Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಗೋವಾ-ಜೂ28 : ಕುಮಟಾ ಮಂಡಲದ ಗೋವಾವಲಯದಲ್ಲಿ ಶ್ರೀ ಸಂಸ್ಥಾನದವರ ನಿರ್ದೇಶನದಂತೆ ಶ್ರೀರಾಮ ಜನ್ಮೋತ್ಸವವನ್ನು ಗುರಿಕಾರರಾದ ಶ್ರೀ ಗಿರೀಶ ಹೆಗಡೆ ಮಡಗಾಂವ ಅವರ ಮನೆಯಲ್ಲಿ ಇಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಶ್ರೀರಾಮ ಜಪ, ಭಜನರಾಮಾಯಣ ಪಠನ, ರಾಮ ಭಜನೆ ಮಾಡಿ, ಬಂದ ಎಲ್ಲಾ ಭಕ್ತರು ರಾಮದೇವರಿಗೆ ಆರತಿ ಬೆಳಗಿದರು. ಗಿರೀಶ ಹೆಗಡೆಯವರು ಉದಯಿಸಲಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕುರಿತು ಶ್ರೀಸಂಸ್ಥಾನದವರ ಆಶಯವನ್ನು ಸವಿಸ್ತಾರವಾಗಿ ಹೇಳಿದರು. ಇದರ ಸಲುವಾಗಿ ಸಮರ್ಪಣೆ ನಡೆಯಿತು. ವಲಯದ ಉಪಾಧ್ಯಕ್ಷ ಶ್ರೀ ಐ.ಕೆ ಹೆಗಡೆ, ಪೋಂಡಾ ಗುರಿಕಾರ […]

Read More

ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶಂಕರಶ್ರೀ ಸಭಾಭವನದಲ್ಲಿ ಶ್ರೀರಾಮನ ಜನ್ಮೋತ್ಸವ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು. ಶ್ರೀ ಮಠದ ಶಿಷ್ಯ ಭಕ್ತರು, ಪ್ರಾಂಶುಪಾಲರುಗಳು ಸೇರಿ ಒಟ್ಟು 40 ಮಂದಿ ಬೋಧಕ, ಬೋಧಕೇತರ ವೃಂದದವರು, ಸುಮಾರು 250 ವಿದ್ಯಾರ್ಥಿಗಳು ಜತೆಯಾಗಿ ಕುಳಿತು ರಾಮತಾರಕ ಮಂತ್ರ, ಭಜನೆ, ಭಜನ ರಾಮಾಯಣ ಪಠಣ ನೆರವೇರಿಸಿದರು. ಮಂಗಳೂರು ಹವ್ಯಕ ಮಂಡಲ ಮಾತೃಪ್ರಧಾನರಾದ ಶ್ರೀಮತಿ ಸುಮಾ ರಮೇಶ ಅವರ ತಂಡದಿಂದ ಭಜನೆ, ಸಂಸ್ಥೆಯ ಸೇವಾ ಸಮಿತಿ ಸದಸ್ಯರೂ ಮಂಗಳೂರು ಮಧ್ಯಹವ್ಯಕ ವಲಯ […]

Read More

ಭಾನ್ಕುಳಿ ಜೂ. 28 : ಶ್ರೀರಾಮದೇವ ಬಾನ್ಕುಳಿಮಠದಲ್ಲಿ ಶ್ರೀ ಶ್ರೀಗಳ ನಿರ್ದೇಶನದಂತೆ ಶ್ರೀರಾಮ ಜನ್ಮೋತ್ಸವವನ್ನು ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಯಿತು. ಮಠದ ಅರ್ಚಕರು ,ಯಜಮಾನ ದಂಪತಿಗಳು, ನಿಯಾಮಕರು, ಬಂದ ಶಿಷ್ಯಭಕ್ತರೊಡಗೂಡಿ ಶ್ರೀರಾಮ ಜಪ, ಭಜನರಾಮಾಯಣ ಪಠನ, ರಾಮ ಭಜನೆ ಮಾಡಿ, ವಿದ್ಯುಕ್ತವಾಗಿ ಪೂಜಿಸಿ , ಶ್ರೀ ಬಾಲರಾಮನನ್ನು ತೊಟ್ಟಿಲಲ್ಲಿಟ್ಟು ತೂಗಿ ಸಂಭ್ರಮಿಸಿದರು. ಗಣಪತಿ ಹೆಗಡೆ ಗುಂಜಗೋಡು‌ ಪ್ರಾಸ್ತಾವಿಕ ಮಾತುಗಳನ್ನಾಡಿದರು.   ಡಾ. ವೈ. ವಿ. ಕೃಷ್ಣಮೂರ್ತಿಯವರು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕುರಿತು ಶ್ರೀಗಳ ಆಶಯವನ್ನು ಸವಿಸ್ತಾರವಾಗಿ ವಿವರಿಸಿದರು. ಆಮೇಲೆ ಮಹಾಗುರುಕುಲಕ್ಕಾಗಿ […]

