾಮಯ ಗರ್ಭಗುಡಿ ನಿರ್ಮಾಣದ ಕಾಮಗಾರಿ ವೀಕ್ಷಿಸಿ, ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಶಿಷ್ಯರ ಮಾರ್ಗದರ್ಶನ ಸಭೆಯಲ್ಲಿ ಪರಮಪೂಜ್ಯರು ಆಶೀರ್ವಚನ ನೀಡಿದರು.ನಮ್ಮತನ ಉಳಿಸೋಣ. ನಮ್ಮ ಆಚರಣೆ ಸಂಪ್ರದಾಯ, ಸಂಸ್ಕøತಿ, ಭಾಷೆ, ನಾಡು ನುಡಿ ಉಳಿಸಲು ನಮ್ಮಿಂದಾದ ಕೊಡುಗೆ ನೀಡೋಣ. […]

Continue Reading

” ಶ್ರೀಗುರುಕೃಪಾ ದೃಷ್ಟಿಯಿಂದ ಪುನೀತರಾದವರು ನಾವು ” : ಪೂರ್ಣಿಮಾ ಉಂಡಿಲ”

ಈ ಜಗತ್ತಿನ ಒಳಿತಿಗಾಗಿ ಗೋಮಾತೆಯ ಸಂರಕ್ಷಣೆಯ ಹಾದಿಯನ್ನು ತೋರಿದ ಶ್ರೀಗುರುಗಳ ಕೃಪಾದೃಷ್ಟಿಯಿಂದಲೇ ನಮ್ಮ ಬದುಕು ಪಾವನವಾಗಿದೆ . ಸುಸಂಸ್ಕೃತ ಸಮಾಜದ ನಿರ್ಮಾಣಕ್ಕಾಗಿಯೇ ಶ್ರೀಸಂಸ್ಥಾನದವರು ಅನೇಕ ಅನುಷ್ಠಾನಗಳ, ಯೋಜನೆಗಳ ಅವಕಾಶಗಳನ್ನು ನಮಗೆ ಒದಗಿಸಿದ್ದಾರೆ . ಎಲ್ಲರಿಗೂ ಸುಲಭವಾಗಿ ಸರಳವಾಗಿ ಶ್ರೀಮಠದ ಸೇವೆ ಮಾಡುವ ಭಾಗ್ಯವನ್ನೂ ಕರುಣಿಸಿರುವ ಶ್ರೀಗುರುಗಳ ಕೃಪೆ ಎಂದರೆ ಅದು ಸಾಗರದಂತೆ ಅನಂತ. ಬದುಕಿನ ದುರಿತ ಪರ್ವತಗಳನ್ನು ದೂರ ಮಾಡಲು ಗುರುಕೃಪೆಗೆ ಮಾತ್ರ ಸಾಧ್ಯ ” ಎಂದವರು ಉಪ್ಪಿನಂಗಡಿ ಮಂಡಲ ಪಂಜ ವಲಯದ ಗೋಪಾಲಕೃಷ್ಣ ಭಟ್ ಉಂಡಿಲ […]

Continue Reading

” ಬದುಕಿನ ಶ್ರೇಷ್ಠತೆ ಗೋಸೇವೆಯಲ್ಲಿದೆ ಎಂದು ತಿಳಿದಿದ್ದು ಶ್ರೀಗುರುಗಳ ಮೂಲಕ ” : ಸುಮನಾ ಗಣೇಶ ಹೆಗಡೆ ಕೆಕ್ಕಾರು

  ” ಶ್ರೀಮಠದ ಸಂಪರ್ಕಕ್ಕೆ ಬಂದ ಆರಂಭದಲ್ಲಿ ಮಠಕ್ಕೆ ಹೋದಾಗಲೆಲ್ಲ ತುಳಸೀಹಾರ ಕಟ್ಟುತ್ತಿದ್ದೆ. ನಂತರ ಇತರ ಕಾರ್ಯಗಳಲ್ಲಿ ಕೈಜೋಡಿಸತೊಡಗಿದೆ. ಶ್ರೀಗುರು ಸೇವೆಯಲ್ಲಿ ನಿರತವಾದಾಗ ದೊರಕುವ ಆತ್ಮತೃಪ್ತಿಯ ಆನಂದವನ್ನು ಅರಿತ ಮೇಲೆ ಮನಸ್ಸು ಸದಾ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಹಾತೊರೆಯತೊಡಗಿತು. ಶ್ರೀಗುರುಗಳ ಪ್ರವಚನಗಳನ್ನು ಸದಾ ಕೇಳುವುದರಿಂದ ಗೋಮಾತೆಯ ಶ್ರೇಷ್ಠತೆ ಅರ್ಥವಾಗಿದೆ. ಮನೆಯಲ್ಲಿಯೂ ಭಾರತೀಯ ಗೋತಳಿಗಳನ್ನೇ ಸಾಕುತ್ತಿದ್ದೇವೆ ” ಎಂದವರು ಕುಮಟಾ ಮಂಡಲ ಕೆಕ್ಕಾರು ವಲಯದ ಗಣೇಶ ಹೆಗಡೆಯವರ ಪತ್ನಿ ಸುಮನಾ ಹೆಗಡೆ.   ಮುಗುವ ಚೀನ್ ಕೋಡು ಪರಮೇಶ್ವರ […]

