Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

* ಚಿ| ಅನಿರುದ್ಧ ಭಟ್ಟ ಕೃಷಿ ವಿಜ್ಞಾನ ಪದವಿ ವಿದ್ಯಾರ್ಥಿ, ಮುಳ್ಳೇರಿಯಾ ಮಂಡಲಾಂತರ್ಗತ ಸುಳ್ಯ ವಲಯದ ನಿವಾಸಿಗಳಾದ ಮೂಲತಃ ಸಾಗರ ಪ್ರಾಂತ್ಯದ ಶ್ರೀಮತಿ ಅನಿತಾ ಹಾಗೂ ಶ್ರೀ ವೇದಮೂರ್ತಿ ಇವರ ಸುಪುತ್ರ. ಹವ್ಯಾಸಕ್ಕಾಗಿ ಕಿರುಚಿತ್ರ ನಿರ್ಮಿಸುತ್ತ, ಅಭಿನಯ ನಿರ್ದೇಶನಗಳಲ್ಲಿ ತೊಡಗಿಸಿಕೊಂಡ ಅನಿರುದ್ಧ ಭಟ್ಟ ತನ್ನ ಸಮಾನ ಆಸಕ್ತ ಸ್ನೇಹಿತರೊಡಗೂಡಿ ನಿರ್ಮಿಸಿದ ಮಂಗಳಮುಖಿಯರ ಕುರಿತಾದ ಕಿರುಚಿತ್ರ ರಾಷ್ಟ್ರಮಟ್ಟದ ಪ್ರಶಸ್ತಿ ಗಳಿಸಿಕೊಂಡಿತು. * ಚಿ| ನಿರಂಜನ ಪ್ರಸಾದ್ ಉಡುಪಿ ವಲಯದ ಶ್ರೀಮತಿ ಕೀರ್ತನಾ ಪ್ರಸಾದ್ ಹಾಗೂ ಖ್ಯಾತ ಆರ್ಥಿಕ ತಜ್ಞ […]

Read More

ಬದಿಯಡ್ಕ ಜು. 1 : ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಮಂಗಳವಾರ ರಂಗಚಿನ್ನಾರಿ ಕಾಸರಗೋಡು ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆ ಹಮ್ಮಿಕೊಂಡ ಶಿಕ್ಷಣಕ್ಕಾಗಿ ನೃತ್ಯ `ತಕಜಣುತಾ’ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಗಣೇಶ ಪೈ ಮಾತನಾಡಿದರು. ರಂಗಚಿನ್ನಾರಿಯ ನಿರ್ದೇಶಕ ಶ್ರೀ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಭಾರತೀಯ ಪರಂಪರೆಯನ್ನು ಎತ್ತಿಹಿಡಿಯುವ ಸಲುವಾಗಿ ಶಿಕ್ಷಣಕ್ಕಾಗಿ ನೃತ್ಯ ಎಂಬ ಹೊಸ ಅಭಿಯಾನ ಆರಂಭಿಸಿದ್ದು, ಭಾರತೀಯ ನೃತ್ಯ ಪ್ರಕಾರಗಳಿಗೆ ಬಳಸುವ ಹಸ್ತಮುದ್ರೆಗಳ ಬಗ್ಗೆ ಮುಂದಿನ ಜನಾಂಗಕ್ಕೆ ತಿಳಿವಳಿಕೆ, ಮಾಹಿತಿ ನೀಡುವ ಉದ್ದೇಶವಿದೆ ಎಂದರು. ಆಕಾಶವಾಣಿ […]

Read More

ಹೊನ್ನಾವರ ಮಂಡಲದ ಮುಗ್ವಾ ವಲಯದ ಶ್ರೀಮತಿ ಜಯಲಕ್ಷ್ಮೀ ಮತ್ತು ಶ್ರೀ ನಾರಾಯಣ ಭಟ್ಟ ದಂಪತಿಯ ಪುತ್ರಿಯಾದ ಶ್ರೀನಿಧಿ ಭಟ್ಟ “THE BHARAT SCOUTS AND GUIDS KARNATAKA” ನೀಡುವ ರಾಜ್ಯ ಪುರಸ್ಕಾರ “RANGER” ಪ್ರಶಸ್ತಿ ಯನ್ನು ಗೌರವಾನ್ವಿತ ರಾಜ್ಯಪಾಲರಾದ” ಶ್ರೀ ವಜುಭಾಯಿ ವಾಲಾ” ಇವರಿಂದ ಪಡೆದಿರುತ್ತಾಳೆ. “RANGER” ಪ್ರಶಸ್ತಿ ಪಡೆದ ಉತ್ತರ ಕನ್ನಡ ಜಿಲ್ಲೆಯ ಪ್ರಥಮ ವಿದ್ಯಾರ್ಥಿನಿಯಾಗಿರುತ್ತಾಳೆ..

