ಸ್ವಭಾಷಾ ಚಾತುರ್ಮಾಸ್ಯ ಸೀಮೋಲ್ಲಂಘನ ಧರ್ಮಸಭೆಯಲ್ಲಿ ರಾಘವೇಶ್ವರ ಶ್ರೀ ಘೋಷಣೆ – ಶಿಷ್ಯಹಿತಂ ಮಹಾಸಂಕಲ್ಪ: ಪ್ರತಿ ಶಿಷ್ಯರ ಮನೆಗೆ ಸ್ವರ್ಣಯಾತ್ರೆ

ಗೋಕರ್ಣ: ಸಮಸ್ತ ಗುರು ಪರಂಪರೆಯ ಆಶೀರ್ವಾದವನ್ನು ಹೊತ್ತು ಸಮಾಜದ ಪ್ರತಿ ಶಿಷ್ಯರ ಮನೆಗೆ ಸ್ವರ್ಣಪಾದುಕೆ ಚಿತ್ತೈಸುವ ಸ್ವರ್ಣಯಾತ್ರೆ ಈ ವರ್ಷದ ವಿಜಯದಶಮಿಯಿಂದ ಆರಂಭವಾಗಲಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು. ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡ ಶ್ರೀಗಳು ಸೀಮೋಲ್ಲಂಘನ ಬಳಿಕ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡುವ ವೇಳೆ ಈ ಉದ್ಘೋಷ ಮಾಡಿದರು. ಶ್ರೀಮಠದ ಶಿಷ್ಯತ್ವ ಹೊಂದಿರುವ ಎಲ್ಲರ ಹೆಸರಲ್ಲಿ ಸಂಕಲ್ಪ ಮಾಡಿ ಶಿಷ್ಯಹಿತಂ ಎಂಬ ಬೃಹತ್ ಕಾರ್ಯಕ್ರಮ ಆಯೋಜಿಸಿದ್ದು, ಇದಕ್ಕೆ ಪೂರ್ವಭಾವಿಯಾಗಿ ಸ್ವರ್ಣಪಾದುಕೆಗಳು ಮನೆ ಮನೆಗೆ […]

Continue Reading

ಆಂಗ್ಲರ ದಾಸ್ಯದಿಂದ ಹೊರಬನ್ನಿ: ರಾಘವೇಶ್ವರ ಶ್ರೀ

ಗೋಕರ್ಣ: ಬ್ರಿಟಿಷರ ಆಳ್ವಿಕೆ ಮುಗಿದು ಮೂರು ತಲೆಮಾರು ಕಳೆದರೂ, ನಾವು ಅವರ ದಾಸ್ಯದಿಂದ ಹೊರಬಂದಿಲ್ಲ. ಇಂಗ್ಲಿಷ್ ಮರೆಯುವ ಬದಲು ನಾವು ನಮ್ಮ ಭಾಷೆ, ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ವಿಷಾದಿಸಿದರು. ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 59ನೇ ದಿನವಾದ ಶನಿವಾರ ಮುಂಬೈ, ಪುಣೆ, ಡೊಂಬಿವಿಲಿ, ಚೆನ್ನೈ, ಹೈದರಾಬಾದ್ ವಲಯಗಳ ಶಿಷ್ಯರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಬರಬರುತ್ತಾ ಇಂಗ್ಲಿಷ್ ಭಾಷೆ ಸಂಸ್ಕೃತಿ ಮರೆಯಾಗಬೇಕಿತ್ತು. ಆದರೆ ಹೆಚ್ಚುತ್ತಿರುವುದು ಆತಂಕಕಾರಿ […]