Read More

ಸಿದ್ದಾಪುರ ಜೂ 28 : ಸಿದ್ದಾಪುರ ಮಂಡಲದ ವಲಯಗಳಲ್ಲಿ ಶ್ರೀ ಶ್ರೀಗಳವರ ನಿರ್ದೇಶನದಂತೆ ಶ್ರೀರಾಮ ಜನ್ಮೋತ್ಸವವನ್ನು ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಯಿತು. ಶಿಷ್ಯಭಕ್ತರೊಡಗೂಡಿ ಶ್ರೀರಾಮ ಜಪ, ಭಜನರಾಮಾಯಣ ಪಠನ, ರಾಮ ಭಜನೆ ಮಾಡಿ, ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕುರಿತು ಶ್ರೀಗಳ ಆಶಯವನ್ನು ಸವಿಸ್ತಾರವಾಗಿ ಪ್ರಸ್ತುತಿ ವೀಡಿಯೋ ಮತ್ತು ಆಶಯನುಡಿಗಳೊಂದಿಗೆ ವಿವರಿಸಲಾಯಿತು. ಆಮೇಲೆ ಮಹಾಗುರುಕುಲಕ್ಕಾಗಿ ಸಮರ್ಪಣೆ ನಡೆಯಿತು.ಅನಂತರ ಪ್ರಸಾದ ಪನಿವಾರ ಪಾನಕ ಸಿಹಿತಿಂಡಿಗಳ ವಿತರಣೆ ನಡೆದು ಕಾರ್ಯಕ್ರಮವು ಸಂಪನ್ನಗೊಂಡಿತು.

Read More

➖➖➖➖➖➖➖➖ “ಹಲಸು ಬೆಳೆಸಿ ಗೋವು ಉಳಿಸಿ” ಎಂಬ ಧ್ಯೇಯ ವಾಕ್ಯದೊಂದಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜೂನ್ 8ರಂದು ನಡೆಸಲಿರುವ ” ಹಲಸು ಮೇಳ ” ಎಂಬ ಬೃಹತ್ ಸಮಾರಂಭದ ಸಿದ್ಧತೆಗಾಗಿ ಸಮಾಲೋಚನಾ ಸಭೆಯು ವಿದ್ಯಾಪೀಠದಲ್ಲಿ ಜರಗಿತು. ಮುಳ್ಳೇರಿಯಾ ಮಂಡಲಾಧ್ಯಕ್ಷರಾದ ಪ್ರೊ ಶ್ರೀಕೃಷ್ಣ ಭಟ್ಟ ಅವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.   ಸಮಾರಂಭವು ಮುಳ್ಳೇರಿಯಾ ಹವ್ಯಕ ಮಂಡಲ, ಅಮೃತಧಾರಾ ಗೋಶಾಲೆ ಬಜಕ್ಕೂಡ್ಲು ಪೆರ್ಲ, ಮತ್ತು ಮಹಿಳೋದಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರಗಲಿದೆ. ಸಭೆಯಲ್ಲಿ ಡಾ. ವೈ. […]

