ಮಂಗನಕಾಯಿಲೆ ನಿವಾರಣೆಗಾಗಿ ಹವ್ಯಕ ಮಹಾಮಂಡಲದಿಂದ ಶ್ರೀಕರಾರ್ಚಿತ ದೇವರಲ್ಲಿ ಪ್ರಾರ್ಥನೆ

ಉಪಾಸನೆ

ಬೆಂಗಳೂರು: ಮಲೆನಾಡಿನ ಕಾಡಂಚಿನಲ್ಲಿ ಮರಣ ಮೃದಂಗ ಬಾರಿಸತೊಡಗಿದ ಕ್ಯಾಸನೂರು ಫಾರೆಸ್ಟ್ ಡಿಸೀಸ್ ಅಥವಾ ಮಂಗನ ಕಾಯಿಲೆಯ ನಿವಾರಣೆಗಾಗಿ ದೇವರ ಮೊರೆ ಹೋಗಲಾಗಿದೆ.

 

ಈ ಗಂಭೀರ ಕಾಯಿಲೆಯು ನಿಯಂತ್ರಣವಾಗಿ ಸಮಸ್ತ ಜನರಿಗೆ ಆರೋಗ್ಯ, ಸುಭಿಕ್ಷೆ ಲಭಿಸಲೆಂದು ದಿನಾಂಕ 07.01.2018 ರಂದು ಶ್ರೀಕರಾರ್ಚಿತ ಶ್ರೀರಾಮದೇವರು, ಶ್ರೀಚಂದ್ರಮೌಳೀಶ್ವರ ಶ್ರೀರಾಜರಾಜೇಶ್ವರೀ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

 

ಈ ಸಂದರ್ಭದಲ್ಲಿ ಹವ್ಯಕ ಮಹಾಮಂಡಲ ಅಧ್ಯಕ್ಷೆ ಶ್ರೀಮತಿ ಈಶ್ವರಿ ಶಾಮಭಟ್ ಬೇರ್ಕಡವು, ಪ್ರಧಾನ ಕಾರ್ಯದರ್ಶಿ ಶ್ರೀ ಹರಿಪ್ರಸಾದ್ ಪೆರಿಯಾಪ್ಪು ಹಾಗೂ ಬೆಂಗಳೂರು ಮಂಡಲದ ಪದಾಧಿಕಾರಿಗಳು ಹಾಗೂ ಸಮಾಜದ ಗಣ್ಯರು ಹಾಜರಿದ್ದರು.

 

Author Details


Srimukha

Leave a Reply

Your email address will not be published. Required fields are marked *