Continue Reading

ವೇದಾಧ್ಯಯನ ಪರಂಪರೆ ಬೆಳೆಯಲಿ: ರಾಘವೇಶ್ವರ ಶ್ರೀ ಆಶಯ

ಗೋಕರ್ಣ: ವೇದಾಧ್ಯಯನ ಪರಂಪರೆ ಬೆಳೆಯಬೇಕು. ನಿಷ್ಕಾರಣವಾಗಿ, ಫಲಾಪೇಕ್ಷೆ ಇಲ್ಲದೇ ಅಧ್ಯಯನ ಮಾಡಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.   ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 58ನೇ ದಿನವಾದ ಶುಕ್ರವಾರ ಬೆಂಗಳೂರಿನ ಹರ್ಷಕೃಷ್ಣ ಭಟ್ಟ ದಂಪತಿಗಳಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.   ನಮ್ಮ ಶಿವಗುರುಕುಲದಲ್ಲೇ ಘನಪಾಠಿಗಳು ತಯಾರಾಗಬೇಕು. ಆಗ ಗುರುಕುಲ ಸ್ಥಾಪನೆಯ ಉದ್ದೇಶ ಸಾಕಾರವಾಗುತ್ತದೆ. ಸಮಾಜ ಇದರ ಮಹತ್ವ ಅರಿತು ಅಧ್ಯಯನಾರ್ಥವಾಗಿ ಮಕ್ಕಳನ್ನು ಕಳುಹಿಸಿಕೊಡಬೇಕು. ಮುಂದೊಂದು ದಿನ […]

Continue Reading

ಸಮಾಜದ ಉನ್ನತಿಗೆ ಗುರುಪರಂಪರೆಯ ಆಶೀರ್ವಾದ ಅಗತ್ಯ – ರಾಘವೇಶ್ವರಶ್ರೀ

ಗೋಕರ್ಣ: ಗುರು ಪರಂಪರೆಯ ಆಶೀರ್ವಾದ ಸಮಾಜದ ಉನ್ನತಿಗೆ ಅಗತ್ಯ; ಶಂಕರಾಚಾರ್ಯರ ಆದಿಯಾಗಿ ಎಲ್ಲ ಗುರುಗಳ ಕೃಪೆಯಿಂದ ಸಮಾಜ ಪಾಪಮುಕ್ತವಾಗಲಿ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹಾರೈಸಿದರು. ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 57ನೇ ದಿನವಾದ ಗುರುವಾರ ಮುಂಬೈನ ರಮಣ ಭಟ್ ದಂಪತಿಗಳಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಗುರುಪರಂಪರೆಯ ಪ್ರೀತ್ಯರ್ಥವಾಗಿ ಎಂಟು ಗುರುವಾರಗಳಂದು ಲಕ್ಷ ತುಳಸಿ ಅರ್ಚನೆ ನಡೆದಿದೆ. ಸದುದ್ದೇಶಕ್ಕೆ ತುಳಸಿ ಕುಡಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೇರಿದಂತೆ ಸಂಘಟನೆಗಾಗಿ […]

Continue Reading

ಸ್ವಭಾಷಾ ಚಾತುರ್ಮಾಸ್ಯಕ್ಕೆ ಸೂರಜ್ ನಾಯ್ಕ್ ಸೋನಿ ಭೇಟಿ

ಗೋಕರ್ಣ: ಅಶೋಕೆಯಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರ ಸ್ವಭಾಷಾ ಚಾತುರ್ಮಾಸ್ಯ ವ್ರತದ ಕಾರ್ಯಕ್ರಮಕ್ಕೆ ಕುಮಟಾ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿದ್ದ ಸೂರಜ್ ನಾಯ್ಕ್ ಸೋನಿ ಭೇಟಿ ನೀಡಿ, ಶ್ರೀಸಂಸ್ಥಾನದವರ ದರ್ಶನಾಶೀರ್ವಾದ ಪಡೆದರು.      