Read More

ಅಪ್ಸರಕೊಂಡ: ಶಾಖಾಮಠವಾದ ಅಪ್ಸರಕೊಂಡ ಮಠದಲ್ಲಿ ನಡೆಯಲಿರುವ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಮಹತ್ತ್ವದ ಸಭೆ ನಡೆಯಿತು. ಕಾರ್ಯದರ್ಶಿ ಶ್ರೀ ಕೆ. ಜಿ. ಹೆಗಡೆಯವರು ಕಾರ್ಯಕ್ರಮದ ತಯಾರಿ ಬಗ್ಗೆ ಹಾಗೂ ಮುಂದಿನ ಅವಶ್ಯಕತೆ ಬಗ್ಗೆ ವಿವರಿಸಿದರು.   ಅಧ್ಯಕ್ಷರಾದ ಶ್ರೀ ಸುಬ್ರಾಯ ಹೆಗಡೆಯವರು ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿದರು. ಗೌರವಾಧ್ಯಕ್ಷರಾದ ಶ್ರೀ ಸುಬ್ರಾಯ ಭಟ್ಟರು, ಶ್ರೀ ಪಿ. ಎಸ್. ಭಟ್ಟರು, ಹೊನ್ನಾವರ ಕುಮಟಾ ಮಂಡಲದ ಅಧ್ಯಕ್ಷರು, ಗುರಿಕಾರರು, ಪದಾಧಿಕಾರಿಗಳು ಹಾಗೂ ಮಾತೃಪ್ರಧಾನೆಯರು ಸೇರಿದಂತೆ ಎಲ್ಲ ಪ್ರಮುಖರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  

Read More

ಹೊನ್ನಾವರ: ಡಿಸೆಂಬರ್ 28ರಿಂದ‌‌ ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ನೈದಾನದಲ್ಲಿ ನಡೆಯಲಿರುವ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ‌ ಹಾಗೂ ಅಖಿಲ ಹವ್ಯಕ ಮಹಾಸಭೆಯ ಅಮೃತಮಹೋತ್ಸವ ಕಾರ್ಯಕ್ರಮಗಳ ಉದ್ಘಾಟನೆಯು ವಿಭಿನ್ನವಾಗಿರಲಿದೆ. ಕರ್ನಾಟಕದಲ್ಲಿ ಹವ್ಯಕರ ಮೂಲಸ್ಥಾನವಾದ ಹೈಗುಂದದ ದೇವಳದಿಂದ ಜ್ಯೋತಿಯನ್ನು ಬೆಳಗಿಸಿ ರಥಯಾತ್ರೆಯಲ್ಲಿ ಭಾನ್ಕುಳಿಯ ಗೋಸ್ವರ್ಗದ ಮೂಲಕವಾಗಿ ಬೆಂಗಳೂರಿನ‌ ಅರಮನೆ ಮೈದಾನಕ್ಕೆ ತರಲಾಗುತ್ತದೆ. ಈ‌ ಪವಿತ್ರ ಜ್ಯೋತಿಯಿಂದ ದೀಪ ಬೆಳಗುವ ಮೂಲಕ ಸಮ್ಮೇಳನವು ಉದ್ಘಾಟನೆಗೊಳ್ಳಲಿದೆ.   ಡಿಸೆಂಬರ್ 26ರ ಬೆಳಗ್ಗೆ ಹೈಗುಂದದಿಂದ ಹೊರಟ ಜ್ಯೋತಿಯು ಹೊನ್ನಾವರವನ್ನು ತಲುಪಿದೆ. ಇಲ್ಲಿ […]

Read More

  ನಾಟ್ಯತರಂಗ ತನ್ನ ಎಂಟನೆಯ ಸಂಸ್ಕೃತಿ ಸಪ್ತಾಹದ ಸಿದ್ದತೆ ನಡೆಸಿದೆ. ವರ್ಷದಿಂದ ವರ್ಷಕ್ಕೆ ಇನ್ನೂ ಉತ್ತಮ ಕಾರ್ಯಕ್ರಮ ಕೊಡುವ ಪ್ರಯತ್ನ ನಡೆಸುತ್ತಿದೆ. ಸಂಗೀತ, ವಿವಿಧ ಪ್ರಕಾರ ದ ನೃತ್ಯಗಳು, ಯಕ್ಷಗಾನ, ವಾದ್ಯ ಸಂಗೀತ ಕಾರ್ಯಗಳನ್ನು ಈ ಸಪ್ತಾಹ ಒಳಗೊಂಡಿದೆ. ಈ ಸಪ್ತಾಹದಲ್ಲಿ ರಾಜ್ಯ ಹೊರ ರಾಜ್ಯಗಳಿಂದ ಸುಮಾರು 40ಕ್ಕೂ ಹೆಚ್ಚು ಕಲಾವಿದರು,40ಕ್ಕೂ ಹೆಚ್ಚು ವಿವಿಧ ಕ್ಷೇತ್ರ ಗಳ ಗಣ್ಯರು ಅಥಿತಿಗಳಾಗಿ ಆಗಮಿಸುತ್ತದ್ದಾರೆ. ಕಲಾ ಕ್ಷೇತ್ರದ ಸಾಧಕರನ್ನು ಸನ್ಮಾನಿಸುತ್ತಿದ್ದೇವೆ. ಉದಯೋನ್ಮುಖ ರನ್ನು ಪ್ರೋತ್ಸಹಿಸುವ, ಹಿರಿಯರನ್ನು ಗೌರವಿಸುವ ನಾಟ್ಯತರಂಗದ ಈ […]

