ಮನೆಮನೆಗಳಲ್ಲಿ ರಾಮ ಜನ್ಮೋತ್ಸವ

ಗಿರಿನಗರ: ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾಕಾರಕ್ಕಾಗಿ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯರು ಆರಂಭಿಸಿರುವ ಧಾರಾ ರಾಮಾಯಣದಲ್ಲಿ ಜೂನ್ 28ರಂದು ರಾಮಜನನ ಕುರಿತ ಪ್ರವಚನ ನಡೆಯಲಿದ್ದು, ಇದರ ಅಂಗವಾಗಿ ಶ್ರೀಮಠದ ಶಿಷ್ಯ-ಭಕ್ತರ ಮನೆಮನೆಗಳಲ್ಲಿ ಅಂದು ಶ್ರೀರಾಮ ಜನ್ಮೋತ್ಸವ ಆಚರಿಸಲು ನಿರ್ಧರಿಸಲಾಗಿದೆ.   ಶ್ರೀಗಳ ಪ್ರವಚನ ಅಂದು ಶ್ರೀರಾಮನ ಜನ್ಮಘಟ್ಟದ ಬಗ್ಗೆಯೇ ಇದ್ದು, ಇದನ್ನು ಸಂಭ್ರಮಿಸುವ ಸಲುವಾಗಿ ಶ್ರೀರಾಮನ, ಶ್ರೀಗುರುಗಳ, ಶ್ರೀಮಠದ ಶಿಷ್ಯ-ಭಕ್ತ ಅಭಿಮಾನಿಗಳು ಮನೆ ಮನೆಗಳಲ್ಲಿ ಶ್ರೀರಾಮ ಜನ್ಮೋತ್ಸವ ಆಚರಿಸಲಿದ್ದಾರೆ ಎಂದು ಹವ್ಯಕ ಮಹಾಮಂಡಲದ ಅಧ್ಯಕ್ಷೆ ಈಶ್ವರಿ ಬೇರ್ಕಡವು […]

Continue Reading

ಮುಂದಾಲೋಚನೆ – ವ್ಯವಸ್ಥೆಯ ಮೇಲೆ ಹಿಡಿತವಿದ್ದಾಗ ಊರು ವ್ಯವಸ್ಥಿತ – ಶ್ರೀಸಂಸ್ಥಾನ

ಗಿರಿನಗರ: ಭೂಮಿತಾಯಿಗೆ ನೀರು ಕುಡಿಯಲೂ ಅವಕಾಶವಿಲ್ಲದ ಹಾಗೆ ನಮ್ಮ ವ್ಯವಸ್ಥೆಯಾಗುತ್ತಿರುವುದರಿಂದ ಕುಡಿಯುವ ನೀರಿಗೆ ತತ್ವಾರ ಬರುವ ಹಾಗಾಗುತ್ತಿದೆ. ಆಳುವವನಿಗೆ ಮುಂದಾಲೋಚನೆಯ ಜತೆಗೆ ವ್ಯವಸ್ಥೆಯ ಮೇಲೆ ಹಿಡಿತ ಇದ್ದಾಗ ಊರು ವ್ಯವಸ್ಥಿತವಾಗಿ ಬೆಳೆಯುತ್ತದೆ. ಸಮೃದ್ಧಿ ಇದ್ದಲ್ಲಿ ಸಂಭ್ರಮ ನೆಲೆಸಿರುತ್ತದೆ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.   ಗಿರಿನಗರ ಶ್ರೀರಾಮಾಶ್ರಮದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪದಲ್ಲಿ ನಡೆಯುತ್ತಿರುವ ಧಾರಾರಾಮಾಯಣ ಪ್ರವಚನ ಮಾಲಿಕೆಯ ಐದನೆಯ ದಿನ ಆಶೀರ್ವಚನ ನೀಡಿದರು.   ಹಳ್ಳಿಗಳನ್ನು ಹಿಂಡಿ ಹಿಪ್ಪೆ ಮಾಡಿ ನಗರಕ್ಕೆ ತಂದು […]