Continue Reading

ಸಮಾಜಕ್ಕೆ ಅಮೃತ ನೀಡುವ ಪಣ ತೊಡಿ: ಕಾರ್ಯಕರ್ತರಿಗೆ ರಾಘವೇಶ್ವರ ಶ್ರೀ ಸಲಹೆ

  ಗೋಕರ್ಣ: ಶ್ರೀಮಠದ ಸಮಸ್ತ ಪರಿವಾರ ಜೇನು ಗೂಡಿನಂತೆ. ಶ್ರೀಪೀಠ ರಾಣಿ ಹುಳದಂತೆ. ನಾವೆಲ್ಲ ಸೇರಿ ಜೇನು ಮಾತ್ರವಲ್ಲ; ಇಡೀ ಸಮಾಜಕ್ಕೆ ಅಮೃತವನ್ನೇ ಉಣಬಡಿಸೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ನುಡಿದರು. ಅಶೋಕೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಭಾನುವಾರ ಸಂಪನ್ನಗೊಂಡ ಗುರುಕುಲ ಚಾತುರ್ಮಾಸ್ಯದ ಕಾರ್ಯಕರ್ತರ ಸಮ್ಮಿಲನದಲ್ಲಿ ಪರಮಪೂಜ್ಯರು ಆಶೀರ್ವಚನ ನೀಡಿದರು. ಕಾರ್ಯಕರ್ತರಲ್ಲಿ ಮಹಾಕಾಳಿಯ ಕೃಪೆ ಹಾಗೂ ಶಕ್ತಿಯ ಸಂಚಯನವಾಗಲಿ. ದೊಡ್ಡ ಸೇವೆಗೆ ಆಂಜನೇಯನ ಶಕ್ತಿ ಹಾಗೂ ವಿನಮ್ರತೆ ಎಲ್ಲ ಕಾರ್ಯಕರ್ತರಲ್ಲಿ ಬರಲಿ ಎಂದು ಆಶಿಸಿದರು. […]

Continue Reading

” ಶ್ರೀಗುರುಗಳು ತೋರಿದ ಸ್ವಾವಲಂಬನೆಯ ಹಾದಿಯಲ್ಲಿ ಮುನ್ನಡೆದೆ ” : ಸವಿತಾ ಎಸ್. ಭಟ್ ಅಡ್ವಾಯಿ

  ” ಮಾತೆಯರ ಸ್ವಾವಲಂಬಿ ಬದುಕಿಗಾಗಿ ಶ್ರೀಗುರುಗಳು ತೋರಿದ ಹಾದಿಯಲ್ಲಿ ಮುನ್ನಡೆದವಳು ನಾನು. ಮುಳ್ಳೇರಿಯ ಮಂಡಲದ ಬದಿಯಡ್ಕದಲ್ಲಿರುವ ‘ ಮಹಿಳೋದಯ ‘ ಸಂಸ್ಥೆಯಂತೆ ನಮ್ಮ ಮಂಗಳೂರು ಮಂಡಲದಲ್ಲೂ ಒಂದು ಸಂಸ್ಥೆಯನ್ನು ಸ್ಥಾಪಿಸಬೇಕೆಂಬ ಅಭಿಲಾಷೆಯಿದ್ದರೂ ಅನೇಕ ಕಾರಣಗಳಿಂದಾಗಿ ಆ ಯೋಜನೆ ಫಲಿಸಲಿಲ್ಲ. ಆದರೆ ನಾನು ಮಾತ್ರ ಉಪ್ಪಿನಕಾಯಿ, ಸೆಂಡಿಗೆ, ಹಪ್ಪಳಗಳನ್ನು ತಯಾರಿಸಿ ಮಾರಾಟ ಮಾಡಿ ಶ್ರೀಗಳು ತೋರಿದ ಆದರ್ಶದ ಪಥದಲ್ಲಿ ಮುನ್ನಡೆಯುತ್ತಿದ್ದೇನೆ. ಇದು ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ ” ಎಂದವರು ಮಂಗಳೂರು ಮಂಡಲ ಕನ್ಯಾನ ವಲಯದ ಅಡ್ವಾಯಿ ಸುಬ್ಬಣ್ಣ […]