Read More

ಮಕ್ಕಳ ಬೆಳವಣಿಗೆಯಲ್ಲಿ ಆರೋಗ್ಯಕರ ಆಹಾರ ಕ್ರಮದ ಕುರಿತು ವಿಶೇಷ ಆಹ್ವಾನಿತ ಪ್ರಶಿಕ್ಷಕರಾದ ಶ್ರೀಮತಿ ಡಾ. ಸುವರ್ಣಿನಿ ಕೊಣಲೆ ಅವರು ಅವರು ಮಾರ್ಗದರ್ಶನ ಮಾಡಿದರು. ಆಹಾರದ ಮಹತ್ವ, ಆಹಾರದ ಸಮಯ, ಆಹಾರ ಮಕ್ಕಳ ಮನಸಿನ ಹಾಗೂ ದೈಹಿಕ ಬೆಳವಣಿಗೆಯಲ್ಲಿ ಎಷ್ಟು ಮುಖ್ಯವಾಗಿದೆ? ಯಾವ ರೀತಿಯ ಆಹಾರ ಕೊಡಬೇಕು, ಯಾವ ಪ್ರಮಾಣ ಹಾಗೂ ಗುಣಮಟ್ಟದ ಆಹಾರ ಮಕ್ಕಳಿಗೆ ಹಿತಕರ? ಎಂಬುದನ್ನು ಅವರು ಪಾಲಕರಿಗೆ ಮನಮುಟ್ಟುವ ರೀತಿಯಲ್ಲಿ ತಿಳಿಸಿದರು. ಅತ್ಯಂತ ಪ್ರಯೋಜನಕರ ಮಾಹಿತಿಯನ್ನು ಪಾಲಕರಿಗೆ ಹಾಗೂ ಶಿಕ್ಷಕರಿಗೆ ತಿಳಿಸಿಕೊಟ್ಟ ಡಾ. ಸುವರ್ಣಿನಿ […]

Read More

ಬದಿಯಡ್ಕ: ಜೂ.21 : ಶಾಲಾ ಪ್ರಾರಂಭದಿಂದಲೇ ಯೋಗಶಿಕ್ಷಣವನ್ನು ಪಠ್ಯದ ಭಾಗವಾಗಿ ಅಳವಡಿಸಿಕೊಂಡಿರುವ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಯೋಗದಿನಾಚರಣೆಯಂದು ೧ನೆಯ ತರಗತಿಯಿಂದ ೧೦ನೆಯ ತರಗತಿಯ ತನಕದ ಎಲ್ಲಾ ವಿದ್ಯಾರ್ಥಿಗಳೂ ಸಾಂಘಿಕವಾಗಿ ಹಾಗೂ ವಿಭಾಗಶಃ ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಆಗಮಿಸಿದ ನಿವೃತ್ತ ಪ್ರಾಂಶುಪಾಲರಾದ ಡಾ. ಬೇ.ಸೀ.ಗೋಪಾಲಕೃಷ್ಣ ಯೋಗದ ಕುರಿತು ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಯೋಗವು ಜನಜನಿತವಾಗುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ನೀಡಿದ ಉತ್ತಮ ಪ್ರದರ್ಶನವನ್ನು ನೋಡಿ ನನಗೂ ನಿಮ್ಮೊಂದಿಗೆ […]

