ಗುಂಪೆ ವಲಯದಲ್ಲಿ ವಸಂತ ವಟುಶಿಕ್ಷಾ ಶಿಬಿರ

ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿರುವ ಹವ್ಯಕ ಮಹಾಮಂಡಲ ಧರ್ಮಕರ್ಮ ವಿಭಾಗದ ನಿರ್ದೇಶನದಲ್ಲಿ ಮುಳ್ಳೇರಿಯಾ ಹವ್ಯಕ ಮಂಡಲ ಗುಂಪೆ ವಲಯ ಮತ್ತು ಶ್ರೀಯುತ ಸತ್ಯಪ್ರಕಾಶ ದಂಪತಿಗಳ ನೇತೃತ್ವದಲ್ಲಿ ಏಪ್ರಿಲ್ 1ರಿಂದ 25ರ ವರೆಗೆ ವೇದ ಪಾಠ ಶಿಬಿರವು ಜರಗಿತು. ವಟುಗಳ ರಕ್ಷಕರಾದ ಶ್ರೀಯುತ ಜಯರಾಮ ಚೆಕ್ಕೆ, ಶ್ರೀಯುತ ಮಹಾಲಿಂಗ ಭಟ್ಟ ನೇರೋಳು, ಶ್ರೀಯುತ ಶಂಕರನಾರಾಯಣ ಭಟ್ಟ ನೇರೋಳು, ಶ್ರೀಯುತ ಕೃಷ್ಣಪ್ರಕಾಶ ಗುಂಪೆ, ಶ್ರೀಯುತ ರಾಮ ಕೃಷ್ಣ ಪ್ರಸಾದ ಅಮ್ಮಂಕಲ್ಲು, ಕರುವಜೆ ನಡುಮನೆ ಕೃಷ್ಣ ಭಟ್ಟ, ಶ್ರೀ […]

Continue Reading

ಮಹಾಪಾದುಕಾ ಪೂಜೆ ; ಯಶಸ್ಸಿನ ಕಾರ್ಯಕರ್ತರ ಸಭೆ

ವಿಟ್ಲ ಎ.23 : ಶ್ರೀಸಂಸ್ಥಾನದವರ ಮಾರ್ಗದರ್ಶನ ಮತ್ತು ದಿವ್ಯ ಉಪಸ್ಥಿತಿಯಲ್ಲಿ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರಮಠದಲ್ಲಿ ಮಹಾಪಾದುಕಾ ಪೂಜೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ಶ್ರೀಸಂಸ್ಥಾನದವರ 26ನೆಯ ಸನ್ಯಾಸಗ್ರಹಣ ದಿನೋತ್ಸವದ ಅಂಗವಾಗಿ ಜೀವನದಾನ ಮತ್ತು ಯೋಗಪಟ್ಟಾಭಿಷೇಕ ವರ್ಧಂತಿಗಳು ಯಶಸ್ವಿಯಾಗಿ ನಡೆಸಿದ್ದರ ಅವಲೋಕನ ಸಭೆ ನಡೆಯಿತು. ಶ್ರೀಮಠದ ಕಾರ್ಯಕರ್ತರು ತನು, ಮನೋ, ಧನಗಳ ಅತ್ಯದ್ಭುತ ಸಹಕಾರದಿಂದ ಕಾರ್ಯಕ್ರಮವು ಯಶಸ್ಸು ಕಾಣಲು ಸಾಧ್ಯವಾಗಿದೆ ಎಂದು ಯೋಗಪಟ್ಟಾಭಿಷೇಕ ಆಯೋಜನ ಸಮಿತಿ ಅಧ್ಯಕ್ಷ ಹಾರಕರೆ ಶ್ರೀ ನಾರಾಯಣ ಭಟ್ಟ ಶ್ಲಾಘಿಸಿದರು. ಅವರು ರವಿವಾರ ಮಾಣಿ […]

