Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಬೆಂಗಳೂರು: ಶ್ರೀರಾಮಚಂದ್ರಾಪುರಮಠಕ್ಕೆ ಬ್ಲಾಕ್‍ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಚ.ಮೂ.ಕೃಷ್ಣಶಾಸ್ತ್ರಿ, ಗಂಗಾಧರ ಶಾಸ್ತ್ರಿ, ಬಿ.ಟಿ.ವೆಂಕಟೇಶ್ ಮತ್ತು ಪದ್ಮನಾಭ ಶರ್ಮ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಮೂರು ಕೋಟಿ ರೂಪಾಯಿ ನೀಡಬೇಕು ಹಾಗೂ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಪೀಠತ್ಯಾಗ ಮಾಡಬೇಕು. ಇಲ್ಲದಿದ್ದರೆ ಶ್ರೀಗಳ ವಿರುದ್ಧ ಅತ್ಯಾಚಾರದ ಸುಳ್ಳು ಆರೋಪ ಮಾಡುವುದಾಗಿ ದಿವಾಕರ ಶಾಸ್ತ್ರಿ, ಪ್ರೇಮಲತಾ ದಂಪತಿ ಬ್ಲಾಕ್‍ಮೇಲ್ ಮಾಡಿದ್ದರು. ಚ.ಮೂ.ಕೃಷ್ಣಶಾಸ್ತ್ರಿ ಮತ್ತು ಇತರರು ಈ ಸಂಚಿನಲ್ಲಿ ಆರೋಪಿಗಳಾಗಿದ್ದರು. ಪ್ರಕರಣದ ಬಗ್ಗೆ ಸಿಐಡಿ ಸಲ್ಲಿಸಿದ್ದ ಬಿ […]

Read More

ಮಾಲೂರು: ಶ್ರೀರಾಘವೇಂದ್ರ ಗೋಆಶ್ರಮದಲ್ಲಿ ಎಲ್ಲಾ ಗೋಶಾಲೆಗಳಿಗೆ ಪ್ರಾಯಸ್ತರಿಗೆ ಓಡಾಡಲು ಅಸಾಧ್ಯವಾಗಿತ್ತು. ಇದಕ್ಕಾಗಿ ಸಾಮಾಜ ಸೇವಕರೊಬ್ಬರು ಒಡಾಡಲು ಬೇಕಾದ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ.   ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರು ಮತ್ತು ಸಮಾಜ ಸೇವಕರಾದ ಎಚ್ ಬಿ ಆರ್ ಲೇಔಟ್ ನಿವಾಸಿ ವೆಂಕಟ್ರಾಮ ಇವರು ಗೋಶಾಲೆಗೆ ವೀಲ್ ಚಯರ್ ಹಾಗೂ ವಾಕಿಂಗ್ ಸ್ಟಿಕ್ ಅನ್ನು ಡಾ.ಶ್ಯಾಮಪ್ರಸಾದ್ ಅವರ ಮೂಲಕ ನೀಡಿದ್ದಾರೆ.

Read More

ಮಾಲೂರು: ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ಗೋವುಗಳ ಮಧ್ಯದಲ್ಲಿ ಬಿಜೆಪಿ ಮುಖಂಡರೊಬ್ಬರು ತಮ್ಮ ಹುಟ್ಟು ಹಬ್ಬವನ್ನು ಮಂಗಳವಾರ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.   ಮಾಲೂರು ಬಿಜೆಪಿ ಮುಖಂಡರಾದ ಹೂಡಿ ವಿಜಯಕುಮಾರ್ ಅವರು ಜನ್ಮದಿನದ ಅಂಗವಾಗಿ ಶ್ರೀ ರಾಘವೇಂದ್ರ ಗೋಆಶ್ರಮಕ್ಕೆ ಮೂವತ್ತಕ್ಕೂ ಹೆಚ್ಚು ತಮ್ಮ ಬೆಂಬಲಿಗರೊಂದಿಗೆ ಬೇಟಿ ನೀಡಿದರು. ವಿಶೇಷವಾಗಿ ಜನ್ಮದಿನ ಆಚರಿಸಿಕೊಳ್ಳುವ ಹಂಬಲ ವ್ಯಕ್ತ ಪಡಿಸಿದ ಇವರು ಗೋಪೂಜೆ ಹಾಗೂ ಶ್ರೀ ಸಿದ್ಧಾಂಜನೇಯ ಸ್ವಾಮಿಗೆ ಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಗೋವುಗಳಿಗೆ ಮೇವು ನೀಡುವ ಕಾರ್ಯಕ್ಕೆ ಮುಂದಾಗಿರುವ ಇವರು ಲಕ್ಷಕೂ […]