Read More

ಗಿರಿನಗರ: ದಿವ್ಯತೆ ಹಾಗೂ ಭವ್ಯತೆ ಇದ್ದಲ್ಲಿ ಶುಭವಿರುತ್ತದೆ. ಭಾರತವೆಂಬ ಭವನದಲ್ಲಿ ವಿದ್ಯೆಗಳು ಹಾಗೂ ಕಲೆಗಳು ಬೆಳಕನ್ನು ನೀಡಿದೆ. ಭಿನ್ನ ಬೇದವಿಲ್ಲದೆ ಎಲ್ಲರಿಗೆ ಹಿತವನ್ನುಂಟು ಮಾಡುವವರು ಶ್ರೇಷ್ಠರು. ಲಕ್ಷಕ್ಕೆ ಮಿಕ್ಕ ಮಕ್ಕಳು ತಮ್ಮೊಳಗೆ ವಿದ್ಯಾ ದೀಪವನ್ನು ಬೆಳಗಿದಾಗ ಭಾರತ ಬೆಳಗಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಗಿರಿನಗರ ಶ್ರೀರಾಮಾಶ್ರಮದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪದಲ್ಲಿ ನಡೆಯುತ್ತಿರುವ ಧಾರಾರಾಮಾಯಣ ಪ್ರವಚನ ಮಾಲಿಕೆಯ ಮೊದಲ ದಿನ ಆಶೀರ್ವಚನ ನೀಡಿದರು. ಮಾಡುವ ಕಾರ್ಯದಲ್ಲಿ ತೀವ್ರತೆ ಇದ್ದಾಗ ಫಲ ಪ್ರಾಪ್ತಿಯಾಗುತ್ತದೆ. […]

Read More

ಬೆಂಗಳೂರಿನ ಹಂಪಿನಗರದ ಶ್ರೀಭಾರತೀ ವಿದ್ಯಾಲಯದ ನೂತನ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ವಿಶ್ರಾಂತ ಪ್ರಾಂಶುಪಾಲರು, ಶಿಕ್ಷಣ ತಜ್ಞರು, ಸಂಪನ್ಮೂಲ ವ್ಯಕ್ತಿಗಳೂ ಆದ ಶ್ರೀ ವಿಶ್ವೇಶ್ವರ ಭಟ್ಟ ಉಂಡೆಮನೆಯವರು ಕಳೆದೆರಡು ದಿನಗಳಿಂದ ಶಿಕ್ಷಕರಿಗೆ ತರಬೇತಿಯನ್ನು ನೀಡುತ್ತಾ ಬಂದಿದ್ದಾರೆ. ಮೊದಲನೆಯ ದಿನದ ವಿಷಯ ವಸ್ತುವು ” ಮಿತ್ರದ್ವಾರಾ ಸ್ವಪರಿಚಯ” .ಪ್ರತಿಯೊಬ್ಬ ಶಿಕ್ಷಕನೂ ೨ ನಿಮಿಷದ ಅವಧಿಯಲ್ಲಿ ತಮ್ಮ ಸಹೋದ್ಯೋಗಿ‌ ಮಿತ್ರರೋರ್ವರ ಮಾಹಿತಿಯನ್ನು ಕಲೆಹಾಕಿ ಶಿಕ್ಷಕ ಸಮೂಹದೆದುರು ಪರಸ್ಪರ ಪರಿಚಯ ಮಾಡಿಕೊಡುವ ಚಟುವಟಿಕೆಯಾಗಿದ್ದು ಬಹಳ ಆಸಕ್ತಿಯುತವಾಗಿತ್ತು. ಶಿಕ್ಷಕರು ಇಂತಹ ಚಟುವಟಿಕೆಗಳನ್ನು ತಮ್ಮ ತರಗತಿಗಳಲ್ಲಿ ಮಾಡಿಸುವುದರಿಂದ […]

Read More

ಬದಿಯಡ್ಕ: ಶ್ರೀಭಾರತೀ ವಿದ್ಯಾಪೀಠದಲ್ಲಿ ೨೦೧೯-೨೦ನೆಯ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಹರ್ಷೋಲ್ಲಾಸದಿಂದ ನಡೆಸಲಾಯಿತು. ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ನಾವು ಎಷ್ಟು ಅಂಕ ಪಡೆದರೂ ಕಡಿಮೆಯೇ. ಅಂಕ ಗಳಿಸುವುದರ ಜೊತೆಗೆ ಸರ್ಜನಾತ್ಮಕ ಕ್ರಿಯಾಶೀಲತೆಯೂ ಇರಬೇಕು ಎಂದು ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಪಂಜಿತ್ತಡ್ಕ ಅವರು ಶಾಲಾ ನೀತಿ-ನಿಯಮಗಳನ್ನು ತಿಳಿಸಿ, ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಮುನ್ನುಗ್ಗಬೇಕು ಎಂದು ಹೇಳಿದರು.   ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ […]

