Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಮಾಲೂರು: ಗೋವು ಹಾಲಿಗೇ ಮೀಸಲು ಆಗದೆ, ಕೃಷಿ ಚಟುವಟಿಕೆಗೆ ಅಗತ್ಯ ಎಂಬುದನ್ನು ಅರಿಯುವ ಕಾರ್ಯವಾಗಬೇಕು. ಕೃಷಿ ಭೂಮಿಗೆ ದೇಸೀ ಗೋವಿನ ಸಗಣಿ ಬೇಕಾದಷ್ಟು ಮಟ್ಟಿಗೆ ಸಿಗುತ್ತಿಲ್ಲವೆಂಬ ಪರಿಸ್ಥಿತಿ ಈಗ ಇದೆ. ಯುವ ಶಕ್ತಿಯನ್ನು ಬಳಸಿಕೊಂಡು ಯುವ ಫಾರ್ಮ್ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.   ಗೋಶಾಲೆ ನಿರ್ಮಾಣ ಮಾಡುವ ಬಗ್ಗೆ ಮಾಹಿತಿ ಪಡೆಯಲು ಶ್ರೀರಾಮಚಂದ್ರಾಪುರ ಮಠದ ಕಾಮದುಘಾ ವಿಭಾಗದಿಂದ ನಡೆಸಲ್ಪಡುತ್ತಿರುವ ಮಾಲೂರು ಶ್ರೀರಾಘವೇಂದ್ರ ಗೋಆಶ್ರಮಕ್ಕೆ ಭೇಟಿ ನೀಡಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ […]

Read More

ಭಾನ್ಕುಳಿ ಜೂ. 15 : ಸಿದ್ಧಾಪುರ ಮಂಡಲದ ವೈದಿಕ ಪರಿಷದ್ ಸಹಯೋಗದಲ್ಲಿ ಮಠದ ಪುರೋಹಿತರ ಮಾರ್ಗದರ್ಶನದಲ್ಲಿ ಶ್ರೀ ಶ್ರೀಗಳವರ ನಿರ್ದೇಶನದಂತೆ ಲೋಕಕಲ್ಯಾಣ ವರ್ಷ ಸಂತುಷ್ಟಿಗಾಗಿ ಉದಕಶಾಂತಿ ಪ್ರತಿಸರಬಂಧ ಪಾರಾಯಣವು ಗೋಸ್ವರ್ಗದ ಗೋಪದ ವೇದಿಕೆಯಲ್ಲಿ ನಡೆಯಿತು. ಗೋಧೂಳಿ ಮುಹೂರ್ತದಲ್ಲಿ ಆರಂಭವಾದ ಮಂತ್ರಘೋಷ ಗೋಸ್ವರ್ಗದ ತುಂಬೆಲ್ಲ ಮಾರ್ಮೊಳಗಿತು.

Read More

ಮಾಲೂರು: ಜೂ. 12, ದೇವರನ್ನು ತಲುಪಬೇಕಾದರೆ ಗೋವು ದ್ವಾರ ಹಾಗೂ ದಾರಿಯಾಗಿದೆ. ಗೋಮಾತೆಯ ಸೇವೆಯನ್ನು ಮಾಡಿ ಒಲುಮೆಯನ್ನು ಗಳಿಸಿದರೆ ಮುಂದೆ ಭಗವಂತನ ಸಾನಿಧ್ಯ ನಿಶ್ಚಿತ. ಗೋಸೇವೆ ಮಾಡಿದಾಗ ಪಾಪಗಳು ಪರಿಹಾರವಾಗುತ್ತವೆ. ಗೋಸೇವೆ ಉತ್ತಮವಾಗಿ ನಡೆದಾಗ ಎಲ್ಲರಿಗೆ ಆಶೀರ್ವಾದ ಸಿಗುತ್ತದೆ. ಸಿದ್ಧಾಂಜನೇಯನ ಸನ್ನಿಧಿಯಲ್ಲಿ ಶುಭವಾದರೆ ಎಲ್ಲಾ ಕಡೆಯಲ್ಲಿ ಶುಭವಾಗುತ್ತದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ಹೇಳಿದರು. ಮಾಲೂರು ಗಂಗಾಪುರ ಶ್ರೀರಾಘವೇಂದ್ರ ಗೋ ಆಶ್ರಮಕ್ಕೆ ಬೇಟಿ ಮಾಡಿ ಗೋಪ್ರೇಮಿಗಳನ್ನು ಅನುಗ್ರಹಿಸಿ, ಆಶೀರ್ವಚನ ನೀಡಿದರು.   […]