Continue Reading

ಸ್ವಭಾಷಾ ಚಾತುರ್ಮಾಸ್ಯಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಭೇಟಿ

  ಗೋಕರ್ಣ: ಅಶೋಕೆಯಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರ ಸ್ವಭಾಷಾ ಚಾತುರ್ಮಾಸ್ಯ ವ್ರತದ ಕಾರ್ಯಕ್ರಮಕ್ಕೆ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಭೇಟಿ ನೀಡಿ, ಶ್ರೀಸಂಸ್ಥಾನದವರ ದರ್ಶನಾಶೀರ್ವಾದ ಪಡೆದರು.

Continue Reading

ಸ್ವಭಾಷಾ ಅಭಿಯಾನ ನಿರಂತರ: ರಾಘವೇಶ್ವರ ಶ್ರೀ

ಗೋಕರ್ಣ: ಮಠದ ಕೊನೆಯ ಶಿಷ್ಯರ ಕೊನೆಯ ಆಂಗ್ಲಪದ ನಿವೃತ್ತಿಯಾಗುವವರೆಗೂ ಸ್ವಭಾಷಾ ಅಭಿಯಾನ ನಡೆಯಲಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು. ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 55ನೇ ದಿನವಾದ ಮಂಗಳವಾರ ಬೆಂಗಳೂರಿನ ಕೆ.ಟಿ.ಶ್ರೀರಾಮ್ ದಂಪತಿಗಳಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಹೊಸಪೇಟೆಯ ಸುಬ್ರಾಯ ಹೆಗಡೆ ಮಹಾಸೇವೆ ನೆರವೇರಿಸಿದರು. ಇದು ಕೇವಲ ನಮ್ಮ ಸಮಾಜ ಅಥವಾ ಭಾಷೆಗೆ ಮಾತ್ರ ಸೀಮಿತವಲ್ಲ; ಎಲ್ಲ ಭಾರತೀಯ ಭಾಷೆಗಳಿಗೆ ಅನ್ವಯಿಸುವಂಥದ್ದು ಮತ್ತು ಸಮಾಜದ ಎಲ್ಲ ವರ್ಗದಲ್ಲೂ ಇದು […]

Continue Reading

ಆಂಗ್ಲರ ಅಂಧಾನುಕರಣೆ ತೊರೆದು ನಮ್ಮತನ ಉಳಿಸಿಕೊಳ್ಳೋಣ; ರಾಘವೇಶ್ವರ ಶ್ರೀ

ಗೋಕರ್ಣ: ನಮ್ಮ ಹಿರಿಯರು ಬಳಸುತ್ತಿದ್ದ ಪದಗಳನ್ನು ಮತ್ತೆ ಬಳಕೆಗೆ ತರುವ ಮೂಲಕ ನಾವು ನಾವಾಗೋಣ; ಆಂಗ್ಲರ ಅಂಧಾನುಕರಣೆ ತೊರೆದು ನಮ್ಮತನವನ್ನು ಉಳಿಸಿಕೊಳ್ಳೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.   ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 54ನೇ ದಿನವಾದ ಸೋಮವಾರ ಮಂಗಳೂರು ಮಂಡಲದ ಕನ್ಯಾನ, ಬಾಯಾರು, ಕೋಳ್ಯೂರು, ವಿಟ್ಲ, ಕೇಪು ಮತ್ತು ಕಲ್ಲಡ್ಕ ವಲಯಗಳ ಶಿಷ್ಯರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ಅನುಗ್ರಹಿಸಿದರು.   ಕನ್ನಡ ಭಾಷೆಯಲ್ಲಿ ಕಲಬೆರಕೆಯಾಗಿರುವ ಆಂಗ್ಲ ಮತ್ತು […]