Read More

ಮಂಗಳೂರು ಮಂಡಲದ ಮರವಂತೆ ವಲಯದ ಮತ್ತು ಘಟಕದ ಘಟಕದ ಲಕ್ಷ್ಮಿ ನಾರಾಯಣ ಹೆಬ್ಬಾರರ ಪುತ್ರನಾದ ಭಾರ್ಗವ ಎಲ್. ಹೆಬ್ಬಾರ ಇವರು ಕುಂದಾಪುರದ ಶ್ರೀ ವೇಂಕಟರಮಣ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿ ಪೀಯೂಸೀ (ವಾಣಿಜ್ಯ) ಪರೀಕ್ಷೆಯಲ್ಲಿ 90.33%.ಅಂಕಗಳಿಸಿದ್ದಾರೆ.

Read More

ಕೇರಳ ರಾಜ್ಯದ SSLC ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಶ್ರೀಮಠದ ಡಿಸಿಎಸ್ ಶಾಲಾ ಮಾಲೆಯ, ಕಾಸರಗೋಡಿನ ಬದಿಯಡ್ಕದ ಶ್ರೀಭಾರತೀ ವಿದ್ಯಾಪೀಠದ ಮಕ್ಕಳು ಶೇಕಡಾ 100 ಫಲಿತಾಂಶದೊಂದಿಗೆ ಉತ್ತಮ ಸಾಧನೆ ಮಾಡಿರುತ್ತಾರೆ. ಒಟ್ಟು 19 ವಿದ್ಯಾರ್ಥಿಗಳ ಪೈಕಿ 13 ವಿದ್ಯಾರ್ಥಿಗಳು ಶೇಕಡಾ 90ಕ್ಕಿಂತ ಅಧಿಕ ಅಂಕ ಗಳಿಸಿರುತ್ತಾರೆ. ಇವರಲ್ಲಿ ಅಭಿರಾಮ್ ಕಶ್ಯಪ್ ಕೆ. ವಿ., ಗಾಮಿನಿ, ಶಮಾತ್ಮಿಕಾ ಎ, ಶ್ರೀರತ್ನಮಾಲಾ ಎಸ್.ವಿ , ಸ್ನೇಹಶ್ರೀ ಪಿ, ಇವರುಗಳು ಎಲ್ಲಾ ವಿಷಯಗಳಲ್ಲೂ A+ ಗ್ರೇಡ್ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ. ಇವರಿಗೆ […]

Read More

ಅಂಬಾಗಿರಿ, ಶಿರಸಿ – ದಿನಾಂಕ 02-05-2019 ಬುಧವಾರದಂದು ಶಿರಸಿ ಅಂಬಾಗಿರಿ ಕಾಳಿಕಾ ಮಠದಲ್ಲಿ ಶ್ರೀಮಠದ ವಿದ್ಯಾರ್ಥಿ ವಾಹಿನಿ‌ ವಿಭಾಗ ನಡೆಸುವ ವಿರಾಮ-ವಿಚಾರ-ವಿಹಾರ ಬೇಸಿಗೆ ಶಿಬಿರದ ಉದ್ಘಾಟನೆ ನಡೆಯಿತು. ಹವ್ಯಕ ಮಹಾಮಂಡಲದ ಅಧ್ಯಕ್ಷೆ ಶ್ರೀಮತಿ ಈಶ್ವರಿ ಶ್ಯಾಮ ಭಟ್ಟ ಬೇರ್ಕಡವು ದೀಪ ಪ್ರಜ್ವಾಲನೆಯ ಮೂಲಕ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದರು. ಅನಂತರ ಮಾತನಾಡಿ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ನಮ್ಮ ಗುರುಗಳು ನಮ್ಮ ಜೊತೆಗಿದ್ದಾರೆ, ನಾವು ಒಳ್ಳೆಯ ಪ್ರಜೆಗಳಾಗಿ ಬಾಳೋಣ, ಅದಕ್ಕೆ ಪೂರಕವಾದ ಅಂಶ ಶ್ರೀ ಗುರುಗಳಿಂದ ದೊರೆಯುತ್ತದೆ, ಕಷ್ಟವೆಂದು ಎನಿಸಿದರೂ […]

