ಕುಟುಂಬದ ಕ್ಷೇಮಕ್ಕಾಗಿ ಗೋವಿಗೆ ಮೇವು!

ಮಾಲೂರು: ಕುಟುಂಬದ ಕ್ಷೇಮಕ್ಕಾಗಿ ಗೋಪ್ರೇಮಿಯೊಬ್ಬರು ಗೋವುಗಳಿಗೆ ಮೇವು ನೀಡಿದ ವಿಶಿಷ್ಠ ಕಾರ್ಯಕ್ರಮವೊಂದು ಮಾಲೂರು ಶ್ರೀರಾಘವೇಂದ್ರ ಗೋಆಶ್ರಮದಲ್ಲಿ ಅ.೧೫ರಂದು ನಡೆದಿದೆ. ಮಾಲೂರು ಇರುಬನಹಳ್ಳಿ ನಿವಾಸಿಯಾಗಿರುವ ನಾರಾಯಣ ರೆಡ್ಡಿ ಈ ವಿಶಿಷ್ಠ ಕಾರ್ಯಕ್ರಮವನ್ನು ನಡೆಸಿದವರಾಗಿದ್ದಾರೆ. ಒಂದು ಟ್ರಾಕ್ಟರ್ ಲೋಡ್ ಜೋಳದ ಕಡ್ಡಿ ಮೇವನ್ನು ಗೋಆಶ್ರಮಕ್ಕೆ ನೀಡಿದರು. ಸ್ವತಃ ತಾವೇ ಗೋವುಗಳಿಗೆ ನೀಡುವ ಮೂಲಕ ಗೋಪ್ರೇಮವನ್ನು ಮೆರೆದಿದ್ದಾರೆ.