Continue Reading

ಪ್ರತಿಯೊಂದು ಗೋವಿನಲ್ಲೂ ಪುಣ್ಯಕೋಟಿಯ ಸಾನ್ನಿಧ್ಯವಿದೆ : ಸುಭದ್ರಾ ವೆಂಕಟಸುಬ್ಬ ಹೆಗಡೆ, ಬಿಜ್ಜಾಳ

  ” ತನ್ನ ಜೀವನದುದ್ದಕ್ಕೂ ಪರೋಪಕಾರಿಯಾಗಿ ನಮ್ಮ ಬದುಕಿಗೆ ಆಧಾರವಾಗಿರುವ ಪ್ರತಿಯೊಂದು ಗೋವೂ ಪುಣ್ಯಕೋಟಿಯ ಪ್ರತಿನಿಧಿ ಎಂದೇ ನನ್ನ ಭಾವನೆ. ಅಳಿವಿನಂಚಿನಲ್ಲಿರುವ ದೇಶೀಯ ತಳಿಯ ಹಸುಗಳ ಉಳಿವಿನ ಅವಶ್ಯಕತೆಯನ್ನು ಸಮಾಜಕ್ಕೆ ಮನದಟ್ಟು ಮಾಡಿಸಲು ನಮ್ಮ ಗುರುಗಳು ಕೈಗೊಂಡ ಯೋಜನೆಗಳಲ್ಲಿ ಭಾಗಿಯಾಗುವ ಅವಕಾಶ ದೊರಕಿದ್ದು ನನ್ನ ಸುಕೃತ . ಗೋಮಾತೆಯ ಒಡನಾಟದಲ್ಲಿರುವವರಿಗೆ ಮಾತ್ರ ಗೋಸೇವೆಯಿಂದ ದೊರಕುವ ನೆಮ್ಮದಿಯನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯ” ಎಂದವರು ಸಿದ್ಧಾಪುರ ಮಂಡಲ ಇಟಗಿ ವಲಯದ ಬಿಜ್ಜಾಳ ವೆಂಕಟಸುಬ್ಬ ಹೆಗಡೆಯವರ ಪತ್ನಿ ಸುಭದ್ರಾ.   ಶಿರಸಿ […]

Continue Reading

” ಗೋಮಾತೆ ನಮ್ಮ ಬದುಕಿಗೆ ಹತ್ತಿರವಾಗಬೇಕು ” : ವೀಣಾ ನಾರಾಯಣ ಭಟ್ ಹೊಸಮನೆ

    ” ನಮ್ಮ ದೇಶದ ಸಂಸ್ಕೃತಿಯ ಭಾಗ ಗೋಮಾತೆ. ಗೋ ಉತ್ಪನ್ನಗಳ ನಿತ್ಯ ಬಳಕೆಯಿಂದ ಮೈ ಮನಸ್ಸು ಉಲ್ಲಸಿತವಾಗುತ್ತದೆ. ಆಧುನಿಕ ಜೀವನದ ಜಂಜಾಟದ ನಡುವೆ ಗೋಸಾಕಣಿಗೆ ಎಲ್ಲರಿಂದಲೂ ಸಾಧ್ಯವಿಲ್ಲ. ಆದರೆ ಅಮೃತ ನೀಡುವ ಗೋಮಾತೆಯನ್ನು ಸಂರಕ್ಷಿಸುವ ಯೋಜನೆಯಾದ ಮಾತೃತ್ವಮ್ ನಿಂದಾಗಿ ಅನೇಕ ಮಂದಿಗೆ ಗೋಸೇವೆಯ ಸೌಭಾಗ್ಯ ಒದಗಿಬಂದಿದೆ. ಗೋಮಾತೆ ಮತ್ತೆ ನಮ್ಮೆಲ್ಲರ ಬದುಕಿಗೆ ಹತ್ತಿರವಾಗಿದ್ದಾಳೆ. ಶ್ರೀಗುರುಗಳ ಈ ಒಂದು ಯೋಜನೆ ಗೋಜಾಗೃತಿಯಲ್ಲಿ ಹೊಸಪಥವನ್ನು ಸೃಷ್ಟಿಸುತ್ತಿದೆ ” ಎಂದವರು ಮಂಗಳೂರು ಮಂಡಲ ಬಾಯಾರು ವಲಯದ ಮೂಲತಃ ಪೈವಳಿಕೆ […]

