ಬೆಂಗಳೂರು: ಯೋಜನಾ ಖಂಡದ ಉದ್ದೇಶ, ರೂಪುರೇಷೆಗಳನ್ನು ಸದಸ್ಯರಿಗೆ ತಿಳಿಸುವ ಮತ್ತು ಸದಸ್ಯರ ಜವಾಬ್ದಾರಿಯ ಕಾರ್ಯದೀಕ್ಷೆಯನ್ನು ವಿಧಿಸುವ ಕಾರ್ಯಾಗಾರ ಬೆಂಗಳೂರಿನ ರಾಮಚಂದ್ರಾಪುರಮಠದ ಶಾಖೆ ರಾಮಾಶ್ರಮದಲ್ಲಿ ೧೪ ಸೆಪ್ಟೆಂಬರ್ ೨೦೨೫ ರಂದು ನಡೆಯಿತು.
ಸಭಾ ಪೂಜೆಯನ್ನು ಯೋಜನಾಖಂಡದ ಸಂಯೋಜಕ ಕೆ ಎನ್ ಭಟ್ ನಡೆಸಿದರು. ಯೋಜನಾಖಂಡದ ಶ್ರೀ ಸಂಯೋಜಕ ವಿದ್ವಾನ್ ಜಗದೀಶ ಶರ್ಮ ಸಂಪ ಸಮಗ್ರವಾಗಿ ಶಾಸನ ತಂತ್ರ, ಅದರ ಕಾರ್ಯವಿಧಾನ, ಯೋಜನಾ ಖಂಡ, ಅದರಲ್ಲಿನ ಉಪಖಂಡ, ಅವುಗಳ ಕಾರ್ಯ ವ್ಯಾಪ್ತಿ ಇದೆಲ್ಲದರ ಕುರಿತು ವಿವರವಾಗಿ ಬಿಡಿಸಿ ತಿಳಿಸಿಕೊಟ್ಟರು. ಶಾಸನತಂತ್ರದ ಅಧ್ಯಕ್ಷ ಮೋಹನ ಭಾಸ್ಕರ್ ಹೆಗಡೆ ಯೋಜನಾ ಖಂಡದ ಕಾರ್ಯಕರ್ತರಿಗೆ ದೀಕ್ಷಾ ಪತ್ರವನ್ನು ಪ್ರದಾನ ಮಾಡಿದರು.
ಕಾರ್ಯಕರ್ತರ ಪರಸ್ಪರ ಪರಿಚಯ, ಅರ್ಹತೆಯ ಅಷ್ಟಸೂತ್ರಗಳ ವಿವರಣೆಯ ನಂತರ ಶಾಸನತಂತ್ರದ ಕಾರ್ಯದರ್ಶಿ ಕೆ.ಪಿ. ಎಡಪ್ಪಾಡಿ ಸಮಾರೋಪ ಭಾಷಣವನ್ನು ನಡೆಸಿದರು. ಶ್ರೀನಾಥ ಸಾರಂಗ ಕಾರ್ಯಕ್ರಮ ನಿರ್ವಹಣೆ ಮಾಡಿದರು.
-ವರದಿ:
ಹರ್ಷ ಕೊಂಡದಕುಳಿ