Read More

ಮಾಲೂರು: ಕುಟುಂಬದ ಕ್ಷೇಮಕ್ಕಾಗಿ ಗೋಪ್ರೇಮಿಯೊಬ್ಬರು ಗೋವುಗಳಿಗೆ ಮೇವು ನೀಡಿದ ವಿಶಿಷ್ಠ ಕಾರ್ಯಕ್ರಮವೊಂದು ಮಾಲೂರು ಶ್ರೀರಾಘವೇಂದ್ರ ಗೋಆಶ್ರಮದಲ್ಲಿ ಅ.೧೫ರಂದು ನಡೆದಿದೆ. ಮಾಲೂರು ಇರುಬನಹಳ್ಳಿ ನಿವಾಸಿಯಾಗಿರುವ ನಾರಾಯಣ ರೆಡ್ಡಿ ಈ ವಿಶಿಷ್ಠ ಕಾರ್ಯಕ್ರಮವನ್ನು ನಡೆಸಿದವರಾಗಿದ್ದಾರೆ. ಒಂದು ಟ್ರಾಕ್ಟರ್ ಲೋಡ್ ಜೋಳದ ಕಡ್ಡಿ ಮೇವನ್ನು ಗೋಆಶ್ರಮಕ್ಕೆ ನೀಡಿದರು. ಸ್ವತಃ ತಾವೇ ಗೋವುಗಳಿಗೆ ನೀಡುವ ಮೂಲಕ ಗೋಪ್ರೇಮವನ್ನು ಮೆರೆದಿದ್ದಾರೆ.

Read More

ಬೆಂಗಳೂರು: ಹೊಂದಾಣಿಕೆ ರಾಜಕೀಯ ಮಾಡದೇ, ಯಾವ ಕೆಲಸವನ್ನು ಮಾಡಿದರೆ ನಾಡಿಗೆ ಒಳಿತಾಗುತ್ತದೆಯೋ ಅಂತಹ ಕೆಲಸಗಳನ್ನು ನಾಯಕರಾದವರು ಮಾಡಬೇಕು. ನಮಗೆ ಕೊಟ್ಟ ಜವಾಬ್ದಾರಿಯಲ್ಲಿ ಅತ್ಯುತ್ತಮ ಕೆಲಸವನ್ನು ನಿರ್ವಹಿಸಿ ಜನಸೇವೆ ಮಾಡಬೇಕು ಎಂದು ಉಪಮುಖ್ಯಮಂತ್ರಿಗಳಾದ ಡಾ. ಅಶ್ವತ್ಥನಾರಾಯಣ ಹೇಳಿದರು. ಮಲ್ಲೇಶ್ವರದ ಹವ್ಯಕ ಸಭಾಭವನದಲ್ಲಿ ಶ್ರೀಅಖಿಲ ಹವ್ಯಕ ಮಹಾಸಭೆ ಹಾಗೂ ಡಾ. ಅಶ್ವತ್ಥನಾರಾಯಣ್ ಅಭಿಮಾನಿ  ಬಳಗದ ಸನ್ಮಾನವನ್ನು ಹಾಗೂ ಹವ್ಯಕ ಮಹಾಸಭೆಯ ಗೌರವವನ್ನು ಸ್ವೀಕರಿಸಿ ಮಾತನಾಡಿದ ಘನ ಸರ್ಕಾರದ ಉಪಮುಖ್ಯಮಂತ್ರಿಗಳಾದ ಡಾ. ಅಶ್ವತ್ಥನಾರಾಯಣ್ ಅವರು, ನಾವು ನೀಡುತ್ತಿರುವ ಶಿಕ್ಷಣದ ಕಾರಣದಿಂದಾಗಿ ಸಮಾಜದಲ್ಲಿ […]

