ಈಶ್ವರಮಂಗಲ ವಲಯ ಸಭೆಯಲ್ಲಿ ಏನಾಯಿತು?

ಮುಳ್ಳೇರಿಯ: ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಾ ಶಾಸನತಂತ್ರದ ಕಾರ್ಯ ಯೋಜನೆಯಂತೆ ಮುಳ್ಳೇರಿಯ ಮಂಡಲಾಂತರ್ಗತ ಈಶ್ವರಮಂಗಲ ಹವ್ಯಕ ವಲಯದ ನೂತನ ನಿಯುಕ್ತ ಪದಾಧಿಕಾರಿಗಳ ಪ್ರಥಮ ಮಾಸಿಕ ಸಭೆ ಅ.೬ರಂದು ಮುಳಿಯಾ ಪ್ರಾಪರ್ಟೀಸ್ ಅವರ ಪಂಚಸಿರಿ ಲೇಔಟ್ ನಲ್ಲಿ ನಡೆಯಿತು.

 

ಸಭೆಯ ಅಧ್ಯಕ್ಷತೆಯನ್ನು ನೂತನ ವಲಯಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ ಅವರು ವಹಿಸಿದ್ದರು. ಧ್ವಜಾರೋಹಣ, ಶಂಖನಾದ, ಗುರುವಂದನೆ, ಗೋ ಸ್ತುತಿಯೊಂದಿಗೆ ಸಭೆ ಪ್ರಾರಂಭವಾಯಿತು. ನೂತನ ಪದಾಧಿಕಾರಿಗಳಿಗೆ ವಲಯ ದಾಖಲೆಗಳನ್ನು ಹಸ್ತಾಂತರಿಸಲಾಯಿತು.

 

ವಲಯದ ನೂತನ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಅರ್ತ್ಯಡ್ಕ ಇವರು ಗತ ಸಭೆಯ ವರದಿ ನೀಡಿ ಸಭಾ ನಿರ್ವಹಣೆ ಮಾಡಿದರು. ಸಂಘಟನೆಯ ಕಾರ್ಯಸೂಚಿ ಆದೇಶಗಳ ವಿಷಯ ಮಂಡನೆಯಾಗಿ, ಮಂಡಲದ ಸುತ್ತೋಲೆಗಳ ಬಗ್ಗೆ ವಿವರಣೆ ಹಾಗು ಸಮಾಲೋಚನೆ ನಡೆಯಿತು.

 

ಗೋಕರ್ಣದ ಅಶೋಕೆಯಲ್ಲಿ ಸ್ಥಾಪಿತ ಗೊಳ್ಳಲಿರುವ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ಕುರಿತು ಮಂಡಲ ಕಾರ್ಯದರ್ಶಿ ಕೃಷ್ಣಮೂರ್ತಿ ಪಳ್ಳತ್ತಡ್ಕ ಇವರು ಸಮಗ್ರ ಮಾಹಿತಿಗಳನ್ನು ಪ್ರಸ್ತುತಪಡಿಸಿದರು.

 

ವಲಯದ ಪದಾಧಿಕಾರಿಗಳು, ಗುರಿಕಾರರು ಹಾಜರಿದ್ದರು. ವಲಯದ ೩೩ ಮನೆಗಳಿಂದ ಮುಷ್ಟಿಭಿಕ್ಷೆ ಸಂಗ್ರಹಿಸಲಾಯಿತು. ರಾಮ ತಾರಕ ಜಪ, ಶಾಂತಿ ಮಂತ್ರ, ಧ್ವಜ ಅವರೋಹಣ ಹಾಗು ಶಂಖನಾದದೊಂದಿಗೆ ಸಭೆಯು ಮುಕ್ತಾಯವಾಯಿತು.

Leave a Reply

Your email address will not be published. Required fields are marked *