Continue Reading

ಪೆರಿಯದ ಪೆರಿಯೋಕ್ಕಿ ದ್ರವ್ಯಕಲಶಮಹೋತ್ಸವದಲ್ಲಿ ಶ್ರೀಸಂಸ್ಥಾನದವರು

10.04.2019 ರಂದು ಕಾಸರಗೋಡಿನ ಪೆರಿಯದ ಪೆರಿಯೋಕ್ಕಿ ಶ್ರೀ ಗೌರಿಶಂಕರ ದೇವಸ್ಥಾನದಲ್ಲಿ ಜರುಗಿದ ಕ್ಷೇತ್ರ ನವೀಕರಣ – ದ್ರವ್ಯಕಲಶ ಮಹೋತ್ಸವದ ಅಂಗವಾಗಿ ಶ್ರೀರಾಮಚಂದ್ರಾಪುರಮಠ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರಿಗೆ ಶ್ರೀ ಕ್ಷೇತ್ರ ಸೇವಾಸಮಿತಿಯ ಪದಾಧಿಕಾರಿಗಳು ಮತ್ತು ಊರ ಭಕ್ತವೃಂದವರಿಂದ ಚೆಂಡೆ ವಾದ್ಯಘೋಷಗಳೊಂದಿಗೆ ವಿಜೃಂಭಣೆಯ ಸ್ವೀಕರಣ ಜರಗಿತು.   ಶ್ರೀಗಳು ಶ್ರೀ ಕ್ಷೇತ್ರಕ್ಕೆ ಚಿತ್ತೈಸಿ ದೇವದರ್ಶನ ಮಾಡಿದರು. ಬಳಿಕ ಧಾರ್ಮಿಕ ಸಭಾಕಾರ್ಯಕ್ರಮ ಜರಗಿತು. ಕ್ಷೇತ್ರ ಸೇವಾಸಮಿತಿಯ ಕಾರ್ಯದರ್ಶಿಗಳಾದ ಪ್ರಮೋದ್ ಪೆರಿಯ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸೇವಾಸಮಿತಿಯ ಅಧ್ಯಕ್ಷರಾದ […]

Continue Reading

ಶ್ರೀಕರಾರ್ಚಿತ ದೇವರಿಗೆ ಕನಕಾಭಿಷೇಕ

ಹೊಸನಗರದ ಶ್ರೀ ಭಾರತೀ ಗುರುಕುಲದ ಪರವಾಗಿ 13-04-2019 ಶನಿವಾರ ಶ್ರೀಕರಾರ್ಚಿತ ರಾಮದೇವರಿಗೆ ಸಾವಿರ ಅಭಿಯಾನದ ಸಾಕಾರಕ್ಕಾಗಿ ಈ ಹಿಂದೆ ಸಂಕಲ್ಪಿಸಿದಂತೆ ಸೇವಾರೂಪವಾಗಿ ಕನಕಾಭಿಷೇಕ ನಡೆಯಲಿದೆ. ಗುರುಕುಲದ ಹಿತೈಷಿಗಳು, ಸಾವಿರ ಅಭಿಯಾನದ ಸದಸ್ಯರುಗಳು, ದಾನಿಗಳು, ಪೋಷಕರು, ಹಾಜರಿದ್ದು ತನು- ಮನ- ಧನ ಸಹಾಯವಿತ್ತು ದೇವರ ಕೃಪೆಗೆ ಪಾತ್ರರಾಗ ಬೇಕಾಗಿ ಕೋರಿದೆ.   ೧.ಕನಕಾಭಿಷೇಕ ಕಾಣಿಕೆ- ರೂ. 100/- ೨. ಕನಕಾಭಿಷೇಕ ಸಂಕಲ್ಪ – ರೂ. 1000/- ೩.ಕನಕ ಸಮರ್ಪಣೆ – ರೂ.10000/- ಅಂದು ಭಾಗವಹಿಸಲು ಕಷ್ಟವಿದ್ದಲ್ಲಿ ಸೇವಾಕರ್ತರು ಹಣವನ್ನು […]

Continue Reading

ರಾಮಾಯಣ ಪಾರಾಯಣ

ಮುಳ್ಳೇರಿಯಾ ಮಂಡಲದ ಎಣ್ಮಕಜೆ ವಲಯದ ಕೋಶಾಧಿಕಾರಿಗಳು ಕಾಟುಕುಕ್ಕೆ ಘಟಕಾಧ್ಯಕ್ಷರೂ ಗುರಿಕ್ಕಾರರು ಆಗಿ ಗುರುಸೇವೆಗೈಯುತ್ತಿರುವ ಬಿ.ವಿ. ನಾರಾಯಣ ಭಟ್ಟರು ಶ್ರೀ ವಾಲ್ಮೀಕೀ ರಾಮಾಯಣ ಪಾರಾಯಣದ 30ನೆಯ ಆವೃತ್ತಿಯನ್ನು ಮುಗಿಸಿ 31ನೆಯ ಬಾರಿಯ ವಾಚನವನ್ನು ಪ್ರಾರಂಭಮಾಡಿರುತ್ತಾರೆ. ಇವರಿಗೆ ಗುರು-ದೇವತಾನುಗ್ರಹ ಸದಾ ಇರಲೆಂದು ಶುಭ ಹಾರೈಸೋಣ.

