ವಾಸ್ತು, ಆಗಮದಿಂದ ದೇಗುಲಕ್ಕೆ ಶೋಭೆ: ರಾಘವೇಶ್ವರ ಶ್ರೀ

  ಬೆಂಗಳೂರು: ದೇವಾಲಯಗಳು ಇತ್ತೀಚೆಗೆ ಶಾಸ್ತ್ರದ ಬದಲು ಆಡಂಬರದ ಪ್ರದರ್ಶನಕ್ಕೆ ಮಾತ್ರ ಎಂಬಂಥ ವಿಕಟ ಸ್ಥಿತಿ ಇದೆ. ವಾಸ್ತು, ಜ್ಯೋತಿಷ್ಯ, ಆಗಮಗಳು ಸರಿಯಾಗಿದ್ದಾಗ ಮಾತ್ರ ದೇವಾಲಯಕ್ಕೆ ಶೋಭೆ. ಆದ್ದರಿಂದ ದೇವಾಲಯಗಳು ಶಾಸ್ತ್ರೋಕ್ತವಾಗಿ ನಿರ್ಮಾಣಗೊಳ್ಳಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಗಿರಿನಗರದ ಮಹಾಗಣಪತಿ ದೇವಾಲಯದಲ್ಲಿ ಬುಧವಾರ ನಡೆದ ಅಷ್ಟಬಂಧ- ಪುನಃಪ್ರತಿಷ್ಠೆ- ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಧರ್ಮಸಭೆಯಲ್ಲಿ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀವರ್ಚನ ನೀಡಿದರು. ದೇಗುಲಗಳು ನಮ್ಮ ಪರಂಪರೆಯ ಭಾಗ. ಭಾರತದ ಪರಂಪರೆ ಅನುಪಮವಾಗಿದ್ದು, ಪರಂಪರೆಯನ್ನು […]

Continue Reading

ಶಾಂತಿ- ನೆಮ್ಮದಿಗೆ ಶ್ರದ್ಧಾಭಕ್ತಿಯ ಪೂಜೆಯೇ ಸಾಧನ: ರಾಘವೇಶ್ವರ ಶ್ರೀ

ಬೆಂಗಳೂರು: ಇಡೀ ಜಗತ್ತು ಇಂದು ಶಾಂತಿ- ನೆಮ್ಮದಿಗಾಗಿ ಹಪಹಪಿಸುತ್ತಿದ್ದು, ವಿಶ್ವಾದ್ಯಂತ ಜನ ಮನಃಶಾಂತಿಯ ಹುಡುಕಾಟದಲ್ಲಿದ್ದಾರೆ. ಆದರೆ ಶ್ರದ್ಧಾಭಕ್ತಿಯ ಪೂಜೆಯಿಂದ ಪರಮಾನಂದ ಪಡೆಯಬಹುದು ಎಂಬ ಸತ್ಯದರ್ಶನ ಅವರಿಗೆ ಆಗುತ್ತಿಲ್ಲ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಸ್ವಾಮೀಜಿ ನುಡಿದರು. ರಾಮಚಂದ್ರಾಪುರ ಮಠದ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಸೋಮಪ್ರದೋಷದಂದು ಲೋಕ ಹಿತಕ್ಕಾಗಿ ನಡೆದ ಅತ್ಯಪರೂಪದ ಸೋಮ ಸಪರ್ಯಾ ಧರ್ಮಸಭೆಯಲ್ಲಿ ಪರಮಪೂಜ್ಯರು ಸಂದೇಶ ಅನುಗ್ರಹಿಸಿದರು. ಶಿವ ಶೂಲಪಾಣಿಯಾಗಿ ಪ್ರದೋಷದಂದು ಸಂಚಾರ ಮಾಡುತ್ತಾನೆ ಎಂಬ ಪ್ರತೀತಿ ಇದೆ. ಈ ಸಂದರ್ಭ ವಿಶೇಷ ಸಪರ್ಯ ನಡೆದಿದೆ. ರಾಜ್ಯದ […]