Continue Reading

” ಗೋ ಸಂರಕ್ಷಣೆ ಮನುಕುಲದ ಅಸ್ತಿತ್ವಕ್ಕೆ ಅನಿವಾರ್ಯ ” : ಡಾ. ಚಿತ್ರಾ ಎ ಉಡುಪಿ

  ” ಗೋವು ನಮ್ಮ ಬದುಕಿಗೆ ಅನಿವಾರ್ಯ. ಗೋ ಉತ್ಪನ್ನಗಳ ನಿತ್ಯ ಬಳಕೆಯಿಂದ ಆರೋಗ್ಯ ವೃದ್ಧಿಸುತ್ತದೆ. ಗೋ ಶಕ್ತಿಗೆ ಅವಲಂಬಿತರಾಗಿ ಗೋ ಆಧಾರಿತ ಆರ್ಥಿಕತೆಯು ನವೀಕರಣದಿಂದ ಸುಭದ್ರ ಸಮಾಜ ನಿರ್ಮಾಣ ಸಾಧ್ಯವಿದೆ ” ಎಂಬ ಮಾತುಗಳು ಮಂಗಳೂರು ಮಂಡಲ ಉಡುಪಿ ವಲಯದ ಹಿಳ್ಳೆಮನೆ ಮೂಲದ ಬೊಟ್ರಂಪಾಡಿ ನಿವಾಸಿಗಳಾಗಿರುವ ಡಾ. ವೆಂಕಟಾಚಲಂ ಅವರ ಪತ್ನಿ ಡಾ. ಚಿತ್ರಾ ಅರಮನಡ್ಕ ಅವರದ್ದು.   ಮಣಿಪಾಲ ಡೆಂಟಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಚಿತ್ರಾ ಅರಮನಡ್ಕದ ಮಹಾಲಿಂಗ ಭಟ್, ಚಂದ್ರಕಲಾ ದಂಪತಿಗಳ ಪುತ್ರಿ. […]

Continue Reading

” ಸ್ವಯಂವರ ” ಕಾದಂಬರಿ ಲೋಕಾರ್ಪಣೆ

  ಗೋಕರ್ಣ : ಗೋಕರ್ಣದ ಅಶೋಕೆಯಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಕರಕಮಲಗಳಿಂದ ಕಾಸರಗೋಡಿನ ಶ್ರೀಮುಖ ಮಾತೃತ್ವಮ್ ಲೇಖಕಿ‌ ಪ್ರಸನ್ನಾ ವಿ ಚೆಕ್ಕೆಮನೆ ಅವರ ಹವ್ಯಕ ಕಾದಂಬರಿ ” ಸ್ವಯಂವರ ” ಅಕ್ಟೋಬರ್ 1 ರಂದು ಲೋಕಾರ್ಪಣೆಗೊಂಡಿತು.   ನವರಾತ್ರಿಯ ಆರನೇ ದಿನ ಬಿಡುಗಡೆಯಾದ ಈ ಕೃತಿಯು ಲೇಖಕಿಯ ಆರನೆಯ ಕೃತಿಯಾಗಿದೆ. ಚಿಕ್ಕಮಗಳೂರಿನ ಅಪರಂಜಿ ಪ್ರಕಾಶನದ ಮೂಲಕ ಪ್ರಕಟವಾದ ಈ ಕಾದಂಬರಿಗೆ ಒಪ್ಪಣ್ಣ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಮಹೇಶ್ ಎಳ್ಯಡ್ಕ ಮುನ್ನುಡಿ ಬರೆದಿದ್ದಾರೆ.

Continue Reading

” ಅಲ್ಪದಿಂದ ಅನಂತವಾದುದನ್ನು ಪಡೆದಿದ್ದು ಶ್ರೀಗುರು ಸೇವೆಯಿಂದ ” : ಮಹಾಲಕ್ಷ್ಮಿ ಎಂ. ಭಟ್ ಮಿತ್ತೂರು

  ” ಶ್ರೀಗುರುಗಳಿಗೆ, ದೇವರಿಗೆ ನಾವು ಏನು ನೀಡುತ್ತೇವೆಯೋ ಅದರ ಜೊತೆ ಭಕ್ತಿಭಾವವನ್ನು ಸೇರಿಸಿ ಸಮರ್ಪಿಸಿದರೆ ಅಲ್ಪವೂ ಮಹತ್ತಾಗುತ್ತದೆ. ಅಲ್ಪದಿಂದ ಅನಂತವಾದುದನ್ನು ಪಡೆಯಲು ಅಂತರಂಗದಲ್ಲಿ ಭಕ್ತಿ ಭಾವ ತುಂಬಿರಬೇಕು ‘ ಎಂಬುದು ಶ್ರೀಗುರುಗಳ ವಚನ. ಇದೇ ಮಾತುಗಳು ನನ್ನ ಗೋಸೇವೆಗೆ, ಶ್ರೀಮಠದ ಸೇವೆಗೆ ಪ್ರೇರಣೆ, ಶ್ರೀಗುರುಗಳ ಆಶೀರ್ವಚನದ ನುಡಿಗಳನ್ನು ಸಾಧ್ಯವಿದ್ದಷ್ಟು ಚೆನ್ನಾಗಿ ಪರಿಪಾಲಿಸುವುದರಿಂದಲೇ ನಮ್ಮ ಬದುಕಿನಲ್ಲಿ ನೆಮ್ಮದಿ, ಶಾಂತಿ ನೆಲೆಸಿದೆ. ಬದುಕಿನ ಯಾವುದೇ ಕಷ್ಟಸುಖಗಳಲ್ಲೂ ನಾವು ಆಶ್ರಯಿಸುವುದು ಶ್ರೀಗುರು ಚರಣಗಳನ್ನು. ಇದರಿಂದ ನಮ್ಮ ಜೀವನದಲ್ಲಿ ಒಳಿತಾಗಿದೆ ” […]

