ವಿದ್ಯೆ-ವಾತ್ಸಲ್ಯಗಳ ವಿಶೇಷ ಬೆಸುಗೆ
ಅಶೋಕೆ: ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಹಲವು ತಿಂಗಳಿಂದ ಪ್ರತಿ ತಿಂಗಳು ಮಾತೃವಂದನೆ-ಛಾತ್ರಭಿಕ್ಷೆ ನಡೆಯುತ್ತಿದೆ. ಗುರುಕುಲದ ವಿದ್ಯಾರ್ಥಿಗಳು ಸಮಾಜದ ಅನೇಕ ಮಾತೆಯರನ್ನು ಪೂಜಿಸಿ ಅವರಿಂದ ಛಾತ್ರಭಿಕ್ಷೆ ಸ್ವೀಕರಿಸುವ ಅಪೂರ್ವ ಕಾರ್ಯಕ್ರಮವಿದು. ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯನಿರ್ದೇಶನದಂತೆ ನಡೆಯುತ್ತಿರುವ ಈ ಸಮ್ಮಿಲನ ವಿದ್ಯೆ-ವಾತ್ಸಲ್ಯಗಳ ವಿಶೇಷ ಬೆಸುಗೆ. ಈ ವರ್ಷದ ಮೊದಲ ಮಾತೃವಂದನೆ-ಛಾತ್ರಭಿಕ್ಷೆ ಕಾರ್ಯಕ್ರಮ ದಿನಾಂಕ ನಿಜ ಜ್ಯೇಷ್ಠ ಕೃಷ್ಣ ಪಾಡ್ಯದಂದು (30-06-2026) ಗುರುದೃಷ್ಟಿ ಭವನದಲ್ಲಿ ನಡೆಯಿತು. ಪರಂಪರಾ ಗುರುಕುಲದ ವಿದ್ಯಾರ್ಥಿಗಳಿಗೆ ಹೊನ್ನಾವರ ಮಂಡಲದ ಮಾತೆಯರು ಛಾತ್ರಭಿಕ್ಷೆಯನ್ನಿತ್ತರು. ೭೪ ಮಾತೆಯರು ಭಾಗವಹಿಸಿದ್ದರು. ಸುಧನ್ವ ಆರ್ಯ […]
Continue Reading