Continue Reading

ಶ್ರೀರಾಮಾಶ್ರಮದ ಪುನರ್ವಸು ಭವನದಲ್ಲಿ ಶಾಸನತಂತ್ರ – ಸೇವಾಖಂಡ ಕಾರ್ಯಾಗಾರ

ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ಬೆಂಗಳೂರು ಶಾಖೆ ಶ್ರೀರಾಮಾಶ್ರಮದ ಪುನರ್ವಸು ಭವನದಲ್ಲಿ ಭಾನುವಾರ ಸೇವಾಖಂಡದ ಕಾರ್ಯಾಗಾರ ನಡೆಯಿತು. ಗುರುಮಂದಿರ, ಶ್ರೀರಾಮ ದೇವರ ಸನ್ನಿಧಿ ಗಣಪತಿ ಮತ್ತು ಸುಬ್ರಹ್ಮಣ್ಯ ಸನ್ನಿಧಿ ಗುರುಪೀಠಗಳ ಮುಂಭಾಗದಲ್ಲಿ ಫಲ ಸಮರ್ಪಣೆ ಮಾಡಿ ಪ್ರಾರ್ಥನೆ ಮಾಡಲಾಯಿತು. ದೀಪ ಪ್ರಜ್ವಲನ, ಫಲ ಸಮರ್ಪಣೆ, ಗುರುವಂದನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ವಿದ್ವಾನ್ ಶಿವರಾಮ ಅಗ್ನಿಹೋತ್ರಿ ಸೇವಾ ಮನೋಭಾವನೆ ಬೆಳೆಸಿಕೊಳ್ಳುವ ರೀತಿ, ಕಾರ್ಯಕರ್ತರ ನಡವಳಿಕೆ ಬಗ್ಗೆ ಮನೋಜ್ಞವಾಗಿ ತಿಳಿಸಿ ಕೊಟ್ಟರು. ಯೋಜನಾ ಖಂಡದ ಶ್ರೀಸಂಯೋಜಕರಾದ ವಿದ್ವಾನ್ ಜಗದೀಶ ಶರ್ಮಾ ಅರ್ಹತೆಯ ಅಷ್ಟ […]

Continue Reading

ಜನಮನ ಸೆಳೆದ ಪಾಕವೈಭವ- ನಾಳೆ ಸೇವಾಸೌಧ ಸಮರ್ಪಣೆ

  ಗೋಕರ್ಣ: ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ ದೇವತೋಪಾಸನೆ, ತಪಸ್ಸು, ಸಚ್ಚಿಂತನೆ, ಕಾರ್ಯಾನ್ವಯದ ಉದ್ದೇಶದಿಂದ ಶಿಷ್ಯಭಕ್ತರು ಸುಮಾರು ಐದು ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಅಶೋಕೆಯಲ್ಲಿ ನಿರ್ಮಿಸಿರುವ ವಿಶಿಷ್ಟ ‘ಸೇವಾಸೌಧ’ ಸಮರ್ಪಣಾ ಸಮಾರಂಭ ಶನಿವಾರ (ಜನವರಿ 28) ನಡೆಯಲಿದೆ. ಸ್ವಸ್ಥ ಮತ್ತು ಸಮರ್ಥ ಜಗತ್ತಿನ ನಿರ್ಮಾಣಕ್ಕೆ ಸುಯೋಗ್ಯ ಶಿಕ್ಷಣದ ಅಗತ್ಯತೆಯನ್ನು ಪರಿಕಲ್ಪಿಸಿ, ಭಾರತದ ಪ್ರಾಚೀನ ಶಿಕ್ಷಣ ವಿನ್ಯಾಸ ಹಾಗೂ ಶಿಕ್ಷಣಕ್ರಮಕ್ಕೆ ಕಾಯಕಲ್ಪ ಒದಗಿಸಬೇಕು ಎಂಬ ಮಹದಾಶಯದೊಂದಿಗೆ ಪರಮಪೂಜ್ಯರು ಅನುಷ್ಠಾನಗೊಳಿಸುತ್ತಿರುವ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್‍ನ […]