Read More

ಉತ್ತರಬೆಂಗಳೂರು ಮಂಡಲದ ವಿದ್ಯಾರಣ್ಯ ವಲಯದಲ್ಲಿಯ ತ್ರಿಧಾರಾ ಎಂಬ ಸೇವಾ ಸಂಘಟನೆಯ 40 ಸದಸ್ಯರು ಸೇರಿ ಮೇ 12 ರಂದು ಮಾಲೂರು ಗೋಶಾಲೆಗೆ ಹೋಗಿ ಗಣಪತಿಹೋಮ, ಗೋಪೂಜೆ, ಸೀಡ್ ಬಾಲ್ ನಿರ್ಮಾಣ, ಮಕ್ಕಳಿಗೆ ಎತ್ತಿನ ಬಂಡಿಯ ಸವಾರಿ, ಮತ್ತು ಕೆಲವು ಆಟಗಳು ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಅಲ್ಲದೆ ಗೋಶಾಲೆಗೆ ಯಥಾಶಕ್ತಿ ಧನ ಸಂಗ್ರಹ ಮಾಡಿ ನೀಡಿದ್ದಾರೆ.

Read More

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಬಜಕೋಡ್ಳುಲ ಅಮೃತಧಾರಾ ಗೋಶಾಲೆಯ ಪರಿಸರದಲ್ಲಿ ಶೋಭಿಸುತ್ತಿರುವ ಶ್ರೀ ಗೋವರ್ಧನ ಧರ್ಮಮಂದಿರದಲ್ಲಿ ತಾ. 28. 04. 2019 ರಂದು ಶ್ರೀ ಗುರುಮಹಾದೇವ ವೇದಶಿಬಿರವು ಶುಭಾರಂಭಗೊಂಡಿತು. ಎಣ್ಮಕಜೆ ಹವ್ಯಕ ವಲಯ ಅಧ್ಯಕ್ಷರಾದ ಶಿವಪ್ರಸಾದ ವರ್ಮುಡಿಯವರು ಜ್ಯೋತಿ ಬೆಳಗಿಸಿ ವೇದಶಿಬಿರ ಉದ್ಘಾಟನೆಯನ್ನು ಮಾಡಿದರು. ವಲಯದ ಸಂಸ್ಕಾರ ವಿಭಾಗ ಪ್ರಧಾನರಾದ ಡಾ| ಸದಾಶಿವ ಭಟ್ಟ ಪೆರ್ಲ ಅವರು ಉಪನೀತ ವಟುಗಳಿಗೆ ಈ ಶ್ರೀ ಗುರುಮಹಾದೇವ ವೇದಶಿಬಿರವನ್ನು ನಡೆಸಿಕೊಡುತ್ತಿದ್ದಂತೆ ಗೋಮಾತೆಯು ತನ್ಮಯತಾಭಾವದಿಂದ ಬಂದು […]

Read More

  ಮೇ 8, ವೈಶಾಖ ಶುದ್ಧ ಚತುರ್ಥಿ, ಗೋಸ್ವರ್ಗದಲ್ಲಿ ಕರುಗಳ ಅಂಬಾರವದೊಡನೆ ಮಕ್ಕಳ ಸಡಗರದ ರವ ಬೆರೆಯುವ ವಿಶೇಷ ಹಬ್ಬ! ಮಕ್ಕಳ ಮಹಾಸಮ್ಮೇಳನ. ಗೋಸ್ವರ್ಗದಲ್ಲಿ ಮಕ್ಕಳ ಮಹಾಸಮ್ಮೇಳನವೆಂಬ ವಿಶಿಷ್ಟ ಪರಿಕಲ್ಪನೆಯ ಕೆಲವು ವೈಶಿಷ್ಟ್ಯಗಳು ಹೀಗಿವೆ. *ಸಪ್ತಸನ್ನಿಧಿಯಲ್ಲಿ ಸಪ್ತಧಾರೆ!* *ಕ್ಷೀರಧಾರೆ* ಗೋಸ್ವರ್ಗದ ನಡುವಿನಲ್ಲಿ ಕಾಮಧೇನುವು ಇಳಿದು ಬಂದು ಹಾಲು ಸುರಿಸುವ ವಿಸ್ಮಯ! ಮಕ್ಕಳಿಗೆ ಭೂಲೋಕದ ಅಮೃತ ಪ್ರಾಪ್ತವಾಗುವ ಸುಸಮಯ! ದಿವಿಯಿಂದ ಭುವಿಗಿಳಿದ ಸುರಧೇನುವಿನ ಸಂತಸದ ನೆಲೆ ಗೋಸ್ವರ್ಗದಲ್ಲಿ ಕಾಮಧೇನುವಿನ ಪುನರವತರಣದ ಸಂಭ್ರಮದ ಸೃಷ್ಟಿ! ನಮ್ಮ ಮಕ್ಕಳು ಕ್ಷೀರಸಾಗರದಲ್ಲಿ ದೇಶೀಗೋವಿನ […]

