ಗೋವೆಂಬ ದೀಪಕ್ಕಿದೋ ದೀಪೋತ್ಸವ ಸೇವೆ

ಗೋಶಾಲಾ

ಕೈರಂಗಳ: ಪುಣ್ಯಕೋಟಿನಗರದ ಅಮೃತಧಾರಾ ಗೋಶಾಲೆಯಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ನಡೆದ ಗೋಸೇವಾ ಮಾಸಾಚರಣೆ ಕಾರ್ಯಕ್ರಮದ ಸಮಾರೋಪ ಮಾಘ ಕೃಷ್ಣ ದಶಮಿಯಂದು (ಫೆಬ್ರವರಿ 12) ನಡೆಯಿತು.

ಆ ದಿನ ರಾತ್ರಿ 8:00 ಘಂಟೆಯಿಂದ ಗೋಮಾಸಾಚರಣೆಯ ಮಂಗಲ ಮಹೋತ್ಸವರೂಪವಾದಂತಹ ‘ದೀಪೋತ್ಸವ’ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು. ಮಕರ ಸಂಕ್ರಾಂತಿಯಂದು ಆರಂಭಗೊಂಡು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಈ ಕಾರ್ಯಕ್ರಮವು ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ವಿಶೇಷವಾಗಿ ಗೋ ಸೇವೆಯು ವೈಭವೋಪೇತವಾಗಿ, ಭಕ್ತಿ-ಶ್ರದ್ಧಾಪುರಃಸರವಾಗಿ ನಡೆಯಿತು. ಇಂತು ಗೋ ಸೇವಾ ಮಾಸಾಚರಣೆಯು ಯಶಸ್ವಿಗೊಂಡಿತು.

ಗೋ-ಮಾಸ ಸಡಗರದ ಕಾಯಕವು ಲಘುವೇನು?
ಶ್ರೀಗುರುವಿನಭಯವಿರೆ ಸಾಧ್ಯವಲ್ಲಹುದೇನು?
ಗೋಸೇವೆ ಕಾರ್ಯಕ್ಕೆ ಜಯಜ್ಯೋತಿಯುತ್ಸವವು
ಮಾತೆತುಷ್ಟಿಯದು ಬಾಳ್ಗೆ ನೈಜ ದೀಪೋತ್ಸವವು

Leave a Reply

Your email address will not be published. Required fields are marked *