Continue Reading

ಧರ್ಮಕಾರ್ಯ, ಶಾಶ್ವತ ಕಾರ್ಯಗಳಿಗೆ ನೆರವಾಗುವುದೇ ಸತ್ಕಾರ್ಯ: ರಾಘವೇಶ್ವರ ಶ್ರೀ

ಮಾಣಿ: ದುಂದುವೆಚ್ಚಕ್ಕೆ ಕಡಿವಾಣ ಹಾಕಿಕೊಂಡು, ಸರಳ ಜೀವನ ಅಳವಡಿಸಿಕೊಂಡು ಸಮಾಜದ ಶಾಶ್ವತ ಕಾರ್ಯಗಳಿಗೆ ಧರ್ಮಕಾರ್ಯಗಳಿಗೆ ಕೊಡುಗೆ ನೀಡುವ ಮೂಲಕ ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಕರೆ ನೀಡಿದರು. ಮಾಣಿ ಮಠದಲ್ಲಿ ನೂತನ ಶಿಲಾಮಯ ಗರ್ಭಾಗಾರದಲ್ಲಿ ಸಪರಿವಾರ ಶ್ರೀರಾಮದೇವರ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಸೋಮವಾರ ನಡೆದ ಧರ್ಮಸಭೆಯಲ್ಲಿ ಪರಮಪೂಜ್ಯರು ಆಶೀರ್ವಚನ ನೀಡಿದರು. ಸರಳ ಜೀವನದಲ್ಲಿರುವ ಸುಖ- ಶ್ರೇಯಸ್ಸು ಯಾವುದರಲ್ಲೂ ಇಲ್ಲ. ಒಂದು ತುತ್ತು ಕಡಿಮೆ ಉಂಡು ಅದನ್ನು ಸಮಾಜಕ್ಕೆ ನೀಡಿ ಎಂಬ […]

Continue Reading

ಗುಂಪೆ ವಲಯ ಸಭೆ

  ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯ ಸಭೆಯು ದಿನಾಂಕ ೦1 – 01 – 2023 ಆದಿತ್ಯವಾರ ಗುಂಪೆ ವಲಯ ಕಛೇರಿಯಲ್ಲಿ ನಡೆಯಿತು. ಶಂಖನಾದ , ಗುರುವಂದನೆ , ಗೋಸ್ತುತಿಯೊಂದಿಗೆ ಆರಂಭವಾದ ಸಭೆಯ ಅಧ್ಯಕ್ಷತೆಯನ್ನು ವಲಯಾಧ್ಯಕ್ಷರಾದ ಬಿ.ಎಲ್. ಶಂಭು ಹೆಬ್ಬಾರ್ ವಹಿಸಿದರು. ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ಗತಸಭೆಯ ವರದಿ ಮತ್ತು ಮಹಾಮಂಡಲ ಸುತ್ತೋಲೆಯನ್ನು ವಾಚಿಸಿ ವಿಭಾಗವಾರು ವರದಿಗಳನ್ನು ನೀಡಿದರು. ಕೋಶಾಧ್ಯಕ್ಷರಾದ ರಾಜಗೋಪಾಲ ಅಮ್ಮಂಕಲ್ಲು ಡಿಸೆಂಬರ್ ತಿಂಗಳ ವಲಯ […]