Read More

ಗೋಆಶ್ರಮದ ಸಿದ್ಧಾಂಜನೇಯಸ್ವಾಮಿ ದೇವರ ಸನ್ನಿಧಿಯಲ್ಲಿ ದಿನಾಂಕ 19.04.2019ರಂದು ಹನುಮಜಯಂತಿ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ಪಂಚಾಮೃತಭಿಷೇಕ ಪೂರ್ವಕ ರುದ್ರಾಭಿಷೇಕ ಸೇವೆ ನಡೆಯಲಿದೆ. ನಂತರ ವಿಶೇಷ ವಡಾಕಣಜ ಸೇವೆ ಹಾಗೂ ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ನೆರವೇರಲಿದೆ. ತಾವೆಲ್ಲರೂ ಆಗಮಿಸಿ ಸಿದ್ಧಾಂಜನೇಯನಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ ಇಂತಿ ಶ್ರೀ ರಾಘವೇಂದ್ರ ಗೋಆಶ್ರಮ ಸೇವಾಸಮಿತಿ ಹನುಮಜಯಂತಿ ಸಂದರ್ಭದಲ್ಲಿ ವಿಶೇಷ ಸೇವೆಗಳು: ಪಂಚಾಮೃತಾಭಿಷೇಕ ₹150/- ರುದ್ರಾಭಿಷೇಕ ₹100/- ವಡಾ ಸೇವೆ ₹200/- ಸರ್ವಸೇವೆ ₹400/- ಸೇವಾ ಮೊತ್ತವನ್ನು ಬ್ಯಾಂಕ್ ಖಾತೆಗೆ […]

Read More

ಬಜಕೂಡ್ಲು: ಅಮೃತಧಾರಾ ಗೋಶಾಲೆಯ ಗೋವರ್ಧನ ಧರ್ಮಮಂದಿರದಲ್ಲಿ ದಿನಾಂಕ 4-3-2019 ಸೋಮವಾರ ಸಾಯಂಕಾಲ ಘಂಟೆ 5 ರಿಂದ ಮಹಾಶಿವರಾತ್ರಿ ಮಹೋತ್ಸವವನ್ನು ಆಚರಿಸಲಾಯಿತು. ಮಹಾಮಂಡಲ ಧರ್ಮ ಕರ್ಮ ಸಹಕಾರ್ಯದರ್ಶಿ ವೇ| ಮೂ | ಕೇಶವಪ್ರಸಾದ ಕೂಟೇಲು ಇವರ ನೇತೃತ್ವದಲ್ಲಿ ಶಿವಪೂಜೆ, ಎಣ್ಮಕಜೆ ವಲಯದ ಹತ್ತು ಮಂದಿ ರುದ್ರದ್ಯಾಯಿಗಳಿಂದ ರುದ್ರಪಾರಾಯಣ, ಶಿವಪಂಚಾಕ್ಷರೀ ಮಂತ್ರಜಪ ಹಾಗೂ ವಿಭೂತಿ ತಯಾರಿಗಾಗಿ ಬೆರಣಿ ಉರಿಸುವ ಕಾರ್ಯಕ್ರಮ ಗಳನ್ನು ನಡೆಸಲಾಯಿತು.   ಮುಳ್ಳೇರಿಯಾ ಮಂಡಲ ವಿದ್ಯಾರ್ಥಿ ವಾಹಿನಿ ಪ್ರಧಾನ ಶ್ರೀ ಕೇಶವಪ್ರಸಾದ ಎಡಕ್ಕಾನ ಇವರು ಗೋಪೂಜೆ ನಡೆಸುವ […]