Continue Reading

ಸಿದ್ಧಿಗಾಗಿ ಪ್ರಯತ್ನ ಇರಲಿ, ಪ್ರಸಿದ್ಧಿಗಾಗಿ ಅಲ್ಲ: ರಾಘವೇಶ್ವರ ಶ್ರೀ

ಮಾಲೂರು: ಇಡೀ ಜಗತ್ತು ಇಂದು ಪ್ರಸಿದ್ಧಿಯ ಭ್ರಮೆಯಲ್ಲಿದೆ. ಜೀವನದಲ್ಲಿ ಸಿದ್ಧಿ ಸಾಧಿಸಿದಾಗ ಸಹಜವಾಗಿಯೇ ಪ್ರಸಿದ್ಧಿ ಬರುತ್ತದೆ. ಆದ್ದರಿಂದ ನಮ್ಮೆಲ್ಲರ ಪ್ರಯತ್ನ ಸಿದ್ಧಿಯತ್ತ ಇರಲಿ. ಭಕ್ತನಾಗಿ, ಯೋಗಿಯಾಗಿ ಮತ್ತು ಯೋಧನಾಗಿ ಸಿದ್ಧಿ ಸಾಧಿಸಿದ ಆಂಜನೇಯ ನಮಗೆಲ್ಲರಿಗೆ ಮಾದರಿ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು. ಮಾಲೂರು ಸಮೀಪದ ಗಂಗಾಪುರದ ಶ್ರೀ ರಾಘವೇಂದ್ರ ಗೋ ಆಶ್ರಮ ಆವರಣದಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀ ಸಿದ್ದಾಂಜನೇಯ ಸ್ವಾಮಿ ದೇವಾಲಯದ ಅಷ್ಟಬಂಧ-ಪುನಃಪ್ರತಿಷ್ಠಾ-ಬ್ರಹ್ಮಕಲಶೋತ್ಸವದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಪರಮಪೂಜ್ಯರು ಆಶೀರ್ವಚನ ನೀಡಿದರು. ಯೋಗದ ಸಿದ್ದಿಯ […]

Continue Reading

ಸಿದ್ಧಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ನಿಧಿಕುಂಭ

ಗಂಗಾಪುರ ಗ್ರಾಮದ ಶ್ರೀ ರಾಘವೇಂದ್ರ ಗೋಆಶ್ರಮದ ಆವರಣದಲ್ಲಿರುವ ಶ್ರೀ ಸಿದ್ಧಾಂಜನೇಯ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಬುಧವಾರ ನಿಧಿಕುಂಭ ಕಾರ್ಯಕ್ರಮ ನಡೆಯಿತು. ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಗಳ ದಿವ್ಯ ಅನುಗ್ರಹದಲ್ಲಿ ಸೌರ ಯುಗಾದಿಯ ಪರ್ವ ಕಾಲದಲ್ಲಿ ವೇ. ಮೂ. ಸುಕುಮಾರ್ ಜೋಯಿಸ ಕರುವಜೆ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಶ್ರೀ ಸಿದ್ಧಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ರುದ್ರ ಪಠನ ಮಾಡಲಾಯಿತು. ಸಮಿತಿ ಹಾಗೂ ಭಕ್ತರಿಂದ ನಿಧಿ ಸಮರ್ಪಣೆ ನಡೆಯಿತು. […]