Continue Reading

ಕಾವ್ಯಗಳು ಕಲ್ಪನೆಯನ್ನು ಕಣ್ಣಿಗೆ ಕಟ್ಟಿಸುತ್ತದೆ. – ಶ್ರೀಸಂಸ್ಥಾನ

ಗಿರಿನಗರ: ಜೀವಲೋಕಕ್ಕೆ ಮಾಡಬೇಕಾದ ಚಿಕಿತ್ಸೆಯನ್ನು ಬೇಕಾದ ಸಮಯದಲ್ಲಿ ಪರಮಾತ್ಮ ಮಾಡುತ್ತಾನೆ. ಕಾವ್ಯಗಳು ದೃಶ್ಯಮಾಧ್ಯಮ ಇಲ್ಲದೆ ಕಲ್ಪನೆಯನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ. ಕವಿಯಲ್ಲಿ ಅಗತ್ಯ ವಿಚಾರಗಳ ಬಗ್ಗೆ ಮಾಹಿತಿ ಇದ್ದಾಗ ಮಾತ್ರ ಕವಿತೆಯನ್ನು ರಚಿಸಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.   ಗಿರಿನಗರ ಶ್ರೀರಾಮಾಶ್ರಮದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪದಲ್ಲಿ ನಡೆಯುತ್ತಿರುವ ಧಾರಾರಾಮಾಯಣ ಪ್ರವಚನ ಮಾಲಿಕೆಯ ನಾಲ್ಕನೇ ದಿನ ಆಶೀರ್ವಚನ ನೀಡಿದರು.   ಪುಸ್ತಕ ಬಂದ ಬಳಿಕ ಮಸ್ತಕದ ಶಕ್ತಿ ಕುಂದಿದೆ. ಉಪಕರಣಗಳನ್ನು ಬಳಸಿದಷ್ಟು […]

Continue Reading

ಸೃಷ್ಟಿಯಲ್ಲಿ ಯಾವತ್ತೂ ಸಂತೋಷ ಸ್ಥಿರವಾಗಿರುವುದಿಲ್ಲ – ಶ್ರೀಸಂಸ್ಥಾನ

ಗಿರಿನಗರ: ದಿವ್ಯಪುರುಷರ ಸಂಪರ್ಕಕ್ಕೆ ಒಳಪಟ್ಟ ಜಲವು ತೀರ್ಥ ಎಂದೆನಿಸಿಕೊಳ್ಳುತ್ತದೆ. ಮನಸ್ಸು ನಿರ್ಮಲವಾಗಿದ್ದಾಗ ಮಹಾಪುರಷರಾಗಬಹುದು. ಸೃಷ್ಟಿಯಲ್ಲಿ ಯಾವತ್ತೂ ಸಂತೋಷ ಸ್ಥಿರವಾಗಿರುವುದಿಲ್ಲ. ಋಷಿಗಳು ದಿವಿಯಲ್ಲಿ ದೃಷ್ಟಿಯನ್ನು ನೆಟ್ಟರೆ, ಕೃಷಿಕರು ಭುವಿಯಲ್ಲಿ ಮೇಲೆ ದೃಷ್ಟಿಯನ್ನು ಇಟ್ಟಿರುತ್ತಾರೆ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಗಿರಿನಗರ ಶ್ರೀರಾಮಾಶ್ರಮದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪದಲ್ಲಿ ನಡೆಯುತ್ತಿರುವ ಧಾರಾರಾಮಾಯಣ ಪ್ರವಚನ ಮಾಲಿಕೆಯ ಮೂರನೇ ದಿನ ಆಶೀರ್ವಚನ ನೀಡಿದರು. ರಾಮಾಯಣವನ್ನು ಕೇಳುವುದರಿಂದ ಪಾಪಗಳನ್ನು ತೊಳೆದು ಶುದ್ಧವಾಗಬಹುದು. ಶುದ್ಧ ಪ್ರಕೃತಿಯಾದರೆ ಅಧರ್ಮವನ್ನು ಕಂಡಾಕ್ಷಣ ನೋವುಂಟಾಗುತ್ತದೆ. ವಸ್ತು ಸ್ಥಿತಿಗೆ […]