Continue Reading

ಮಾಣಿ ಮಠದಲ್ಲಿ ಮೋತ್ಸ ಸಿದ್ಧತಾ ಸಭೆ

ಮಾಣಿ: ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ಶ್ರೀಸಂಸ್ಥಾನದವರ ದಿವ್ಯ ಸಾನ್ನಿಧ್ಯದಲ್ಲಿ ಎ.9ರಂದು ನಡೆಯಲಿರುವ ಜೀವನದಾನ ಮತ್ತು ಎ.11ರಂದು ನಡೆಯಲಿರುವ ಮಹಾಪಾದುಕಾಪೂಜೆಯ ಅಂಗವಾಗಿ ಸಮಾಲೋಚನೆ ಸಭೆ ನಡೆಯಿತು. ಧ್ವಜಾರೋಹಣ, ಶಂಖನಾದ, ಗುರುವಂದನೆಯಾಗಿ ಸಭೆ ಪ್ರಾರಂಭವಾಯಿತು. ಆಯೋಜನಾ ಸಮಿತಿಯ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್ಟ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ 26ನೆಯ ಸನ್ಯಾಸಗ್ರಹಣ ದಿನೋತ್ಸವದ ಅಂಗವಾಗಿ ಆರ್ತಕುಟುಂಬಕ್ಕೆ ಜೀವನದಾನ ಮತ್ತು 26ನೆಯ ಯೋಗಪಟ್ಟಾಭಿಷೇಕ ಸ್ಮರಣೋತ್ಸವದ ಅಂಗವಾಗಿ ಸಹಸ್ರರಾರು ಶಿಷ್ಯ ಭಕ್ತರಿಂದ ಮಹಾಪಾದುಕಾಪೂಜೆ ನೆರವೇರಲಿದೆ. ಎ.11ರಂದು ನಡೆಯುವ ಮಹಾಪಾದುಕಾ […]

Continue Reading

ಇತಿಹಾಸದ ಹೊಂಪುಟವಾಗಲಿದೆ ಮಾಣಿಮಠದ ಮಹಾಪಾದುಕಾ ಪೂಜೆ

ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ನಮ್ಮ ಕುಲಗುರುಗಳಾದ ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯ ಸಾನ್ನಿಧ್ಯದಲ್ಲಿ ಎ.9ರಂದು ನಡೆಯಲಿರುವ ಜೀವನದಾನ ಮತ್ತು ಎ.11ರಂದು ನಡೆಯಲಿರುವ ಮಹಾಪಾದುಕಾಪೂಜೆಯ ವಿಶೇಷತೆ ಬಗ್ಗೆ ನಮಗೆಲ್ಲ ತಿಳಿದಿದೆ.   ಮಹಾಭಾಗ್ಯ : ಕುಲಗುರುಗಳ ಸನ್ಯಾಸಗ್ರಹಣ ದಿನಾಚರಣೆ ಮತ್ತು ಯೋಗಪಟ್ಟಾಭಿಷೇಕ ದಿನಾಚರಣೆಯನ್ನು ಆಯೋಜಿಸಿ, ಸಂಭ್ರಮವನ್ನಾಚರಿಸುವುದು ಅಹೋಭಾಗ್ಯ. ಕುಲಗುರುಗಳ 26ನೆಯ ಯೋಗಪಟ್ಟಾಭಿಷೇಕ ದಿನೋತ್ಸವ. ಅದರ ಅಂಗವಾಗಿ ಸಹಸ್ರ ಸಹಸ್ರ ಶಿಷ್ಯ ಭಕ್ತರಿಂದ ಮಹಾಪಾದುಕಾಪೂಜೆಯು ಭಕ್ತಿಪ್ರಧಾನವೂ ವಿಶಿಷ್ಟವೂ ವಿಶೇಷವೂ ಆಗಿದೆ. ಈ ವಿಶೇಷ ಪುಣ್ಯಪ್ರದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅದೃಷ್ಟ ಶಿಷ್ಯರ […]