Read More

ಶ್ರೀರಾಮಚಂದ್ರಾಪುರಮಠದ ಅವಿಚ್ಚಿನ್ನ ಗುರುಪರಂಪರೆಯ 35ನೇ ಯತಿಗಳಾದ ಬ್ರಹ್ಮೈಕ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವ ಶ್ರೀಮಠದ ಬೆಂಗಳೂರಿನ ಗಿರಿನಗರದ ಶಾಖಾಮಠದಲ್ಲಿ ದಿನಾಂಕ 15.12.2018 ಶನಿವಾರದಂದು ನಡೆಯಲಿದ್ದು, ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯದಲ್ಲಿ ತೀರ್ಥರಾಜ ಪೂಜೆ ಇತ್ಯಾದಿ ಮಠೀಯ ಪದ್ಧತಿಯಂತೆ ಪೂರ್ವಾಚಾರ್ಯರ ಆರಾಧನೆ ಸಂಪನ್ನವಾಗಲಿದೆ.   ಆನಂತರ ಧರ್ಮಸಭೆ ನಡೆಯಲಿದ್ದು, ಶ್ರೀರಾಘವೇಂದ್ರ ಭಾರತೀ ಪಾಂಡಿತ್ಯ ಪುರಸ್ಕಾರ ಹಾಗೂ ಶ್ರೀಗುರುಪರಂಪರಾನುಗ್ರಹ ಕಾರ್ಯಕ್ರಮಗಳು ಸಂಪನ್ನವಾಗಲಿವೆ.   ‘ಶ್ರೀರಾಘವೇಂದ್ರ ಭಾರತೀ ಪಾಂಡಿತ್ಯ ಪುರಸ್ಕಾರ’ : ಪೂರ್ವಾಚಾರ್ಯರಾದ […]

Read More

ವಿಶಿಷ್ಟ ಸಂಸ್ಕೃತಿಯನ್ನು ವಿಶ್ವಮಟ್ಟದಲ್ಲಿ ಅನಾವರಣಗೊಳಿಸುವ ಐತಿಹಾಸಿಕ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಶ್ರೀ ಅಖಿಲ ಹವ್ಯಕ ಮಹಾಸಭೆಯ ಅಮೃತಮಹೋತ್ಸವ ಕಾರ್ಯಕ್ರಮಗಳನ್ನು ಹವ್ಯಕ ಮಹಾಸಭೆಯಿಂದ ಆಯೋಜಿಸಲಾಗಿದ್ದು, ಡಿಸೆಂಬರ್ 28, 29 ಮತ್ತು 30 ರಂದು ಅರಮನೆ ಮೈದಾನದ ರಾಯಲ್ ಸೆನೆಟ್ ಹಾಗೂ ಗ್ರಾಂಡ್ ಕ್ಯಾಸೆಲ್ ಸಭಾಂಗಣದಲ್ಲಿ ಸಂಪನ್ನವಾಗಲಿದೆ.   ಹವ್ಯಕ ಸಮಾಜ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಹಾಗೂ ಸಂಸ್ಕಾರಗಳೊಂದಿಗೆ ನಾಡಿಗೆ ವೈಶಿಷ್ಟ್ಯಪೂರ್ಣ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು, ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಅಮೃತಮಹೋತ್ಸವ ಕಾರ್ಯಕ್ರಮಗಳನ್ನು […]