Continue Reading

ಶಿವಪದ ವೇದಿಕೆಯಿಂದ ಎಸ್. ಪಿ. ಬಿ. ನಿಧನಕ್ಕೆ ಸಂತಾಪ

ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದ ಶಿವಪದ ವೇದಿಕೆಯ ಪರವಾಗಿ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಸಂಸ್ಥಾನ ಮಹಾಬಲೇಶ್ವರ ದೇವಾಲಯದಲ್ಲಿ ಸಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಮಾಡಿಕೊಡುತ್ತಿರುವ “ಶಿವಪದ” ವೇದಿಕೆಯಲ್ಲಿ ಬಂದು ಹಾಡಲು ತಮ್ಮ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದರು. ಗಾನಲೋಕದ ಮಹಾಮೇರುವಾಗಿದ್ದ ಗಾನಗಂಧರ್ವ ಎಸ್. ಪಿ. ಬಾಲಸುಬ್ರಹ್ಮಣ್ಯಂ” ಅವರ ನಿಧನ ಸಂಗೀತ […]

Continue Reading

ಚೂಡಾಮಣಿ ಸೂರ್ಯಗ್ರಹಣ ಪ್ರಯುಕ್ತ ದೇವರ ದರ್ಶನಕ್ಕೆ ವ್ಯವಸ್ಥೆ

ಶ್ರೀಕ್ಷೇತ್ರ ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ರವಿವಾರದ ಚೂಡಾಮಣಿ ಸೂರ್ಯಗ್ರಹಣದ ಸಮಯದಲ್ಲಿ ಗೋಕರ್ಣದ ಊರಿನವರಿಗೆ ನಿಯಮಗಳ ಪ್ರಕಾರ ನಂದಿ ಮಂಟಪದವರೆಗೆ ಹೋಗಿ ದರ್ಶನ ಪಡೆದು ನಮಸ್ಕಾರ ಮಾಡಿ ಬರಲು ಅವಕಾಶ ನೀಡಲಾಗಿತ್ತು. ಬಹಳಷ್ಟು ಜನ ಊರಿನವರು ದೇವರ ದರ್ಶನ ಪಡೆದರು. ಈ ಕ್ಷೇತ್ರದಲ್ಲಿ ಭಕ್ತಾದಿಗಳು ಗ್ರಹಣದ ವೇಳೆಯಲ್ಲಿ ಈಶ್ವರನ ದರ್ಶನ ಪಡೆದು ಸಮುದ್ರಕ್ಕೆ ಹೋಗಿ ಸ್ನಾನ ಮಾಡಿ, ಜಪ-ತಪಗಳನ್ನು ಮಾಡುವ ರೂಢಿಗತ ಪರಂಪರೆಗೆ ಅನುಕೂಲವಾಗಲೆಂದು “ಪರಮಪೂಜ್ಯ ಜಗದ್ಗುರುಶಂಕರಾಚಾರ್ಯ ಗೋಕರ್ಣಮಂಡಲಾಧೀಶ್ವರ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ” ಮಾರ್ಗದರ್ಶನದಲ್ಲಿ ಈ ಅವಕಾಶಗಳನ್ನು ನೀಡಲಾಯಿತು. […]

Continue Reading

ಅಕ್ಷಯ ತೃತೀಯೆಯ ಶುಭ ದಿನದಂದು ಸುವರ್ಣ ನಾಣ್ಯಾಭಿಷೇಕ

ಸಂಸ್ಥಾನ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಅಕ್ಷಯ ತೃತೀಯೆಯ ಶುಭ ದಿನದಂದು ಲೋಕಕಲ್ಯಾಣದ ಸಂಕಲ್ಪದಿಂದ ಪರಮಪೂಜ್ಯ ಜಗದ್ಗುರುಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ಸುವರ್ಣ ನಾಣ್ಯಾಭಿಷೇಕ ಮಾಡಲಾಯಿತು. ಶ್ರೀಕ್ಷೇತ್ರ ಗೋಕರ್ಣದ ಉಪಾಧಿವಂತ ಮಂಡಲದವರು ಶತರುದ್ರ ಹೋಮವನ್ನು ನೆರೆವೇರಿಸಿದರು. ವೇ. ವಿ. ಸಾಂಬಾ ಭಟ್ ಷಡಕ್ಷರಿ ಪೂಜಾ ಕೈಂಕರ್ಯ ನೆರವೇರಿಸಿದರು. ಜಗತ್ತಿಗೆ ಬಂದ ಅತ್ಯಂತ ಹೆಮ್ಮಾರಿ ರೋಗವಾದ ಕರೋನಾ ನಿವಾರಣೆಯಾಗಲೆಂದು ಜಗದೀಶ್ವರನಲ್ಲಿ ಪ್ರಾರ್ಥಿಸಿಲಾಯಿತು.