Continue Reading

ದೈವೇಚ್ಛೆಯಾಗಿದ್ದಾಗ ಮಾತ್ರ ಕಾರ್ಯ ಕೈಗೂಡಲು ಸಾಧ್ಯ – ಶ್ರೀಸಂಸ್ಥಾನ

ಗಿರಿನಗರ: ಜೀವನದಲ್ಲಿ ಮಾಡುವ ಬಹುದೊಡ್ಡ ತ್ಯಾಗವೂ ವೀರತನವಾಗುತ್ತದೆ. ಜಟಾಯುವಿನ ಬದುಕು ಪ್ರತಿಯೊಬ್ಬ ಕಾರ್ಯಕರ್ತನಿಗೂ ಮಾದರಿ. ನಮ್ಮ ಇಚ್ಛೆ ಎಲ್ಲರ ಇಚ್ಛೆಯ ಜತೆಗೆ ದೈವೇಚ್ಛೆಯಾಗಿದ್ದಾಗ ಮಾತ್ರ ಕಾರ್ಯ ಕೈಗೂಡಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.   ಗಿರಿನಗರ ಶ್ರೀರಾಮಾಶ್ರಮದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪದಲ್ಲಿ ನಡೆಯುತ್ತಿರುವ ಧಾರಾರಾಮಾಯಣ ಪ್ರವಚನ ಮಾಲಿಕೆಯ ಎರಡನೆಯ ದಿನ ಆಶೀರ್ವಚನ ನೀಡಿದರು.   ಗುರುದೈವವನ್ನು ನಿಜವಾಗಿ ಆಶ್ರಯಿಸಿದ್ದೇ ಆದಲ್ಲಿ ಅವರು ಮಾಡಿದ್ದೆಲ್ಲವೂ ಒಳಿತಾಗಿರುತ್ತದೆ. ಭಕ್ತಿ ಭಾವಕ್ಕಿಂದ ದೊಡ್ಡ ವಿಚಾರ ಜಗತ್ತಿನಲ್ಲಿ […]

Continue Reading

ದೈವೇಚ್ಛೆಯಾಗಿದ್ದಾಗ ಮಾತ್ರ ಕಾರ್ಯ ಕೈಗೂಡಲು ಸಾಧ್ಯ – ಶ್ರೀಸಂಸ್ಥಾನ

  ಗಿರಿನಗರ: ಜೀವನದಲ್ಲಿ ಮಾಡುವ ಬಹುದೊಡ್ಡ ತ್ಯಾಗವೂ ವೀರತನವಾಗುತ್ತದೆ. ಜಟಾಯುವಿನ ಬದುಕು ಪ್ರತಿಯೊಬ್ಬ ಕಾರ್ಯಕರ್ತನಿಗೂ ಮಾದರಿ. ನಮ್ಮ ಇಚ್ಛೆ ಎಲ್ಲರ ಇಚ್ಛೆಯ ಜತೆಗೆ ದೈವೇಚ್ಛೆಯಾಗಿದ್ದಾಗ ಮಾತ್ರ ಕಾರ್ಯ ಕೈಗೂಡಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.   ಗಿರಿನಗರ ಶ್ರೀರಾಮಾಶ್ರಮದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪದಲ್ಲಿ ನಡೆಯುತ್ತಿರುವ ಧಾರಾರಾಮಾಯಣ ಪ್ರವಚನ ಮಾಲಿಕೆಯ ಎರಡನೆಯ ದಿನ ಆಶೀರ್ವಚನ ನೀಡಿದರು.   ಗುರುದೈವವನ್ನು ನಿಜವಾಗಿ ಆಶ್ರಯಿಸಿದ್ದೇ ಆದಲ್ಲಿ ಅವರು ಮಾಡಿದ್ದೆಲ್ಲವೂ ಒಳಿತಾಗಿರುತ್ತದೆ. ಭಕ್ತಿ ಭಾವಕ್ಕಿಂದ ದೊಡ್ಡ ವಿಚಾರ […]

Continue Reading

ದಿವ್ಯತೆ – ಭವ್ಯತೆ ಇದ್ದಲ್ಲಿ ಶುಭವಿದೆ – ಶ್ರೀಸಂಸ್ಥಾನ

ಗಿರಿನಗರ: ದಿವ್ಯತೆ ಹಾಗೂ ಭವ್ಯತೆ ಇದ್ದಲ್ಲಿ ಶುಭವಿರುತ್ತದೆ. ಭಾರತವೆಂಬ ಭವನದಲ್ಲಿ ವಿದ್ಯೆಗಳು ಹಾಗೂ ಕಲೆಗಳು ಬೆಳಕನ್ನು ನೀಡಿದೆ. ಭಿನ್ನ ಬೇದವಿಲ್ಲದೆ ಎಲ್ಲರಿಗೆ ಹಿತವನ್ನುಂಟು ಮಾಡುವವರು ಶ್ರೇಷ್ಠರು. ಲಕ್ಷಕ್ಕೆ ಮಿಕ್ಕ ಮಕ್ಕಳು ತಮ್ಮೊಳಗೆ ವಿದ್ಯಾ ದೀಪವನ್ನು ಬೆಳಗಿದಾಗ ಭಾರತ ಬೆಳಗಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಗಿರಿನಗರ ಶ್ರೀರಾಮಾಶ್ರಮದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪದಲ್ಲಿ ನಡೆಯುತ್ತಿರುವ ಧಾರಾರಾಮಾಯಣ ಪ್ರವಚನ ಮಾಲಿಕೆಯ ಮೊದಲ ದಿನ ಆಶೀರ್ವಚನ ನೀಡಿದರು. ಮಾಡುವ ಕಾರ್ಯದಲ್ಲಿ ತೀವ್ರತೆ ಇದ್ದಾಗ ಫಲ ಪ್ರಾಪ್ತಿಯಾಗುತ್ತದೆ. […]

