“ಶ್ರೀಮಠದ ಸೇವೆ – ಗೋ ಸೇವೆ ಬದುಕಿನ ಅವಿಭಾಜ್ಯ ಅಂಗ ” – ಸ್ವಾತಿ ಯು. ಯಸ್. ಭಟ್ ಮಿತ್ತೂರು

” ಗೋವು ನಮ್ಮ ಜೀವನದ ಅವಿಭಾಜ್ಯ ಅಂಗ. ಗೋವಿನ ಜೊತೆ ಬಾಂಧವ್ಯವಿಲ್ಲದೆ ನಮ್ಮ ಬದುಕು ಸಂಪೂರ್ಣವಲ್ಲ. ದೇಶಿ ಗೋವಿನ ಉತ್ಪನ್ನಗಳು ನಮ್ಮ ಆರೋಗ್ಯವನ್ನು ಸಂರಕ್ಷಿಸುತ್ತವೆ. ಅನೇಕ ರೋಗಗಳಿಗೂ ಔಷಧವಾಗಿವೆ. ಇಂತಹ ಗೋವುಗಳನ್ನು ಸಂರಕ್ಷಿಸುವ ಮಹತ್ಕಾರ್ಯದ ದೀಕ್ಷೆ ತೊಟ್ಟಿರುವ ನಮ್ಮ ಗುರುಗಳ ಮಹತ್ವಪೂರ್ಣ ಯೋಜನೆಗೆ ಕೈಜೋಡಿಸುವ ಅವಕಾಶ ದೊರಕಿದ್ದು ಪೂರ್ವ ಜನ್ಮದ ಸುಕೃತ ” ಎನ್ನುತ್ತಾರೆ ಮಂಗಳೂರು ಮಂಡಲ, ಮಂಗಳೂರು ಮಧ್ಯ ವಲಯದ ಮಿತ್ತೂರು ಉದಯಶಂಕರ್ ಭಟ್ ಅವರ ಪತ್ನಿ ಸ್ವಾತಿ ಯು ಎಸ್ ಭಟ್. ಮೀಯಪದವು ನಾರಾಯಣ […]

Continue Reading

ಹವಿ ಸವಿ ತೋರಣ – ೧೧ ‘ಜೋ..ಜೋ.. ಕೃಷ್ಣಾ ಪರಮಾನಂದಾ….’

  ಜೋಗುಳ, ಲಾಲಿ’ ಈ ಪದಂಗೊಕ್ಕೆ ಎಂತಹ ಆಕರ್ಷಣೆ..! ನಾವೆಲ್ಲ ಸಣ್ಣಾದಿಪ್ಪಗ ಜೋಗುಳ ಕೇಳಿಂಡೇ ಒರಗಿಂಡಿದ್ದದಲ್ಲದೋ. ಪುಟ್ಟು ಪಾಪುವಿನ ತೊಟ್ಲಿಲ್ಲಿ ಮನುಶಿ ಜೋ.. ಜೋ..’ ಹೇಳುವ ಚೆಂದದ ಒಂದು ನೋಟ ಮನಸ್ಸಿಂಗೆ ಅದೆಷ್ಟು ಕೊಶಿ ಕೊಡ್ತು. ತೊಟ್ಲು ಅಥವಾ ತೊಟ್ಟಿಲು ಹೇಳುವ ಮಕ್ಕಳ ಮನುಶುವ ಉಯ್ಯಾಲೆಲಿ ಮಕ್ಕಳ ಒಪ್ಪಕೆ ಮನುಶಿ ಅಬ್ಬೆ ‘ಜೋ..ಜೋ..ಕೃಷ್ಣಾ….ಪರಮಾನಂದಾ….ಜೋ…ಜೋ..ದೇವಕಿ ಕಂದ ಮುಕುಂದಾ…ಜೋ…ಜೋ….’ ಹೇಳಿ ಜೋಗುಳ ಹಾಡಿದರೆ ಎಷ್ಟು ಗೆಂಟು ತರ್ಕ ಮಾಡಿ ಕೂಗುವ ಮಕ್ಕೊ ಕೂಡ ಕಣ್ಣು ಮುಚ್ಚಿ ಮನುಗುತ್ತವು. ತೊಟ್ಲಿಂಗು, ಜೋಗುಳಕ್ಕು […]

