ದುರಹಂಕಾರ ವಿಚಿತ್ರ ರೋಗ ಅದು ವ್ಯಕ್ತಿಯ ಪತನಕ್ಕೆ ಕಾರಣ – ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು

ಇತರೆ

ಸಾಗರ:  ದುರಹಂಕಾರ ಎನ್ನುವುದು ಮನುಷ್ಯ ದೇಹದೊಳಗೆ ತಿಳಿಯದೆ ಬಂದಿರ ಬಹುದಾದ ಖಾಯಿಲೆ ಇದ್ದ ರೀತಿ, ಗೊತ್ತಿರುವ ಖಾಯಿಲೆಗೆ ಚಿಕಿತ್ಸೆ ಕೊಡಿಸಬಹುದು ನಮ್ಮ ದೇಹದೊಳಗೆ ಗೊತ್ತಿಲ್ಲದಿರುವ ಖಾಯಿಲೆ ಇದ್ದರೆ ಅದಕ್ಕೆ ಚಿಕಿತ್ಸೆ ಸಾಧ್ಯವಿಲ್ಲ ಈ ದುರಹಂಕಾರವೂ ಅದೇ ರೀತಿ ಇದಕ್ಕೆ ಚಿಕಿತ್ಸೆ ಇಲ್ಲ ಅದು ಅವನ ಪತನದಲ್ಲಿ ಪರಿವಸನವಾಗಲಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು.

ಸಾಗರ ಅಗ್ರಹಾರದಲ್ಲಿರುವ ಶ್ರೀ ರಾಘವೇಶ್ವರ ಭವನದ ಶ್ರೀಮನ್ನಗರ ವೇದಿಕೆಯಲ್ಲಿ ಏರ್ಪಡಿಸಿರುವ ನವರಾತ್ರ ನಮಸ್ಯಾದ ೮ ನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಅವರು ದೇವಿಯ ವಿರುದ್ದ ದುರಹಂಕಾರದಿಂದಲೇ ರಕ್ಕಸರ ಕುಲ ಪತನವಾದ ಕುರಿತು ವಿವರಿಸಿದರು.

ದುರಹಂಕಾರ, ಸೊಕ್ಕು,  ಇರುವವರಿಗೆ ಅದು ತನಗಿದೆ ಎನ್ನುವ ವಿಚಾರ ತಿಳಿಯುವುದೇ ಇಲ್ಲ. ಹಾಗಂತ ಅವನ ಸುತ್ತಲಿರುವ ಬೇರೆ ಎಲ್ಲರಿಗೂ ಆತನಲ್ಲಿ ದುರಹಂಕಾರ ಇದೆ ಎನ್ನುವುದು ಗೊತ್ತಾಗಲಿದೆ. ಆದರೆ ಅದನ್ನು ಹೇಳಿದರೂ ಕೇಳುವ ಮನಸ್ಥಿತಿಯೂ ಇಲ್ಲದ ರೀತಿಯ ವಿಚಿತ್ರ ರೋಗ ಈ ಗರ್ವ ಅದರಿಂದಲೇ ಜೀವನದಲ್ಲಿ ಸೋಲು ಖಚಿತವಾಗಲಿದೆ. ಇದು ಅಂದು ರಕ್ಕಸರಲ್ಲಿತ್ತು ಈಗ ಮನುಷ್ಯರಲ್ಲಿದೆ ಎಂದರು.

ಅದೇ ರೀತಿ ಸುಳ್ಳು ಹೇಳುವುದು ಕೂಡ ರೋಗವೆ, ಮೊದಲು ಅನಿವಾರ್‍ಯಕ್ಕೆ ನಂತರ ಅನುಕೂಲಕ್ಕೆ ಸುಳ್ಳು ಹೇಳುವವರಿಗೆ ತದನಂತರ ಸುಳ್ಳು ಹೇಳದಿದ್ದರೆ ಏನೋ ಕಳೆದುಕೊಂಡ ರೀತಿ ಆಗಲಿದೆ ಹಾಗಾಗಿ ಮಾತು ಆಡುವಾಗ ಜಾಗ್ರತೆಯಿಂದ ಮಾತನಾಡಬೇಕು ಎಂದರು.

ಯಾರನ್ನು ಅತಿಯಾಗಿ ಹೊಗಳುವ ಅಥವಾ ಅತಿಯಾಗಿ ತೆಗಳುವ ಕಾರ್ಯ ಮಾಡಬಾರದು ಮನೆಯಲ್ಲಿಯ ಪೋಷಕರು ಕೂಡ ತಮ್ಮ ಮಕ್ಕಳು ಒಳ್ಳೆಯ ಕೆಲಸ ಮಾಡಿದರೆ ಅದನ್ನು ಹೊಗಳಬೇಕು ಆದರೆ ತಪ್ಪನ್ನಲ್ಲ ಮತ್ತು ತಪ್ಪು ಮಾಡಿದರೆ ತಿಳಿ ಹೇಳಬೇಕು ಸಮಭಾವದಿಂದ ನೋಡಿದರೆ ಮಾತ್ರ ಗೌರವ ಹೆಚ್ಚಲಿದೆ ಎಂದರು.