Read More

ಗೋಸ್ವರ್ಗ: ಸಹಸ್ರ ಗೋವುಗಳ ಆಶ್ರಯ ತಾಣವಾದ ಗೋಸ್ವರ್ಗದಲ್ಲಿ ಕಪಿಲೆ ಗೋವು ಅವಳಿ ಜವಳಿ ಕರು ಹಾಕುವ ಮೂಲಕ ಅಚ್ಚರಿ ನಡೆದಿದೆ.   ಸುಮಾರು 16 ವರ್ಷ ಮಲೆನಾಡುಗಿಡ್ಡ ತಳಿಯ ಕಪಿಲೆ ಗೋವು ಈ ರೀತಿಯ ಅಚ್ಚರಿಗೆ ಕಾರಣವಾಗಿದೆ. 12 ಕರು ಹಾಕಿರುವ ಈ ದನ ಪ್ರಸ್ತುತ 13ನೇ ಕರುವಿಗೆ ಜನ್ಮನೀಡಿದೆ.   ಎರಡೂ ಹೆಣ್ಣು ಕರುಗಳಾಗಿದ್ದು, ತಾಯಿ ಹಾಗೂ ಕರುಗಳು ಆರೋಗ್ಯ ದಿಂದ ಇವೆ. ಇದರಿಂದ ಗೋಸ್ವರ್ಗ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.

Read More

ಬಜಕೂಡ್ಲು: ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿರುವ ಗೋವುಗಳ ಉದರಂಭರಣಕ್ಕಾಗಿ ಸಾರ್ವಜನಿಕ ಸ್ಥಳದಲ್ಲಿ ಹಾಳಾಗಿ ಹೋಗುವ ಹಸಿ ಹುಲ್ಲನ್ನು ಶ್ರಮಸೇವೆಯ ಮೂಲ ಕತ್ತರಿಸಿ ಕೊಡುವ ಮಹಾ ಕಾರ್ಯ ಅ.13ರ ಭಾನುವಾರ ವಿದ್ಯಾನಗರ ಕುರುಡರಶಾಲೆಯ ಮುಂಭಾಗದ ಮಹಾತ್ಮಗಾಂಧಿ ಕಾಲೊನಿಯಲ್ಲಿ ನಡೆಯಿತು.   ಕಾಸರಗೋಡು ವಲಯಾಧ್ಯಕ್ಷ ಅರ್ಜುನಗುಳಿ ಶಂಕರನಾರಾಯಣ ಭಟ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಕಾಮದುಘಾ ವಿಭಾಗದ ಡಾ. ವೈ.ವಿ.ಕೃಷ್ಣಮೂರ್ತಿ ಮತ್ತು ಕಿರಣಮೂರ್ತಿ ದಂಪತಿಗಳ ಪುತ್ರ ಅಶ್ವಿನಿರಮಣ ಅವರು ಸಾಗಾಟದ ಖರ್ಚು ನೀಡುವ ಮೂಲಕ ಜನ್ಮದಿನವನ್ನು ಆಚರಿಸಿದರು. ಕಾಸರಗೋಡು ಸೇವಾ ಪಧಾನ ಮುರಳಿ […]

Read More

ಗಿರಿನಗರ: ಶ್ರೀಮಜ್ಜಗದ್ಗುರುಶಂಕರಾಚಾರ್ಯಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರ ಪೀಠಾರೋಹಣಕ್ಕೆ 25 ಸಂವತ್ಸರಗಳು ತುಂಬಿರುವ ಹಿನ್ನೆಲೆಯಲ್ಲಿ ಶ್ರೀಮಠದ ಕಾಲು ಶತಮಾನದ ಕಾರ್ಯಚಟುವಟಿಕೆಗಳ ಸಿಂಹಾವಲೋಕನ, ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚಿಂತನ-ಮಂಥನಕ್ಕೆ ವೇದಿಕೆ ಕಲ್ಪಿಸುವ ಸಲುವಾಗಿ ನಾಡಿನ ಪ್ರಮುಖ ಪತ್ರಿಕೆಗಳ ಸಂಪಾದಕರು, ಮಾಧ್ಯಮಸಂಸ್ಥೆಗಳ ಮುಖ್ಯಸ್ಥರ ಜತೆಗೆ ಶ್ರೀಗಳ ಸಂವಾದ ಕಾರ್ಯಕ್ರಮವನ್ನು ಪುನರ್ವಸು ಭವನದಲ್ಲಿ ಗುರುವಾರ (ಅಕ್ಟೋಬರ್ 10) ಹಮ್ಮಿಕೊಳ್ಳಲಾಗಿತ್ತು.   ಇದುವರೆಗೆ ಶ್ರೀಮಠ ರಾಮಾಯಣ ಮಹಾಸತ್ರ, ವಿಶ್ವ ಗೋಸಮ್ಮೇಳನ, ಗೋಯಾತ್ರೆಯಂಥ ಬೃಹತ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೆ, ಇನ್ನು ಮುಂದೆ ಸಮಾಜದ ಸರ್ವಾಂಗೀಣ ಪ್ರಗತಿಯ ಉದ್ದೇಶದ ಬೃಹತ್ ಯೋಜನೆಗಳನ್ನು ಕಾಲಮಿತಿಯಲ್ಲಿ […]