Continue Reading

” ಶ್ರೀಗುರು ಸೇವೆಯಿಂದ ಅನನ್ಯ ಫಲ ದೊರಕುತ್ತದೆ ” ಪರಮೇಶ್ವರಿ ಭಟ್ ಮಾನಸವನ

    ” ಶ್ರೀಮಠದ ಸೇವೆಯಲ್ಲಿ ಅಪಾರ ಶ್ರದ್ದೆ ಇರುವ ಕುಟುಂಬ ನಮ್ಮದು. ಶ್ರೀಗುರುಗಳು ಮೂರು ಬಾರಿ ನಮ್ಮ ಮನೆಗೆ ಚಿತ್ತೈಸಿದ್ದಾರೆ. ಶ್ರೀಮಠದ ವಿವಿಧ ಯೋಜನೆಗಳಲ್ಲಿ ನಮ್ಮ ಮನೆಯ ಸದಸ್ಯರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ತೊಡಗಿಸಿಕೊಂಡಿದ್ದೇವೆ. ನಮ್ಮವರು ಗುರಿಕ್ಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನನ್ನ ಮಗಳು, ಸೊಸೆ ಇಬ್ಬರೂ ಮಾಸದ ಮಾತೆಯರಾಗಿದ್ದಾರೆ. ಶ್ರೀಗುರು ಸೇವೆಯಿಂದ ಅನನ್ಯ ಫಲ ದೊರಕುತ್ತದೆ ಎಂಬುದು ನಮ್ಮ ಜೀವನದ ಅನುಭವ ” ಎಂದವರು ಉಪ್ಪಿನಂಗಡಿ ಮಂಡಲ, ಬೆಳ್ಳಾರೆ ವಲಯದ ಪೆರ್ಲಂಪಾಡಿ ಸಮೀಪದ ಅಲೆಕ್ಕಾಡಿ ಮಾನಸವನದ […]

Continue Reading

ಹವಿ ಸವಿ ತೋರಣ – ೧೦ ಅಜ್ಜಿ ಹೇಳುವ ಕಥೆಗೊ

  ಅಜ್ಜಿ ಹೇಳುಗ ಮನಸ್ಸಿಂಗೆ ಬಪ್ಪದೇ ಪ್ರೀತಿ ವಾತ್ಸಲ್ಯದ ಪ್ರತಿರೂಪದ ನೆಂಪು. ಅಜ್ಜ° ಅಜ್ಜಿಯ ಪ್ರೀತಿಗೆ ಸಮವಾದ್ದು ಯೇವದು ಇಲ್ಲೆ. ಪುಳ್ಳಿಯಕ್ಕಳ ಸುತ್ತುದೆ ಕೂರ್ಸಿ ಅವು ಕಥೆ ಹೇಳುವ ಚೆಂದವ ವರ್ಣಿಸುಲೆ ಎಡಿಯ. ಮಕ್ಕೋಗೆ ಕಥೆ ಕೇಳ್ಲೆ ಎಷ್ಟು ಕೊದಿ ಇರ್ತೋ ಅಷ್ಟೇ ಪ್ರೀತಿಲಿ ಅಜ್ಜಿ, ಅಜ್ಜ° ಕಥೆ ಹೇಳ್ತವು. ಮದಲಿಂಗೆ ಅಜ್ಜಿಯ ಕಥೆ ಕೇಳದ್ದೆ ದೊಡ್ಡಾದ ಮಕ್ಕೊ ತುಂಬಾ ಕಮ್ಮಿ ಇಕ್ಕಷ್ಟೇ. ಅಜ್ಜಿಯ ಕಥೆ ಕೇಳುವ ಪುಳ್ಳಿಯಕ್ಕಳ ಸಂಭ್ರಮ ಒಂದು ಬೇರೆಯೇ. ಎಲೆ ಬಾಯಿಗೆ ಹಾಕಿಂಡು, […]

