ಟೆಕ್ಕಿಗಳಿಂದ ಮಾಲೂರು ಗೋಶಾಲೆಯಲ್ಲಿ ಕಾರ್ಯಕ್ರಮ

ಗೋವು

ಬೆಂಗಳೂರು: ಪ್ರತಿದಿನವು ಕಂಪ್ಯೂಟರ್ ಎದುರು ಕುಳಿತು ಏಕತಾನೆತೆಯಿಂದ ಹೊರಬರಲು ಟೆಕ್ಕಿಗಳು ವಾರಾಂತ್ಯದ ಬಿಡುವಿನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದಾರೆ.

 

ಮಾಹಿತಿ ತಂತ್ರಜ್ಞಾನ (ಐಟಿ) ವಿಭಾಗದ ರಾಮಮೂರ್ತಿ ತಂಡ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಹಯೋಗ ದಲ್ಲಿ ದಿನಾಂಕ ೧೩-೦೧-೨೦೧೯ರ ಭಾನುವಾರದಂದು ಮಾಲೂರಿನ ರಾಘವೇಂದ್ರ ಗೋಆಶ್ರಮದಲ್ಲಿ ಒಂದು ದಿನದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

 

ಭಾನುವಾರ ಬೆಳಗ್ಗೆ ಗೋ ಪೂಜೆಯಿಂದ ಕಾರ್ಯಕ್ರಮಕ್ಕೆ ಚಾಲನೆ ದೊರೆತು ಭಜನೆ, ಪ್ರಾರ್ಥನೆ, ಗಾಳಿಪಟ ಹಾರಿಸುವಿಕೆ ಜತೆಗೆ ಗೋವಿನ ಉತ್ಪನ್ನಗಳ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲಿದ್ದಾರೆ.

Leave a Reply

Your email address will not be published. Required fields are marked *