ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಶ್ರೀಮಠದ ಪದಾಧಿಕಾರಿಗಳು ಭೇಟಿ
ಪೆರ್ಲ: ಎಣ್ಮಕಜೆ ವಲಯದ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಶ್ರೀರಾಮಚಂದ್ರಾಪುರ ಮಠದ ಪದಾಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಶ್ರೀರಾಮಚಂದ್ರಾಪುರ ಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆಡ್ಡಿನಮನೆ, ಸುಶಾಸನ ಖಂಡದ ಶ್ರೀಸಂಯೋಜಕ ಪ್ರವೀಣ ಭೀಮನಕೋಣೆ ಭೇಟಿ ನೀಡಿ, ಪ್ರಗತಿಯನ್ನು ವೀಕ್ಷಿಸಿ ಮಾರ್ಗದರ್ಶನ ಮಾಡಿದರು. ಗೋಶಾಲೆಯ ಅಧ್ಯಕ್ಷರಾದ ಜಗದೀಶ ಗೋಳಿತ್ತಡ್ಕ, ಕಾರ್ಯದರ್ಶಿ ಕೃಷ್ಣ ಪ್ರಸಾದ್ ಬನಾರಿ, ಕೋಶಾಧಿಕಾರಿ ಶ್ರೀಧರ ಭಟ್ ತೆಂಕಮಾಣಿಪ್ಪಾಡಿ ಜೊತೆಗಿದ್ದರು.
Continue Reading