Continue Reading

ಮಹಾಗುರುಕುಲದ ಉದಯಕ್ಕೆ ಮಹಾವ್ರತದಂತೆ ನಡೆಯಲಿದೆ ರಾಮಾಯಣ ಪ್ರವಚನ

ಹೊನ್ನಾವರ: ಶಂಕರರ ಪಾದಸ್ಪರ್ಶವಾದ ಗೋಕರ್ಣದ ಅಶೋಕೆಯಲ್ಲಿ ಪ್ರಾಚೀನ ಭಾರತದ ಸಕಲವಿದ್ಯೆಗಳನ್ನೊಳಗೊಂಡಿರುವಂತಹ ಮಹಾಗುರುಕುಲದ ಉದಯವಾಗಲಿದೆ. ನಿಜವಾದ ಅರ್ಥದಲ್ಲಿ ವಿದ್ಯಾಲಯ, ವಿಶ್ವವಿದ್ಯಾಲಯವಾಗಿ ಮಹಾಗುರುಕುಲ ಮೂಡಿ ಬರಲಿದೆ. ಇದರ ಅಂಗವಾಗಿ ಬೆಂಗಳೂರಿನಲ್ಲಿ ಸುಮಾರು 6 ತಿಂಗಳ ಕಾಲ ಮಹಾವ್ರತದಂತೆ ಪ್ರತಿನಿತ್ಯ ರಾಮಾಯಣದ ಪ್ರವಚನ ನಡೆಯಲಿದೆ ಎಂದು ಶ್ರೀಸಂಸ್ಥಾನದವರು ತಿಳಿಸಿದರು.   ಹೊನ್ನಾವರ ಹವ್ಯಕ ಭವನದಲ್ಲಿ ಡಾ. ಎಂ. ಪಿ. ಕರ್ಕಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವನ ನೀಡುತ್ತಾ ಷರತ್ತು ಬದ್ಧವಾದ ಪ್ರೀತಿ ಪ್ರೀತಿಯಲ್ಲ, ನಿಷ್ಕಾರಣವಾದ ಪ್ರೀತಿ ನಿಜವಾದ ಪ್ರೀತಿ. ಆತ್ಮಶುದ್ಧಿ – […]

Continue Reading

ಗೋವಿನ ಮೇವಿಗಾಗಿ ಹಲಸಿನ ಮೇಳ ; ಶ್ಲಾಘನೀಯ ಕಾರ್ಯ – ಶ್ರೀಸಂಸ್ಥಾನ

ಆಲಕ್ಕೋಡು; ಮೇ 20 : ಹಲಸು ಎಂದರೆ ಚಿನ್ನದ ಬಣ್ಣ, ಚಿನ್ನಕ್ಕಿಲ್ಲದ ಪರಿಮಳ, ಚಿನ್ನಕ್ಕಿಲ್ಲದ ರುಚಿಯನ್ನು ಅದು ಹೊಂದಿದೆ. ಗೋಸೇವೆಗಾಗಿ ತನ್ನ ಶ್ರಮವನ್ನು ಸಮರ್ಪಣೆ ಮಾಡುವ ಮೂಲಕ ಶಿಷ್ಯವೃಂದವು ಗೋರಕ್ಷಣೆಗೆ ಬಹುದೊಡ್ಡ ಕೊಡುಗೆಯನ್ನು ನೀಡಿದೆ. ಗೋವಿನ ಮೇವಿಗಾಗಿ ಹಲಸಿನ ಮೇಳವನ್ನೇ ಆಯೋಜಿಸಿದ ಗೋಪ್ರೇಮಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದು ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ತಮ್ಮ ಆಶೀರ್ವಚನ ಸಂದೇಶವನ್ನು ನೀಡಿದರು.   ಕಾಸರಗೋಡು ಸಮೀಪದ ಪೆರಿಯ ಆಲಕ್ಕೋಡ್ ವಿಷ್ಣುಪ್ರಸಾದ ಹೆಬ್ಬಾರರ `ಗೋಕುಲ’ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಬಜಕೂಡ್ಲು ಅಮೃತಧಾರಾ […]