Continue Reading

” ಗೋಮಾತೆಯ ಸೇವೆ ಪುಣ್ಯಪ್ರದ ” – ಸರಸ್ವತಿ ಸುಬ್ರಹ್ಮಣ್ಯ ಹೆಗಡೆ ಕುಮಟಾ

  ” ಗೋಮಾತೆ ದೇವತೆಗೆ ಸಮಾನ. ಆಕೆಯ ಹಾಲು ಅಮೃತ ತುಲ್ಯ . ಆಕೆಯ ಸೇವೆ ಪುಣ್ಯಪ್ರದ. ಗೋಸೇವೆಯಿಂದ ಬದುಕಿನಲ್ಲಿ ನೆಮ್ಮದಿ ಶಾಂತಿ ನೆಲೆಸಿದೆ ” ಎಂದವರು ಕುಮಟಾ ಮಂಡಲ, ಕುಮಟಾ ವಲಯದ ಪೋಸ್ಟಲ್ ಕಾಲನಿ ನಿವಾಸಿಗಳಾಗಿರುವ ಸುಬ್ರಹ್ಮಣ್ಯ ಹೆಗಡೆಯವರ ಪತ್ನಿ ಸರಸ್ವತಿ ಹೆಗಡೆ   ಕಡತೋಕ ಸುಬ್ರಾಯ ಭಾಗ್ವತ್, ಮಾದೇವಿ ದಂಪತಿಗಳ ಪುತ್ರಿಯಾದ ಸರಸ್ವತಿ ಸುಬ್ರಹ್ಮಣ್ಯ ಹೆಗಡೆಯವರು ಸುಮಾರು ಎರಡು ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡವರು. ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಪತಿ ಸುಬ್ರಹ್ಮಣ್ಯ ಹೆಗಡೆ ನಿವೃತ್ತಿಯ […]

Continue Reading

ಹವಿ ಸವಿ ತೋರಣ – ೯ – ಬಾಲ್ಯದೊಟ್ಟಿಂಗೆ ಬೆಳೆಯಲಿ ಜೀವನ ಮೌಲ್ಯಂಗೊ

  ಪ್ರತಿಯೊಬ್ಬನ ಬದ್ಕಿಲ್ಲಿಯೂ ಬಾಲ್ಯ ಹೇಳಿದರೆ ವಿಶೇಶ ಮಹತ್ವದ ಕಾಲ. ಅವನ ಮುಂದಾಣ ಜೀವನವ ರೂಪಿಸುವ ಸಮಯ ಹೇಳಿ ಬೇಕಾದರೂ ಹೇಳ್ಲಕ್ಕು. ಅದಕ್ಕೆ ಬೇಕಾಗಿಯೇ ನಮ್ಮ ಹಿರಿಯರು ಸಣ್ಣದಿಪ್ಪಗಲೇ ಮಕ್ಕೊಗೆ ಒಳ್ಳೆಯ ಸಂಸ್ಕಾರ ಕೊಡೆಕು ಹೇಳುದು. ಬಾಲ್ಯ ಹೇಳಿದರೆ ಹನ್ನೆರಡು ವರ್ಷದ ಒಳಾಣ ಸಮಯ. ನಮ್ಮ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರಂಗಳ ಕೊಡ್ಲೆ ತುಂಬಾ ಒಳ್ಳೆಯ ಕಾಲ ಅದು. ಹಸಿ ಮಣ್ಣಿನ ಹಾಂಗಿದ್ದ ಮನಸ್ಸಿನ ಬೇಕಾದ ಆಕೃತಿಗೆ ತಿದ್ದಲೆ ತುಂಬ ಸುಲಭ. ಮೊದಲಾಗಿದ್ದರೆ ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಬ್ಬೆ […]