Continue Reading

ಶ್ರೀ ಮಹಾಗಣಪತಿ ರಥೋತ್ಸವಾಂಗ ಕಾರ್ಯಕ್ರಮಗಳ ಶುಭಾರಂಭ

ಪ್ರತಿವರ್ಷ ದಂತೆ ಫಾಲ್ಗುಣದಲ್ಲಿ ಮೂರು ದಿನಗಳ ಶ್ರೀಮಹಾಗಣಪತಿ ದೇವರ ಮಹಾರಥೋತ್ಸವದ ಕಾರ್ಯಕ್ರಮಗಳು 18-03-2019 ರಂದು ಆರಂಭವಾದವು. ಬೆಂಗಳೂರು ಮಹಾನಗರದ ಪವಿತ್ರತಮವಾದ ಗಿರಿನಗರದಲ್ಲಿ ನಮ್ಮ ಪರಮಗುರುಗಳ ಕರಾಂಬುಜಗಳಿಂದ ಪ್ರತಿಷ್ಠಾಪಿತನಾದ ಶ್ರೀ ಮಹಾಗಣಪತಿಯು ವಿಶಿಷ್ಟವೂ ಅನನ್ಯವೂ ಆದ ಮಹಿಮಾನ್ವಿತನಾಗಿ ನೆಲೆ ನಿಂತಿದ್ದಾನೆ. ಮೊದಲದಿನವಾದ ನಿನ್ನೆ ಧ್ವಜಾರೋಹಣ, ಮಹಾಗಣಪತಿ ಹವನ ಇತ್ಯಾದಿ ಧಾರ್ಮಿಕವಿಧಿಗಳು ವಿಧ್ಯುಕ್ತವಾಗಿ ನಡೆದವು. ಮುಸ್ಸಂಜೆಯಿಂದ ಆರಂಭಿಸಿ ಶ್ರೀದೇವರ ಉತ್ಸವ ಮೂರ್ತಿಯ ನಗರ ಪರ್ಯಟನ ಪಲ್ಲಕ್ಕಿ ಉತ್ಸವವು ವಿಜೃಂಭಣೆಯಿಂದ ನಡೆಯಿತು. ಗಿರಿನಗರದ ನಿರ್ದಿಷ್ಟ ಬೀದಿಗಳಲ್ಲಿ ಸಾಲಂಕೃತ ಪಲ್ಲಕ್ಕಿಯ ಮೆರವಣಿಗೆಯು ಪತಾಕೆ […]

Continue Reading

ಹೊಸನಗರ ಶ್ರೀರಾಮಚಂದ್ರಾಪುರ ಮಠದ ಮಹಾನಂದಿ ಗೋಲೋಕದಲ್ಲಿರುವ ಶ್ರೀಗೋವರ್ಧನ ಗಿರಿಧಾರಿ ಗೋಪಾಲಕೃಷ್ಣ ದೇವಾಲಯದ ವಾರ್ಷಿಕೋತ್ಸವ ಹಾಗೂ ಛತ್ರ ಸಮರ್ಪಣಾ ಸಮಾರಂಭ

ಕೃಷ್ಣನಿಗೆ ಸ್ವರ್ಣಛತ್ರ ಸಮರ್ಪಣೆ – ಸಹಸ್ರ ವಿಷ್ಣು ಸಹಸ್ರನಾಮ, ಸಹಸ್ರಛತ್ರ ಸಮರ್ಪಣೆ * ಛತ್ರ ಸಮರ್ಪಿಸಿ ರಕ್ಷಣೆಗೆ ಹರಕೆ ಮಾಡಿಕೊಳ್ಳಲು ಗೋವರ್ಧನಗಿರಿಧಾರಿ ಗೋಪಾಲಕೃಷ್ಣನ ಸನ್ನಿಧಿಯಲ್ಲಿ ಅವಕಾಶ ತನ್ನನ್ನು ನಂಬಿದವರಿಗೆ ಸೋಲಿಲ್ಲ – ಸಾವಿಲ್ಲ ಎಂದು ಕೃಷ್ಣ ಅಂದು ಗೋವರ್ಧನಗಿರಿಯನ್ನು ಎತ್ತಿ ಭಕ್ತರನ್ನು ಕಾಪಾಡುವ ಮೂಲಕ ತೋರಿಸಿಕೊಟ್ಟಿದ್ದ. ಅದರ ಪ್ರತೀಕವಾಗಿ ಈ ಗೋವರ್ಧನಗಿರಿಧಾರಿ ಗೋಪಾಲಕೃಷ್ಣನ ಸನ್ನಿಧಿಯಲ್ಲಿ ಕಷ್ಟ- ನಷ್ಟದಲ್ಲಿ ಇರುವವರಿಗೆ ಛತ್ರ ಸಮರ್ಪಣೆಯ ಸೇವೆಯನ್ನು ಮಾಡಿ ಹರಕೆ ಮಾಡಿಕೊಳ್ಳಲು ಅವಕಾಶಕಲ್ಪಿಸಲಾಗಿದೆ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು. […]