Read More

ಗೋಸ್ವರ್ಗ: ಗೋಸ್ವರ್ಗದ ಪುಣ್ಯ ಪರಿಸರದಲ್ಲಿನ ಗೋಪದ ವೇದಿಕೆಯಲ್ಲಿ ಸ್ವರ್ಗಸಂಗೀತವೆಂಬ ವಿಶಿಷ್ಟ ಕಾರ್ಯಕ್ರಮ ವಿಜಯದಶಮಿಯ ಪರ್ವಕಾಲದಲ್ಲಿ ಶುಭಾರಂಭಗೊಂಡಿತು.   ಪ್ರತಿಫಲಾಪೇಕ್ಷೆ ಇಲ್ಲದೇ, ಸಭೀಕರ ನಿರೀಕ್ಷೆಯೂ ಇಲ್ಲದೆ ಕೇವಲ ಗೋವುಗಳ ಸಂತೋಷಕ್ಕಾಗಿ ಸಹಸ್ರಗೋವುಗಳ ಆಲಯದಲ್ಲಿ ಕಲಾವಿದರು ಸಂಗೀತ ಸೇವೆಗೈಯುತ್ತಾರೆ. ಗೋವುಗಳ ಸಂತೋಷಕ್ಕಾಗಿ ನಡೆಯುವ ಸಂಗೀತ ಸೇವೆಯೇ ಸ್ವರ್ಗಸಂಗೀತ. ಮಾಸಿಕವಾಗಿ ನಡೆಯುವ ಈ ಸ್ವರ್ಗಸಂಗೀತದಲ್ಲಿ ನಾಡಿನ ಕಲಾವಿದರಿಗೆ ಗೋಮಾತೆಯ ಪದತಲದಲ್ಲಿ ಕಲಾಸೇವೆಯನ್ನು ಸಮರ್ಪಿಸಲು ಸುವರ್ಣಾವಕಾಶ ಇದಾಗಿದೆ.   ವಿಜಯದಶಮಿಯಂದು ನಡೆದ ಪ್ರಥಮ ಸ್ವರ್ಗಸಂಗೀತ ಕಾರ್ಯಕ್ರಮದಲ್ಲಿ ಹಿಂದೂಸ್ಥಾನಿ ಗಾಯಕ ರಾಜೇಂದ್ರ ಬಾಳೇಹಳ್ಳಿಯವರ ಸಂಗೀತ […]

Read More

ನಂತೂರು: ರಾಜ್ಯದಲ್ಲಿ ಅತೀ ಹೆಚ್ಚು ಆದಾಯ ಹೊಂದಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವತಿಯಿಂದ ೮ ದೇಗುಲಗಳ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ. ಆದಾಯವನ್ನು ಧಾರ್ಮಿಕ ಕೇಂದ್ರಗಳಿಗೆ, ಕಾರ್ಯಗಳಿಗೆ ಹಂಚಲಾಗುತ್ತಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಸದಸ್ಯ ಮಹೇಶ್ ಕುಮಾರ್ ಕರಿಕ್ಕಳ ಹೇಳಿದರು.   ಅವರು ಅ.೬ರಂದು ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ನಡೆದ ಆಶ್ಲೇಷಾ ಬಲಿ ಮತ್ತು ಸಗ್ರಹಮಖ ನವಚಂಡಿಕಾಯಾಗದ ಧಾರ್ಮಿಕ ಸಭೆಯಲ್ಲಿ ಸಮ್ಮಾನ ಸ್ವೀಕರಿಸಿ, ಮಾತನಾಡಿದರು. ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಭೇಟಿ […]