Continue Reading

ವಿಶ್ವಜನನಿ ಗೋ ಮಾತೆಯ ಸೇವೆ ನಿತ್ಯ ನಿರಂತರ – ಗಾಯತ್ರಿ ಭಾಗ್ವತ್

” ಗೋವು ನಮ್ಮ ಜೀವನಾಧಾರ. ಗೋವಿಲ್ಲದಿದ್ದರೆ ನಾವಿಲ್ಲ. ಆದರೆ ಇಂದಿನ ನಗರದ ಜೀವನದ ಒತ್ತಡದ ನಡುವೆ ಗೋ ಸೇವೆ ಮಾಡಬೇಕೆಂಬ ಅಭಿಲಾಷೆ ಇದ್ದರೂ ಅದೆಷ್ಟೋ ಮಂದಿಗೆ ಅದು ಸಾಧ್ಯವಾಗುವುದಿಲ್ಲ. ಶ್ರೀಗುರುಗಳ ಮಾತೃತ್ವಮ್ ಯೋಜನೆಯ ಮೂಲಕ ಆ ಅಭಿಲಾಷೆ ಈಗ ಕೈಗೊಡಿದೆ. ಇದರಿಂದ ಬದುಕಿನಲ್ಲಿ ತುಂಬಾ ಬದಲಾವಣೆಗಳಾಗಿವೆ. ಮನಸ್ಸಿಗೆ ನೆಮ್ಮದಿ ದೊರಕಿದೆ ” ಎನ್ನುವವರು ತೀರ್ಥಹಳ್ಳಿ ತಾಲೂಕಿನ ಗನವಳ್ಳಿ ಮನೆತನದ ಸುಳೋಗೊಡು ಜಿ ಎಲ್ ಶ್ರೀನಿವಾಸಮೂರ್ತಿ, ಮೂಕಾಂಬಿಕಾ ದಂಪತಿಗಳ ಪುತ್ರಿಯಾದ ಗಾಯತ್ರಿ ಭಾಗ್ವತ್. ಮೂಲತಃ ಕುಮಟಾ ತಾಲೂಕು ಚಂದಾವರ […]

Continue Reading

ಹವಿ – ಸವಿ ತೋರಣ ೮ ಬೆಣಚ್ಚಿನ ಹಬ್ಬ ದೀಪಾವಳಿ

  ದೀಪಾವಳಿ ಹೇಳುಗ ಮನಸ್ಸಿಂಗೆ ನೆಂಪಪ್ಪದೇ ಸಾಲು ಸಾಲು ದೀಪಂಗೊ, ಕೆಮಿಗೆ ಬಡಿವ ಪಟಾಕಿಯ ಶಬ್ದಂಗೊ, ದುರುಸು, ನಕ್ಷತ್ರ ಕಡ್ಡಿಗಳ ಸುರುಸುರು ಅಜನೆ (ಶಬ್ದ), ಬಲಿಯೇಂದ್ರನ ಪ್ರತಿಕೃತಿ, ಅದಕ್ಕೆ ಪೂಜೆ, ಗೋಪೂಜೆಯ ಸಂಭ್ರಮ, ಉದ್ದಿನ ಮೂಡೆ ಕೊಟ್ಟಿಗೆ, ಮುಳ್ಳುಸೌತೆ ಕೊಟ್ಟಿಗೆ, ಸೇಮಗೆ, ಕಾಯಾಲು, ರಸಾಯನ ಹೇಳಿ ಎಲ್ಲ ಒಟ್ಟು ಗೌಜಿಯೋ ಗೌಜಿ. ಅದಕ್ಕೇ ಆಗಿಕ್ಕು ಬೇರೆ ಎಷ್ಟು ಹಬ್ಬಂಗೋ ದೀಪಾವಳಿಗೆ ಮಾಂತ್ರ ಹಬ್ಬ ಹೇಳುದು. ಹಾಂಗಾಗಿಯೇ ಬೇರೆ ಹಬ್ಬಗಳಿಂದ ಹೆಚ್ಚು ಮಹತ್ವ ಈ ದೀಪಾವಳಿ ಹಬ್ಬಕ್ಕೆ. ಮಳೆಕಾಲ […]

