ಗುತ್ತಿಗಾರು ವಲಯದ ಮಾಸಿಕ ಸಭೆ ಹಾಗೂ ಪ್ರತಿಭಾ ಪುರಸ್ಕಾರ ನಡೆಯಿತು.
ವಲಯ ಅಧ್ಯಕ್ಷರಾದ ಪನ್ನೆ ದೇವಕಿ .ಜಿ.ಭಟ್ ಸಭಾ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಶಿವರಾಮ ಶಾಸ್ತ್ರಿ ಅವರನ್ನು ಅಭಿನಂದಿಸಲಾಯಿತು. ಪ್ರೊಫೆಸರ್ ಶ್ರೀಕೃಷ್ಣ ಭಟ್ ಅಭಿನಂದನಾ ಭಾಷಣಗೈದರು.
೧೫ ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಮಹಾಮಂಡಲ ದಿಂದ ಕೊಡ ಮಾಡಿದ ಪ್ರಶಸ್ತಿ ಪತ್ರ, ಸ್ಮರಣಿಕೆ,ಹಾಗೂ ಶಾಲು ನೀಡಿ ಗೌರವಿಸಲಾಯಿತು.
ಪನ್ನೆ ಗೋಪಾಲಕೃಷ್ಣ ಭಟ್ ಅವರು ವಿವಿವಿಗೆ ರೂ ೬೨,೫೦೦ ದೇಣಿಗೆ ನೀಡಿದರು. ವಲಯದ ಉಪಾಧ್ಯಕ್ಷರಾದ ಸೂರ್ಯ ನಾರಾಯಣ ಪುಚ್ಚೆಪ್ಪಾಡಿ ಇವರು ರೂ ೧೦,೦೦೦ ದೇಣಿಗೆ ನೀಡಿದರು.
ವಿಷ್ಣು ಗುಪ್ತ ವಿಶ್ವ ವಿದ್ಯಾಪೀಠ ನಿರ್ದೇಶಕ ಪ್ರೊಫೆಸರ್ ಕೃಷ್ಣ ಭಟ್, ಮುಳ್ಳೇರಿಯ ಮಂಡಲ ಕಾರ್ಯದರ್ಶಿ ಕೃಷ್ಣ ಮೂರ್ತಿ ಮಾಡವು, ನಿವೃತ್ತ ಪ್ರಾಂಶುಪಾಲ ಶಂಕರನಾರಾಯಣ ಭಟ್ ಉಪಸ್ಥಿತರಿದ್ದರು.
ಮಂಡಲ ಗುರಿಕಾರ ಸತ್ಯನಾರಾಯಣ ಸಭಾ ಪೂಜೆ ನಡೆಸಿ ಪ್ರಾಸ್ತಾವಿಕ ಮಾತನಾಡಿದರು. ಕೋಶಾಧಿಕಾರಿ ಶ್ರೀಕೃಷ್ಣ ಭಟ್ ಗುಂಡಿಮಜಲು ಸನ್ಮಾನ ಪತ್ರ ವಾಚಿಸಿದರು. ವೈದಿಕ ವಿಭಾಗದ ಪ್ರಮುಖರಾದ ಮುರಳಿ ಕೃಷ್ಣ ವಂದಿಸಿದರು. ಕಾರ್ಯದರ್ಶಿ ಕೃಷ್ಣ ಶರ್ಮ ಕಾರ್ಯಕ್ರಮ ನಿರೂಪಿಸಿದರು.