Read More

ಮಂಗಳೂರಿನ ನಂತೂರಿನಲ್ಲಿರುವ ಶ್ರೀಮಠದ ವಿದ್ಯಾಸಂಸ್ಥೆ ಶ್ರೀ ಭಾರತೀ ಪದವಿ ಕಾಲೇಜಿನ ಪ್ರಾಂಶುಪಾಲರಾಗಿ ಶ್ರೀ ಜೀವನದಾಸ್ ಎ. ಅವರು ಮತ್ತು ಉಪಪ್ರಾಂಶುಪಾಲರಾಗಿ ಗಂಗಾರತ್ನ ಮುಗುಳಿ ಅವರು ಗುರುವಾರ ಜವಾಬ್ದಾರಿಯನ್ನು ಸ್ವೀಕರಿಸಿದರು.   ಶ್ರೀಭಾರತೀ ಸಮೂಹ ಸಂಸ್ಥೆಗಳ ಸೇವಾ ಸಮಿತಿ ಕಾರ್ಯಾಧ್ಯಕ್ಷ ಗಣೇಶಮೋಹನ ಕಾಶಿಮಠ, ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ, ಆಡಳಿತಾಧಿಕಾರಿ ಪ್ರೊ.ಕೆ.ಶಂಕರ ಭಟ್ಟ, ಸಹಕಾರ್ಯದರ್ಶಿಗಳಾದ ಪ್ರೊ.ವಿ.ಜಿ.ಭಟ್ಟ, ಉಂಡೆಮನೆ‌ ವಿಶ್ವೇಶ್ವರ ಭಟ್ಟ , ಕಾರ್ಯಾಲಯ ಕಾರ್ಯದರ್ಶಿ ಎಂ.ಟಿ.ಭಟ್ಟ , ಪ.ಪೂ. ಕಾಲೇಜು ಪ್ರಾಂಶುಪಾಲರಾದ ವಿದ್ಯಾ ಭಟ್ಟ, ಬೋಧಕ, ಬೋಧಕೇತರ ವೃಂದದವರು ಉಪಸ್ಥಿತರಿದ್ದರು

Read More

ಕರು – ತುರುಗಳ ಸಂಗದಲ್ಲಿ ಗುರು – ಚಿಗುರುಗಳ ಸಂಗಮ. ಮೇ 8, ವೈಶಾಖ ಶುದ್ಧ ಚತುರ್ಥಿ, ಗೋಸ್ವರ್ಗದಲ್ಲಿ ಕರುಗಳ ಅಂಬಾರವದೊಡನೆ ಮಕ್ಕಳ ಸಡಗರದ ರವ ಬೆರೆಯುವ ವಿಶೇಷ ಹಬ್ಬ! ಮಕ್ಕಳ ಮಹಾಸಮ್ಮೇಳನ. ಗೋಸ್ವರ್ಗದಲ್ಲಿ ಮಕ್ಕಳ ಮಹಾಸಮ್ಮೇಳನವೆಂಬ ವಿಶಿಷ್ಟ ಪರಿಕಲ್ಪನೆಯ ಕೆಲವು ವೈಶಿಷ್ಟ್ಯಗಳು ಹೀಗಿವೆ. ಸಪ್ತಸನ್ನಿಧಿಯಲ್ಲಿ ಸಪ್ತಧಾರೆ!   ಕ್ಷೀರಧಾರೆ ಗೋಸ್ವರ್ಗದ ನಡುವಿನಲ್ಲಿ ಕಾಮಧೇನುವು ಇಳಿದು ಬಂದು ಹಾಲು ಸುರಿಸುವ ವಿಸ್ಮಯ! ಮಕ್ಕಳಿಗೆ ಭೂಲೋಕದ ಅಮೃತ ಪ್ರಾಪ್ತವಾಗುವ ಸುಸಮಯ! ದಿವಿಯಿಂದ ಭುವಿಗಿಳಿದ ಸುರಧೇನುವಿನ ಸಂತಸದ ನೆಲೆ ಗೋಸ್ವರ್ಗದಲ್ಲಿ […]

Read More

ಶ್ರೀಮಠದ ಶ್ರೀ ಭಾರತೀ ಗುರುಕುಲದಲ್ಲಿ 100 ಕ್ಕೆ ನೂರು ಎಸ್ ಎಸ್ ಎಲ್ ಸಿ ಫಲಿತಾಂಶ ದೊರಕಿದೆ. ಈ ಉತ್ತಮ ಪರಿಣಾಮಕ್ಕೆ ಕಾರಣರಾದ ಅಧ್ಯಾಪಕರು, ಸಿಬ್ಬಂದಿಗಳು , ವಿದ್ಯಾರ್ಥಿಗಳು, ಪೋಷಕರು ,ದಾನಿಗಳು, ಹಿತೈಷಿಗಳಿಗೆ ಆಡಳಿತಸಮಿತಿಯು ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದೆ.