Continue Reading

ಗೋ ಸೇವೆಯಿಂದ ದೊರಕುವ ನೆಮ್ಮದಿ ಅನುಪಮ – ಶಾರದಾ ಶ್ಯಾಮಪ್ರಸಾದ್

  ಗೋ ಸೇವೆಯಿಂದ, ಗೋ ಉತ್ಪನ್ನಗಳ ಬಳಕೆಯಿಂದ ನಾವು ಆರೋಗ್ಯಪೂರ್ಣ ಜೀವನವನ್ನು ಪಡೆಯಲು ಸಾಧ್ಯವಿದೆ. ಬಾಲ್ಯದಿಂದಲೇ ಗೋವುಗಳ ಒಡನಾಟದಲ್ಲಿ ಬೆಳೆದವಳು ನಾನು. ಈ ಕಾರಣಕ್ಕಾಗಿ ಗೋಮಾತೆ ಎಂದರೆ ವಿಶೇಷ ಮಮತೆ. ಈ ನಗರದ ಜೀವನದಲ್ಲಿ ಗೋವುಗಳನ್ನು ಸಾಕಲು ಎಲ್ಲರಿಗೂ ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಗೋಶಾಲೆಗಳಿಗೆ ಸಹಕಾರ ನೀಡುವ ಮೂಲಕ ಗೋಸೇವೆಯ ಪುಣ್ಯ ಪಡೆಯಲು ಸಾಧ್ಯವಿದೆ ” ಎನ್ನುವವರು ಕಾಸರಗೋಡು, ಏಳ್ಕಾನ ಮೂಲದ ಪ್ರಸ್ತುತ ಬೆಂಗಳೂರು ಉತ್ತರ ಮಂಡಲ, ಸರ್ವಜ್ಞ ವಲಯ ನಿವಾಸಿಗಳಾಗಿರುವ ಶಾರದಾ ಶ್ಯಾಮಪ್ರಸಾದ್ ಮೂಲತಃ ಕಾಸರಗೋಡು […]

Continue Reading

ಹವಿ – ಸವಿ ತೋರಣ ೭ – ದೀಪ – ಜ್ಞಾನದ ರೂಪ

  ದೀಪಕ್ಕೂ ನಮಗೂ ತುಂಬಾ ಹತ್ರಾಣ ಸಂಬಂಧ. ಭಾರತೀಯ ಸಂಪ್ರದಾಯಲ್ಲಿ ದೀಪಕ್ಕೆ ಸುರುವಾಣ ಸ್ಥಾನ. ನಮ್ಮ ದೇಶದ ಹೆಸರಿನ ಸುರುವಾಣ ಅಕ್ಷರವೇ ಭಾ. ‘ ಭಾ ‘ ಹೇಳಿದರೆ ಬೆಣಚ್ಚು, ದೀಪ ಹೇಳುವ ಅರ್ಥ. ಅದು ಜ್ಞಾನದ ರೂಪ. ದೀಪ ನಮ್ಮ ಬದುಕಿನ ಇಹ – ಪರ ಎರಡನ್ನೂ ಪ್ರತಿನಿಧಿಸುತ್ತು. ಸುಮಂಗಲೆಯರಾದ ಹೆಮ್ಮಕ್ಕೊ ಅಗ್ನಿ ಸ್ವರೂಪಿಣಿಯರು ಹೇಳಿ ಹಿರಿಯರು ಹೇಳುಗು. ಪ್ರತಿ ಮನೆಲೂ ಅಗ್ನಿಯ ಆರಾಧನೆಯಪ್ಪದು ಹೆಮ್ಮಕ್ಕಳ ಮೂಲಕವೇ.   ಹೆಚ್ಚಿನ ಮನೆಗಳಲ್ಲೂ ದಿನ ಸುರುವಪ್ಪದೇ ಆ […]

