ಶ್ರೀಭಾರತೀ ಸಮೂಹಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ

ಶಿಕ್ಷಣ

ವಿದ್ಯಾರ್ಥಿಗಳ ಮತ್ತು ಹೆತ್ತವರ ಗಮನಕ್ಕೆ

 

ನಂತೂರು: ಪರಮಪೂಜ್ಯ ಶ್ರೀಸಂಸ್ಥಾನದವರ ಸಂಪೂರ್ಣ ಆಶೀರ್ವಾದ, ಅನುಗ್ರಹದೊಂದಿಗೆ ಮುನ್ನಡೆಯುತ್ತಿರುವ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳಲ್ಲಿ 8, 9, 10ನೆಯ ತರಗತಿ, ಪಿಯುಸಿ(ವಾಣಿಜ್ಯ ಮತ್ತು ವಿಜ್ಞಾನ) ಹಾಗೂ ಪದವಿ(ಬಿಸಿಎ, ಬಿಎಸ್ಸಿ, ಬಿಕಾಂ) ವಿಭಾಗಗಳಿವೆ. ಇದು ಶ್ರೀಮಠದ ಏಕೈಕ ಕಾಲೇಜು. ಪ್ರಸಕ್ತ ಸಾಲಿನಲ್ಲಿ 40ಕ್ಕೂ ಅಧಿಕ ಬೋಧಕ, ಬೋಧಕೇತರ ವೃಂದದವರನ್ನು ಹೊಂದಿದೆ. ಇಲ್ಲಿ ಅತ್ಯುತ್ತಮ ಶಿಕ್ಷಣ ನೀಡಲಾಗುತ್ತಿದ್ದು, ಇದು ಅತ್ಯುತ್ತಮ ಫಲಿತಾಂಶ ದಾಖಲಿಸಲು ಕಾರಣವಾಗಿದೆ. ಈಗಾಗಲೇ ನಡೆದ ಆಂತರಿಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ ಪ್ರಗತಿಯನ್ನು ದಾಖಲಿಸಿದೆ.

 

ಇಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ, ಆಟೋಟಕ್ಕೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ. ಇದೆಲ್ಲವನ್ನೂ ನಿಮ್ಮೆಲ್ಲರ ಜತೆ ನಾವು ಹಂಚಿಕೊಂಡಿದ್ದೇವೆ. ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಆರಂಭವಾಗಿದೆ. ಈ ಬಾರಿಯಿಂದ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ ಆರಂಭಿಸಲಿದ್ದೇವೆ. ಸಂಸ್ಥೆಗೆ ಆಗಮಿಸುವ ರಸ್ತೆಗೆ ಇಂಟರ್ ಲಾಕ್, ಗಾರ್ಡನ್ ಇತ್ಯಾದಿ ಬ್ಯೂಟಿಫಿಕೇಶನ್ ಕಾಮಗಾರಿಗಳೂ ನಡೆಯುತ್ತಿದೆ.

 

ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ತರಬೇತಿಗಳನ್ನು ನೀಡಲಾಗಿದೆ. ನಮ್ಮ ವಿದ್ಯಾರ್ಥಿಗಳ ತಂಡ ವಿವಿಧ ಕಡೆ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದಲ್ಲದೇ ಬಹುಮಾನ ಪಡೆದ ವಿಶಿಷ್ಟ ದಾಖಲೆಯಿದೆ.

 

ಉತ್ತಮ ಗ್ರಂಥಾಲಯ, ಅತ್ಯುತ್ತಮ ಪ್ರಯೋಗಾಲಯಗಳು, ಮಕ್ಕಳಿಗೆ ಉತ್ತಮ ಯುನಿಫಾರಂ, ವಿವಿಧ ಸ್ಕಾಲರ್‌ಶಿಪ್ ಒದಗಿಸಲಾಗಿದೆ. ಭಜನೆ, ಭರತನಾಟ್ಯ, ಸಂಗೀತ, ಕರಾಟೆ, ಯಕ್ಷಗಾನ, ಯೋಗ ತರಬೇತಿಗಳನ್ನು ನಡೆಸಲಾಗುತ್ತಿದೆ.

 

ಒಂದು ಶಿಕ್ಷಣ ಸಂಸ್ಥೆಯಲ್ಲಿ ಇಷ್ಟೆಲ್ಲ ಸೌಲಭ್ಯಗಳನ್ನು ಒದಗಿಸುವಾಗ ನಿಮ್ಮ ಮಕ್ಕಳನ್ನು ಸೇರ್ಪಡೆಗೊಳಿಸಲು ಬೇರೆ ವಿದ್ಯಾಸಂಸ್ಥೆಯನ್ನು ಹುಡುಕಬೇಕೇ? ನಮ್ಮ ಸಂಸ್ಥೆಗೇ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಿ, ಉತ್ತಮ ಪ್ರಜೆಗಳನ್ನಾಗಿಸೋಣ.

 

ಪಿಯುಸಿ ಪರೀಕ್ಷೆ ಮುಗಿದು, ಫಲಿತಾಂಶ ಪ್ರಕಟವಾಗಿದೆ. ಎಸೆಸೆಲ್ಸಿ ಪರೀಕ್ಷೆಯೂ ಮುಗಿದು ಫಲಿತಾಂಶ ಶೀಘ್ರದಲ್ಲೇ ಪ್ರಕಟವಾಗಲಿದೆ. ಈಗ ಎಲ್ಲ ಹೆತ್ತವರೂ ವಿದ್ಯಾರ್ಥಿಗಳೂ ಭವಿಷ್ಯದ ಚಿಂತನೆಯಲ್ಲಿದ್ದು ನೀವೆಲ್ಲರೂ ನಮ್ಮ ಸಂಸ್ಥೆಗೇ ಸೇರ್ಪಡೆಗೊಂಡು ಉತ್ತಮ ಭವಿಷ್ಯವನ್ನು ರೂಪಿಸಬೇಕಾಗಿ ವಿನಂತಿಸುತ್ತೇವೆ.

 

-ಸೇವಾ ಸಮಿತಿ, ಶ್ರೀ ಭಾರತೀ ಸಮೂಹ ಸಂಸ್ಥೆಗಳು, ನಂತೂರು, ಮಂಗಳೂರು
ದೂರವಾಣಿ : 0824-2214062, 2214063, 2216464

Author Details


Srimukha

Leave a Reply

Your email address will not be published. Required fields are marked *