ಗೋದೀಪ ~ ದೀಪಾವಳಿ ಗೋಪೂಜೆ – ಶ್ರೀರಾಮಚಂದ್ರಾಪುರ ಮಠ , ಗಿರಿನಗರ
ಹಳ್ಳಿಗಳು ಹಾಗೂ ಹಳ್ಳಿಗರು ಬೆಂಗಳೂರನ್ನು ಸೇರುತ್ತಾ ಸಾಗಿದಂತೆ ಬೆಂಗಳೂರು ದೊಡ್ಡದಾಗುತ್ತಾ ಹೋಗಿದೆ. ನಾವು ಹಳ್ಳಿಗಳನ್ನು ಮಾತ್ರ ಬಿಟ್ಟುಬಂದಿಲ್ಲ, ಈ ಮಾಯಾ ನಗರಿಗೆ ಬರುವಾಗ ನಮ್ಮ ಸಂಸ್ಕೃತಿಯನ್ನೂ ಬಿಟ್ಟು ಬಂದಿರುವುದು ದುರಂತ. ಇಂದು ಹಳ್ಳಿಗಳಲ್ಲಿಯೂ ಕೂಡ ನಗರದ ಸಂಸ್ಕೃತಿ ಬೆಳೆಯುತ್ತಿರುವುದು ಆತಂಕಕಾರಿ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು. ಬೆಂಗಳೂರಿನ ಗಿರಿನಗದಲ್ಲಿರುವ ಶ್ರೀರಾಮಚಂದ್ರಾಪುರಮಠದ ಶಾಖೆಯಲ್ಲಿ ನಡೆದ ‘ಗೋದೀಪ – ದೀಪಾವಳಿ ಗೋಪೂಜೆ’ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಗೋಸಂದೇಶ ನೀಡಿದ ಶ್ರೀಗಳು, ಭಗವಾನ್ ಶ್ರೀಕೃಷ್ಣನು ಗೋಪೂಜೆಯ ಪ್ರವರ್ತಕನಾಗಿದ್ದು, […]
ಗುರಿಕ್ಕಾರರ ಗುರುಮಾರ್ಗ – ಒಂದು ಸಂವಾದ ಕಾರ್ಯಾಗಾರ
ಸಮಾಜದಲ್ಲಿ ಗುರಿಕ್ಕಾರರ ಮಹತ್ವ, ಗುರಿಕ್ಕಾರರು ಎದುರಿಸುತ್ತಿರುವ ಸಮಸ್ಯೆಗಳು, ವೈದಿಕರು – ಗುರಿಕ್ಕಾರರು – ಶಿಷ್ಯರೊಂದಿಗಿನ ಸಮನ್ವಯತೆ, ಸಂಘಟನೆಯ ಪದಾಧಿಕಾರಿಗಳು – ಗುರಿಕ್ಕಾರ ನಡುವಿನ ಸಮನ್ವಯತೆ ಈ ವಿಷಯಗಳನ್ನು ಆಧರಿಸಿ ಮಂಡಲದ ಎಲ್ಲಾ ವಲಯಗಳ ಎಲ್ಲಾ ಗುರಿಕ್ಕಾರರು ಮತ್ತು ಪದಾಧಿಕಾರಿಗಳು ಭಾಗವಹಿಸಿ ಚರ್ಚಿಸಿ ಒಂದು ಸಂವಾದ ರೂಪದಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನವೇ ಈ ಕಾರ್ಯಾಗಾರದ ಧ್ಯೇಯೋದ್ದೇಶವಾಗಿತ್ತು. 2022ರಲ್ಲಿ ನಡೆಸಿದ ಗುರಿಕ್ಕಾರರ ಸಮಾವೇಶ ನಿರೀಕ್ಷಿತ ಯಶಸ್ಸು ಕಾಣದಿದ್ದುದರಿಂದ ಈ ಬಾರಿ ಮಂಡಲದ ನಾಲ್ಕು ಕಡೆ 3/4 ವಲಯಗಳನ್ನು ಸೇರಿಸಿ […]