Read More

ಮುಳ್ಳೇರಿಯ: ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಾ ಶಾಸನತಂತ್ರದ ಕಾರ್ಯ ಯೋಜನೆಯಂತೆ ಮುಳ್ಳೇರಿಯ ಮಂಡಲಾಂತರ್ಗತ ಈಶ್ವರಮಂಗಲ ಹವ್ಯಕ ವಲಯದ ನೂತನ ನಿಯುಕ್ತ ಪದಾಧಿಕಾರಿಗಳ ಪ್ರಥಮ ಮಾಸಿಕ ಸಭೆ ಅ.೬ರಂದು ಮುಳಿಯಾ ಪ್ರಾಪರ್ಟೀಸ್ ಅವರ ಪಂಚಸಿರಿ ಲೇಔಟ್ ನಲ್ಲಿ ನಡೆಯಿತು.   ಸಭೆಯ ಅಧ್ಯಕ್ಷತೆಯನ್ನು ನೂತನ ವಲಯಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ ಅವರು ವಹಿಸಿದ್ದರು. ಧ್ವಜಾರೋಹಣ, ಶಂಖನಾದ, ಗುರುವಂದನೆ, ಗೋ ಸ್ತುತಿಯೊಂದಿಗೆ ಸಭೆ ಪ್ರಾರಂಭವಾಯಿತು. ನೂತನ ಪದಾಧಿಕಾರಿಗಳಿಗೆ ವಲಯ ದಾಖಲೆಗಳನ್ನು ಹಸ್ತಾಂತರಿಸಲಾಯಿತು.   ವಲಯದ ನೂತನ ಕಾರ್ಯದರ್ಶಿ ಗೋಪಾಲಕೃಷ್ಣ […]

Read More

ಭಾನ್ಕುಳಿ: ಶ್ರೀರಾಮದೇವರ ಸನ್ನಿಧಾನದಲ್ಲಿ ಸಿದ್ದಾಪುರ ಮಂಡಲದ ಮಾತೃವಿಭಾಗದವರಿಂದ ಕುಂಕುಮಾರ್ಚನೆ ನಡೆಯಿತು.   ನವರಾತ್ರಿಯ ಆಚರಣೆಯ ಅಂಗವಾಗಿ ಶಕ್ತಿದೇವತೆಯ ಅರ್ಚನೆ ಭಕ್ತಿಪೂರ್ವಕವಾಗಿ ಕುಂಕುಮಾರ್ಚನೆ ಕಾರ್ಯಕ್ರಮ ನಡೆಸಲಾಯಿತು. ಸುಮಾರು ೪೫ಜನ ಮಾತೆಯರು ಪಾಲ್ಗೊಳ್ಳುವ ಮೂಲಕ ಯಶಸ್ವಿ ಕಾರ್ಯಕ್ರಮ ನಡೆಯಿತು.   ಮಹಾಮಂಡಲದ ಅಧ್ಯಕ್ಷರಾದ ಆರ್. ಎಸ್. ಹೆಗಡೆ, ಮಂಡಲ ಅಧ್ಯಕ್ಷರಾದ ಸುಬ್ರಾಯ ಹೆಗಡೆ ಸುಂಗೊಳ್ಳಿಮನೆ, ಪದಾಧಿಕಾರಿಗಳಾದ ಎಮ್. ಎಮ್. ಹೆಗಡೆ, ಎಮ್. ವಿ. ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

Read More

ಗಿರಿನಗರ: ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಹಾಸಂಕಲ್ಪಗಳಲ್ಲಿ ಒಂದಾದ ರಾಮಾಯಣ ಪಾರಾಯಣ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ನಡೆಸುತ್ತಿರುವುದು ವಿಶೇಷವಾಗಿದೆ.   ಪ್ರತಿಯೊಬ್ಬನ ಹೃದಯದಲ್ಲಿ ರಾಮನು ಆಡಿದಾಗ ಬದುಕು ಪಾವನವಾಗುತ್ತದೆ ಎಂಬ ನಿಟ್ಟಿನಲ್ಲಿ ಶ್ರೀಸಂಸ್ಥಾನದವರು ಶಿಷ್ಯಕೋಟಿಗೆ ಪ್ರತಿನಿತ್ಯ ಸಾಧ್ಯವಾದಷ್ಟು ರಾಮಾಯಣ ಪಾರಾಯಣ ಮಾಡುವಂತೆ ಕರೆ ನೀಡಿದ್ದರು.   ಇದರ ಫಲ ಎಂಬಂತೆ ಮುಳ್ಳೇರಿಯಾ ಮಂಡಲದ ಸುಳ್ಯ ವಲಯದ ಅರಂಬೂರು ವೇದ ವಿದ್ಯಾಲಯದ ವಿದ್ಯಾರ್ಥಿಗಳಾದ ಸುಬ್ರಹ್ಮಣ್ಯ ಪ್ರಸಾದ, ಪ್ರಜ್ವಲ್ ಕುಮಾರ್, ಆಶ್ರಿತರಾಮ, ಶ್ರೀಹರಿ ಭಟ್ಟ, ಆದಿತ್ಯ, ರವಿ ಕೃಷ್ಣ, ಹರ್ಷ ಕೃಷ್ಣ […]