Continue Reading

ಹೈಗುಂದ ಪರಮೇಶ್ವರಿ ದೇವಾಲಯದ ವರ್ಧಂತಿ ಉತ್ಸವ ಸಂಪನ್ನ

ಹೊನ್ನಾವರ: ಶ್ರೀಸಂಸ್ಥಾನದ ಸಂಕಲ್ಪ ಹಾಗೂ ಮಹಾಮಂಡಲದ ಮಾರ್ಗದರ್ಶನದಂತೆ ಹವ್ಯಕರ ಮೂಲನೆಲೆ ಹೊನ್ನಾವರದ ಹೈಗುಂದದ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವರ್ದಂತಿ ಉತ್ಸವ ನೆರವೇರಿತು.   ಶ್ರೀಸಂಸ್ಥಾನದ ಮಾರ್ಗದರ್ಶನ ಹಾಗೂ ಸಂಕಲ್ಪದಂತೆ ನಡೆದ ಉತ್ಸವದ ಅಂಗವಾಗಿ ಸಾಗರ,ಉಪ್ಪನಂಗಡಿ,ಕುಮಟಾ ಹೊನ್ನಾವರ ಮoಡಲದ. ಮಾತೆಯರು 101 ಕ್ಕಿಂತ ಹೆಚ್ಚಿನ ಸoಖ್ಯೆಯಲ್ಲಿ ಕುಂಕುಮಾರ್ಚನೆ ನಡೆಸಿಕೊಟ್ಟರು.   ಮಹಾಮಂಡಲದ ಪ್ರಮುಖರು, ಎಲ್ಲ ಮಂಡಲದ ಭಕ್ತರು,ಗೇರುಸೊಪ್ಪೆ ಸೀಮೆಯ ಎಲ್ಲ ಶಿಷ್ಯಭಕ್ತರು ಭಾಗವಹಿಸಿ ಮಾತೆ ದುರ್ಗಾಪರಮೇಶ್ವರಿ ಹಾಗೂ ಸಂಸ್ಥಾನದ ಆಶೀರ್ವಾದಕ್ಕೆ ಪಾತ್ರರಾದರು.

Continue Reading

ಕಲ್ಲಡ್ಕ ಉಮಾಶಿವ ಕ್ಷೇತ್ರ : ಪ್ರತಿಷ್ಠಾ ಬ್ರಹ್ಮಕಲಶದ ಷಷ್ಟಮ ವರ್ಧಂತ್ಯುತ್ಸವ

ದೇವರಿಗೆ ಭಕ್ತಿಯಿಂದ ಸಲ್ಲಿಸುವ ಎಲ್ಲ ರೀತಿಯ ಸೇವೆಗಳೂ ಸಮಾನ   ವಿಟ್ಲ ಫೆ.17: ಕಲ್ಲಡ್ಕ ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಶ್ರೀ ದೇವರ ಪ್ರತಿಷ್ಠಾ ಬ್ರಹ್ಮಕಲಶದ ಷಷ್ಟಮ ವರ್ಧಂತ್ಯುತ್ಸವ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಶನಿವಾರ ನಡೆಯಿತು.   ಧಾರ್ಮಿಕ ಸಭೆಯಲ್ಲಿ ಮಾತನಾಡಿದ ವೇ.ಮೂ. ಶಂಕರನಾರಾಯಣ ಭಟ್ ನಡಿಬೈಲು ಅವರು, ಕ್ಷೇತ್ರದ ಹಿನ್ನೆಲೆಯಂತೆ ಇಲ್ಲಿ ಅನ್ನಸಂತರ್ಪಣೆಗೆ ಮಹತ್ವವಿದ್ದು, ದೇವರ ಸಾನ್ನಿಧ್ಯಕ್ಕೆ ಭಕ್ತರ ಆಗಮನವೂ ಪ್ರಾಮುಖ್ಯತೆ ಪಡೆಯುತ್ತದೆ. ದೇವರಿಗೆ ಭಕ್ತಿಯಿಂದ ಸಲ್ಲಿಸುವ ಎಲ್ಲ ರೀತಿಯ […]