Continue Reading

ಅಂತಾರಾಷ್ಟ್ರೀಯ ಕ್ಯಾನ್ಸರ್ ವಿಜ್ಞಾನಿಗೆ ಈ ವರ್ಷದ ಸಾರ್ವಭೌಮ ಪ್ರಶಸ್ತಿ

ಗೋಕರ್ಣದ ಮಹಾಬಲೇಶ್ವರ ದೇವಾಲಯ ಮಠಕ್ಕೆ ಆದಾಯದ ಮೂಲವಲ್ಲ. ಅದು ಸೇವೆಯ ಸಾಧನ ಮಾತ್ರ. ಗೋಕರ್ಣ ದೇವಾಲಯದಿಂದ ಒಂದು ರೂಪಾಯಿಯನ್ನು ಮಠ ತೆಗೆದುಕೊಂಡಿಲ್ಲ, ಕೋಟ್ಯಂತರ ರೂಪಾಯಿಗಳನ್ನು ಮಠ ದೇವಾಲಯದ ಅಭಿವೃದ್ಧಿಗೆ ಬಳಸಿದೆ. ಒಳ್ಳೆಯದಾಗಬೇಕು ಎಂಬುದಷ್ಟೇ ನಮ್ಮ ಅಪೇಕ್ಷೆ, ನಮ್ಮಿಂದಲೇ ಒಳ್ಳೆಯದಾಗಬೇಕು ಎಂಬ ಸ್ವಾರ್ಥ ನಮಗಿಲ್ಲ. ಆದರೆ ಮಠದಿಂದಲೇ ಮಹಾಬಲೇಶ್ವರನ ಸೇವೆ ನಡೆಯಲಿ ಎಂಬುದು ಮಹಾಬಲನ ಇಚ್ಛೆ. ಮಹಾಬಲನೇ ಸೇವೆಯ ಅವಕಾಶವನ್ನು ನೀಡಿರುವಾಗ ಶಿರಸಾವಹಿಸಿ ಮಾಡಬೇಕಾದ್ದು ನಮ್ಮ ಕರ್ತವ್ಯ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.ಅವರು ಶಿವರಾತ್ರಿ […]

Continue Reading

ಮಾತೆಯರು ಗೋಸ್ವರ್ಗದ ಆಧಾರಸ್ಥಂಭವಾಗಬೇಕು ; ಶ್ರೀಸಂಸ್ಥಾನ

ಸಿದ್ದಾಪುರ : ಯಾರೋ ಮೂರುಜನ ಕೋಟ್ಯಧೀಶರಿಂದ ಗೋಸ್ವರ್ಗವನ್ನು ನಡೆಸುವಂತಾಗಬಾರದು. ಗೋಸೇವೆಯಲ್ಲಿ ಹಣದ ಅಪೇಕ್ಷೆಗಿಂತ ಎಲ್ಲರ ಸಹಭಾಗಿತ್ವ ಮುಖ್ಯವಾಗಿರಬೇಕು. ಗೋಸ್ವರ್ಗ ನಿರ್ಮಾಣದಲ್ಲಲ್ಲದೇ ಅದರ ನಿರ್ವಹಣೆಯಲ್ಲೂ ಮಾತೆಯರು ಪಾಲ್ಗೊಳ್ಳುವ ಮೂಲಕ ಗೋಮಾತೆಯ ಸೇವೆಗೆ ಅಣಿಯಾಗಬೇಕು, ಗೋಸ್ವರ್ಗದ ಆಧಾರಸ್ಥಂಭ ಮಾತೆಯರಾಗಬೇಕು ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಶ್ರೀಗಳು ಹೇಳಿದ್ದಾರೆ.   ತಾಲೂಕಿನ ಭಾನ್ಕುಳಿಯ ಗೋಸ್ವರ್ಗದಲ್ಲಿ ಸಿದ್ದಾಪುರ, ಸಾಗರ, ರಾಮಚಂದ್ರಾಪುರ, ಕುಮಟಾ ಹಾಗೂ ಹೊನ್ನಾವರ ಮಂಡಲಗಳ ಸುರಭಿ ಸೇವಿಕೆಯರ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾರ್ಗದರ್ಶನ, ಆಶೀರ್ವಚನ ನೀಡುತ್ತಿದ್ದರು.   […]

Continue Reading

ದೇವರೆಡೆಗೆ ನಡೆದ ತ್ರಿವಿಧ ದಾಸೋಹಿ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳನ್ನು ಅಂತಿಮವಾಗಿ ಇಂದು ಮುಂಜಾನೆ ಭೇಟಿಗೈದ ಶ್ರೀ ಸಂಸ್ಥಾನದವರು!