Continue Reading

” ಶ್ರೀಮಠದ ಸೇವೆ ಉಸಿರಿನಷ್ಟೇ ಸಹಜವಾಗಿದೆ ” : ಸುನಂದಾ ಉದಯಶಂಕರ ಹೆಗಡೆ

  ” ನಮ್ಮ ಸಮಾಜದ ಒಳಿತಿಗಾಗಿ, ಸಂಸ್ಕೃತಿಯ ಏಳಿಗೆಗಾಗಿ ಶ್ರೀಗುರುಗಳು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ನಮ್ಮ ಧರ್ಮ, ಸಂಸ್ಕೃತಿ ಮುಂದಿನ ಪೀಳಿಗೆಯ ಮೂಲಕ ಮತ್ತಷ್ಟು ಬೆಳಗುವಂತಾಗಲು ವಿ ವಿ ವಿ ಯಂತಹ ವಿದ್ಯಾಪೀಠದ ಪರಿಕಲ್ಪನೆ ನಮಗೆ ಅಭಿಮಾನವೆನಿಸುತ್ತಿದೆ. ಶ್ರೀಗುರುಗಳು ಯಾವೆಲ್ಲ ಯೋಜನೆಗಳನ್ನು ಎಲ್ಲೆಲ್ಲಿ ಹಮ್ಮಿಕೊಳ್ಳುತ್ತಾರೋ ಆ ಎಲ್ಲಾ ಕಡೆಗಳಿಗೂ ಯಥಾನುಶಕ್ತಿಯಾಗಿ ಸಹಕಾರ ನೀಡುತ್ತಿರುವ ನನಗೆ ಶ್ರೀಮಠದ ಸೇವೆ ಉಸಿರಿನಷ್ಟೇ ಸಹಜವಾಗಿದೆ ” ಎಂದವರು ಕುಮಟಾ ಮಂಡಲ ಹೆಗಡೆ ವಲಯದ ಸುನಂದಾ ಉದಯಶಂಕರ.   ಕುಮಟಾದ ಮೂರೂರಿನ ವೆಂಕಟರಮಣ […]

Continue Reading

” ಶ್ರೀಗುರು ಸ್ಮರಣೆಯಿಂದ ಇಷ್ಟಾರ್ಥ ಸಿದ್ಧಿ ” : ಶಶಿಪ್ರಭಾ ಮುರುಗಜೆ

” ವಿಧಿ ವೈಪರೀತ್ಯಗಳು ನಮ್ಮ ಜೀವನದಲ್ಲಿ ಏರಿಳಿತಗಳನ್ನು ಸೃಷ್ಟಿಸುವಾಗಲೂ ಶ್ರೀಗುರುಗಳ ಮೇಲಿನ ಅಚಲ ಶ್ರದ್ಧಾಭಕ್ತಿಗಳು ನಮ್ಮನ್ನು ಬೆಂಬಿಡದೆ ಕಾಪಾಡುತ್ತವೆ. ಕಷ್ಟ ಪರಂಪರೆಗಳು ಮಂಜಿನಂತೆ ಕರಗಿಹೋಗಿ ಮನದ ಇಷ್ಟಾರ್ಥಗಳು ಈಡೇರುತ್ತವೆ ” ಶ್ರೀಗುರುಪೀಠದ ಮೇಲಿನ ಅಚಲ ನಂಬಿಕೆಯ ಈ ನುಡಿಗಳು ಉಪ್ಪಿನಂಗಡಿ ಮಂಡಲ ವೇಣೂರು ವಲಯದ ಅರ್ಕಳದ ಚಂದ್ರಶೇಖರ ಮುರುಗಜೆಯವರ ಪತ್ನಿ ಶಶಿಪ್ರಭಾ ಅವರದ್ದು. ಪಾಲಾರು ರಾಮ ಭಟ್, ಸವಿತಾ ದಂಪತಿಗಳ ಪುತ್ರಿಯಾದ ಇವರು ಒಂದು ವರ್ಷದ ಗುರಿ ತಲುಪಿದ ಮಾಸದಮಾತೆಯಾಗಿದ್ದಾರೆ. ” ಗುರುಸೇವೆಯಲ್ಲಿ ,ಗೋಸೇವೆಯಲ್ಲಿ ತೊಡಗಿಸಿಕೊಂಡಾಗ ಮನಸ್ಸು […]

