ಸೃಷ್ಟಿಯಲ್ಲಿ ಯಾವತ್ತೂ ಸಂತೋಷ ಸ್ಥಿರವಾಗಿರುವುದಿಲ್ಲ – ಶ್ರೀಸಂಸ್ಥಾನ

ಶ್ರೀಸಂಸ್ಥಾನ

ಗಿರಿನಗರ: ದಿವ್ಯಪುರುಷರ ಸಂಪರ್ಕಕ್ಕೆ ಒಳಪಟ್ಟ ಜಲವು ತೀರ್ಥ ಎಂದೆನಿಸಿಕೊಳ್ಳುತ್ತದೆ. ಮನಸ್ಸು ನಿರ್ಮಲವಾಗಿದ್ದಾಗ ಮಹಾಪುರಷರಾಗಬಹುದು. ಸೃಷ್ಟಿಯಲ್ಲಿ ಯಾವತ್ತೂ ಸಂತೋಷ ಸ್ಥಿರವಾಗಿರುವುದಿಲ್ಲ. ಋಷಿಗಳು ದಿವಿಯಲ್ಲಿ ದೃಷ್ಟಿಯನ್ನು ನೆಟ್ಟರೆ, ಕೃಷಿಕರು ಭುವಿಯಲ್ಲಿ ಮೇಲೆ ದೃಷ್ಟಿಯನ್ನು ಇಟ್ಟಿರುತ್ತಾರೆ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.

ಗಿರಿನಗರ ಶ್ರೀರಾಮಾಶ್ರಮದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪದಲ್ಲಿ ನಡೆಯುತ್ತಿರುವ ಧಾರಾರಾಮಾಯಣ ಪ್ರವಚನ ಮಾಲಿಕೆಯ ಮೂರನೇ ದಿನ ಆಶೀರ್ವಚನ ನೀಡಿದರು.

ರಾಮಾಯಣವನ್ನು ಕೇಳುವುದರಿಂದ ಪಾಪಗಳನ್ನು ತೊಳೆದು ಶುದ್ಧವಾಗಬಹುದು. ಶುದ್ಧ ಪ್ರಕೃತಿಯಾದರೆ ಅಧರ್ಮವನ್ನು ಕಂಡಾಕ್ಷಣ ನೋವುಂಟಾಗುತ್ತದೆ. ವಸ್ತು ಸ್ಥಿತಿಗೆ ಸಂಬಂಧ ಬರದಿದ್ದರೆ ಆ ವಿಷಯ ಸುಳ್ಳಾಗಿರುತ್ತದೆ. ಸೃಷ್ಟಿಯನ್ನೇ ಮರೆಯುವ ಹಾಗೆ ಇದ್ದರೆ ಮಾತ್ರ ಮಹಾನ್ ಕಾರ್ಯ ಮಾಡಲು ಸಾಧ್ಯ ಎಂದು ತಿಳಿಸಿದರು.

ನಾರದರು ಹೇಳಿದ ಕಥೆಯನ್ನು ಕೇಳಿದ ವಾಲ್ಮೀಕಿಯವರು ರಾಮಾಯಣದ ಮೆಲುಕು ಹಾಕುತ್ತಾ, ಆಶ್ರಮದಲ್ಲಿ ರಾಮಾಯಣದ ಮಂಗಲಶ್ಲೋಕವನ್ನು ಉಚ್ಚರಿಸುತ್ತಾರೆ. ಬ್ರಹ್ಮದೇವನೂ ವಾಲ್ಮೀಕಿಯನ್ನು ಹುಡುಕಿಕೊಂಡು ಬಂದರು. ವಾಲ್ಮೀಕಿಯವರು ರಾಮಾಯಣವನ್ನು ಗ್ರಹಿಸಿ ಆಗಿತ್ತಾದರೂ, ಪ್ರಪಂಚದ ಮುಂದೆ ಇಡುವವರು ಯಾರೆಂಬ ಪ್ರಶ್ನೆ ಮೂಡುತ್ತದೆ ಎಂಬ ರೀತಿಯಲ್ಲಿ ಕಥೆ ಪ್ರಸ್ತುತವಾಯಿತು.

ಡಿ. ಎನ್. ಭಟ್ ದಂಪತಿಗಳು ಫಲ ಸಮರ್ಪಿಸಿದರು. ಪ್ರತಿಭಾ ಅಂಗಡಿ ಹಾಗೂ ಶಿಶಿರ ಅಂಗಡಿ ಅವರು ಮಹಾ ದೀಪಕ್ಕೆ ತೈಲ ಸಮರ್ಪಣೆ ಮಾಡೀದರು. ಧರ್ಮಕರ್ಮ ಖಂಡದ ಶ್ರೀಸಂಯೋಜಕ ರಾಮಕೃಷ್ಣ ಕೂಟೇಲು ಪ್ರಸ್ತಾವನೆಗೈದರು. ವಿನಾಯಕ ಎನ್ ಭಟ್ ಕಾರ್ಯಕ್ರಮ ನಿರೂಪಿಸಿದರು.

 

Leave a Reply

Your email address will not be published. Required fields are marked *