ಶ್ರೀರಾಮಚಂದ್ರಾಪುರ ಮಠದಿಂದ ವಿಶ್ವಕ್ಕೇ ಮಾದರಿ ಎನಿಸುವ ವಿಷ್ಣುಗುಪ್ತ ವಿವಿ: ರಾಘವೇಶ್ವರ ಶ್ರೀ

ಗೋಕರ್ಣ: ವಿಶ್ವಕ್ಕೇ ಮಾದರಿ ಎನಿಸುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಗೆ ಶ್ರೀರಾಮಚಂದ್ರಾಪುರ ಮಠ ಮುಂದಾಗಿದೆ. ತಕ್ಷಶಿಲೆ ವಿವಿ ಮಾದರಿಯಲ್ಲಿ ಇದು ಬೃಹದಾಕಾರವಾಗಿ ಬೆಳೆಯಲಿದೆ ಎಂದು ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು. ಶಿವರಾತ್ರಿ ಮಹೋತ್ಸವ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಪೂಜ್ಯರು ಆಶೀರ್ವಚನ ನೀಡಿದರು. ಇಂಥ ವಿದ್ಯಾಸಂಸ್ಥೆ ಕಟ್ಟುವ ಮುನ್ನ ಭದ್ರಕಾಳಿ ಶಿಕ್ಷಣ ಸಂಸ್ಥೆಯಂಥ ಉತ್ತಮ ಸಂಸ್ಥೆಯನ್ನು ಗುರುತಿಸಿ ಗೌರವಿಸಲಾಗುತ್ತಿದೆ ಎಂದರು. ಭಾರತೀಯ ಪ್ರಾಚೀನ ಶಿಕ್ಷಣ, ಕಲೆಗಳ ಪುನರುತ್ಥಾನ ನೂತನ ವಿದ್ಯಾಪೀಠದ ಉದ್ದೇಶ ಎಂದು ಹೇಳಿದರು. ಪುರಾತನ […]

Continue Reading

ಗೋಕರ್ಣ ದೇವಾಲಯ ಪ್ರಕರಣ – ಸುಪ್ರೀಂ ನಲ್ಲಿ ಶ್ರೀರಾಮಚಂದ್ರಾಪುರ ಮಠಕ್ಕೆ ಮಹತ್ವದ ಗೆಲುವು

ಬೆಂಗಳೂರು: ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದ ಪೂಜಾಹಕ್ಕು ನೀಡುವ ಬಗ್ಗೆ ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಸರ್ವೋಚ್ಛ ನ್ಯಾಯಾಲಯವು ಇಂದು ಮಹತ್ತರ ಆದೇಶವನ್ನು ನೀಡಿದ್ದು, ಸ್ವಾಮೀಜಿಯವರು ಸೇರಿದಂತೆ, ದೇವಾಲಯದ ಆಡಳಿತ ವ್ಯವಸ್ಥೆ ಮೇಲೆ ಹೈಕೋರ್ಟ್ ಏಕಸದಸ್ಯ ಪೀಠ ಸ್ವಯಂ ಪ್ರೇರಿತ ನ್ಯಾಯಾಂಗನಿಂದನೆ ಅರ್ಜಿ ದಾಖಲಿಸುವಂತೆ ಆದೇಶಿಸಿದ್ದ ಪ್ರಕರಣಕ್ಕೆ ತಡೆ ನೀಡಿ; ಪ್ರತಿವಾದಿಗಳಿಗೆ ನೋಟೀಸ್ ಜಾರಿಮಾಡಿದೆ.   ಮಹಾಬಲೇಶ್ವರ ದೇವರ ಪೂಜೆಯ ಹಕ್ಕು ನೀಡಬೇಕೆಂದು ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ, ಶ್ರೀಮಠವು ಅರ್ಜಿಯನ್ನು ವಾಪಸ್ಸು ಪಡೆದಿದ್ದರೂ, ಉಚ್ಚ ನ್ಯಾಯಾಲಯವು (ಧಾರವಾಡ ಪೀಠ) ದೇವಾಲಯದ […]