Continue Reading

ಕುಂಡಡ್ಕ ವಿಷ್ಣುಮೂರ್ತಿ ದೇವಸ್ಥಾನ ಪುನಃಪ್ರತಿಷ್ಠಾ ಬ್ರಹ್ಮಕಲಶ : ರಾಜದರ್ಬಾರ್ ಗತವೈಭವ ಸ್ಥಿತವೈಭವವಾಗಿದೆ : ರಾಘವೇಶ್ವರಭಾರತೀ ಮಹಾಸ್ವಾಮಿಗಳವರು

ವಿಟ್ಲ, ಫೆ.11 : ಅರಸರು ಧರ್ಮದ ರಕ್ಷಕರು. ಧರ್ಮಬಾರ ಪದವೇ ದರ್ಬಾರ್ ಎಂದಾಗಿದೆ. ದೇವರು, ಗುರುಗಳು, ಅರಸರನ್ನು ಹೊಂದಿರುವ ಸಭೆ ರಾಜದರ್ಬಾರ್. ಅದು ಇಂದು ಕುಂಡಡ್ಕದಲ್ಲಿ ಸಂಭವಿಸಿದೆ. ಗತ ವೈಭವ ಸ್ಥಿತ ವೈಭವವಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಉಲ್ಲೇಖಿಸಿದರು.   ಅವರು ರವಿವಾರ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮಾಡ ಶಿಬರಿಕಲ್ಲ ಶ್ರೀ ಮಲರಾಯ – ಮೂವರ್ ದೈವಂಗಳ ದೈವಸ್ಥಾನ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆದ ರಾಜದರ್ಬಾರ್‌ನಲ್ಲಿ ಆಶೀರ್ವಚನ ನೀಡಿದರು.   […]

Continue Reading

ಪ್ರಧಾನ ಮಠದಲ್ಲಿ ರಾಮೋತ್ಸವದ ಪೂರ್ವ ತಯಾರಿ; ಉತ್ಸವ ಸಮಿತಿ ಕಡೆಯಿಂದ ಸಭೆ

ಹೊಸನಗರ: ಪ್ರಧಾನ ಮಠ ಹೊಸನಗರದಲ್ಲಿ ಎಪ್ರಿಲ್ ತಿಂಗಳ 12,13 ಹಾಗೂ 14ರ ಶುಕ್ರವಾರ,ಶನಿವಾರ ಹಾಗೂ ಭಾನುವಾರದಂದು ಅದ್ಧೂರಿಯಾಗಿ ರಾಮೋತ್ಸವ ನಡೆಯಲಿದೆ. ಇದರ ಪೂರ್ವ ತಯಾರಿಗಾಗಿ ಪ್ರಧಾನ ಮಠದ ಉತ್ಸವ ಸಮಿತಿ ಕಡೆಯಿಂದ ಇಂದು ಸಭೆ ನಡೆಸಲಾಯಿತು.   ಸಭೆಯಲ್ಲಿ ಶ್ರೀ ಸತ್ಯನಾರಾಯಣ ಭಾಗಿ, ಶ್ರೀ ಆಚರ ಭಟ್ರು, ಶ್ರೀ ಸಾರಂಗ ಶ್ರೀನಾಥ್, ಶ್ರೀ ರಾಘವೇಂದ್ರ ಮದ್ಯಸ್ಥ, ಶ್ರೀ ಚಂದ್ರಶೇಖರ ಶಿವಮೊಗ್ಗ, ಶ್ರೀ ಲಕ್ಷ್ಮೀ ನಾರಾಯಣ ಕೌಲಕೈ, ಶ್ರೀ ಪ್ರಸನ್ನ ಉಡುಚಿ, ಶ್ರೀ ಸುಬ್ರಮಣ್ಯ ಕೆ ಸಿ, ಶ್ರೀಮತಿ […]