Continue Reading

ಗೋಮಾತೆಯ ಸೇವೆಯಲ್ಲಿ ಪೂರ್ಣತೆ ಕಂಡ ಶ್ರೀಮಾತೆ – ದೇವಕಿ ಕೂಡೂರು

ಮನುಕುಲದ ಉಳಿವಿನ ಮೂಲವೆನಿಸಿದ ವಿಶ್ವ ಜನನಿ ಗೋಮಾತೆಯ ಸಂರಕ್ಷಣೆಯ ಹೊಣೆಯನ್ನು ಸ್ವೀಕರಿಸಿ, ತಮ್ಮ ಮನೆಯಲ್ಲೂ ಹತ್ತಾರು ದೇಶಿಯ ಹಸುಗಳನ್ನು ಸಾಕುವ ಜೊತೆಗೆ ಶ್ರೀಮಠದ ಮಾತೃತ್ವಮ್ ಯೋಜನೆಯಲ್ಲಿಯೂ ತೊಡಗಿಸಿಕೊಂಡು, ಎರಡು ಹಸುಗಳ ಗುರಿ ತಲುಪಿದ ಮಾಸದ ಮಾತೆ ದೇವಕಿ ಕೂಡೂರು ಉಪ್ಪಿನಂಗಡಿ ಮಂಡಲ, ಕಡಬ ವಲಯದ ಬಲ್ಯ ನಿವಾಸಿಗಳಾಗಿರುವ ‘ ಶ್ರೀಪೂರ್ಣ ‘ ಆಯುರ್ವೇದ ಚಿಕಿತ್ಸಾಲಯದ ಡಾಕ್ಟರ್ ಸುರೇಶ್ ಕುಮಾರ್ ಕೂಡೂರು ಅವರ ಪತ್ನಿಯಾದ ದೇವಕಿ ಅವರು, ಕೂಳೂರು ಗಣಪತಿ ಭಟ್ ಮತ್ತು ವೆಂಕಟೇಶ್ವರಿ ದಂಪತಿಗಳ ಪುತ್ರಿ. ” […]

Continue Reading

ಭತ್ತದ ಭಕ್ತಿ ಮೂಲಕ ಶ್ರೀರಾಮನ ಸೇವೆ

ಉಪ್ಪಿನಂಗಡಿ: ಉಜಿರೆ ವಲಯದ ನಡ ಘಟಕ ಗುರಿಕ್ಕಾರರಾದ ಬೈಪದವು ರಾಮಕೃಷ್ಣ ಭಟ್ಟರ ಶ್ರೀರಾಮ ನಿಲಯ, ಕುಕ್ಕಿನ ಕಟ್ಟೆ ಮನೆಗೆ 12 -06 -2016 ರಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಚಿತ್ತೈಸಿದರು. ಶ್ರೀಗುರುಗಳ ಯೋಜನೆಗಳಲ್ಲಿ ಒಂದಾದ ‘ ಭತ್ತದ ಭಕ್ತಿ ‘ ಎಂಬ ಯೋಜನೆಯಡಿಯಲ್ಲಿ ಪ್ರತಿ ಮನೆಯಲ್ಲಿ ಬಿತ್ತನೆಗೆ ಭತ್ತ ವಿತರಿಸಿದ ಸಂದರ್ಭದಲ್ಲಿ ಕುಕ್ಕಿನಕಟ್ಟೆ ಮನೆಯ ಅಂಗಳದಲ್ಲಿನ ಗದ್ದೆಗೆ ಶ್ರೀಗುರುಗಳ ದಿವ್ಯ ಹಸ್ತದಿಂದ ಬಿತ್ತನಾಕಾರ್ಯ ಮಾಡಿದರು. ಈ ಗದ್ದೆಯಲ್ಲಿ ಭತ್ತದ ಬೆಳೆಗೆ ಯಾವುದೇ […]