Continue Reading

ಶ್ರೀರಾಮಚಂದ್ರಾಪುರ ಮಠದಿಂದ ವಿಶ್ವಕ್ಕೇ ಮಾದರಿ ಎನಿಸುವ ವಿಷ್ಣುಗುಪ್ತ ವಿವಿ: ರಾಘವೇಶ್ವರ ಶ್ರೀ

ಗೋಕರ್ಣ: ವಿಶ್ವಕ್ಕೇ ಮಾದರಿ ಎನಿಸುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಗೆ ಶ್ರೀರಾಮಚಂದ್ರಾಪುರ ಮಠ ಮುಂದಾಗಿದೆ. ತಕ್ಷಶಿಲೆ ವಿವಿ ಮಾದರಿಯಲ್ಲಿ ಇದು ಬೃಹದಾಕಾರವಾಗಿ ಬೆಳೆಯಲಿದೆ ಎಂದು ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು. ಶಿವರಾತ್ರಿ ಮಹೋತ್ಸವ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಪೂಜ್ಯರು ಆಶೀರ್ವಚನ ನೀಡಿದರು. ಇಂಥ ವಿದ್ಯಾಸಂಸ್ಥೆ ಕಟ್ಟುವ ಮುನ್ನ ಭದ್ರಕಾಳಿ ಶಿಕ್ಷಣ ಸಂಸ್ಥೆಯಂಥ ಉತ್ತಮ ಸಂಸ್ಥೆಯನ್ನು ಗುರುತಿಸಿ ಗೌರವಿಸಲಾಗುತ್ತಿದೆ ಎಂದರು. ಭಾರತೀಯ ಪ್ರಾಚೀನ ಶಿಕ್ಷಣ, ಕಲೆಗಳ ಪುನರುತ್ಥಾನ ನೂತನ ವಿದ್ಯಾಪೀಠದ ಉದ್ದೇಶ ಎಂದು ಹೇಳಿದರು. ಪುರಾತನ […]

Continue Reading

ಹನುಮಾನ ಚಾಲೀಸಾ ಪಠಣ

ಮಾಲೂರು: ಬೆಂಗಳೂರು ಗಾಯತ್ರಿ ಯುವ ಪರಿವಾರದ ವತಿಯಿಂದ ಮಾಲೂರು ಆಂಜನೇಯ ದೇವಸ್ಥಾನದಲ್ಲಿ (ಶ್ರೀ ರಾಘವೇಂದ್ರ ಗೋ ಆಶ್ರಮ ಮಾಲೂರು) ಹನುಮಾನ ಚಾಲೀಸಾ ಪಠಣ ನಡೆಯಿತು.