Continue Reading

ಶ್ರೀ ಮಹಾಬಲನ ಸನ್ನಿಧಿಯಲ್ಲಿ ಶಿವಪದ ವೇದಿಕೆ ಲೋಕಾರ್ಪಿತ

ಗೋಕರ್ಣ ಜೂ.08 : ಶೂನ್ಯದಲ್ಲಿ ಜಗತ್ತಿನ ಪೂರ್ಣ ಚಿತ್ರ ಬಿಡಿಸುವ ಮಹಾಕಲಾವಿದ ಶಿವ. ಕಲೆ ತಲೆಯ ಮೇಲೆ ಕಿರೀಟ ಇದ್ದ ಹಾಗೆ ಎಂಬುದನ್ನು ಜಗತ್ತಿಗೆ ತೋರಿಸುವ ಕಾರ್ಯ ಮಾಡಿದ್ದಾನೆ. ಕಲಾಸ್ವರೂಪರಾದ ದೇವರ ಸನ್ನಿಧಿಯಲ್ಲಿ ನಾದವು ವಿಜ್ರಂಭಿಸಬೇಕು. ಆನಂದದ ಹಿಂದೆ ಭಗವಂತನ ಕರುಣೆ ಇದೆ ಎಂದು ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಗಳು ಹೇಳಿದರು. ಅವರು ಶ್ರೀ ಕ್ಷೇತ್ರ ಗೋಕರ್ಣ ಸಂಸ್ಥಾನ ಶ್ರೀಮಹಾಬಲೇಶ್ವರ ದೇವ ದೇವಸ್ಥಾನದಲ್ಲಿ ಶಿವಪದ ವೇದಿಕೆ ಲೋಕಾರ್ಪಣೆ ಮಾಡಿ ಆಶೀರ್ವಚನ ನೀಡಿದರು. ನಾದ ಮತ್ತು […]

Continue Reading

ಶ್ರೀಕ್ಷೇತ್ರ ಗೋಕರ್ಣದಲ್ಲಿ ನಿರಂತರ ಕಲಾಸೇವೆ

  ಶ್ರೀಕ್ಷೇತ್ರ ಗೋಕರ್ಣದ ಸರ್ವಾಂಗೀಣ ಅಭಿವೃದ್ಧಿ ಪರ್ವದಲ್ಲಿ ಹೊಸ ಶಕೆಯೊಂದು ಆರಂಭವಾಗುತ್ತಿದ್ದು, ನಾಡಿನ ಖ್ಯಾತ ಉದಯೋನ್ಮುಖ ಕಲಾವಿದರು ಶ್ರೀ ಮಹಾಬಲೇಶ್ವರನಿಗೆ ನಿರಂತರ ಕಲಾಸೇವೆ ಸಮರ್ಪಿಸಲು ಅನುವಾಗುವಂತೆ ದೇವಾಲಯದ ಆವರಣದಲ್ಲಿ “ಶಿವಪದ” ವೇದಿಕೆ ಸಿದ್ಧವಾಗಿದೆ. ಜೂ.8ರಂದು ಈ ಶಿವಪದ ವೇದಿಕೆ ಲೋಕಾರ್ಪಣೆಯಾಗುತ್ತಿದೆ. ಜಗತ್ತಿನ ಏಕೈಕ ಆತ್ಮಲಿಂಗವನ್ನು ಸ್ವತಃ ಸ್ಪರ್ಶಿಸಿ ಪೂಜಿಸಲು ಭಕ್ತರಿಗೆ ಅವಕಾಶ ಇರುವಂತೆ, ಶ್ರೀ ಸನ್ನಿಧಿಯಲ್ಲಿ ಕಲಾವಿದರು ಅನುದಿನವೂ, ಅನುಕ್ಷಣವೂ ನಾದ- ನಾಟ್ಯದ ಮೂಲಕ ಶ್ರೀಮಹಾಬಲೇಶ್ವರನನ್ನು ಆರಾಧಿಸಲು ಇದು ವೇದಿಕೆಯಾಗಲಿದೆ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಜಗದ್ಗುರು ಶಂಕರಾಚಾರ್ಯ […]