Read More

ಗೋಸ್ವರ್ಗ: ಶ್ರೀರಾಮಚಂದ್ರಾಪುರಮಠದ ಸರ್ವಸಮ್ಮುಖಾಧಿಕಾರಿಗಳಾದ ಟಿ.ಮಡಿಯಾಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಕೆ.ಜಿ.ಭಟ್ ಅವರು ಬೇಟಿ ನೀಡಿ ಪರಿಶೀಲನೆ ನಡೆಸಿದರು.   ಗೋಸ್ವರ್ಗ ಹಾಗೂ ಶ್ರೀರಾಮದೇವ ಭಾನ್ಕುಳಿ ಮಠದ ವೀಕ್ಷಣೆ ಮಾಡಿ ಸಮಗ್ರ ಮಾಹಿತಿ ಪಡೆದರು. ಗೋಸ್ವರ್ಗದ ವ್ಯವಸ್ಥೆ, ಸ್ವಚ್ಛತೆ ಕುರಿತು ಸಮಾಧಾನ ವ್ಯಕ್ತಪಡಿಸಿ ಇನ್ನೂ ಹೆಚ್ಚಿನ ಅಭಿವೃದ್ದಿಗೆ ಉಪಯುಕ್ತ ಸಲಹೆಗಳನ್ನು ನೀಡಿದರು. ಗೋಸ್ವರ್ಗದ ಎಲ್ಲಾ ಅಭಿವೃದ್ದಿಕಾರ್ಯಗಳಿಗೆ ಸಂಪೂರ್ಣ ಸಹಕಾರದ ಭರವಸೆ ನೀಡಿದರು.   ಈ ಸಂದರ್ಭದಲ್ಲಿ ಮೋಹನ ಹೆಗಡೆ ಹೆರವಟ್ಟಾ, ಆರ್ ಎಸ್ ಹೆಗಡೆ ಹರಗಿ, ಗಣಪತಿ ಹೆಗಡೆ […]

Read More

ಗೋಲೋಕ: ಶ್ರೀರಾಮಚಂದ್ರಾಪುರಮಠದ ಸಮ್ಮುಖ ಸರ್ವಾಧಿಕಾರಿಗಳಾದ ತಿಮ್ಮಪ್ಪಯ್ಯ ಮಡಿಯಾಲ್ ಅವರು ಮಹಾನಂದಿ ಗೋಲೋಕಕ್ಕೆ ಆಗಮಿಸಿ, ಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.   ದೇಶೀ ಗೋತಳಿಗಳ ಸಂರಕ್ಷಣೆ ಮಾಡುತ್ತಿರುವ ಗೋಲೋಕ ವೀಕ್ಷಣೆ ಮಾಡಿದರು. ಶ್ರೀಮಠದ ಪ್ರಮುಖರಾದ ಮೋಹನ ಹೆಗಡೆ, ಪಿ. ಡಿ. ಶ್ರೀಧರ ರಾವ್, ಹರಿಪ್ರಸಾದ್ ಪೆರಿಯಪ್ಪು, ಕುಮಾರ ಕೌಲಕೈ, ಪ್ರಸನ್ನ ಉಡುಚೆ, ರಾಮಚಂದ್ರ ಭಟ್ ಮಳಲಿ, ಚಂದ್ರಶೇಖರ ಸಿ. ಎಸ್. ರಾಘವೇಂದ್ರ ಮಧ್ಯಸ್ಥ ಜೊತೆಗಿದ್ದರು.   ಗೋಲೋಕದ ವತಿಯಿಂದ ರಾಮಚಂದ್ರ ಭಟ್ ಪಂಜಾಜೆ, ಅಶೋಕ ಹೆಗಡೆ […]