Continue Reading

ಸಾಮೂಹಿಕ ಭಗವದ್ಗೀತೆ ಪಾರಾಯಣ

ಗೋಲೋಕ: ಹೊಸನಗರ ಮಹಾನಂದಿ ಗೋಲೋಕದಲ್ಲಿ ಡಿ.೭ರಂದು ಗೀತಾಜಯಂತಿಯ ಅಂಗವಾಗಿ ಗೋವರ್ಧನಗಿರಿಧಾರಿ ಶ್ರೀಗೋಪಾಲಕೃಷ್ಣನ ಸನ್ನಿಧಿಯಲ್ಲಿ ಸಾಮೂಹಿಕ ಭಗವದ್ಗೀತೆ ಪಾರಾಯಣ ಸಂಪನ್ನಗೊಂಡಿದೆ. ಬೆಳಿಗ್ಗೆ ೯-೩೦ಕ್ಕೆ ಪ್ರಾರಂಭವಾದ ಪಾರಾಯಣ ಅಪರಾಹ್ನ ೧೨-೩೦ ರವರೆಗೆ ನೆರವೇರಿದೆ. ಪುರುಷ ಮತ್ತು ಮಹಿಳೆಯರು ಭಾಗವಹಿಸಿದ್ದ ಈ ಕಾರ್ಯಕ್ರಮದ ನೇತೃತ್ವವನ್ನು ವಿದ್ವಾನ್ ಶೇಷಗಿರಿ ಭಟ್ ರವರು ವಹಿಸಿದ್ದರು. ನಂತರ ಶ್ರೀಕೃಷ್ಣನಿಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಶ್ರೀಮಠದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಬ್ರಾಹ್ಮಣಸಭಾ ಅಧ್ಯಕ್ಷರಾದ ಡಾ. ರಾಮಚಂದ್ರರಾವ್ ಹಿರಿಯರಾದ ಶ್ರೀಧರ ಉಡುಪ ಮುಂತಾದವರು ಉಪಸ್ಥಿತರಿದ್ದರು.

Continue Reading

ಗೋಕರ್ಣದಲ್ಲಿ ಮಹಾರುದ್ರಾಭಿಷೇಕ ಸೇವೆ

ಗೋಕರ್ಣ: ಶ್ರೀಮಹಾಬಲೇಶ್ವರ ದೇವರಿಗೆ ಮಹಾರುದ್ರಾಭಿಷೇಕ ಸೇವೆ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ನಡೆಯಿತು. ಕುಮಟಾ ಮಂಡಲದ ೩೦, ಹೊನ್ನಾವರ ಮಂಡಲದ ೫೦ ಹಾಗೂ ಸ್ಥಳೀಯ ೪೦ ರುದ್ರಾಧ್ಯಾಯಿಗಳು ಭಾಗವಹಿಸಿದ್ದರು. ವೇ.ಮೂ.ಶಿತಿಕಂಠ ಭಟ್ಟರ ನೇತೃತ್ವದಲ್ಲಿ ಒಟ್ಟು ೧೩೫೬ ರುದ್ರಮಂತ್ರಗಳಿಂದ ಅಭಿಷೇಕ ನೆರವೇರಿತು.

Continue Reading

ಆಶ್ಲೇಷಾ ಬಲಿ, ನವಚಂಡಿಕಾ ಯಾಗ ಎಲ್ಲಿ ನಡೆಯಿತು?

ನಂತೂರು: ರಾಜ್ಯದಲ್ಲಿ ಅತೀ ಹೆಚ್ಚು ಆದಾಯ ಹೊಂದಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವತಿಯಿಂದ ೮ ದೇಗುಲಗಳ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ. ಆದಾಯವನ್ನು ಧಾರ್ಮಿಕ ಕೇಂದ್ರಗಳಿಗೆ, ಕಾರ್ಯಗಳಿಗೆ ಹಂಚಲಾಗುತ್ತಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಸದಸ್ಯ ಮಹೇಶ್ ಕುಮಾರ್ ಕರಿಕ್ಕಳ ಹೇಳಿದರು.   ಅವರು ಅ.೬ರಂದು ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ನಡೆದ ಆಶ್ಲೇಷಾ ಬಲಿ ಮತ್ತು ಸಗ್ರಹಮಖ ನವಚಂಡಿಕಾಯಾಗದ ಧಾರ್ಮಿಕ ಸಭೆಯಲ್ಲಿ ಸಮ್ಮಾನ ಸ್ವೀಕರಿಸಿ, ಮಾತನಾಡಿದರು. ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಭೇಟಿ […]

Continue Reading