Continue Reading

ಶ್ರೀ ಶ್ರೀ ವಿಶ್ವಸಂತೋಷ ಗುರೂಜಿಯವರಿಂದ ಗೋಕರ್ಣಶ್ರೀಕ್ಷೇತ್ರದ ದರ್ಶನ

ಗೋಕರ್ಣ: ಶ್ರೀ ಬಾರಕೂರು ಸಂಸ್ಥಾನಮಠದ ಶ್ರೀ ಶ್ರೀ ವಿಶ್ವಸಂತೋಷ ಸ್ವಾಮೀಜಿಗಳವರು, ಇಂದು ಬೆಳಿಗ್ಗೆ ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಆಗಮಿಸಿ ಅಭಿಷೇಕ, ಪೂಜೆ ನೆರವೇರಿಸಿದರು. ಪೂಜೆಯ ನಂತರ ಸ್ವಾಮೀಜಿಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು. ಶ್ರೀ ನಾಗರಾಜ ನಾಯಕ ತೊರ್ಕೆ, ಶ್ರೀ ಆನಂದು ಕವರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಶ್ರೀ ಶ್ರೀ ವಿಶ್ವಸಂತೋಷ ಸ್ವಾಮೀಜಿಗಳವರಿಗೆ ಪೂರ್ಣಫಲ ಸಮರ್ಪಿಸಿದರು. ವೇ. ಶ್ರೀ ವಿನೋದ ಜಂಭೆ ಪೂಜಾ ಕೈಂಕರ್ಯ ನೆರವೇರಿಸಿದರು. […]

Continue Reading

ಜೀವಜಲ ಉಚಿತ ವಿತರಣಾ ಸೇವೆಯ ಶುಭಾರಂಭ

  ಪರಮಪೂಜ್ಯ ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರ ಅನುಗ್ರಹ ರೂಪದಲ್ಲಿ ಶ್ರೀ ಕ್ಷೇತ್ರ ಗೋಕರ್ಣ ಹಾಗೂ ಸುತ್ತಮುತ್ತಲಿನ ಊರುಗಳಿಗೆ ಉಚಿತವಾಗಿ ನೀರು ವಿತರಿಸುವ ನಾಲ್ಕನೆಯ ವರ್ಷದ ಕಾರ್ಯಕ್ರಮಕ್ಕೆ 26-04-2019 ಶುಕ್ರವಾರ ಚಾಲನೆ ನೀಡಲಾಯಿತು. ಅಂದು ಗೋಕರ್ಣದ ಸಮೀಪದ ತಿಪ್ಪಸಗಿ ಗ್ರಾಮದಲ್ಲಿ ನೀರು ವಿತರಿಸುವ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು. ಈ ಸಂದರ್ಭದಲ್ಲಿ ವೇ|| ಶಿವರಾಮ ಮಯ್ಯರು ಶ್ರೀ ಲಂಬೋಧರ ಸಭಾಹಿತ, ಶ್ರೀ ಜಿ ವಿ ಹೆಗಡೆ ಹಾಗೂ ತಿಪ್ಪಸಗಿ, ಕಡಿಮೆ ಗ್ರಾಮಸ್ಥರು ಉಪಸ್ಥಿತರಿದ್ದರು. […]

Continue Reading

ಶ್ರೀಕ್ಷೇತ್ರ ಗೋಕರ್ಣಕ್ಕೆ ಅನಿಲ್ ಕುಂಬ್ಳೆ ಭೇಟಿ

ಏ. 28 : ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಖ್ಯಾತ ಕ್ರಿಕೆಟ್ಪಪಟು ಅನಿಲ್ ಕುಂಬ್ಳೆ ಪತ್ನಿ ಸಮೇತ ಶ್ರೀ ದೇವರ ದರ್ಶನ ಪಡೆದರು. ಆತ್ಮಲಿಂಗಕ್ಕೆ ಪಂಚಾಮೃತ ಅಭಿಷೇಕ, ನವಧಾನ್ಯ, ಗಂಗಾಭಿಷೇಕ ಪೂಜೆ ಮತ್ತು ಸುವರ್ಣ ನಾಗಾಭರಣ ವಿಶೇಷ ಪೂಜೆಯನ್ನು ಮಡಿಬಟ್ಟೆ ಧರಿಸಿ ಶ್ರದ್ಧಾ ಭಕ್ತಿ ಯಿಂದ ನೆರವೇರಿಸಿದರು. ಈ ವೇಳೆ ಜಿ. ಪಂ. ಸದಸ್ಯ ಶ್ರೀ ಪ್ರದೀಪ ನಾಯಕ ಜೊತೆಗಿದ್ದರು. ದೇವಾಲಯದ ಆಡಳಿತಾಧಿಕಾರಿ ಶ್ರೀ ಜಿ. ಕೆ. ಹೆಗಡೆ ಅನಿಲ್ ಕುಂಬ್ಳೆಯವರಿಗೆ ಆತ್ಮಲಿಂಗ […]