Continue Reading

ಮುಂಬಯಿ ಪುಣೆ ವಲಯಗಳ ದೀಪಗಾಣಿಕೆ ಸಮರ್ಪಣೆ

ಮುಂಬಯಿ: ಪುಣೆ, ಮುಂಬಯಿ ವಲಯಗಳ ವಾರ್ಷಿಕ ದೀಪಗಾಣಿಕೆ ಸಮರ್ಪಣಾ ಕಾರ್ಯಕ್ರಮವು, ಅಖಂಡ ರಾಮತಾರಕದೊಂದಿಗೆ ಜನವರಿ 20, 2019ರಂದು ಸಾಂತಾಕ್ರೂಜ ಪೇಜಾವರ ಮಠದಲ್ಲಿ ನಡೆಯಿತು.   ಗುರುವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮವು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಡೆಯಿತು. 55 ಮಂದಿ‌ ಸೇರಿ 84,000 ಸಂಖ್ಯೆಯಲ್ಲಿ ರಾಮತಾರಕ ಜಪ ಮಾಡಿದರು. ಅನಂತರ ಸತ್ಯನಾರಾಯಣ ಕಥೆಯ ಪಾರಾಯಣ ನಡೆಯಿತು. ಕೊನೆಗೆ ದೀಪಗಾಣಿಕೆ ಸಮರ್ಪಣೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಘಟಕಗಳ ಗುರಿಕಾರರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.  

Continue Reading

ಗೋವಾ ಹವ್ಯಕ ವಲಯದಲ್ಲಿ ದೀಪ ಗಾಣಿಕೆ ಸಮರ್ಪಣೆ

ಗೋವಾ: ಗೋವಾ ವಲಯದ, ಮೂರೂ ಘಟಕಗಳ ವಾರ್ಷಿಕ ದೀಪಗಾಣಿಕೆ ಸಮರ್ಪಣಾ ಕಾರ್ಯಕ್ರಮ ಜನವರಿ 20, 2019ರಂದು ನಡೆಯಿತು.   ಗುರುವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ, ಮೊದಲು 15 ಜನರು ಸಾಮೂಹಿಕ 123 ಆದಿತ್ಯಹೃದಯ ಪಾರಾಯಣ ನೆರವೇರಿಸಿದರು. ಇದರೊಂದಿಗೆ 184 ವೈಯಕ್ತಿಕ ಪಾರಾಯಣದೊಂದಿಗೆ ವಲಯದ ಒಟ್ಟು ಪಾರಾಯಣ ಸಂಖ್ಯೆ 307. ಅನಂತರ ದೀಪಗಾಣಿಕೆ ಸಮರ್ಪಣೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ, ಅಧ್ಯಕ್ಷ ಶ್ರೀ ವಿ.ಪಿ. ಹಿರೇಗಂಗೆ ಸ್ವಾಗತಿಸಿದರು. ಶ್ರೀ ಮಹಾಬಲ ಭಟ್ಟ ಸಭೆಗೆ ಹವ್ಯಕ ಸಮ್ಮೇಳನದ ವರದಿಯನ್ನು, ಶ್ರೀಮಹೇಶ್ ಹೆಗಡೆ ಅಪ್ಸರಕೊಂಡ […]

Continue Reading

ಶಿಷ್ಯರಿಂದ ಶ್ರದ್ಧಾಭಕ್ತಿಪೂರ್ವಕ‌ ಆದಿತ್ಯಹೃದಯ ಪಠಣ

ಬೆಂಗಳೂರು: ಶ್ರೀಸಂಸ್ಥಾನದ ಸಂಕಲ್ಪ ಹಾಗೂ ಮಾರ್ಗದರ್ಶನದಲ್ಲಿ ಶ್ರೀರಾಮಚಂದ್ರಾಪುರಮಠದ ಸಂರಕ್ಷಣಾ ಸಮಿತಿಯ ಜನಜಾಗರಣ ವಿಭಾಗದ ವತಿಯಿಂದ ವಿವಿಧ ಮಂಡಲಗಳಲ್ಲಿ ಆದಿತ್ಯ ಹೃದಯ ಪಠಣ ಜರುಗಿತು.   ಸಾಗರ ವಲಯದಲ್ಲಿ 4501; ಸಿದ್ಧಾಪುರದಲ್ಲಿ 6216; ರಾಮಚಂದ್ರಾಪುರದಲ್ಲಿ 2080; ಹೊನ್ನಾವರದಲ್ಲಿ 211; ಬೆಂಗಳೂರು ಉತ್ತರದಲ್ಲಿ 4362; ಬೆಂಗಳೂರು ದಕ್ಷಿಣದಲ್ಲಿ 3509; ಮುಳ್ಳೆರಿಯಾ 2018; ಉಪ್ಪಿನಂಗಡಿಯಲ್ಲಿ 7057; ಮಂಗಳೂರು 2163; ದೊಂಬಿವಿಲಿಯಲ್ಲಿ (ಭಾರತ ಮಂಡಲ) 440. ಎಲ್ಲ‌ ಮಂಡಲಗಳಿಂದ ಸೇರಿ ಒಟ್ಟು 32556 ಬಾರಿ ಆದಿತ್ಯಹೃದಯವನ್ನು ಪಠಣ ಮಾಡಲಾಯಿತು

