ಸಿದ್ದಾಪುರ ಜೂ 28 : ಸಿದ್ದಾಪುರ ಮಂಡಲದ ವಲಯಗಳಲ್ಲಿ ಶ್ರೀ ಶ್ರೀಗಳವರ ನಿರ್ದೇಶನದಂತೆ ಶ್ರೀರಾಮ ಜನ್ಮೋತ್ಸವವನ್ನು ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಯಿತು. ಶಿಷ್ಯಭಕ್ತರೊಡಗೂಡಿ ಶ್ರೀರಾಮ ಜಪ, ಭಜನರಾಮಾಯಣ ಪಠನ, ರಾಮ ಭಜನೆ ಮಾಡಿ, ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕುರಿತು ಶ್ರೀಗಳ ಆಶಯವನ್ನು ಸವಿಸ್ತಾರವಾಗಿ ಪ್ರಸ್ತುತಿ ವೀಡಿಯೋ ಮತ್ತು ಆಶಯನುಡಿಗಳೊಂದಿಗೆ ವಿವರಿಸಲಾಯಿತು.
ಆಮೇಲೆ ಮಹಾಗುರುಕುಲಕ್ಕಾಗಿ ಸಮರ್ಪಣೆ ನಡೆಯಿತು.ಅನಂತರ ಪ್ರಸಾದ ಪನಿವಾರ ಪಾನಕ ಸಿಹಿತಿಂಡಿಗಳ ವಿತರಣೆ ನಡೆದು ಕಾರ್ಯಕ್ರಮವು ಸಂಪನ್ನಗೊಂಡಿತು.