ಗ್ರಾಮರಾಜ್ಯ ಟ್ರಸ್ಟ್ ಗೆ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಭೇಟಿ
ಶ್ರೀರಾಮಚಂದ್ರಾಪುರ ಮಠದ ಅಂಗಸಂಸ್ಥೆ ಗ್ರಾಮರಾಜ್ಯ ಟ್ರಸ್ಟ್ ಇದರ ಹೊಸಕೆರೆಯಲ್ಲಿಯಲ್ಲಿರುವ ಪ್ರಧಾನ ಕಛೇರಿಗೆ ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಚಿತ್ತೈಸಿದರು. ಗ್ರಾಮರಾಜ್ಯ ಸಂಸ್ಥೆಯ ವ್ಯವಸ್ಥೆಯನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು. ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಂಕಲ್ಪ , ಗ್ರಾಮಗಳ ಅಭ್ಯುದಯ , ರೈತರಿಗೆ ಅನುಕೂಲವಾಗುವ ತನ್ಮೂಲಕ ನಗರದ ಜನರಿಗೆ ಉತ್ತಮ ವಸ್ತುಗಳ ಪೂರೈಕೆ ಮಾಡುವ ಈ ಸಂಸ್ಥೆಗೆ ಶ್ರೇಯಸ್ಸು ಸಿಗಲಿ ಎಂದು ಆಶೀರ್ವದಿಸಿದರು. ಸಂಸ್ಥೆಯ ಶ್ರೀ ಸಂಯೋಜಕ […]
Continue Reading