Read More

ವಿದ್ಯಾರ್ಥಿಗಳ ಮತ್ತು ಹೆತ್ತವರ ಗಮನಕ್ಕೆ   ನಂತೂರು: ಪರಮಪೂಜ್ಯ ಶ್ರೀಸಂಸ್ಥಾನದವರ ಸಂಪೂರ್ಣ ಆಶೀರ್ವಾದ, ಅನುಗ್ರಹದೊಂದಿಗೆ ಮುನ್ನಡೆಯುತ್ತಿರುವ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳಲ್ಲಿ 8, 9, 10ನೆಯ ತರಗತಿ, ಪಿಯುಸಿ(ವಾಣಿಜ್ಯ ಮತ್ತು ವಿಜ್ಞಾನ) ಹಾಗೂ ಪದವಿ(ಬಿಸಿಎ, ಬಿಎಸ್ಸಿ, ಬಿಕಾಂ) ವಿಭಾಗಗಳಿವೆ. ಇದು ಶ್ರೀಮಠದ ಏಕೈಕ ಕಾಲೇಜು. ಪ್ರಸಕ್ತ ಸಾಲಿನಲ್ಲಿ 40ಕ್ಕೂ ಅಧಿಕ ಬೋಧಕ, ಬೋಧಕೇತರ ವೃಂದದವರನ್ನು ಹೊಂದಿದೆ. ಇಲ್ಲಿ ಅತ್ಯುತ್ತಮ ಶಿಕ್ಷಣ ನೀಡಲಾಗುತ್ತಿದ್ದು, ಇದು ಅತ್ಯುತ್ತಮ ಫಲಿತಾಂಶ ದಾಖಲಿಸಲು ಕಾರಣವಾಗಿದೆ. ಈಗಾಗಲೇ ನಡೆದ ಆಂತರಿಕ ಪರೀಕ್ಷೆಗಳಲ್ಲಿ […]

Read More

ಮರವಂತೆ: ಮರವಂತೆ ವಲಯದ ಪಡುಕೋಣೆ ಘಟಕದ ಶ್ರೀ ಮೋಹನ ಹೆಬ್ಬಾರ್ ಹಾಗೂ ಶ್ರೀಮತಿ ಗೀತಾ ಹೆಬ್ಬಾರ್ ದಂಪತಿಗಳ ಮಗಳು ಕು. ಅಖಿಲಾ ಹೆಬ್ಬಾರ್ ದ್ವಿತೀಯ ಪಿ.ಯು.ಸಿ.ಯಲ್ಲಿ 97% ಅಂಕವನ್ನು ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.  

Read More

ಅನೂಚಾನ ವಿದ್ಯಾ ಪ್ರತಿಷ್ಠಾನ ಗುತ್ತಿಗಾರು ಮತ್ತು ಹವ್ಯಕ ವಲಯ ಗುತ್ತಿಗಾರು ಸಹಯೋಗದಲ್ಲಿ ವಸಂತ ವೇದ ಶಿಬಿರ ಮತ್ತು ಗಾಯತ್ರೀ ಯಜ್ಞ ಮಹಾಸಂಕಲ್ಪ ಮತ್ತು ಘೃತ ಕಲಶ ಸ್ಥಾಪನೆ, ಗಾಯತ್ರೀ ಜಪ ಪ್ರಾರಂಭೋತ್ಸವವು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ದಿನಾಂಕ 15/04/19 ಸೋಮವಾರ ಬೆಳಿಗ್ಗೆ ಗಂಟೆ 8.30 ಕ್ಕೆ ಗುರುವಂದನೆ, ಪ್ರಾರ್ಥನೆಯೊಂದಿಗೆ ಆರಂಭವಾಯಿತು. ವೇ.ಮೂ.ಪಿ.ಸುಬ್ರಾಯ ಕೆದಿಲಾಯ ವಳಲಂಬೆ ಇವರು ದೀಪ ಬೆಳಗಿಸಿ ವೇದ ಶಿಬಿರ ವನ್ನು ಉದ್ಘಾಟಿಸಿ ವೇದ ಶಿಬಿರದ ಅಗತ್ಯತೆ ಮತ್ತು ಅವಶ್ಯಕತೆಯನ್ನು ತಿಳಿಸಿದರು. […]