Continue Reading

ಅಶೋಕೆಯಲ್ಲಿ ಗುರುಕುಲ ಚಾತುರ್ಮಾಸ್ಯ ಸಂಪನ್ನ ವಿಷ್ಣುಗುಪ್ತ ವಿವಿಯಲ್ಲಿ ಅಹಿಚ್ಛತ್ರ ಕ್ಯಾಂಪಸ್ ಶೀಘ್ರ: ರಾಘವೇಶ್ವರ ಶ್ರೀ

ಗೋಕರ್ಣ: ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಅಹಿಚ್ಛತ್ರ ಕ್ಯಾಂಪಸ್ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಲಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀಸ್ವಾಮೀಜಿ ಪ್ರಕಟಿಸಿದರು. ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಆವರಣದಲ್ಲಿ ನಡೆದ ಗುರುಕುಲ ಚಾತುರ್ಮಾಸ್ಯ ಸೀಮೋಲ್ಲಂಘನ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ನಮ್ಮ ಸಮಾಜದ ನಡೆ- ನುಡಿ, ಆಹಾರ- ವಿಹಾರ, ಸಂಸ್ಕøತಿ- ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಈ ವಿಶಿಷ್ಟ ಕ್ಯಾಂಪಸ್ ಇಡೀ ದೇಶಕ್ಕೆ ಆದರ್ಶವಾಗಲಿದೆ. ಈ ಅಹಿಚ್ಛತ್ರ ಮುಂದೊಂದು ದಿನ ವಿಶ್ವದ ಬೆಳಕಾಗಲಿದೆ ಎಂದು ನುಡಿದರು. […]

Continue Reading

” ಈ ಪ್ರಾಣ ಗೋಸೇವೆಗೆ ಶ್ರೀಮಠದ ಸೇವೆಗೆ ಮುಡಿಪು ” : ಲಲಿತಾ ಗಜಾನನ ಹೆಗಡೆ , ಕರ್ಕಿಮನೆ

  ” ಗೋವಿನ ಹಾಲನ್ನು ಜಾತಿಮತ ಭೇದವಿಲ್ಲದೆ ಎಲ್ಲರೂ ಉಪಯೋಗಿಸುತ್ತಾರೆ. ಅದೇ ರೀತಿಯಲ್ಲಿ ದೇಶೀಯ ಗೋತಳಿಗಳ ಸಂರಕ್ಷಣೆಗೂ ಎಲ್ಲರೂ ಕಟಿಬದ್ಧರಾಗಬೇಕು. ಮುಕ್ಕೋಟಿ ದೇವರುಗಳ ಆವಾಸಸ್ಥಾನವಾದ ಗೋಮಾತೆಯ ಸೇವೆಗೆ ಕೋಟಿ ಕೋಟಿ ಸಂಖ್ಯೆಯಲ್ಲಿ ಜನರು ಕೈಜೋಡಿಸುವಂತಾಗಬೇಕು ಎಂಬುದೇ ನನ್ನ‌ ಅಭಿಲಾಷೆ. ಇದಕ್ಕಾಗಿ ಸಮಾಜದ ಪ್ರತಿಯೊಂದು ವಿಭಾಗದ ಜನರನ್ನೂ ಸಂಪರ್ಕಿಸಿ ಗೋಮಾತೆಯ ಮಹತ್ವದ ಅರಿವು ಮೂಡಿಸುತ್ತಿದ್ದೇನೆ. ಶ್ರೀಮಠದ ಸೇವೆ, ಗೋಮಾತೆಯ ಸೇವೆಗೆ ಈ ಪ್ರಾಣವೇ ಮುಡಿಪು ” ಎಂದವರು ಹೊನ್ನಾವರ ಮಂಡಲ ಕರ್ಕಿ ವಲಯದ ಜಿ.ಎಂ.ಹೆಗಡೆಯವರ ಪತ್ನಿ ಲಲಿತಾ ಜಿ. […]

Continue Reading

” ಶ್ರೀಗುರು ಸಾನ್ನಿಧ್ಯದಲ್ಲಿ ಬದುಕಿನ ಸಂಕಷ್ಟಗಳು ನಿವೃತ್ತಿ ” : ಸರಸ್ವತಿ ಎನ್. ಹೆಗಡೆ ಅಂಬಾಗಿರಿ