Continue Reading

ಹವಿ – ಸವಿ – ತೋರಣ – ೬ – ಮನೆ ತುಂಬಿಸುವ ಹಬ್ಬ ಹೊಸ್ತು

ನಮ್ಮ ಯಾವುದೇ ಆಚರಣೆಗಳ ಹಿಂದೆ ಅದರದ್ದೇ ಆದ ಕೆಲವು ವಿಶೇಷತೆಗೊ ಇದ್ದು. ಉಂಬ ಅಶನವನ್ನು, ಕುಡಿವ ನೀರನ್ನೂ ದೇವರು ಹೇಳಿ ಪೂಜಿಸುವ ಸಂಪ್ರದಾಯ ನಮ್ಮದು. ಹಾಂಗಾಗಿಯೇ ನಮ್ಮ ಪ್ರತಿಯೊಂದು ಆಚರಣೆಗೊಕ್ಕೂ ಒಂದೊಂದು ಮಹತ್ವ ಇರ್ತು. ಪ್ರಕೃತಿಲಿ ಕಾಂಬಲೆ ಸಿಕ್ಕುವ ಸೆಸಿ, ಮರ, ಬಳ್ಳಿಗೊಕ್ಕು ನಮ್ಮ ಕೆಲವು ಸಾಂಪ್ರದಾಯಿಕ ಆಚರಣೆಗಳಲ್ಲಿ ಪಾಲುಕೊಡ್ತು. ಹೆರಾಂಗೆ ಕಾಂಬಗ ಕಾಡು, ಸೊಪ್ಪು, ಬಲ್ಲೆ, ಬಳ್ಳಿ ಹೇಳಿ ನಾವು ಗ್ರೇಶಿದರೂ, ನಮ್ಮ ಹಿರಿಯರು ಪ್ರತಿಯೊಂದರಲ್ಲಿಯೂ ವಿಶೇಷತೆ ಗುರುತಿಸಿದ್ದವು. . ಮದಲಿಂಗೆ ಕೃಷಿಯೇ ಜೀವನಾಧಾರ ಆಗಿದ್ದ […]

Continue Reading

” ಸತ್ಕರ್ಮದ ಸಂಕಲ್ಪಕ್ಕೆ ಪ್ರೇರಣೆ ನನ್ನಮ್ಮ ” : ರೂಪಶ್ರೀ ಸುರೇಶ್ ಕೋಡಿಮೂಲೆ

  ಹಸುಗಳು ಸ್ವತಂತ್ರವಾಗಿ ವಿಹರಿಸುವ ಪುಟ್ಟ ಗೋಸ್ವರ್ಗದಂತಹ ವಾತಾವರಣವನ್ನು ತಮ್ಮ ಮನೆಯಲ್ಲೇ ನಿರ್ಮಿಸಿದ ಅಪ್ರತಿಮ ಗೋಪ್ರೇಮಿಗಳು ಹಾಗೂ ಕೃಷಿಕಾರ್ಯಗಳಿಗಾಗಿ ರಾಜ್ಯ, ಜಿಲ್ಲಾ ಮಟ್ಟಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಗಳಿಸಿರುವ ಕಲ್ಲಕಟ್ಟ ವಿಜಯಲಕ್ಷ್ಮಿ, ನಾರಾಯಣ ಭಟ್ ದಂಪತಿಗಳ ಪುತ್ರಿಯಾದ ರೂಪಶ್ರೀ ಅವರಿಗೆ ಸಹಜವಾಗಿಯೇ ಗೋವುಗಳ ಮೇಲೆ ತುಂಬಾ ಮಮತೆ. ” ಅಮ್ಮ ಮಾಡುವ ಶ್ರೀಮಠದ ಸೇವೆ, ಗೋಸೇವೆಗಳನ್ನು ನೋಡುತ್ತಾ ಬೆಳೆದವಳು ನಾನು. ಹಸುಗಳ ಒಡನಾಟದಲ್ಲಿ ಬೆಳೆದ ನನಗೆ ಧಾರ್ಮಿಕ ವಿಚಾರಗಳ ಸೂಕ್ತ ಬೋಧನೆಯನ್ನು ನೀಡಿ ಎಲ್ಲಾ ಸತ್ಕರ್ಮಗಳ ಸಂಕಲ್ಪಕ್ಕೆ ಪ್ರೇರಣೆಯಾದವರು […]