Read More

ಬೆಂಗಳೂರು: ಭಾರತೀಯ ವಿದ್ಯೆ ಹಾಗೂ ಕಲೆಗಳನ್ನು ಒಂದೇ ಕಡೆ ಬೋಧಿಸುವ ವ್ಯವಸ್ಥೆ ದೇಶದಲ್ಲೆಲ್ಲೂ ಇಲ್ಲ. ಆದ್ದರಿಂದ ಸಮಗ್ರ ಭಾರತೀಯ ಕಲೆ, ವಿದ್ಯೆಗಳನ್ನು ಪರಿಚಯಿಸುವುದೇ ಉದ್ದೇಶಿತ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಉದ್ದೇಶವಾಗಿದೆ. ದೇಶಭಕ್ತಿ ಹಾಗೂ ದೇಶಜ್ಞಾನದ ಸಮಗ್ರ ವಿದ್ಯಾವೀರರನ್ನು ಸೃಷ್ಟಿಸಿ, ಅವರು ದೇಶಕ್ಕೆ ಮಾತ್ರವಲ್ಲ ವಿಶ್ವಕ್ಕೆ ಬೆಳಕಾಗುವಂತೆ ಬೆಳೆಯಬೇಕು ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.   ಗಿರಿನಗರ ರಾಮಾಶ್ರಮದಲ್ಲಿ ಭಾನುವಾರ ನಡೆದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂವಾದ ಕಾರ್ಯಕ್ರಮದಲ್ಲಿ ಶ್ರೀಸಂಸ್ಥಾನದವರು ಆಶೀರ್ವಚನ ನೀಡಿದರು.   ದೇಶದ ಬಗ್ಗೆ […]

Read More

ಹೊಸನಗರ: ಶ್ರೀರಾಮಚಂದ್ರಾಪುರಮಠದ ಭಾರತೀಯ ಗೋಪರಿವಾರ ಸಂಯೋಜನೆಯಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ನೆರೆ ಸಂತ್ರಸ್ತ ಕುಟುಂಬಗಳ ಗೋವುಗಳಿಗೆ ವಿತರಣೆ ಮಾಡುವ ಕಾರ್ಯ ಮಹಾನಂದಿ ಗೋಲೋಕದಲ್ಲಿ ನಡೆಯಿತು.   ರಾಯಚೂರು ಜಿಲ್ಲೆ ಹಾಗೂ ಕೆ. ಆರ್. ನಗರದಿಂದ ಸುಮಾರು ೯ ಟನ್ ಪೌಷ್ಟಿಕ ಪಶು ಆಹಾರವನ್ನು ತರಿಸಿ ಮಹಾನಂದಿ ಗೋಲೋಕ ಹೊಸನಗರ ಹಾಗೂ ಗೋಸ್ವರ್ಗ ಭಾನ್ಕುಳಿ ಇವರ ಸಹಕಾರದೊಂದಿಗೆ ವಿತರಣೆ ಮಾಡಲಾಯಿತು. ಮೈಸೂರು ಭಾರತೀಯ ಗೋಪರಿವಾರದ ಮುಖ್ಯ ಸಂಚಾಲಕ ಕೆ. ಆರ್. ನಗರದ ಐಸಿರಿ ಮಹೇಶ್ ಮತ್ತು ಶ್ರೀರಾಮಚಂದ್ರಾಪುರಮಠ ಪ್ರಾಯೋಜಿಸಿದ್ದರು. […]

Read More

ಭಾನ್ಕುಳಿ: ಗೋಸ್ವರ್ಗ ಶ್ರೀರಾಮದೇವ ಭಾನ್ಕುಳಿ ಮಠದಲ್ಲಿ ಹವ್ಯಕ ಮಹಾಮಂಡಲದಿಂದ ಪದಾಧಿಕಾರಿಗಳ ಜವಾಬ್ದಾರಿಯ ಬಗ್ಗೆ ಕಾರ್ಯಾಗಾರ ನಡೆಯಿತು.   ಸಿದ್ದಾಪುರ ಮಂಡಲದ ಪದಾಧಿಕಾರಿಗಳಿಗೆ ಮಠದ ಯೋಜನೆ, ನೂತನ ಶಾಸನತಂತ್ರದ ಮಾಹಿತಿ, ಪದಾಧಿಕಾರಿಗಳ ಜವಾಬ್ದಾರಿಗಳ ಕುರಿತು ನಡೆದ ಕಾರ್ಯಾಗಾರದ ನೇತೃತ್ವವನ್ನು ಸೇವಾಖಂಡದ ಶ್ರೀಸಂಯೋಜಕರಾದ ಮಹೇಶ ಚಟ್ನಳ್ಳಿ ವಹಿಸಿದ್ದರು. ಮಹಾಮಂಡಲದ ಪ್ರಮುಖರು ಪಾಲ್ಗೊಂಡು ಮಾಹಿತಿ ನೀಡಿದರು.   ಕಾರ್ಯಕ್ರಮದಲ್ಲಿ ಮಹಾಮಂಡಲದ ಅಧ್ಯಕ್ಷರಾದ ಆರ್.ಎಸ್ ಹೆಗಡೆ ಹರಗಿ, ಉಪಾಧ್ಯಕ್ಷೆ ಶೈಲಜಾ ಕೊಂಕೋಡಿ, ಕೋಶಾಧ್ಯಕ್ಷ ಜಿ.ಜಿ.ಹೆಗಡೆ, ಕಾರ್ಯದರ್ಶಿ ನಾಗರಾಜ ಭಟ್ಟ ಪಿದಮಲೆ, ಸಂಘಟನಾ ಕಾರ್ಯದರ್ಶಿ […]