Continue Reading

ನಡೆದಾಡುವ ದೇವರು ದೇವರೆಡೆಗೆ ನಡೆದರು : ಶ್ರೀಸಂಸ್ಥಾನ

ದೇವರು ದೇವರೇ ಆಗಲು ಆರಿಸಿಕೊಂಡಿದ್ದು ಅಭಯಾಕ್ಷರ ದ ದಿನವನ್ನೇ! : ಶ್ರೀಸಂಸ್ಥಾನ https://twitter.com/SriSamsthana/status/1087292148767170560?s=19   https://twitter.com/SriSamsthana/status/1087294843188137986?s=19

Continue Reading

ಮಾತು~ಮುತ್ತು : ಸಾಗೋಣ ಹಾಡಿ ನಲಿಯುತ್ತಾ – ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

ಅದೊಂದು ಹಿಮಾಚ್ಛಾದಿತ ಪ್ರದೇಶ. ಅಲ್ಲಿ ಒಂದು ನದೀತೀರ. ಅಲ್ಲಿಗೆ ಒಬ್ಬ ವ್ಯಕ್ತಿ ಬರುತ್ತಾನೆ. ಅಪರಾಹ್ಣವಾಗಿರುತ್ತದೆ. ನದಿ ಹರಿಯುತ್ತಾ ಇರುತ್ತದೆ. ಸೇತುವೆ ಇರುವುದಿಲ್ಲ. ಆದರೆ ನದಿಯ ಮೇಲ್ಭಾಗದಲ್ಲಿ ಮಂಜುಗಡ್ಡೆಗಳಿಂದ ನಿರ್ಮಿತವಾದ ಸೇತುವೆ ಇರುತ್ತದೆ. ಅವನು ಆಲೋಚಿಸುತ್ತಾನೆ- ‘ಹೇಗೆ ಹೋಗಲಿ? ಕಾಲು ಮಂಜುಗಡ್ಡೆಯಲ್ಲಿ ಹೂತು ಹೋದರೆ ಏನು ಮಾಡಲಿ?’ ಇತ್ಯಾದಿ ಚಿಂತೆ ಆವರಿಸುತ್ತದೆ. ಅಷ್ಟು ಹೊತ್ತಿಗೆ ಇಳಹೊತ್ತು ಪ್ರಾರಂಭವಾಗಿ ಇನ್ನೇನು ಕತ್ತಲಯೇ ಆಗಿ ಬಿಡುತ್ತದೆ ಎಂದು ಚಿಂತಿಸಿದ ಈ ವ್ಯಕ್ತಿ ಏನಾದರಾಗಲಿ ಎಂದು ಧೈರ್ಯ ಮಾಡಿ ಎರಡೂ ಕೈಗಳನ್ನೂ ಮಡಚಿಕೊಂಡು […]

Continue Reading

ಮಾತು~ಮುತ್ತು : ವೇದವತಿಯ ಕಥೆ – ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

ವೇದವತಿಯದ್ದು ಕರುಣಾ ಕಥೆ. ಎಂದೆಂದಿಗೂ ಸಲ್ಲುವ ಪರಿಶುದ್ಧ ಪ್ರೇಮದ ಕಥೆ. ಪರಿಪರಿ ಪೀಡನೆಯ ಕಥೆ. ಮನೆಗಳ, ಮನಗಳ, ಕಾಮನೆಗಳ ಕಥೆ. ನಮಗೆ ಕಾಮನ ಕಥೆ ಬೇಡ; ರಾಮನ ಕಥೆ ಬೇಕು. ಇದು ಸೀತೆ ಯಾರು, ಸೀತತ್ವ ಎಂದರೆ ಏನು ಎಂಬುದನ್ನು ವಿವರಿಸುವ ಕಥೆ.   ವೇದಸಾಧಕ ರಾಜರ್ಷಿ ಕುಶಧ್ವಜನಿಗೆ ಆತನ ವೇದಸಾಧನೆಯಿಂದ ಜನಿಸಿದವಳು ವೇದಮಾತೆ ವೇದವತಿ. ಈಕೆಯನ್ನು ಬಯಸಿ ಬಂದ ಶಂಭು ದೈತ್ಯನಿಗೆ ಕುಶಧ್ವಜನು ತನ್ನ ಮಗಳನ್ನು ಕೊಡಲು ನಿರಾಕರಿಸುತ್ತಾನೆ. ಹಾಗಾಗಿ ಶಂಭು ಕುಶಧ್ವಜನನ್ನು ಕೊಲೆ ಮಾಡುತ್ತಾನೆ. […]

Continue Reading

ಮಾತು~ಮುತ್ತು : ಒಂದು ಪರ್ಸಿನ ಕಥೆ – ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

