ಗೋಸ್ವರ್ಗಕ್ಕೆ ಸರ್ವಸಮ್ಮುಖಾಧಿಕಾರಿಗಳ ತಂಡ

ಗೋಸ್ವರ್ಗ: ಶ್ರೀರಾಮಚಂದ್ರಾಪುರಮಠದ ಸರ್ವಸಮ್ಮುಖಾಧಿಕಾರಿಗಳಾದ ಟಿ.ಮಡಿಯಾಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಕೆ.ಜಿ.ಭಟ್ ಅವರು ಬೇಟಿ ನೀಡಿ ಪರಿಶೀಲನೆ ನಡೆಸಿದರು.

 

ಗೋಸ್ವರ್ಗ ಹಾಗೂ ಶ್ರೀರಾಮದೇವ ಭಾನ್ಕುಳಿ ಮಠದ ವೀಕ್ಷಣೆ ಮಾಡಿ ಸಮಗ್ರ ಮಾಹಿತಿ ಪಡೆದರು. ಗೋಸ್ವರ್ಗದ ವ್ಯವಸ್ಥೆ, ಸ್ವಚ್ಛತೆ ಕುರಿತು ಸಮಾಧಾನ ವ್ಯಕ್ತಪಡಿಸಿ ಇನ್ನೂ ಹೆಚ್ಚಿನ ಅಭಿವೃದ್ದಿಗೆ ಉಪಯುಕ್ತ ಸಲಹೆಗಳನ್ನು ನೀಡಿದರು. ಗೋಸ್ವರ್ಗದ ಎಲ್ಲಾ ಅಭಿವೃದ್ದಿಕಾರ್ಯಗಳಿಗೆ ಸಂಪೂರ್ಣ ಸಹಕಾರದ ಭರವಸೆ ನೀಡಿದರು.

 

ಈ ಸಂದರ್ಭದಲ್ಲಿ ಮೋಹನ ಹೆಗಡೆ ಹೆರವಟ್ಟಾ, ಆರ್ ಎಸ್ ಹೆಗಡೆ ಹರಗಿ, ಗಣಪತಿ ಹೆಗಡೆ ಮೂಗಿಮನೆ, ಎಮ್.ವಿ.ಹೆಗಡೆ ಉಸ್ಥಿತರಿದ್ದರು.

Leave a Reply

Your email address will not be published. Required fields are marked *