Continue Reading

ಮುಳ್ಳೇರ್ಯ ಹವ್ಯಕ ಮಂಡಲದ ಸಭೆ

ಶ್ರೀಸಂಸ್ಥಾನದವರ ಮಾರ್ಗದರ್ಶನದಂತೆ ಮುಳ್ಳೇರ್ಯ ಹವ್ಯಕ ಮಂಡಲದ ಮಾಸಿಕ ಸಭೆಯು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಮಠ ಶ್ರಾವಣಕೆರೆ ಸಭಾ೦ಗಣದಲ್ಲಿ ಜರಗಿತು.   ಮಂಡಲಾಧ್ಯಕ್ಷ ಪ್ರೊ. ಟಿ. ಶ್ರೀಕೃಷ್ಣ ಭಟ್ ಇವರು ಅಧ್ಯಕ್ಷತೆ ವಹಿಸಿದ್ದರು.   ಶ್ರಾವಣಕೆರೆ ಮಠದಲ್ಲಿ ಜನವರಿ 16 ರಿ೦ದ 20 ರ ತನಕ ಶ್ರೀಸಂಸ್ಥಾನದವರ ಪೂರ್ಣಾನುಗ್ರಹ ಮತ್ತು ದಿವ್ಯ ಉಪಸ್ಥಿತಿಯೊಂದಿಗೆ ಜರಗಲಿರುವ ಬ್ರಹ್ಮಕಲಶೋತ್ಸವ ಸಮಾರ೦ಭದ ಕುರಿತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀ ರಾಧಾಕೃಷ್ಣ ಹೆಬ್ಬಾರ ಅವರು ಮಾಹಿತಿಗಳನ್ನಿತ್ತರು.   ಕಾರ್ಯದರ್ಶಿ ಶ್ರೀ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆಯವರು […]

Continue Reading

ಮಂಗನಕಾಯಿಲೆ ನಿವಾರಣೆಗಾಗಿ ಹವ್ಯಕ ಮಹಾಮಂಡಲದಿಂದ ಶ್ರೀಕರಾರ್ಚಿತ ದೇವರಲ್ಲಿ ಪ್ರಾರ್ಥನೆ

ಬೆಂಗಳೂರು: ಮಲೆನಾಡಿನ ಕಾಡಂಚಿನಲ್ಲಿ ಮರಣ ಮೃದಂಗ ಬಾರಿಸತೊಡಗಿದ ಕ್ಯಾಸನೂರು ಫಾರೆಸ್ಟ್ ಡಿಸೀಸ್ ಅಥವಾ ಮಂಗನ ಕಾಯಿಲೆಯ ನಿವಾರಣೆಗಾಗಿ ದೇವರ ಮೊರೆ ಹೋಗಲಾಗಿದೆ.   ಈ ಗಂಭೀರ ಕಾಯಿಲೆಯು ನಿಯಂತ್ರಣವಾಗಿ ಸಮಸ್ತ ಜನರಿಗೆ ಆರೋಗ್ಯ, ಸುಭಿಕ್ಷೆ ಲಭಿಸಲೆಂದು ದಿನಾಂಕ 07.01.2018 ರಂದು ಶ್ರೀಕರಾರ್ಚಿತ ಶ್ರೀರಾಮದೇವರು, ಶ್ರೀಚಂದ್ರಮೌಳೀಶ್ವರ ಶ್ರೀರಾಜರಾಜೇಶ್ವರೀ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.   ಈ ಸಂದರ್ಭದಲ್ಲಿ ಹವ್ಯಕ ಮಹಾಮಂಡಲ ಅಧ್ಯಕ್ಷೆ ಶ್ರೀಮತಿ ಈಶ್ವರಿ ಶಾಮಭಟ್ ಬೇರ್ಕಡವು, ಪ್ರಧಾನ ಕಾರ್ಯದರ್ಶಿ ಶ್ರೀ ಹರಿಪ್ರಸಾದ್ ಪೆರಿಯಾಪ್ಪು ಹಾಗೂ ಬೆಂಗಳೂರು ಮಂಡಲದ ಪದಾಧಿಕಾರಿಗಳು […]

Continue Reading