ಒಮ್ಮೆ ಒಬ್ಬ ವೃದ್ಧ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ರೈಲಿನಲ್ಲಿ ಅವನು ಗಾಢ ನಿದ್ದೆಯಲ್ಲಿ ಇರುವಾಗ ಅವನ ಕಿಸೆಯಲ್ಲಿ ಇದ್ದ ಅವನ ಪರ್ಸ್ ಕಿಸೆಯಿಂದ ಜಾರಿ ಬಿದ್ದು ಕಳೆದುಹೋಗುತ್ತದೆ. ಅದು ಒಬ್ಬ ಯುವಕನಿಗೆ ಸಿಗುತ್ತದೆ. ರೈಲಿನಲ್ಲಿ ತುಂಬ ಜನರಿದ್ದರಿಂದ ಅದು ಯಾರ ಪರ್ಸ್ ಎಂದು ತಿಳಿಯುವುದಿಲ್ಲ. ಆಗ ಯುವಕ ರೈಲು ನಿಲ್ದಾಣದಲ್ಲಿ- ‘ಯಾರು ನನಗೆ ಸಿಕ್ಕಿರುವ ಪರ್ಸ್‌ನ ಗುರುತು ಹೇಳುತ್ತಾರೋ ಅವರಿಗೆ ಅದನ್ನು ಕೊಡುತ್ತೇನೆ” ಎಂದು ಘೋಷಣೆ ಮಾಡುತ್ತಾನೆ.   ಆಗ ಅಲ್ಲಿಗೆ ಬಂದ ವೃದ್ಧ- ‘ಆ ಪರ್ಸ್‌ನಲ್ಲಿ ಒಂದು […]

Continue Reading

ಮಾತು~ಮುತ್ತು : ನೆಮ್ಮದಿಯ ಜೀವನ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಅವನೊಬ್ಬ ಮೀನುಗಾರ. ಅವನು ಪ್ರತಿದಿನ ಸಮುದ್ರಕ್ಕೆ ಹೋಗಿ ಒಂದಿಷ್ಟು ಮೀನು ಹಿಡಿದು ಅದನ್ನು ಮಾರಿ ಜೀವನ ಸಾಗಿಸುತ್ತಿದ್ದ. ಹೀಗಿರುವಾಗ ಎಂದಿನಂತೆ ಒಂದು ದಿನ ತನ್ನ ಕೆಲಸವನ್ನು ಮುಗಿಸಿ ಒಂದು ಮರದ ಬುಡದಲ್ಲಿ ಕುಳಿತು ಸಂತೋಷದಿಂದ ತನ್ನಷ್ಟಕ್ಕೇ ಹಾಡು ಹೇಳಿಕೊಳ್ಳುತ್ತಿದ್ದ.   ಇದನ್ನು ಅನೇಕ ದಿನಗಳಿಂದ ಗಮನಿಸಿದ ಒಬ್ಬ ಶ್ರೀಮಂತ ವರ್ತಕ ಒಂದು ದಿನ ಮೀನುಗಾರನ ಹತ್ತಿರ ಬಂದು- “ಯಾಕೆ ಸುಮ್ಮನೇ ಸಮಯ ವ್ಯರ್ಥ ಮಾಡುತ್ತಿರುವೆ?” ಎಂದು ಕೇಳುತ್ತಾನೆ.   ಆಗ ಮೀನುಗಾರ- “ಏನು ಮಾಡಬೇಕು?” ಎಂದು ಕೇಳುತ್ತಾನೆ. […]

Continue Reading

ಮಾತು~ಮುತ್ತು : ಎಲ್ಲಿ ಮನವೊ ಅಲ್ಲಿಯೇ ನಮನ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಒಬ್ಬ ಮಹಾಶಿವಭಕ್ತನಿದ್ದ. ಅವನದೊಂದು ವ್ರತವಿತ್ತು. ಅದೆಂದರೆ ಎಲ್ಲಿ ಶಿವ ದೇವಾಲಯ ಕಾಣುತ್ತದೆಯೋ ಅಲ್ಲಿ ಶಿವನನ್ನು ಪೂಜಿಸುವುದು; ಹಾಗೂ ಯಾವುದೇ ಸಂದರ್ಭದಲ್ಲಿಯೂ ವಿಷ್ಣುವನ್ನು ಪೂಜೆ ಮಾಡಬಾರದು ಎಂಬುದು ಅವನ ಸಂಕಲ್ಪ. ಈ ವ್ರತದಂತೆ ಅವನು ಅನು ದಿನವೂ ಶಿವನನ್ನೇ ಪೂಜಿಸುತ್ತಾ ವಿಷ್ಣುವಿಗೆ ಪೂಜೆಸಲ್ಲದಂತೆ ಎಚ್ಚರವಹಿಸುತ್ತಾ ಬಂದ. ಒಮ್ಮೆ ಅವನು ಒಂದು ದೇವಸ್ಥಾನಕ್ಕೆ ಬರುತ್ತಾನೆ. ಅದು ಶಂಕರನಾರಾಯಣ ದೇವಸ್ಥಾನವಾಗಿರುತ್ತದೆ. ಅವನಿಗೆ ಈಗ ತುಂಬ ಸಂದಿಗ್ಧವಾಗುತ್ತದೆ. ಏಕೆಂದರೆ ದೇವಾಲಯದಲ್ಲಿ ಶಿವ ವಿಷ್ಣು ಒಂದೇ ವಿಗ್ರಹದಲ್ಲಿ ಇರುತ್ತಾರೆ. ಅರ್ಧ ಶಿವ ಇನ್ನರ್ಧ ವಿಷ್ಣು. […]