  ” ಮಾನವ ಜೀವನದಲ್ಲಿ ಸುಖ ದುಃಖಗಳು ಒಂದೇ ನಾಣ್ಯದ ಎರಡು ಮುಖಗಳಂತೆ. ಪ್ರತಿಯೊಬ್ಬರೂ ಜೀವನ ಪಥದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.‌ ಆದರೆ ಯಾರು ಸಮರ್ಪಣಾ ಭಾವದಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೋ ಅಂತಹ ಮಂದಿಗೆ ಶ್ರೀ ಗುರುಕಾರುಣ್ಯದಿಂದ ಪಾಪರಾಶಿಯೆಲ್ಲ ಕಳೆದುಹೋಗಿ ಬದುಕಿನ ಹಾದಿ ಸುಗಮವಾಗುತ್ತದೆ ” ಇದು ಸಿದ್ದಾಪುರ ಮಂಡಲ ,ಅಂಬಾಗಿರಿ ವಲಯದ ಪ್ರಸ್ತುತ ಬಾಗಲಕೋಟೆ ನಿವಾಸಿಗಳಾಗಿರುವ ನಾರಾಯಣ ಕಾಶಿ ಹೆಗಡೆಯವರ ಪತ್ನಿ ಸರಸ್ವತಿ ಎನ್. ಹೆಗಡೆ ಅವರ ಮಾತುಗಳು. ಚಂದಾವರ ಸೀಮೆಯ ಕುಮಟಾದ ನವಿಲುಗೋಣದ ಚನ್ನಯ್ಯ […]

Continue Reading

ಮೋಹದ ಕ್ಷಯ ಮೋಕ್ಷಕ್ಕೆ ಕಾರಣ: ರಾಘವೇಶ್ವರ ಶ್ರೀ

  ಗೋಕರ್ಣ: ಮೋಹದ ಕ್ಷಯವೇ ಮೋಕ್ಷಕ್ಕೆ ಕಾರಣ. ಮೋಕ್ಷ ಬೇಕಾದರೆ ಮೋಹ ಕ್ಷಯವಾಗಬೇಕು. ದಾನ ಮಾಡುವಾಗ ಆ ದ್ರವ್ಯದ ಮೇಲಿನ ಮೋಹ ಕಳೆದುಕೊಂಡು ಸತ್ಕಾರ್ಯಕ್ಕೆ ಅರ್ಪಿಸುವುದು ಸರ್ವಶ್ರೇಷ್ಠ ದಾನ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು. ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಸೋಮವಾರ ನಡೆದ ಹತ್ತನೇ ದಾನ ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ದಾನ ಮಾಡುವಾಗ ಆ ದ್ರವ್ಯದ ಮೇಲಿನ ಮೋಹ ಕಳೆದುಕೊಂಡು ಸತ್ಕಾರ್ಯಕ್ಕೆ […]

Continue Reading

ತಪ್ಪು ಮಾಡದಿರುವುದು ಧೈರ್ಯದ ಮೂಲ: ರಾಘವೇಶ್ವರ ಶ್ರೀ

ಗೋಕರ್ಣ: ಆಧ್ಯಾತ್ಮಿಕ ಜೀವನ ಹಾಗೂ ಸಾಮಾನ್ಯ ಜೀವನಕ್ಕೆ ಧೈರ್ಯ ಅಥವಾ ಸ್ಥಿರಚಿತ್ತ ಅಗತ್ಯ. ತಪ್ಪು ಮಾಡದಿರುವುದು ಧೈರ್ಯದ ಮೂಲ. ತಪ್ಪು ಮಾಡುವವ ಸಹಜವಾಗಿಯೇ ಭಯಕ್ಕೆ ಶರಣಾಗುತ್ತಾನೆ. ತಪ್ಪು ಮಾಡದಿದ್ದರೆ ನಿಶ್ಚಿಂತೆಯಿಂದ, ಧೈರ್ಯದಿಂದ ಇರುತ್ತಾನೆ. ತಪ್ಪು ಮಾಡದಿರುವುದನ್ನು ರೂಢಿಸಿಕೊಂಡಲ್ಲಿ ಸಹಜವಾಗಿಯೇ ನಿಜವಾದ ಧೈರ್ಯ ನಮಗೆ ಬರುತ್ತದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಸಲಹೆ ಮಾಡಿದರು. ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಭಾನುವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ […]