Read More

ಗೋಸಂರಕ್ಷಣೆಯ ಸಪ್ತಸೂತ್ರಗಳನ್ನು ಜನಮಾನಸಕ್ಕೆ ಮುಟ್ಟಿಸಿ, ನಾಡಿನ ಗೋಪ್ರೇಮಿಗಳಿಂದ ಹಕ್ಕೊತ್ತಾಯದ ಹಸ್ತಾಕ್ಷರವನ್ನು ಪಡೆದು; ದೇಶದ ಆಡಳಿತ ವ್ಯವಸ್ಥೆಯನ್ನು ಗೋಸಂರಕ್ಷಣೆಗೆ ಆಗ್ರಹಿಸುವ ‘ಅಭಯಾಕ್ಷರ’ ಅಭಿಯಾನದಲ್ಲಿ ಸಂಗ್ರಹಿತವಾದ ಸುಮಾರು ಒಂದು ಕೋಟಿ ಅರ್ಜಿಗಳು ಬೆಂಗಳೂರು, ಮಂಗಳೂರು, ಉಡುಪಿ, ಕಾರವಾರ, ಬೀದರ್ ಸೇರಿದಂತೆ ರಾಜ್ಯಾದ್ಯಂತ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ದೇಶದ ಪ್ರಧಾನಮಂತ್ರಿಗಳು ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಸಲ್ಲಿಕೆಯಾದವು.   ಪೂಜ್ಯ ಸಿದ್ದಗಂಗಾ ಶ್ರೀಗಳು 21.1.19 ರಂದು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಅಂದು ನಿಗದಿಯಾಗಿದ್ದ ಕಾರ್ಯಕ್ರಮವನ್ನು ರದ್ಧುಗೊಳಿಸಿದ ಹಿನ್ನೆಲೆಯಲ್ಲಿ ಇಂದು ರಾಜ್ಯಾದ್ಯಂತ ಅರ್ಜಿ […]

Read More

ಬಜಕೂಡ್ಲು: ಪರಮಪೂಜ್ಯ ಶ್ರೀಸಂಸ್ಥಾನದವರ ದಿಗ್ದರ್ಶನದಲ್ಲಿರುವ ಕಾಸರಗೋಡು ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಗುಂಪೆ ವಲಯದ ಪುತ್ತಿಗೆ ಶ್ರೀ ಸುಬ್ರಾಯ ದೇವಸ್ಥಾನದ ಹತ್ತಿರದ ಗದ್ದೆಯಲ್ಲಿ ಇದ್ದ ಮೇವಿನ ಹುಲ್ಲನ್ನು ಸಾಗಿಸಿ ತಲಪಿಸುವ ಶ್ರಮದಾನವು 12.02.2019ರಂದು ಯಶಸ್ವಿಯಾಗಿ ಜರಗಿತು. ಸಾಯಂಕಾಲ 5 ಗಂಟೆಯಿಂದ 6ಗಂಟೆಯವರೆಗೆ ನಡೆದ ಸೇವಾಅರ್ಘ್ಯದಲ್ಲಿ ಒಟ್ಟು 36 ಗೋಣಿ ಹಸಿಸೊಪ್ಪು ಹಾಗೂ ಹುಲ್ಲನ್ನು ಸಂಗ್ರಹಿಸಲಾಯಿತು. ಮಹಾಮಂಡಲದ ಕಾಮದುಘಾ ಕಾರ್ಯದರ್ಶಿ ಡಾ. ವೈ. ವಿ. ಕೃಷ್ಣಮೂರ್ತಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಶ್ರೀ ಶಂಕರನಾರಾಯಣ ಭಟ್ ಗುಂಪೆ ಕಟಾವುಯಂತ್ರದಲ್ಲಿ ಸಹಕರಿಸಿದರು. […]