Continue Reading

ಗೋವಾ ರಾಜ್ಯಪಾಲರ ಗೋಕರ್ಣ ದರ್ಶನ

ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀಮಹಾಬಲೇಶ್ವರ ದೇವಾಲಯಕ್ಕೆ ಗೋವಾ ರಾಜ್ಯಪಾಲರಾದ ಗೌರವಾನ್ವಿತ ಶ್ರೀಮತಿ ಮೃದುಲಾ ಸಿನ್ಹಾ ಭೇಟಿ ನೀಡಿ ಶ್ರೀ ಆತ್ಮಲಿಂಗಕ್ಕೆ ನವಧಾನ್ಯಭಿಷೇಕ ಮತ್ತು ಸುವರ್ಣ ನಾಗಾಭರಣ ಪೂಜಾ ಸೇವೆ ನೆರವೇರಿಸಿದರು. ಶ್ರೀ ದೇವಾಲಯದ ಸ್ವಚ್ಛತೆ, ಪ್ರಶಾಂತತೆ ಮತ್ತು ಪೂಜಾ ವಿಧಾನದ ಬಗ್ಗೆ ಸಂತಸ ವ್ಯಕ್ತಪಡಿಸಿದರು . ಶ್ರೀ ದೇವಾಲಯದ ವತಿಯಿಂದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಶಾಲು ಹೊದೆಸಿ , ಸ್ಮರಣಿಕೆ ನೀಡಿ ಗೌರವಿಸಿದರು. ವೇ|| ಮಹಾಬಲೇಶ್ವರ ಮಾರಿಗೋಳಿ ಪೂಜೆ ನೆರವೇರಿಸಿದರು . ಉಪಾಧಿವಂತ […]

Continue Reading

ಗೋಕರ್ಣ ಶ್ರೀಕ್ಷೇತ್ರದಲ್ಲಿ ಮಹಾರಥೋತ್ಸವ

ಶ್ರೀಕ್ಷೇತ್ರ ಗೋಕರ್ಣದ ಸಾರ್ವಭೌಮ ಮಹಾಬಲೇಶ್ವರ ದೇವರ ಶ್ರೀಮನ್ಮಹಾರಥೋತ್ಸವ ಕಾರ್ಯಕ್ರಮವು ಪ್ರತಿ ವರ್ಷದಂತೆ ವಿಜೃಂಭಣೆಯಿಂದ ಸಂಪನ್ನವಾಯಿತು. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಉತ್ಸವ ಮೂರ್ತಿಗೆ ಧಾರ್ಮಿಕವಿಧ್ಯುಕ್ತ ಕ್ರಮದಂತೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.   ಇಂದು ಶಾಂತಿಘಟಾದ್ಯಭಿಷೇಕ, ರಥ ಸಂಪ್ರೋಕ್ಷಣ, ದಂಡ ಬಲಿ, ಭೂತಬಲಿ, ಗ್ರಾಮಬಲಿ ಮುಂತಾದ ಧಾರ್ಮಿಕ ವಿಧಿವಿಧಾನಗಳು ಉಪಾಧಿವಂತರ ನೇತೃತ್ವದಲ್ಲಿ ನಡೆಯಿತು. ಆನಂತರ ಮಧ್ಯಾಹ್ನ 2.30 ಶ್ರೀಮನ್ಮಹಾರಥೋತ್ಸವ ವೈಭವಯುತವಾಗಿ ಸಂಪನ್ನವಾಯಿತು. ಉತ್ತರಕರ್ನಾಟಕ, ಬೆಂಗಳೂರು, ಮಂಗಳೂರು, ಮಹಾರಾಷ್ಟ್ರ, ಆಂದ್ರಪ್ರದೇಶ ಸೇರಿದಂತೆ ರಾಜ್ಯ ಹೊರರಾಜ್ಯಗಳಿಂದ ಆಗಮಿಸಿದ […]