Continue Reading

ಸಮಾಜಕ್ಕೆ ಅಮೃತ ನೀಡುವ ಪಣ ತೊಡಿ: ಕಾರ್ಯಕರ್ತರಿಗೆ ರಾಘವೇಶ್ವರ ಶ್ರೀ ಸಲಹೆ

  ಗೋಕರ್ಣ: ಶ್ರೀಮಠದ ಸಮಸ್ತ ಪರಿವಾರ ಜೇನು ಗೂಡಿನಂತೆ. ಶ್ರೀಪೀಠ ರಾಣಿ ಹುಳದಂತೆ. ನಾವೆಲ್ಲ ಸೇರಿ ಜೇನು ಮಾತ್ರವಲ್ಲ; ಇಡೀ ಸಮಾಜಕ್ಕೆ ಅಮೃತವನ್ನೇ ಉಣಬಡಿಸೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ನುಡಿದರು. ಅಶೋಕೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಭಾನುವಾರ ಸಂಪನ್ನಗೊಂಡ ಗುರುಕುಲ ಚಾತುರ್ಮಾಸ್ಯದ ಕಾರ್ಯಕರ್ತರ ಸಮ್ಮಿಲನದಲ್ಲಿ ಪರಮಪೂಜ್ಯರು ಆಶೀರ್ವಚನ ನೀಡಿದರು. ಕಾರ್ಯಕರ್ತರಲ್ಲಿ ಮಹಾಕಾಳಿಯ ಕೃಪೆ ಹಾಗೂ ಶಕ್ತಿಯ ಸಂಚಯನವಾಗಲಿ. ದೊಡ್ಡ ಸೇವೆಗೆ ಆಂಜನೇಯನ ಶಕ್ತಿ ಹಾಗೂ ವಿನಮ್ರತೆ ಎಲ್ಲ ಕಾರ್ಯಕರ್ತರಲ್ಲಿ ಬರಲಿ ಎಂದು ಆಶಿಸಿದರು. […]

Continue Reading

ಅಶೋಕೆಯಲ್ಲಿ ಗುರುಕುಲ ಚಾತುರ್ಮಾಸ್ಯ ಸಂಪನ್ನ ವಿಷ್ಣುಗುಪ್ತ ವಿವಿಯಲ್ಲಿ ಅಹಿಚ್ಛತ್ರ ಕ್ಯಾಂಪಸ್ ಶೀಘ್ರ: ರಾಘವೇಶ್ವರ ಶ್ರೀ

ಗೋಕರ್ಣ: ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಅಹಿಚ್ಛತ್ರ ಕ್ಯಾಂಪಸ್ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಲಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀಸ್ವಾಮೀಜಿ ಪ್ರಕಟಿಸಿದರು. ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಆವರಣದಲ್ಲಿ ನಡೆದ ಗುರುಕುಲ ಚಾತುರ್ಮಾಸ್ಯ ಸೀಮೋಲ್ಲಂಘನ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ನಮ್ಮ ಸಮಾಜದ ನಡೆ- ನುಡಿ, ಆಹಾರ- ವಿಹಾರ, ಸಂಸ್ಕøತಿ- ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಈ ವಿಶಿಷ್ಟ ಕ್ಯಾಂಪಸ್ ಇಡೀ ದೇಶಕ್ಕೆ ಆದರ್ಶವಾಗಲಿದೆ. ಈ ಅಹಿಚ್ಛತ್ರ ಮುಂದೊಂದು ದಿನ ವಿಶ್ವದ ಬೆಳಕಾಗಲಿದೆ ಎಂದು ನುಡಿದರು. […]

Continue Reading

ಮೋಹದ ಕ್ಷಯ ಮೋಕ್ಷಕ್ಕೆ ಕಾರಣ: ರಾಘವೇಶ್ವರ ಶ್ರೀ

  ಗೋಕರ್ಣ: ಮೋಹದ ಕ್ಷಯವೇ ಮೋಕ್ಷಕ್ಕೆ ಕಾರಣ. ಮೋಕ್ಷ ಬೇಕಾದರೆ ಮೋಹ ಕ್ಷಯವಾಗಬೇಕು. ದಾನ ಮಾಡುವಾಗ ಆ ದ್ರವ್ಯದ ಮೇಲಿನ ಮೋಹ ಕಳೆದುಕೊಂಡು ಸತ್ಕಾರ್ಯಕ್ಕೆ ಅರ್ಪಿಸುವುದು ಸರ್ವಶ್ರೇಷ್ಠ ದಾನ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು. ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಸೋಮವಾರ ನಡೆದ ಹತ್ತನೇ ದಾನ ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ದಾನ ಮಾಡುವಾಗ ಆ ದ್ರವ್ಯದ ಮೇಲಿನ ಮೋಹ ಕಳೆದುಕೊಂಡು ಸತ್ಕಾರ್ಯಕ್ಕೆ […]