Read More

ಗುತ್ತಿಗಾರು : ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ಮುಳ್ಳೇರಿಯ ಹವ್ಯಕ ಮಂಡಲದ ಮಾಸಿಕ ಸಭೆಯು ಗುತ್ತಿಗಾರು ವಲಯದ ಅಧ್ಯಕ್ಷ ಅಡಿಕೆಹಿತ್ಲು ಶ್ರೀ ಸೀತಾರಾಮ ಭಟ್ ಅವರ ಮನೆಯಲ್ಲಿ 25.11.2018ರಂದು ಜರಗಿತು.   ಮಂಡಲಾಧ್ಯಕ್ಷ ಪ್ರೊ. ಟಿ. ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ರೀ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆಯವರು ಪ್ರಸ್ತಾವನೆಗೈದು, ಗತಸಭೆಯ ವರದಿಯನ್ನು ಮಂಡಿಸಿದರು. ಕೋಶಾಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಭಟ್ ಗಬ್ಲಲಡ್ಕ ಇವರು ಲಕ್ಷ್ಮೀಲಕ್ಷಣದ ಮಾಹಿತಿ ನೀಡಿ ಲೆಕ್ಕಪತ್ರ ಮಂಡಿಸಿದರು. ವಲಯ ಪದಾಧಿಕಾರಿಗಳು ಮತ್ತು ವಿಭಾಗ ಪ್ರಧಾನರು ವರದಿ ನೀಡಿ […]

Read More

ಬೆಂಗಳೂರು: ಜೀವನದ ಸಂಧ್ಯಾಕಾಲದಲ್ಲಿರುವ ಹಿರಿಯ ಜೀವಗಳ ಶೇಷಾಯುಷ್ಯವು ಮಂಗಲಕರವಾಗಿರಲಿ ಎಂಬ ಸದುದ್ದೇಶದೊಂದಿಗೆ ಬೆಂಗಳೂರಿನ ಶ್ರೀರಾಮಾಶ್ರಮದಲ್ಲಿ 21.11.2018ರ ಬುಧವಾರದಂದು ಸಂಧ್ಯಾಮಂಗಲ ಎಂಬ ವಿಶೇಷ ಕಾರ್ಯಕ್ರಮವನ್ನು ನಡೆಸಲಾಯಿತು. ಹವ್ಯಕ ಮಹಾಮಂಡಲದ ನೇತೃತ್ವದಲ್ಲಿ ನಡೆದ ಸಂಧ್ಯಾಮಂಗಲದಲ್ಲಿ 60 ವರ್ಷ, 70 ವರ್ಷ, 80 ವರ್ಷಗಳನ್ನು ಪೂರೈಸಿದ ಒಟ್ಟು 70 ಹಿರಿಯ ದಂಪತಿಗಳು ಪಾಲ್ಗೊಂಡು, ಶ್ರೀಸಂಸ್ಥಾನದವರ ಅಮೃತಹಸ್ತಗಳಿಂದ ವಿಶೇಷ ದಿವ್ಯಾಶೀರ್ವಾದಗಳನ್ನು ಪಡೆದರು.   ಸಂಧ್ಯಾಮಂಗಲ ಕಾರ್ಯಕ್ರಮದ ಧರ್ಮಸಭೆಯ ದಿವ್ಯಸಾನ್ನಿಧ್ಯವನ್ನು ವಹಿಸಿದ್ದ ಶ್ರೀಸಂಸ್ಥಾನದವರು, ಬಹುಕಾಲ ಬದುಕಿ ಬಾಳಿ ಸಮಾಜವನ್ನು ಬೆಳಗಿದ, ಪ್ರಾಯ-ಅಭಿಪ್ರಾಯಗಳೆರಡರಲ್ಲಿಯೂ ಪಕ್ವರಾಗಿ ಸಮಾಜಕ್ಕೆ […]

Read More

ಮುಳ್ಳೇರಿಯಾ ಮಂಡಲದ ನೀರ್ಚಾಲು ವಲಯದ ವಲಯೋತ್ಸವ ಕಾರ್ಯಕ್ರಮವು ೧೧/೧೧/೨೦೧೮ ರಂದು ಅಗ್ರಸಾಲೆ ಶ್ರೀ ಶಾಸ್ತಾರ ಮಂದಿರದಲ್ಲಿ ನಡೆಯಿತು. ವಲಯೋತ್ಸವದ ಪ್ರಯುಕ್ತ ಬೆಳಗ್ಗೆ ಕುಂಕುಮಾರ್ಚನೆ, ಭಜನ ರಾಮಾಯಣ ಪಾರಾಯಣಗಳು ನಡೆದವು. ಕಾರ್ಯಕ್ರಮಕ್ಕೆ ವಲಯದ ನಿವೃತ್ತ ಹಿರಿಯ ಗುರಿಕ್ಕಾರರಾದ ಶ್ರೀ ವಾಶೆ ಸುಬ್ರಹ್ಮಣ್ಯ ಭಟ್ ಧ್ವಜಾರೋಹಣಗೈಯುವ ಮೂಲಕ ಹಾಗೂ ಶ್ರೀಮತಿ ಸರಸ್ವತಿ ಕಡಗಂಜಿ ದೀಪ ಪ್ರಜ್ವಲನೆಗೈಯುವ ಮೂಲಕ ಚಾಲನೆ‌ ನೀಡಿದರು. ೧೧.೦೦ ಗಂಟೆಗೆ ಸರಿಯಾಗಿ ಸಭಾ ಕಾರ್ಯಕ್ರಮ ಆರಂಭಗೊಂಡಿತು. ಸಭೆಯಲ್ಲಿ ಮಾತನಾಡಿದ ಮುಳ್ಳೇರಿಯಾ ಮಂಡಲ ಕಾರ್ಯದರ್ಶಿ ಶ್ರೀಬಾಲಸುಬ್ರಹ್ಮಣ್ಯ ಭಟ್ ಹಲವು […]