Continue Reading

ಶ್ರೀ ಗೋಕರ್ಣಕ್ಷೇತ್ರದಲ್ಲಿ ಶಿವರಾತ್ರಿ ಮಹೋತ್ಸವ

ಭೂಕೈಲಾಸವೆನಿಸಿದ ಆತ್ಮಲಿಂಗದ ದಿವ್ಯ ಸನ್ನಿಧಿಯಾದ ಶ್ರೀಕ್ಷೇತ್ರ ಗೋಕರ್ಣದಲ್ಲಿ ಶಿವರಾತ್ರಿಯ ಪುಣ್ಯ ಕಾಲದಲ್ಲಿ ಶ್ರೀ ಮಹಾಬಲೇಶ್ವರ ದೇವರ ದರ್ಶನಕ್ಕೆ ಜನಸಾಗರ ಹರಿದುಬಂದಿತ್ತು.   ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ , ಉಪಾಧಿವಂತ ಮಂಡಲದ ವತಿಯಿಂದ ವಿವಿಧ ಧಾರ್ಮಿಕ ವಿನಿಯೋಗಗಳು ಜರುಗಿದವು . ಆಗಮಿಸಿದ ಭಗವದ್ಭಕ್ತರಿಗೆ ಅಮೃತಾನ್ನ ವಿಭಾಗದಲ್ಲಿ ಉಪಾಹಾರ ವ್ಯವಸ್ಥೆ ಏರ್ಪಡಿಸಲಾಗಿತ್ತು .   ಪರಮಪೂಜ್ಯ ಶ್ರೀಸಂಸ್ಥಾನದವರೊಂದಿಗೆ ಪ.ಪೂ. ಶ್ರೀ ಶ್ರೀ ಶಿವಾನಂದ ಸರಸ್ವತಿ ಮಹಾಸ್ವಾಮಿಗಳು , ಶ್ರೀ […]

Continue Reading

ಪಾಕ್ ವಶದಲ್ಲಿರುವ ಕಮಾಂಡರ್ ಸುರಕ್ಷತೆಗಾಗಿ ಗೋಕರ್ಣದಲ್ಲಿ ವಿಶೇಷ ಪೂಜೆ

ಗೋಕರ್ಣ: ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಸುರಕ್ಷಿತವಾಗಿ ಭಾರತಕ್ಕೆ ಮರಳಲಿ ಎಂದು ಮಹಾಬಲೇಶ್ವರನಿಗೆ ವಿಶೇಷೆ ಪೂಜೆ, ಪ್ರಾರ್ಥನೆ ಸಲ್ಲಿಸಲಾಗಿದೆ.   ಭೂಸೇನೆಯ ಕ್ಯಾಪ್ಟನ್ ಗಿರೀಶ್ ಪುರಾಣ ಪ್ರಸಿದ್ಧ ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದರು. ದೇಗುಲದ ಆಡಳಿತಾಧಿಕಾರಿ ಶ್ರೀ ಜಿ.ಕೆ. ಹೆಗಡೆ ಯೋಧ ಕ್ಯಾಪ್ಟನ್ ಗಿರೀಶ್ ಅವರನ್ನು ಗೌರವಿಸಿ, ಪೂಜಾಪ್ರಸಾದ ನೀಡಿ ಗೌರವಿಸಿದರು.  

Continue Reading

ಗೋಕರ್ಣ ದೇವಳದಲ್ಲಿ ಅನುಕರಣೀಯ ವ್ಯವಸ್ಥೆ; ಮಹಾಬಲನ ದರ್ಶನಕ್ಕೆ ಯೋಧರಿಗೆ ಪ್ರಥಮ ಆದ್ಯತೆ

ಕಾರವಾರ: ನಿವೃತ್ತ ಯೋಧರು ಸೇರಿದಂತೆ ಸೇವಾ ನಿರತರಾಗಿರುವ ವೀರ ಯೋಧರಿಗಾಗಿ ಶ್ರೀಕ್ಷೇತ್ರ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಆತ್ಮಲಿಂಗದ ದರ್ಶನಕ್ಕೆ ನೇರ ವ್ಯವಸ್ಥೆ ಕಲ್ಪಿಸಲಾಗಿದೆ. ಶ್ರೀಮಠದ ಆಡಳಿತಕ್ಕೊಳಪಟ್ಟಿರುವ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ, ಶ್ರೀಸಂಸ್ಥಾನದವರ ಮಾರ್ಗದರ್ಶನದಂತೆ ಈ ವಿಶೇಷ ವ್ಯವಸ್ಥೆಯನ್ನು ದೇವಾಲಯದ ಆಡಳಿತ ಮಂಡಳಿ ವರ್ಷದ ಹಿಂದೆಯೇ ಜಾರಿಗೆ ತಂದಿದ್ದು, ದೇವಾಲಯದ ಪ್ರವೇಶದ್ವಾರದಲ್ಲಿ ‘ದೇವರ ದರ್ಶನಕ್ಕೆ ನಿವೃತ್ತ ಹಾಗೂ ಕರ್ತವ್ಯದಲ್ಲಿರುವ ಸೈನಿಕರಿಗೆ ಪ್ರಾಶಸ್ತ್ಯ’ ಎಂಬ ಫಲಕ ಹಾಕಲಾಗಿದೆ. ಯೋಧರಿಗೆ ಪ್ರಾಶಸ್ತ್ಯ: ಸೈನಿಕರು, ದೇವಾಲಯದ ಕೌಂಟರ್ನಲ್ಲಿ ಸೈನಿಕರ ಗುರುತಿನ ಚೀಟಿಯನ್ನು ತೋರಿಸಿದರೆ, […]