Continue Reading

ತಪ್ಪು ಮಾಡದಿರುವುದು ಧೈರ್ಯದ ಮೂಲ: ರಾಘವೇಶ್ವರ ಶ್ರೀ

ಗೋಕರ್ಣ: ಆಧ್ಯಾತ್ಮಿಕ ಜೀವನ ಹಾಗೂ ಸಾಮಾನ್ಯ ಜೀವನಕ್ಕೆ ಧೈರ್ಯ ಅಥವಾ ಸ್ಥಿರಚಿತ್ತ ಅಗತ್ಯ. ತಪ್ಪು ಮಾಡದಿರುವುದು ಧೈರ್ಯದ ಮೂಲ. ತಪ್ಪು ಮಾಡುವವ ಸಹಜವಾಗಿಯೇ ಭಯಕ್ಕೆ ಶರಣಾಗುತ್ತಾನೆ. ತಪ್ಪು ಮಾಡದಿದ್ದರೆ ನಿಶ್ಚಿಂತೆಯಿಂದ, ಧೈರ್ಯದಿಂದ ಇರುತ್ತಾನೆ. ತಪ್ಪು ಮಾಡದಿರುವುದನ್ನು ರೂಢಿಸಿಕೊಂಡಲ್ಲಿ ಸಹಜವಾಗಿಯೇ ನಿಜವಾದ ಧೈರ್ಯ ನಮಗೆ ಬರುತ್ತದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಸಲಹೆ ಮಾಡಿದರು. ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಭಾನುವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ […]

Continue Reading

ನಿಮ್ಮ ನಿಯಂತ್ರಣದಲ್ಲಿದ್ದರೆ ಕ್ರೋಧವೂ ದೋಷವಲ್ಲ- ರಾಘವೇಶ್ವರ ಶ್ರೀ

  ಗೋಕರ್ಣ: ಕ್ರೋಧದ ನಿಯಂತ್ರಣದಲ್ಲಿ ನೀವಿದ್ದಾಗ ಕ್ರೋಧ ದೋಷ. ನಿಮ್ಮ ನಿಯಂತ್ರಣದಲ್ಲಿ ಕೋಪ ಇದ್ದಾಗ ಅದು ಗುಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ವಿಶ್ಲೇಷಿಸಿದರು. ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಭಾನುವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿ, ಕೋಪ ಇರುವುದು ಆತ್ಮರಕ್ಷಣೆಗೆ; ಆದರೆ ಅದು ಇನ್ನೊಬ್ಬರಿಗೆ ಹಾನಿಯನ್ನು ಉಂಟು ಮಾಡಬಾರದು. ನಮ್ಮ ನಿಯಂತ್ರಣದಲ್ಲಿರುವ ಕೋಪ ಪ್ರತಿಯೊಬ್ಬರಿಗೂ ಬೇಕು ಎಂದು ಮಾರ್ಮಿಕವಾಗಿ ನುಡಿದರು. ರಾಮ ಸ್ಥಾನಕ್ರೋಧ- ಜಿತಕ್ರೋಧ ಎಂಬ ಉಲ್ಲೇಖ […]