Read More

ಬಾನ್ಕುಳಿ: ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ರಾಮಾಯಣ ಚಾತುರ್ಮಾಸ್ಯವನ್ನು ಸಂಪನ್ನಗೊಳಿಸಿ, ಸೀಮೋಲ್ಲಂಘನದ ಬಳಿಕ ಶ್ರೀಸವಾರಿ ಗೋಸ್ವರ್ಗಕ್ಕೆ ಚಿತ್ತೈಸಿದರು.   ಸೆ.15ರ ಸಂಜೆ 5.45ಕ್ಕೆ ಆಗಮಿಸಿದ ಶ್ರೀಸಂಸ್ಥಾನದವರನ್ನು ಸಿದ್ಧಾಪುರ ಮಂಡಲ, ಗೋಸ್ವರ್ಗ ಹಾಗೂ ಸಮಸ್ತ ಶಿಷ್ಯಭಕ್ತರ ಪರವಾಗಿ ಗುಂಜಗೋಡು ಜಯರಾಮ ಭಟ್ ದಂಪತಿಗಳು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು.   ಸೆ.16ರಂದು ಸಿದ್ಧಾಪುರ ಮಂಡಲದ ಶಿಷ್ಯಭಕ್ತರಿಂದ ಗುರುಪಾದುಕಾ ಪೂಜೆ ಹಾಗೂ ಭಿಕ್ಷಾಸೇವೆಗಳು ನಡೆಯಿತು. ಸಾರ್ವಜನಿಕ ಮಂತ್ರಾಕ್ಷತೆ ನೀಡಿದ ಶ್ರೀಸಂಸ್ಥಾನದವರು ಮಂಡಲದ ಪದಾಧಿಕಾರಿಗಳು ಹಾಗೂ ಗೋಸ್ವರ್ಗ ಪದಾಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.   […]

Read More

ಬೆಂಗಳೂರು: ಭಾರತೀಯತೆಯ, ಭಾರತೀಯ ಸನಾತನ ಧರ್ಮ ಸಂಸ್ಕೃತಿಯ ಹಸಿವು ಇಂದು ಸಮಾಜದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಸಮಾಜಕ್ಕೆ ಈ ಹಂತದಲ್ಲಿ ಸೂಕ್ತ ಮಾರ್ಗದರ್ಶನ ದೊರಕಿದಲ್ಲಿ ಮಾತ್ರ ಭಾರತ ವಿಶ್ವಗುರುವಾಗಬಲ್ಲದು ಎಂದು ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರಭಾರತೀಸ್ವಾಮೀಜಿ ನುಡಿದರು.   ಗಿರಿನಗರ ರಾಮಾಶ್ರಯದಲ್ಲಿ ಶನಿವಾರ (ಸೆ. 14) ನಡೆದ ರಾಮಾಯಣ ಚಾತುರ್ಮಾಸ್ಯ ಸೀಮೋಲ್ಲಂಘನದ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.   ಶ್ರೀರಾಮದೇವರು ಪ್ರತಿಯಈ ಬಾರಿಯ ಚಾತುರ್ಮಾಸ್ಯವನ್ನು ರಾಮಾಯಣ ಚಾತುರ್ಮಾಸ್ಯವಾಗಿ ಆಚರಿಸಲಾಗಿದ್ದು, ನಿರಂತರವಾಗಿ ಧಾರಾ ರಾಮಾಯಣ ಪ್ರವಚನ ನಡೆದಿದೆ. ರಾಮಾಯಣ ಸರ್ವವೇದಗಳ ಸಾರ; ಇದು […]

Read More
1 2 3 11
Online news kannada regional herald regional news sports politics karavali kannada latest news breaking news upcoming news save kannada save government school karnataka udupi news kundapura news india top news