Continue Reading

ರಥಸಪ್ತಮಿ ಪುಣ್ಯದಿನದಂದು ಮಹಾಬಲೇಶ್ವರ ರಥಕ್ಕೆ ಪೂಜೆ ಸಲ್ಲಿಕೆ

ಗೋಕರ್ಣ: ರಥಸಪ್ತಮಿ ಪುಣ್ಯದಿನವಾದ ಇಂದು ಇಂದು ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದ ಮಹಾರಥದ ಬುಡವನ್ನು ರಥದ ಮನೆಯಿಂದ ಪೂಜೆ ಸಲ್ಲಿಸಿ ಹೊರ ತರಲಾಯಿತು.   ವೇ. ನಾರಾಯಣ ಪಂಡಿತ ಇವರು ರಥದಲ್ಲಿರುವ ಗಣಪತಿಗೆ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು. ಉಪಾಧಿವಂತ ಮಂಡಳದ ಸದಸ್ಯರು, ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ, ರಥಕಟ್ಟುವ ಹಾಲಕ್ಕಿ ಸಮಾಜದವರು, ರಥ ಚಾಲನೆ ಮಾಡುವ ಖಾರ್ವಿ ,ಗಾಬಿತಸಮಾಜದವರು, ಆಚಾರಿಗಳು ಮತ್ತು ಊರ ನಾಗರೀಕರು ಈ ವೇಳೆ ಉಪಸ್ಥಿತರಿದ್ದರು.   […]

Continue Reading

ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಅತಿರುದ್ರ ಪಾರಾಯಣ, ಪಲ್ಲಕ್ಕಿ ಉತ್ಸವ, ಹವನ ಸಂಪನ್ನ. ರಾಜ್ಯದೆಲ್ಲೆಡೆಯಿಂದ ರುದ್ರಾಧ್ಯಯಿಗಳು ಭಾಗಿ

  ಗೋಕರ್ಣ: ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಲೋಕಕಲ್ಯಾಣಾರ್ಥ ‘ಅತಿರುದ್ರ ಪಾರಾಯಣ’, ಶ್ರೀ ದೇವರ ವಿಶೇಷ ‘ಪಲ್ಲಕ್ಕಿ ಉತ್ಸವ’ ಶ್ರೀ ಕ್ಷೇತ್ರ ಉಪಾಧಿವಂತ ಮಂಡಳದಿಂದ ‘ಮಹಾರುದ್ರ ಹವನ’ ಸಂಪನ್ನಗೊಂಡವು.   ಶ್ರೀರಾಮಚಂದ್ರಾಪುರಮಠದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಸಂಕಲ್ಪ ಮತ್ತು ಮಾರ್ಗದರ್ಶನದಲ್ಲಿ ಉಪಾಧಿವಂತ ಮಂಡಳ (ರಿ) ಗೋಕರ್ಣ ಇವರ ನೇತೃತ್ವದಲ್ಲಿ ಹಾಗೂ ಹವ್ಯಕ ಮಹಾಮಂಡಲದ ಸಹಯೋಗದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.   ರಾಜ್ಯದ ವಿವಿಧೆಡೆಯಿಂದ […]