Continue Reading

ಪ್ರೀತಿ ಹೃದಯ ಬೆಸೆದರೆ ಕೋಪ ದೂರ ಮಾಡುವಂಥದ್ದು: ರಾಘವೇಶ್ವರ ಶ್ರೀ

  ಗೋಕರ್ಣ: ಪ್ರೀತಿ ಹೃದಯಗಳನ್ನು ಹತ್ತಿರ ತಂದರೆ ಕೋಪ ಹೃದಯಗಳನ್ನು ದೂರ ಮಾಡುತ್ತದೆ; ಜೀವ- ಜೀವಗಳನ್ನು, ಜೀವ- ದೇವರನ್ನೂ ದೂರ ಮಾಡುವಂಥದ್ದು. ಅರಿಷಡ್ವರ್ಗಗಳಲ್ಲಿ ಒಂದಾದ ಕ್ರೋಧ, ಮನಸ್ಸುಗಳ ಮಧ್ಯೆ, ಹೃದಯಗಳ ಮಧ್ಯೆ ಗೋಡೆ ಕಟ್ಟುವ ಕೆಲಸ ಮಾಡುತ್ತದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು. ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಗುರುವಾರ ನಡೆದ ಧರ್ಮಸಭೆಯಲ್ಲಿ ಪರಮಪೂಜ್ಯರು ಆಶೀರ್ವಚನ ನೀಡಿದರು. ಭಾವ ಅಥವಾ ಪ್ರೀತಿ ಬೆಳೆದಂತೆ ಭಾಷೆ ಮೂಕವಾಗುತ್ತದೆ. ಭಾವ […]

Continue Reading

ಸಿಟ್ಟು ನಿಯಂತ್ರಣಕ್ಕೆ ಬಂದಷ್ಟೂ ಜೀವನ ಹಸನು: ರಾಘವೇಶ್ವರ ಶ್ರೀ

  ಗೋಕರ್ಣ: ಸಿಟ್ಟು ನಿಯಂತ್ರಣಕ್ಕೆ ಬಂದಷ್ಟೂ ನಮ್ಮ ಜೀವನ ಹಸನಾಗುತ್ತದೆ; ನಮ್ಮ ಕೋಪ, ತೊಂದರೆಗಳಿಗೆ ನಮ್ಮ ಕರ್ಮಗಳೇ ಕಾರಣ ಎಂಬ ಭಾರತೀಯರ ಕರ್ಮ ಸಿದ್ಧಾಂತವನ್ನು ಅರ್ಥ ಮಾಡಿಕೊಂಡರೆ ಜೀವನದಲ್ಲಿ ಯಾರ ಮೇಲೂ ಸಿಟ್ಟು ಮಾಡಿಕೊಳ್ಳುವ ಪ್ರಮೇಯವೇ ಉದ್ಭವಿಸುವುದಿಲ್ಲ ಅಥವಾ ಯಾರನ್ನೂ ನಾವು ದ್ವೇಷಿಸುವುದಿಲ್ಲ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು. ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಬುಧವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಕೋಪ ನಮ್ಮ ಬದುಕಿನಲ್ಲಿ […]

Continue Reading

ಜೀವನದಲ್ಲಿ ಸಂಯಮ ಎಲ್ಲಕ್ಕಿಂತ ಮುಖ್ಯ- ರಾಘವೇಶ್ವರ ಶ್ರೀ

ಗೋಕರ್ಣ: ಸಿಟ್ಟು ಎಂಬ ಬೆಂಕಿ ಮೊದಲು ನಮ್ಮನ್ನು ಸುಡುತ್ತದೆ; ಆ ಬಳಿಕ ಇತರರನ್ನು ಸುಡುತ್ತದೆ. ಕ್ರೋಧವೆಂಬ ಬೆಂಕಿ ನಮ್ಮ ಮನಸ್ಸು, ಬದುಕು, ಸಂಬಂಧ ಹೀಗೆ ಎಲ್ಲವನ್ನೂ ಸುಡುತ್ತದೆ. ಆದ್ದರಿಂದ ಜೀವನದಲ್ಲಿ ಸಂಯಮ ಎಲ್ಲಕ್ಕಿಂತ ಮುಖ್ಯ. ಸಿಟ್ಟನ್ನು ಗೆಲ್ಲುವ ಶಕ್ತಿಯನ್ನು ಶ್ರೀರಾಮ ನಮಗೆಲ್ಲ ಕರುಣಿಸಲಿ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು. ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಸೋಮವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಸಿಟ್ಟಿನ ಪರಿಣಾಮ ಎಂದೂ ಒಳ್ಳೆಯದಾಗುವುದಿಲ್ಲ. […]

Continue Reading