Read More

ಪೆರಡಾಲ, 17.04.2019 ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿ ಕೀರ್ತಿಗೆ ಭಾಜನರಾದ ಕಾಸರಗೋಡಿನ ಪೆರಡಾಲ ಕಡಪ್ಪು ಶ್ರೀ ಕೃಷ್ಣ ಶರ್ಮ ಇವರನ್ನು ಮಾತಾಪಿತೃ ಕಡಪ್ಪು ಶ್ರೀ ಸುಬ್ರಹ್ಮಣ್ಯ ಭಟ್ಟ ಶಾರದಾ ದಂಪತಿ ಮತ್ತು ಮನೆಯವರ ಉಪಸ್ಥಿತಿಯಲ್ಲಿ ಪೆರಡಾಲ ಹವ್ಯಕ ವಲಯ ವತಿಯಿಂದ ಶಾಲು ಹೊದೆಸಿ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು.   ಕಡಪ್ಪು ನಿವಾಸದಲ್ಲಿ ಜರಗಿದ ಸಭೆಯಲ್ಲಿ ಪೆರಡಾಲ ವಲಯ ಅಧ್ಯಕ್ಷರಾದ ಶ್ರೀಹರಿಪ್ರಸಾದ್ ಪೆರ್ಮುಖ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಹಾ ಮಂಡಲ ಉಲ್ಲೇಖ ಪ್ರಧಾನ ಗೋವಿಂದಬಳ್ಳಮೂಲೆ […]

Read More

2018 -19 ರ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಪುತ್ತೂರಿನ ಸ್ವಸ್ತಿಕ್ ಪಿ ಮಾಡಾವು 594 ಅಂಕ ಪಡೆದು ರಾಜ್ಯದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಇವರು ಪುತ್ತೂರು ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ. ಪ್ರಾಥಮಿಕ ವಿದ್ಯಾಭ್ಯಾಸ ನರಿಮೊಗರು ಸಾಂದೀಪನಿ ವಿದ್ಯಾ ಸಂಸ್ಥೆ ಹಾಗೂ ಭೆಥೆನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ. ಹೈಸ್ಕೂಲ್ ವಿದ್ಯಾಭ್ಯಾಸವನ್ನು ಸಂತ ಫಿಲೋಮಿನಾ ಹೈಸ್ಕೂಲಿನಲ್ಲಿ ಮುಗಿಸಿದ್ದಾರೆ.   ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಮೃದಂಗ ಜೂನಿಯರ್ ಗ್ರೇಡ್ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗಿದ್ದು, ರಾಷ್ಟ್ರೀಯ ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ […]

Read More

2018 -19 ರ ಕರ್ನಾಟಕ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಕಾಸರಗೋಡು ಪೆರಡಾಲದ ಕಡಪ್ಪುಶ್ರೀ ಕೃಷ್ಣ ಶರ್ಮ ಇವರು 596 ಅಂಕ ಪಡೆದು ರಾಜ್ಯಕ್ಕೇ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಇವರು ಅಳಿಕೆ ಸತ್ಯ ಸಾಯಿ ಲೋಕಸೇವಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ.   ಪ್ರಾಥಮಿಕದಿಂದ SSLC ವಿದ್ಯಾಭ್ಯಾಸವನ್ನು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಕನ್ನಡಮಾಧ್ಯಮದಲ್ಲಿ ಪಡೆದಿರುತ್ತಾರೆ. ಇವರು ಶ್ರೀ ಸುಬ್ರಹ್ಮಣ್ಯ ಭಟ್ಟ ಶಾರದಾ ದಂಪತಿಯ ಪುತ್ರರಾಗಿದ್ದಾರೆ. ಇವರ ಮುಂದಿನ ಸಾಧನೆಗೆ ಶ್ರೀಗುರುದೇವತಾನುಗ್ರಹ ಸದಾ ಇರಲಿ ಎಂಬ ಹಾರೈಕೆ.

Read More
1 2 3 5
Online news kannada regional herald regional news sports politics karavali kannada latest news breaking news upcoming news save kannada save government school karnataka udupi news kundapura news india top news