Continue Reading

ಗೋಕರ್ಣ ದೇವಾಲಯ – ಶ್ರೀರಾಮಚಂದ್ರಾಪುರಮಠಕ್ಕೆ ಮತ್ತೊಂದು ಮಹತ್ವದ ಜಯ

ಗೋಕರ್ಣದ ಸಾರ್ವಭೌಮ ಶ್ರೀಮಹಾಬಲೇಶ್ವರ ದೇವಾಲಯ ಹಾಗೂ ಪರಿವಾರ ದೇವಾಲಯಗಳಿಗೆ ಸಂಬಂಧಿಸಿದಂತೆ, ನ್ಯಾಯಾಲಯದಲ್ಲಿ ಶ್ರೀರಾಮಚಂದ್ರಾಪುರಮಠಕ್ಕೆ ಮತ್ತೊಂದು ಮಹತ್ವದ ಜಯ ಲಭಿಸಿದೆ. ಮಹಾಬಲೇಶ್ವರ ದೇವಾಲಯದ ಪಾರ್ಶ್ವದಲ್ಲಿರುವ ಆದಿಗೋಕರ್ಣದ ಪುನರ್ನಿರ್ಮಾಣಕ್ಕೆ ತಡೆ ನೀಡಬೇಕು ಎಂದು ಮಾಡಲಾಗಿದ್ದ ಮನವಿಯನ್ನು ತಿರಸ್ಕರಿಸಿರುವ ನ್ಯಾಯಾಲಯ ; ನ್ಯಾಯಾಲಯದ ವೆಚ್ಚವನ್ನು ಶ್ರೀಮಠಕ್ಕೆ ಸಂದಾಯಮಾಡುವಂತೆ ಅರ್ಜಿದಾರರಿಗೆ ಸೂಚಿಸಿ ಆದೇಶ ಹೊರಡಿಸಿದೆ.   ಆದಿಗೋಕರ್ಣ ದೇವಾಲಯ ಶಿಥಿಲವಾಗಿದ್ದ ಕಾರಣ, ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಂತೆ ಪುನರ್ನಿರ್ಮಾಣದ ಕಾರ್ಯವನ್ನು 2014 ರಲ್ಲಿ ಆರಂಭಿಸಲಾಗಿತ್ತು. ಅಭಿವೃದ್ಧಿಯನ್ನು ಸಹಿಸದ […]

Continue Reading

ಗೋಕರ್ಣ ದೇವಾಲಯದ ಆಡಳಿತಾಧಿಕಾರಿಗಳಿಗೆ Acid ದಾಳಿ ಬೆದರಿಕೆ

ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಶ್ರೀ ಸಂಸ್ಥಾನದವರ ಕಾರ್ಯದರ್ಶಿ ಮತ್ತು ಪದನಿಮಿತ್ತ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ  ಶ್ರೀ ಜಿ ಕೆ ಹೆಗಡೆ ಇವರ ಮೇಲೆ  ಆಸಿಡ್ ಧಾಳಿ ಮಾಡಲು ಸಂಚು ನಡೆದಿದೆ . ದಿನಾಂಕ 05-01-2019 ರಂದು ರಾತ್ರಿ 11.00 ಘಂಟೆ ಸುಮಾರಿಗೆ ಶ್ರೀ ಜಿ ಕೆ ಹೆಗಡೆಯವರು ಅಮಾವಾಸ್ಯೆ ರಥೋತ್ಸವ ಮುಗಿಸಿ ದೇವಾಲಯದಿಂದ ವಸತಿಗೆ ನಡೆದು ಹೋಗತ್ತಿರುವಾಗ ಶ್ರೀ ವಿಶ್ವನಾಥ ಫಣಿರಾಜ್ ಗೋಪಿ ಇವರು ಬೈಕಿನಲ್ಲಿ ಬಂದು : “ಜಿ ಕೆ ಹೆಗಡೆಯವರೇ, ನಿಮಗೆ ಆಸಿಡ್ ಹಾಕಲು […]

Continue Reading

ಕಳ್ಳತನದ ಆರೋಪಿಗೆ ಸಜೆ

  ಗೋಕರ್ಣ: ಕಳೆದ ಆರು ವರ್ಷಗಳ ಹಿಂದೆ ಶ್ರೀಕ್ಷೇತ್ರ ಗೋಕರ್ಣದಲ್ಲಿ ನಡೆದಿದ್ದ ಹುಂಡಿ ಕಳ್ಳತನ ಪ್ರಕರಣದ ಆರೋಪಿಗೆ ಕುಮಟಾ ನ್ಯಾಯಾಲಯ ಸಜೆ ವಿಧಿಸಿದೆ.   2012ರ ಅಗಸ್ಟ್ 24ರಂದು ನಡೆದಿದ್ದ ದೇವಾಲಯದ ಹುಂಡಿ ಕಳ್ಳತನಕ್ಕೆ ಸಂಬಂಧಿಸಿದಂತೆ ಆಡಳಿತಾಧಿಕಾರಿ ಶ್ರೀ ಜಿ. ಕೆ. ಹೆಗಡೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ ದಂಡ ಹಾಗೂ ಸಜೆ ವಿಧಿಸಿದೆ.  