Continue Reading

” ಗವ್ಯ ವಸ್ತುಗಳ ಬಳಕೆಯಿಂದ ಗೋ ವಂಶ ಸಮೃದ್ಧಿ ” : ಕಮಲಾಕ್ಷಿ ಚಂದ್ರಶೇಖರ್ , ಮಕ್ಕಿಮನೆ

  ” ಭಾರತೀಯ ಗೋತಳಿಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ತಾಯಿಯಂತೆ ಹಾಲಿತ್ತು ಸಲಹುವ ಗೋವಿನ ಉತ್ಪನ್ನಗಳನ್ನು ನಿತ್ಯ ಜೀವನದಲ್ಲಿ ಬಳಸಿದರೆ ನಮ್ಮ ಬದುಕು ಹಸನಾಗುವ ಜೊತೆಗೆ ಗೋವಂಶದ ಅಭಿವೃದ್ಧಿಯೂ ಆಗಬಹುದು ” ಎಂದವರು ಮೂಲತಃ ಕೊಡಗು ಚೈಯಂಡಾಣೆಯ ಪ್ರಸ್ತುತ ಬೆಂಗಳೂರು ಉತ್ತರ ಮಂಡಲ ಭುವನಗಿರಿ ವಲಯ ನಿವಾಸಿಗಳಾಗಿರುವ ಚಂದ್ರಶೇಖರ ಮಕ್ಕಿಮನೆ ಅವರ ಪತ್ನಿ ಕಮಲಾಕ್ಷಿ. ಕೊಡಗಿನ‌ ಮಂಜಯ್ಯ ,ಜಾನಕಿ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ ಮೂಲಕ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ. ” ಪ್ರಾಚೀನ ಕಾಲದಿಂದಲೂ […]

Continue Reading

ವಿನಾಯಕ ಚೌತಿ ಚಿತ್ರ ಸ್ಪರ್ಧೆ..

ವಿನಾಯಕ ಚೌತಿ ಮತ್ತೆ ಬಂದಿದ್ದು, ಹೊಸ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಶ್ರೀಮುಖ ತಂಡ ವಿನಾಯಕ ಚೌತಿ ಚಿತ್ರ ಸ್ವರ್ಧೆಯನ್ನು ಏರ್ಪಸಿದೆ. ಚಿತ್ರಗಳನ್ನು ಬಿಡಿಸುವವರ ಗಮನಕ್ಕೆ 1.ನಿಮ್ಮ ಸ್ವಂತ ಕಲ್ಪನೆಯನ್ನು ಎ೪ ಹಾಳೆಯಲ್ಲಿ ಬಿಡಿಸಿ 2.ಬಣ್ಣದ ಚಿತ್ರಗಳು, ಕಪ್ಪು ಬಿಳುಪು ಚಿತ್ರ, ಚುಕ್ಕಿ ಚಿತ್ರಗಳನ್ನು ಪರಿಗಣಿಸಲಾಗುವುದು 3.ಆಗಸ್ಟ್ 30 ರ ರಾತ್ರಿ 7 ಗಂಟೆ ಮೊದಲು ಬಂದ ಚಿತ್ರಗಳನ್ನು ಪರಿಗಣಿಸಲಾಗುವುದು 4.ಸ್ಕ್ಯಾನ್ ಮಾಡಿ ಮಿಂಚಂಚೆ ಮೂಲಕವೇ ಕಳುಹಿಸಬೇಕು ಮಿಂಚಂಚೆ ವಿಷಯದಲ್ಲಿ ಖಂಡ್ಡಾಯವಾಗಿ ವಿಭಾಗ, ಹೆಸರು, ವಿಳಾಸ, ಘಟಕ, ವಲಯ, ಮಂಡಲ […]

Continue Reading

” ಆತ್ಮಸಂತೋಷಕ್ಕೆ ಸರಳ ಹಾದಿ ಗೋಸೇವೆ ” : ಲತಾ ಗಣಪತಿ ಹೆಗಡೆ

    ” ಅಮೃತದಂತಹ ಹಾಲನ್ನು ನೀಡುವ ಗೋಮಾತೆಯನ್ನು ಮಾತೃ ಸ್ಥಾನದಲ್ಲಿ ಪೂಜಿಸುವ ಸಂಸ್ಕೃತಿ ನಮ್ಮದು.‌ ಪ್ರತಿದಿನವೂ ಗೋಸೇವೆ ಮಾಡಿದರೆ ನಮ್ಮ ನಿತ್ಯ ಸಂಕಷ್ಟಗಳು ಪರಿಹಾರವಾಗಿ ಮನಸ್ಸಿಗೆ ನೆಮ್ಮದಿ ದೊರಕುತ್ತದೆ.‌ ಆತ್ಮಸಂತೋಷ ಅರಳುತ್ತದೆ ” ಎಂದವರು ಕುಮಟಾ ಮಂಡಲ ಮೂರೂರು – ಕಲ್ಲಬ್ಬೆ ವಲಯದ ಮಕ್ಕಿಮನೆ ಗಣಪತಿ ಹೆಗಡೆಯವರ ಪತ್ನಿ ಲತಾ ಜಿ. ಹೆಗಡೆ.   ವಾಲ್ಗಳ್ಳಿಯ ಗಜಾನನ ಶ್ಯಾನುಬಾಗ್ , ಗಿರಿಜಾ ಶ್ಯಾನುಬಾಗ್ ದಂಪತಿಗಳ ಪುತ್ರಿಯಾದ ಲತಾ ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ […]

Continue Reading