Read More

ಸಿದ್ದಾಪುರ : ತಾಲೂಕಿನ ದೊಡ್ಮನೆ ಸಮೀಪದ ಬಾಳ್ಗೋಡಿನಲ್ಲಿ ಮಂಗನಖಾಯಿಲೆಗೆ ಮುಂಜಾಗ್ರತಾ ಕ್ರಮವಾಗಿ ಭಾರತೀಯ ಗೋಪರಿವಾರ ಕರ್ನಾಟಕ, ಸಿದ್ದಾಪುರ ಹವ್ಯಕ ಮಂಡಲ, ಟಿ.ಎಸ್‍.ಎಸ್., ಟಿ.ಎಮ್.ಎಸ್. ಸಂಸ್ಥೆಗಳ ಸಹಯೋಗದಲ್ಲಿ ಪಂಚಗವ್ಯ ಚಿಕಿತ್ಸಾ ಶಿಬಿರ ಸಂಪನ್ನವಾಯಿತು. ಇತ್ತೀಚೆಗೆ ಸಿದ್ದಾಪುರ ಪ್ರಾಂತ್ಯದ ಹಲವೆಡೆ ಮಂಗನ ಖಾಯಿಲೆ ಕಾಣಿಸಿಕೊಂಡಿದ್ದು, ನೂರಾರು ಮಂಗಗಳನ್ನು ಬಲಿ ತೆಗೆದುಕೊಂಡಿದ್ದಲ್ಲದೇ, ಹತ್ತಕ್ಕೂ ಅಧಿಕ ಮನುಷ್ಯರ ಜೀವವನ್ನೂ ತೆಗೆದಿದೆ. ಮಾರಣಾಂತಿಕವಾಗಿ ಪರಿಣಮಿಸಿದ ಈ ಖಾಯಿಲೆಯ ಕುರಿತು ಆತಂಕದಿಂದ ಶ್ರೀಸಂಸ್ಥಾನದವರ ಸನ್ನಿಧಿಗೆ ಪ್ರಾರ್ಥಿಸಿದಾಗ, ಅವರು ಅಭಯಾಶೀರ್ವಾದ ನೀಡಿ, ರೋಗಪೀಡಿತ ಸ್ಥಳಗಳಲ್ಲಿ ಪಂಚಗವ್ಯ ಚಿಕಿತ್ಸೆ […]

Read More

ಗೋಸ್ವರ್ಗ: ಶ್ರೀಸಂಸ್ಥಾನದವರ ಮಾರ್ಗದರ್ಶನ ಹಾಗೂ ಉಪಸ್ಥಿತಿಯಲ್ಲಿ, ಭಾನ್ಕುಳಿ ಶ್ರೀ ರಾಮದೇವ ಮಠದಲ್ಲಿನ ಗೋಸ್ವರ್ಗದಲ್ಲಿ ನವಚಂಡಿ ಹವನ ಸಂಪನ್ನಗೊಂಡಿದೆ.   ಶ್ರೀ ಕೃಷ್ಣಭಟ್ ಅಡವೀತೋಟ ಇವರ ಅದ್ವರ್ಯದಲ್ಲಿ ಸಹರುತ್ವಿಜರ ಸಹಕಾರದಿಂದ ದಿನಾಂಕ 16.02.2019, ಶನಿವಾರದಂದು ಶ್ರೀಸಂಸ್ಥಾನದವರ ಉಪಸ್ಥಿತಿಯಲ್ಲಿ ಪೂರ್ಣಾಹುತಿ ನೆರವೇರಿತು.   ಈ ಸಂದರ್ಭದಲ್ಲಿ ಗೋಸ್ವರ್ಗಸಂಸ್ಥಾನದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು, ಹವ್ಯಕಮಹಾಮಂಡಲದ ಅಧ್ಯಕ್ಷರು, ನೂರಾರು ಸುರಭಿಸೇವಿಕೆಯರು ಹಾಗು ಗೋಭಕ್ತರು ಭಾಗವಹಿಸಿ, ಪ್ರಸಾದ ಸ್ವೀಕರಿಸಿದರು.  

Read More

ಭಾನ್ಕುಳಿ: ಜೀವಜಗತ್ತಿಗೆ ಜಲ ತುಂಬ ಮುಖ್ಯ. ಭಗವಂತ ಮೊದಲು ಸೃಷ್ಟಿಸಿದ್ದು ಜಲವನ್ನು ಎಂದು ವೇದದಲ್ಲಿ ಹೇಳಲಾಗಿದೆ. ಅನಂತರ ಮಾನವನನ್ನು ಭಗವಂತ ಸೃಷ್ಟಿಸಿದ್ದಾನೆ. ನೀರಿನಂತಹ ಸಂಪತ್ತು ಬೇರೆ ಇಲ್ಲ, ಎಂದು ಶ್ರೀಸಂಸ್ಥಾನ ಹೇಳಿದ್ದಾರೆ.   ಸಿದ್ಧಾಪುರ ತಾಲೂಕಿನ ಭಾನ್ಕುಳಿಯ ಶ್ರೀರಾಮದೇವಮಠದ ಆವಾರದಲ್ಲಿನ ಗೋಸ್ವರ್ಗದಲ್ಲಿ ಕರ್ನಾಟಕ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಂಡಿರುವ ‘ಗೋತೀರ್ಥ’ದ ಸಮರ್ಪಣಾ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಗೋಸ್ವರ್ಗವು ಆಧುನಿಕತೆಯ ಸೋಂಕಿಲ್ಲದ ಪ್ರದೇಶ. ಬೇಕಾದಷ್ಟು ತೊಂದರೆ, ಉಪಟಳದ ನಡುವೆಯೂ, ನಮಗೆ ಸರಿ ಎನಿಸಿದ ತಕ್ಷಣ ಮೀನಮೇಷ […]