Read More

ಶ್ರೀ ಅಖಿಲ ಹವ್ಯಕ ಮಹಾಸಭೆಯು ಸ್ವಾತಂತ್ರ್ಯ ಪೂರ್ವದಲ್ಲೇ ಸಂಘಟಿತವಾಗಿ, ಸಮಸ್ತ ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾಗಿ ಕಾರ್ಯಾಚರಿಸುತ್ತಿದೆ. ಗುರುಪೀಠಗಳ ದಿವ್ಯ ಮಾರ್ಗದರ್ಶನದೊಂದಿಗೆ 1943ರಿಂದ ಸಮಾಜದ ಸಂಘಟನೆ ಹಾಗೂ ಸರ್ವತೋಮುಖ ಅಭಿವೃದ್ಧಿಯ ದಿಶೆಯಲ್ಲಿ ತೊಡಗಿಸಿಕೊಂಡಿದೆ. ಅಮೃತಮಹೋತ್ಸವ ವರ್ಷದ ಹರ್ಷದಲ್ಲಿರುವ ಹವ್ಯಕ ಮಹಾಸಭೆಯು ಡಿ. 28, 29 ಹಾಗೂ 30ರಂದು ಐತಿಹಾಸಿಕ ಅಮೃತಮಹೋತ್ಸವ ಹಾಗೂ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲು ತೀರ್ಮಾನಿಸಿದೆ.   ಹವ್ಯಕ ಸಮಾಜ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಹಾಗೂ ಸಂಸ್ಕಾರಗಳೊಂದಿಗೆ […]

Read More

ಬೆಂಗಳೂರು : ಶ್ರೀರಾಮಚಂದ್ರಾಪುರಮಠದ‌ ಶಾಖಾಮಠವಾದ ಬೆಂಗಳೂರು ಗಿರಿನಗರದ ರಾಮಾಶ್ರಮದಲ್ಲಿ ಸಪರಿವಾರ ಶ್ರೀರಾಮಚಂದ್ರದೇವರ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಕಾರ್ಯಕ್ರಮವು ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಾಗಿ ನಡೆಯಿತು. ಶ್ರೀಸಂಸ್ಥಾನದವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ವಿಲಂಬ ಸಂವತ್ಸರದ ಅಶ್ವಯುಜ ಕೃಷ್ಣ ಷಷ್ಠಿ ಹಾಗೂ ಸಪ್ತಮಿಯಂದು ಹಲವು ಧಾರ್ಮಿಕ‌ ಕಾರ್ಯಕ್ರಮಗಳು ನಡೆದವು. (ದಿನಾಂಕ 30.10.2018 ಹಾಗೂ 31.10.2018) ಮಂಗಳವಾರದಂದು ಗುರುದೇವತಾ ಪ್ರಾರ್ಥನೆಯೊಂದಿಗೆ ಆರಂಭಗೊಂಡ‌ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಗಣಪತಿ ಪೂಜೆ, ದೇವನಾಂದಿ, ಪುಣ್ಯಾಹ, ಕೌತುಕ ಬಂಧನ, ಧ್ವಜಾರೋಹಣ, ಬಲಿ ವಿಧಾನಗಳನ್ನು ನೆರವೇರಿಸಲಾಯಿತು. ಸಂಜೆ ರಂಗಪೂಜೆ, ಪಲ್ಲಕ್ಕಿ ಉತ್ಸವ, […]

Read More
Online news kannada regional herald regional news sports politics karavali kannada latest news breaking news upcoming news save kannada save government school karnataka udupi news kundapura news india top news