ಉಚ್ಚನಾಲಯದ ಹಿರಿಯ ನ್ಯಾಯಾವಾದಿ ಅರುಣ್ ಶ್ಯಾಮ್, ಉದ್ಯಮಿ ಕಿರಣ ಕುಡಪಲಿ, ಮ್ಯಾಮ್‌ಕೋಸ್ ಉಪಾಧ್ಯಕ್ಷ ಮಹೇಶ್, ತೋಟಗಾರ್‍ಸ್ ಸಂಸ್ಥೆ ಅಧ್ಯಕ್ಷ ದೇವಪ್ಪ ಶ್ರೀಗಳವರಿಂದ ಆಶ್ರೀರ್ವದ ಪಡೆದರು.

ಇದಕ್ಕೂ ಮುನ್ನ ನವರಾತ್ರ ನಮಸ್ಯಾ ಸಮಿತಿಯಿಂದ  ಕೊಡ ಮಾಡಿದ ಸಮಾಜ ಗೌರವವನ್ನು  ವೀರಶೈವ ಸಮಾಜ, ಖಾರ್ವಿ ಸಮಾಜ, ವೀರಶೈವ ಜಂಗಮ  ಸಮಾಜದ ಪರವಾಗಿ ಅಧ್ಯಕ್ಷರಾದ ಬಸವರಾಜ್, ಪ್ರದೀಪಾಚಾರಿ, ಗುರುಮೂರ್ತಯ್ಯ ಹಿರೇಮಠ ಗೌರವ ಸ್ವೀಕರಿಸಿದರು. ಅಲ್ಲದೆ ಹೆಗ್ಗೋಡು ಹವ್ಯಕ ಸಂಪದಭಿವೃದ್ದಿ ಸಂಸ್ಥೆಯ ಪರವಾಗಿ ಅಧ್ಯಕ್ಷ ಕೃಷ್ಣಮೂರ್ತಿ ಕಾಶಿ ಗೌರವ ಸ್ವೀಕರಿಸಿದರು.

ಸಮಿತಿಯ ಅಧ್ಯಕ್ಷ ಗುರುಮೂರ್ತಿ ಹೆಗಡೆ ಕಲ್ಸೆಮನೆ, ಕಾರ್ಯದರ್ಶಿ ಪ್ರಸನ್ನ ಹೆಗಡೆ ಕೆರೆಕೈ, ಸಂಚಾಲಕ ಮುರಳಿ ಗೀಜಗಾರು, ಗುರುಪ್ರಸಾದ್ ಐಸಿರಿ, ಶ್ರೀಮಠದ ವಿತ್ತಾಧ್ಯಕ್ಷ ಜಿ.ಎಲ್. ಗಣೇಶ್, ಆರ್.ಎಸ್. ಹೆಗಡೆ ಹರಗಿ, ಶಾಂತಲಾ, ಸುಮನಾ, ಸ್ಮಿತಾ, ಸುಬ್ರಮಣ್ಯ,  ಎಂ.ಜಿ.ರಾಮಚಂದ್ರ, ಗೌತಮ, ಶ್ರೀನಾಥ, ರವಿ ಕೈತೋಟ, ಮಹಾಮಂಡಲ ಪ್ರಧಾನ ರಮೇಶ್ ಹೆಗಡೆ ಗುಂಡೂಮನೆ ಮತ್ತಿತರರು ಇದ್ದರು.

ಇದಕ್ಕೂ ಮುನ್ನ ಬೆಳಗ್ಗೆ ರಕ್ತಬೀಜಾಹ ಉಪಾಸನೆ,  ಶಾರದಾ ಸ್ಥಾಪನೆ,  ಸರಸ್ವತಿ ಹವನ, ಚಂಡಿಕಾ ಹವನ, ಶ್ರೀಪೂಜೆ, ಕುಂಕುಮಾರ್ಚನೆ, ಉಡಿ ಹಾಗೂ ಸ್ತೋತ್ರ ಸಮರ್ಪಣೆ, ಸುವರ್ಣ ಪಾದುಕಾ ಪೂಜೆ, ಭಜನೆ, ಲಲಿತಾ ಅಷ್ಟೋತ್ತರ ನಡೆಯಿತು. ಸಂಜೆ ದುರ್ಗಾದೀಪ ನಮಸ್ಕಾರ, ರಾಜರಾಜೇಶ್ವರಿ ಪೂಜೆ ಹಾಗೂ ಚಂಡಿಕಾ ಪಾರಾಯಣ ನೆರವೇರಿತು.

 

 

  • ರಮೇಶ್ ಹೆಗಡೆ ಗುಂಡೂಮನೆ

Leave a Reply

Your email address will not be published. Required fields are marked *