Continue Reading

ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ತ್ರಿಪುರಾಖ್ಯ ದೀಪೋತ್ಸವ : ಭಕ್ತರ ಸಂಭ್ರಮ

ಶ್ರೀಸಂಸ್ಥಾನದವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀಕ್ಷೇತ್ರ ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ವಿಲಂಬ ಸಂವತ್ಸರದ ತ್ರಿಪುರಾಖ್ಯ ದೀಪೋತ್ಸವವು ದಿನಾಂಕ 22.11.2018ರ ಗುರುವಾರ ವಿಜೃಂಭಣೆಯಿಂದ ಜರುಗಿತು.   ಲಕ್ಷಬಿಲ್ವಾರ್ಚನೆ , ಭೂತಬಲಿ, ವನಭೋಜನ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.   ದೇವಾಲಯದಲ್ಲಿ ಲಕ್ಷದೀಪೋತ್ಸವ, ಕೋಟಿತೀರ್ಥದಲ್ಲಿ ತೆಪ್ಪೋತ್ಸವ, ಕೊನೆಯಲ್ಲಿ ರಾತ್ರಿ ರಥೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ವೇದಮೂರ್ತಿ ಶ್ರೀ ಕೃಷ್ಣ ಭಟ್ ಷಡಕ್ಷರಿಪೂಜಾ ಕೈಂಕರ್ಯ ನೆರವೇರಿಸಿದರು. ಶ್ರೀ ದೇವಾಲಯದ ಹೊರ ಆವಾರ, ನಂದಿಮಂಟಪ , ಗರ್ಭಗುಡಿಯಲ್ಲಿ ವಿಶೇಷ […]

Continue Reading

ಗೋಕರ್ಣದ ಸಾರ್ವಭೌಮ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಕಾರ್ತಿಕ ಪೌರ್ಣಿಮೆ ಸಂಭ್ರಮ : ಕಣ್ಮನಸೆಳೆದ ಹೂವಿನ ಅಲಂಕಾರ

ಗೋಕರ್ಣ: ಪುರಾಣ ಪ್ರಸಿದ್ಧ ಗೋಕರ್ಣದ ಸಾರ್ವಭೌಮ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಕಾರ್ತಿಕ ಪೌರ್ಣಿಮೆ ಪ್ರಯುಕ್ತ ಶ್ರೀ ದೇವರಿಗೆ ವಿಶೇಷ ಪೂಜೆ, ದೀಪಾಲಂಕಾರ ಹಾಗೂ ಹೂವಿನ ಅಲಂಕಾರ ನೆರವೇರಿತು. ದೇವಾಲಯದ ಒಳ-ಹೊರ ಪ್ರಾಕಾರದ ಸುತ್ತ ದೀಪಗಳಿಂದ ಪ್ರಜ್ವಲಿಸಿ, ಶ್ರೀಮಹಾಬಲೇಶ್ವರ ದೇವರ ಉತ್ಸವವು ದೇವಾಲಯದ ಸುತ್ತ ಮೂರು ಪ್ರದಕ್ಷಿಣೆ ನಡೆಸಿ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಸಲಾಯಿತು.   ಮಧ್ಯಾಹ್ನದಿಂದಲೇ ದೇವಾಲಯದಲ್ಲಿ ಮಹಾಪೂಜೆ, ಬಲಿ ನಡೆಸಿ, ದೇವರ ಉತ್ಸವವು ವನ ಭೋಜನಕ್ಕಾಗಿ ಸಮೀಪದ ಭೀಮಕುಂಡ ಎಂಬ ಸುಂದರ ಗುಡ್ಡ ಪ್ರದೇಶಕ್ಕೆ ತೆರಳಲಾಯಿತು. ಅಲ್ಲಿ […]

Continue Reading