Read More

ಕುಮಟಾ:ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಾ ಅನುಗ್ರಹದೊಂದಿಗೆ ನಡೆಯುತ್ತಿರುವ ತಾಲೂಕಿನ ಮೂರೂರಿನ ಹೊಸಾಡದಲ್ಲಿರುವ ಅಮೃತಧಾರಾ ಗೋಶಾಲೆಯ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗೋಪ್ರೇಮಿಗಳ ವಾರ್ಷಿಕ ಗೋ ಸ್ನೇಹ ಕೂಟ “ಗೋ ಸಂಧ್ಯಾ” ಹಾಗೂ ಬೆಳದಿಂಗಳ ಊಟ ಕಾರ್ಯಕ್ರಮವು ಅತ್ಯಂತ ಅಭೂತಪೂರ್ವ ಯಶ ಕಂಡಿತು. ಈ ಬಾರಿ ಗೋ ಸಂಧ್ಯಾ ಕಾರ್ಯಕ್ರಮಕ್ಕೆ ಅತ್ಯಂತ ಹೆಚ್ಚಿನ ಗೋ ಪ್ರೇಮಿಗಳು ಹಾಗೂ ಸಾರ್ವಜನಿಕರು ಭಾಗವಹಿಸುವ ಮೂಲಕ ಸಂಪೂರ್ಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. […]

Read More

ಪೆರ್ಲ : ಪೆರ್ಲ ಬಜಕೂಡ್ಲು ಅಮೃತಧಾರಾಗೋಶಾಲೆಯಲ್ಲಿರುವ ಗೋಮಾತೆಯ ಉದರಭರಣಕ್ಕಾಗಿ ಮುಳ್ಳೇರಿಯ ಮಂಡಲದ ಗೋಕಿಂಕರರಿಂದ ಅಭೂತಪೂರ್ವವಾಗಿ ೪ತಿಂಗಳುಗಳ ಕಾಲ ನಡೆದ ಗೋವಿಗಾಗಿ ಮೇವು ಕಾರ್ಯಕ್ರಮಕ್ಕೆ ಶ್ರೀ ರಾಮಚಂದ್ರಾಪುರಮಠದ ಶ್ರೀ ಶ್ರೀ ರಾಘವೇಶ್ವರ ಸ್ವಾಮೀಜಿಯವರು ಸಂತಸವ್ಯಕ್ತಪಡಿಸಿ ಮಾತನಾಡುತ್ತಾ ಬಜಕೂಡ್ಲಿನ ಗೋಶಾಲೆಯಲ್ಲಿ ಕಾಸರಗೋಡು ಗಿಡ್ಡ ತಳಿಯ ಗೋವುಗಳಿವೆ. ಗಾತ್ರದಲ್ಲಿ ಚಿಕ್ಕದಾದರೂ ಅದುಕೊಡುವ ಹಾಲು ಉತ್ಕೃಷ್ಟವಾದ ಔಷಧೀಯ ಗುಣವನ್ನು ಹೊಂದಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನವ ಹಾಗೆ ಅದರಲ್ಲಿ ಬ್ರಹ್ಮಾಂಡವೇ ಅಡಗಿದೆ. ಹಾಲು ಕೊಟ್ಟ ಗೋಮಾತೆಗೆ ಹುಲ್ಲನ್ನು ಕೊಡುವ ಕಾರ್ಯ ತುಂಬಾ […]

Read More

मालूर: मकर संक्रांति त्योहार के अवसर पर के. आर. पुरम, होसकोटे, कर्नाटक के मालूर गोशाला में सौ से भी अधिक गोभक्त श्री राघवेंद्र गो आश्रम में इकट्ठे हुए। सभी ने मिलकर गोशाला के गायों की विशेष पूजा की और गायों को गोग्रास खिलाया।   गोशाला को आर्थिक सहायता- बेंगलुरु के गायत्री परिवार के १०० से […]

Read More
1 2 3 4
Online news kannada regional herald regional news sports politics karavali kannada latest news breaking news upcoming news save kannada save government school karnataka udupi news kundapura news india top news