Continue Reading

ಮಾತು~ಮುತ್ತು : ಕೈ ಹಿಡಿದು ನಡೆಸೆನ್ನನು – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಒಮ್ಮೆ ಒಬ್ಬ ಪುಟ್ಟ ಹುಡುಗಿ ತನ್ನ ತಂದೆಯೊಂದಿಗೆ ಒಂದು ಸೇತುವೆಯನ್ನು ದಾಟಿ ಹೋಗಬೇಕಿತ್ತು. ಸೇತುವೆ ತುಂಬ ದುರ್ಬಲವಾಗಿತ್ತು. ಅಲ್ಲದೇ ತುಂಬ ಉದ್ದವಾಗಿಯೂ ಇತ್ತು. ತಂದೆಗೆ ಆತಂಕ ಶುರುವಾಯಿತು.   ‘ಸೇತುವೆ ಎಲ್ಲಿಯಾದರೂ ಮುರಿದು ಬಿದ್ದರೆ ಏನು ಮಾಡುವುದು? ನನ್ನ ಮಗಳಿಗೆ ಕಷ್ಟವಾಗುವುದಲ್ಲ!’ ಎಂದು ಅಂದುಕೊಂಡು- “ನನ್ನ ಕೈ ಹಿಡಿದು ನಿಧಾನವಾಗಿ ಬಾ” ಎನ್ನುತ್ತಾನೆ.   ಆಗ ಆ ಪುಟ್ಟಮಗು ತಂದೆಯ ಹತ್ತಿರ- “ನೀನೇ ನನ್ನ ಕೈಹಿಡಿದುಕೊ” ಎನ್ನುತ್ತದೆ.   ತಂದೆ ಆಶ್ಚರ್ಯದಿಂದ- “ಅದರಲ್ಲೇನು ವ್ಯತ್ಯಾಸ; ನಾನು ಹಿಡಿದುಕೊಂಡರೂ […]

Continue Reading

ಮಾತು~ಮುತ್ತು : ನಾನು ಹೋಗಬೇಕು – ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

ಒಂದು ದಿನ ಒಬ್ಬ ವ್ಯಕ್ತಿ ದೇವರ ಮನೆಯ ಬಾಗಿಲು ಬಡಿಯುತ್ತಾನೆ. ಬಾಗಿಲಿಗೆ ಚಿಲಕ ಹಾಕಿರುತ್ತದೆ. ಒಳಗಿನಿಂದ ಒಂದು ಧ್ವನಿ- ‘ಯಾರು?’ ಎಂದು ಕೇಳುತ್ತದೆ.   ಅದಕ್ಕೆ ಇವನು- ‘ನಾನು’ ಎನ್ನುತ್ತಾನೆ.   ಬಾಗಿಲು ತೆಗೆಯುವುದೇ ಇಲ್ಲ. ಬಹಳ ಸಮಯ ಕಾದ ಅನಂತರ ಈ ವ್ಯಕ್ತಿ ಕಾಡಿಗೆ ಹೋಗಿ ಬಹಳ ಕಾಲ ತಪಸ್ಸು ಮಾಡಿ ಆತ್ಮಜ್ಞಾನ ಪಡೆಯುತ್ತಾನೆ. ಅನಂತರ ಬಂದು ಬಾಗಿಲು ತಟ್ಟುತ್ತಾನೆ. ಆಗ ಒಳಗಿನಿಂದ ಅದೇ ಧ್ವನಿ- ‘ಯಾರು?’ ಎಂದು ಕೇಳುತ್ತದೆ.   ಆಗ ಈ ವ್ಯಕ್ತಿ- […]

Continue Reading