ಗೋವಾವಲಯದಲ್ಲಿ ಶ್ರೀರಾಮ ಜನ್ಮೋತ್ಸವ

ಸಮಾರಂಭ

ಗೋವಾ-ಜೂ28 : ಕುಮಟಾ ಮಂಡಲದ ಗೋವಾವಲಯದಲ್ಲಿ ಶ್ರೀ ಸಂಸ್ಥಾನದವರ ನಿರ್ದೇಶನದಂತೆ ಶ್ರೀರಾಮ ಜನ್ಮೋತ್ಸವವನ್ನು ಗುರಿಕಾರರಾದ ಶ್ರೀ ಗಿರೀಶ ಹೆಗಡೆ ಮಡಗಾಂವ ಅವರ ಮನೆಯಲ್ಲಿ ಇಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಶ್ರೀರಾಮ ಜಪ, ಭಜನರಾಮಾಯಣ ಪಠನ, ರಾಮ ಭಜನೆ ಮಾಡಿ, ಬಂದ ಎಲ್ಲಾ ಭಕ್ತರು ರಾಮದೇವರಿಗೆ ಆರತಿ ಬೆಳಗಿದರು. ಗಿರೀಶ ಹೆಗಡೆಯವರು ಉದಯಿಸಲಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕುರಿತು ಶ್ರೀಸಂಸ್ಥಾನದವರ ಆಶಯವನ್ನು ಸವಿಸ್ತಾರವಾಗಿ ಹೇಳಿದರು. ಇದರ ಸಲುವಾಗಿ ಸಮರ್ಪಣೆ ನಡೆಯಿತು. ವಲಯದ ಉಪಾಧ್ಯಕ್ಷ ಶ್ರೀ ಐ.ಕೆ ಹೆಗಡೆ, ಪೋಂಡಾ ಗುರಿಕಾರ ಪಿ.ಆರ್ ಭಟ್ಟ, ಕಾರ್ಯದರ್ಶಿ, ಕೋಶಾಧ್ಯಕ್ಷ ಸೇರಿದಂತೆ ಒಟ್ಟು 20 ಗುರುಭಕ್ತರು ಸೇರಿದ್ದರು. ಒಟ್ಟು 2683 ರೂಪಾಯಿ ಸಂಗ್ರಹಣೆಯಾಯಿತು. ಅನಂತರ ಪ್ರಸಾದ ಪನಿವಾರ ಪಾನಕ ಸಿಹಿತಿಂಡಿಗಳ ವಿತರಣೆಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.

*
ವಿದ್ಯಾರ್ಥಿಗಳಿಗೆ ನವಚೇತನ ನೀಡಿದ ಶ್ರೀರಾಮಜನ್ಮೋತ್ಸವ
ಬದಿಯಡ್ಕ ಜೂನ್ 29 : ಶ್ರೀ ಮಠದ ಶಾಲಾಮಾಲಿಕೆಯಲ್ಲಿ ಒಂದಾದೆನಿಸಿದ ಬದಿಯಡ್ಕದ ಶ್ರೀಭಾರತೀ ವಿದ್ಯಾಪೀಠ ಶಾಲೆಯಲ್ಲಿ ಶ್ರೀ ಶ್ರೀಗಳವರ ನಿರ್ದೇಶನದಂತೆ ಶ್ರೀರಾಮ ಜನ್ಮೋತ್ಸವವನ್ನು ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರೆಲ್ಲರೂ ಬೊಗಸೆ ತುಂಬಾ ಪುಷ್ಪವನ್ನು ಹಿಡಿದು ರಾಮತಾರಕ ಮಂತ್ರ ಜಪಿಸಿ ಶ್ರೀ ರಾಮನಿಗೆ ಸಮರ್ಪಿಸಿದರು. ಅಧ್ಯಾಪಿಕೆ ಶ್ರೀಮತಿ ರಶ್ಮಿ ಪೆರ್ಮುಖ ಕಾರ್ಯಕ್ರಮದ ಔಚಿತ್ಯವನ್ನು ಸವಿವರ ಬಿತ್ತರಿಸಿದರು. ಹತ್ತನೆಯ ತರಗತಿಯ ವಿದ್ಯಾರ್ಥಿ ಕು. ಶ್ರೀಹರಿಯು ವಿಷ್ಣು ಗುಪ್ತ ವಿಶ್ವ ವಿದ್ಯಾಪೀಠದ ಸ್ಥಾಪನೆಯ ಉದ್ದೇಶ ಹಾಗೂ ಶಿಕ್ಷಣ ವ್ಯವಸ್ಥೆಯ ಬಗೆಗಿನ ಶ್ರೀಗಳ ಆಶಯವನ್ನು ವಿವರಿಸಿದನು. ವಿದ್ಯಾರ್ಥಿನಿ ಕು. ಯತಿಕಾ ಶ್ರೀ ರಾಮ ಜನನದ ಕಥೆಯನ್ನು ಸಾಂದರ್ಭಿಕವಾಗಿ ಹೇಳಿದಳು. ಶಾಲಾಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮಾ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.

*
ಪ್ರಗತಿವಿದ್ಯಾಲಯದಲ್ಲಿ ಶ್ರೀರಾಮಜನ್ಮೋತ್ಸವ
ಕುಮಟಾ – ಜೂ29 : ಶ್ರೀಸಂಸ್ಥಾನದವರ ಆಶಯ ಮತ್ತು ಆದೇಶದಂತೆ ಶ್ರೀಶ್ರೀಗಳು ಪ್ತಸ್ತುತ ಪಡಿಸುತ್ತಿರುವ ಧಾರಾರಾಮಾಯಣದ ಶ್ರೀರಾಮಜನ್ಮ ಸಾಂದಭರ್ಭಿಕವಾಗಿ , ಶ್ರೀಮಠದ ಶಾಲಾಮಾಲೆಯಲ್ಲಿ ಒಂದಾಗಿರುವ ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ಶ್ರೀರಾಮಜನ್ಮೋತ್ಸವವನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಆ ಪ್ರಯುಕ್ತ ಎಲ್ಲಾ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಈ ಮಂಗಲಕಾರ್ಯದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ವಿದ್ಯಾಲಯದಲ್ಲಿ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸುಸಂದರ್ಭದಲ್ಲಿ ಶ್ರೀ ರಾಮಜಪ- ಶ್ರೀ ರಾಮ ಭಜನೆಯನ್ನು ಶ್ರೀಮತಿ ಸಾವಿತ್ರಿ ಮಧ್ಯಸ್ಥ ನಡೆಸಿಕೊಟ್ಟರು.ವಿದ್ವಾನ್ ಶ್ರೀಪಾದ ಭಟ್ಟ ಈ ಕುರಿತು ಪಾಸ್ತಾವಿಕ ನುಡಿಗಳನ್ನು ಹಂಚಿ ವಿಷ್ಣುಗುಪ್ತ ವಿಶ್ವ ವಿದ್ಯಾಲಯದ ಕುರಿತು ತಿಳಿಸಿಕೊಟ್ಟರು.

Author Details


Srimukha

Leave a Reply

Your email address will not be published. Required fields are marked *