ಕವಿತೆ – ರಾಮಕಥಾ ರಸಾಸ್ವಾದ

ಇದೆಂಥಾ ಉತ್ಕೃಷ್ಟ ಭಾವೋನ್ಮಾದ ….. ರಾಮ ಸ್ಮರಣೆಯ ಸಾಗರದಲಿ ತೇಲಿ….. ಹೃದಯದಲಿ ಮಗುವಿನ ನರ್ತನ… ತೋಯುತಿದೆ ಆನಂದದಲಿ ನಯನ…. ನನ್ನೊಳಗಿನ ರಾವಣನ ಸಂಹಾರ ಇದುವೇ ಭಕ್ತಿಯ ಅನಾವರಣ ……. ಮನದೆಲ್ಲಾ ಕ್ಲೇಷಗಳ ತೊಳೆದು ರಾಮ ರಸ ಗಂಗೆ ಹರಿಯುತಲಿಹುದು……. ರಾಮ ಕಥೆಯ ರಸದೌತಣವನುಂಡು ಮನದಲಿ ಶಾಂತಿ ತುಂಬಿಹುದು… ಜಗದೆಲ್ಲೆಡೆ ರಾಮ ನಾಮ ನದಿ ಹರಿಯಲಿ… ಇಳೆಯ ಕೊಳೆಯನು ಪುನಃ ಬರದಂತೆ ತೊಳೆಯಲಿ… ರಾಗ ದ್ವೇಷಗಳಲಿದು ಪರಿಶುಧ್ಧ ಪ್ರೇಮ ಉಳಿಯಲಿ…… ಎಲ್ಲರ ಹೃದಯದಲಿ ಪರಿಪೂರ್ಣ ರಾಮ ನೆಲೆ ನಿಲ್ಲಲಿ… […]

Continue Reading

ಗೋಸ್ವರ್ಗ

ನೋಡ ಬನ್ನಿರಿ ಭಾನ್ಕುಳಿಯ ಗೋಸ್ವರ್ಗದಿವ್ಯಾವರಣವ ನಡುವಿರುವ ಪುಷ್ಕರಿಣಿ ತೊಟ್ಟಿಹ ಶುದ್ಧನೀರಾಭರಣವ ನವುರುಕೆತ್ತನೆಯಿಹ ಶಿಲಾಮಂಡಪ ಸರೋವರಮಧ್ಯದಿ ಸಪ್ತಸನ್ನಿಧಿಯಲ್ಲಿ ನೆಲೆಸಿದೆ ದೇವತಾಸಾಕ್ಷಾನ್ನಿಧಿ ಪಾವಟಿಗೆ ಪಟ್ಟಿಕೆಯು ಸುತ್ತಲು ಮುಡಿಪು ಜನರಿಗೆ ತಪಿಸಲು ತೀರ್ಥಪಥ ನಾಲ್ಕಿಹುದು ಗೋತೀರ್ಥವನು ಸುಲಭದಿ ತಲುಪಲು ಬಳಿಕಿರುವ ಪರಿವೃತ್ತ ಮೀಸಲು ಗೋವಿರಾಮದ ಬಳಕೆಗೇ ನೆರಳ ಬಯಸುವ ಗೋವುಗಳು ವಿಶ್ರಾಂತಿ ಪಡೆಯುವುದಿಲ್ಲಿಯೇ ಮತ್ತೆ ಮುಂದಿನ ಪರಿಧಿಯಲ್ಲಿದೆ ಗೋವಿಹಾರದ ವಿಸ್ತರ ತೆರೆದ ಬಯಲಲಿ ಸಂಚರಿಸೆ ಗೋವುಗಳಿಗಿದುವೆ ಮಹತ್ತರ ಕೊನೆಯಲಿರುವ ಪರಿಕ್ರಮವೆ ಗೋಭಕ್ತಜನಪ್ರೇಕ್ಷಾಪಥ ಸಾವಿರದ ಗೋವುಗಳ ಒನ್ನೋಟದಲಿ ತೋರಿಪ ಸತ್ಪಥ ಇಲ್ಲಿ ಗೋವೇ […]

Continue Reading