ಗೋಗಳಿಗೆ ಸ್ವರ್ಗಸಂಗೀತ !

ಗೋಸ್ವರ್ಗ: ಗೋಸ್ವರ್ಗದ ಪುಣ್ಯ ಪರಿಸರದಲ್ಲಿನ ಗೋಪದ ವೇದಿಕೆಯಲ್ಲಿ ಸ್ವರ್ಗಸಂಗೀತವೆಂಬ ವಿಶಿಷ್ಟ ಕಾರ್ಯಕ್ರಮ ವಿಜಯದಶಮಿಯ ಪರ್ವಕಾಲದಲ್ಲಿ ಶುಭಾರಂಭಗೊಂಡಿತು.

 

ಪ್ರತಿಫಲಾಪೇಕ್ಷೆ ಇಲ್ಲದೇ, ಸಭೀಕರ ನಿರೀಕ್ಷೆಯೂ ಇಲ್ಲದೆ ಕೇವಲ ಗೋವುಗಳ ಸಂತೋಷಕ್ಕಾಗಿ ಸಹಸ್ರಗೋವುಗಳ ಆಲಯದಲ್ಲಿ ಕಲಾವಿದರು ಸಂಗೀತ ಸೇವೆಗೈಯುತ್ತಾರೆ. ಗೋವುಗಳ ಸಂತೋಷಕ್ಕಾಗಿ ನಡೆಯುವ ಸಂಗೀತ ಸೇವೆಯೇ ಸ್ವರ್ಗಸಂಗೀತ. ಮಾಸಿಕವಾಗಿ ನಡೆಯುವ ಈ ಸ್ವರ್ಗಸಂಗೀತದಲ್ಲಿ ನಾಡಿನ ಕಲಾವಿದರಿಗೆ ಗೋಮಾತೆಯ ಪದತಲದಲ್ಲಿ ಕಲಾಸೇವೆಯನ್ನು ಸಮರ್ಪಿಸಲು ಸುವರ್ಣಾವಕಾಶ ಇದಾಗಿದೆ.

 

ವಿಜಯದಶಮಿಯಂದು ನಡೆದ ಪ್ರಥಮ ಸ್ವರ್ಗಸಂಗೀತ ಕಾರ್ಯಕ್ರಮದಲ್ಲಿ ಹಿಂದೂಸ್ಥಾನಿ ಗಾಯಕ ರಾಜೇಂದ್ರ ಬಾಳೇಹಳ್ಳಿಯವರ ಸಂಗೀತ ಸೇವೆ ನಡೆಯಿತು. ತಬಲಾದಲ್ಲಿ ಶ್ರೀಕಾಂತ ಕಾಳಮಂಜಿ ಹಾಗೂ ಹಾರ್ಮೋನಿಯಂನಲ್ಲಿ ರಾಜೇಂದ್ರ ಕೊಳಗಿ ಇವರಿಗೆ ಸಹಕರಿಸಿದರು. ಶ್ರೀಕಾಂತ ಕಾಳಮಂಜಿಯವರ ನೇತೃತ್ವದಲ್ಲಿ ಆರಂಭವಾದ ಸ್ವರ್ಗಸಂಗೀತ ಸಂಧ್ಯಾಕಾಲದ ಗೋಗಂಗಾರತಿಯೊಂದಿಗೆ ಮುಕ್ತಾಯವಾಯಿತು.

Leave a Reply

Your email address will not be published. Required fields are marked *