Continue Reading

ಹವಿ – ಸವಿ ತೋರಣ -೫ – ಪುಸ್ತಕಪೂಜೆಯ ಸಂಭ್ರಮ

  ನವರಾತ್ರಿಯ ಅಕೇರಿಯಾಣ ದಿನಂಗೊ ಇದು. ಒಂಭತ್ತು ರೂಪಂಗಳಲ್ಲಿ ದೇವಿಯ ಉಪಾಸನೆ ಮಾಡುವ ಹಬ್ಬ ಈ ನವರಾತ್ರಿ. ಮನೆಮನೆಗಳಲ್ಲಿ ಪುಸ್ತಕ ಪೂಜೆಯ ಸಂಭ್ರಮವೂ ಸುರುವಾಗಿ ಪುಸ್ತಕಪೂಜೆಯನ್ನು ಸುರು ಮಾಡಿ ಆಯಿದು. ದೇವಿ ಹೇಳಿದರೆ ನಮ್ಮೆಲ್ಲರ ಅಬ್ಬೆಯೇ. ಹುಟ್ಟಿನಿಂದಲೇ ಬಪ್ಪ ಸಂಬಂಧ ಅಬ್ಬೆದು. ಅಬ್ಬೆಯ ಹಾಂಗೆ ಕೊಂಗಾಟಲ್ಲಿ ನಮ್ಮ ನೋಡ್ಲೆ ಆರಿಂಗೆಡಿಗಲ್ಲದಾ. ಅದಕ್ಕೇ ಅಬ್ಬೆ ಹೇಳುವ ಪದಕ್ಕೆ ಅಷ್ಟು ಮಹತ್ವ. ಆದರೆ ಈಗ ಅಬ್ಬೆ ಹೇಳುವ ಶಬ್ದ ಪ್ರಯೋಗವೇ ಇಲ್ಲದ್ದಾಂಗಾಯಿದು. ಬಹುಶಃ ಅಬ್ಬೆಗೆ ಕೊಡುವ ಗೌರವ, ಪ್ರೀತಿಯೂ ಕಮ್ಮಿಯಾಯಿದೋ […]

Continue Reading

ಶ್ರೀಸಂಸ್ಥಾನದವರ ಅನುಗ್ರಹದ ನೆರಳಿನಲ್ಲಿರುವುದು ಪೂರ್ವಜನ್ಮದ ಸುಕೃತ : ಅನಘಾ ಹೆಗಡೆ, ತುಂಬೆಮನೆ

ಶ್ರೀಮಠದ ಮಹತ್ವಪೂರ್ಣ ಯೋಜನೆಗಳಲ್ಲೊಂದಾದ ‘ ಮಾತೃತ್ವಮ್ ‘ ಮೂಲಕ ಗೋಮಾತೆಯ ಸೇವೆಯಲ್ಲಿ ನಿರತರಾಗಿರುವ ಮಾತೆಯರು ನೂರಾರು. ಶ್ರೀಮಠದ ಸಂಪರ್ಕದಿಂದ, ಸ್ವಯಂ ಪ್ರೇರಣೆಯಿಂದ ಅನೇಕ ಮಂದಿ ಮಾತೆಯರು ಗೋಸೇವೆಗೆ ಮುಂದೆ ಬಂದರೆ , ಹಿರಿಯರ ಮಾರ್ಗದರ್ಶನದ ಮೂಲಕ ಮಾತೃತ್ವಮ್ ಸೇವೆಯಲ್ಲಿ ಕೈಜೋಡಿಸುವ ಮಾತೆಯರು ಅನೇಕ. ಅನಘಾ ಹೆಗಡೆ ತುಂಬೆಮನೆ ಇವರಲ್ಲಿ ಒಬ್ಬರು. ” ಅಜ್ಜ ಆರ್ ಎಸ್ ಹೆಗಡೆ ಹರಗಿಯವರ ಮೂಲಕ ನನಗೆ ಶ್ರೀಮಠದ ಸಂಪರ್ಕ ದೊರಕಿತು. ಅಪ್ಪ ಅಮ್ಮನ ಪ್ರೋತ್ಸಾಹ ನನಗೆ ಪ್ರೇರಣೆಯಾಯಿತು. ಎಳವೆಯಿಂದಲೇ ಶ್ರೀಮಠಕ್ಕೆ ಹೋಗುತ್ತಿದ್ದೇನೆ. […]

Continue Reading

ಹವಿ – ಸವಿ ತೋರಣ – ೪ – ಹೂಗು ಕೊಯ್ವ ಭಾವಪೂಜೆ

  ಪಿತೃಪಕ್ಷ ಮುಗುದು ನವರಾತ್ರಿಯ ಗೌಜಿಯೂ ಸುರುವಾತು ನೋಡಿ..! ಮನೆಮನೆಗಳಲ್ಲಿಯೂ ನವರಾತ್ರಿ ಪೂಜೆಯ ಸಂಭ್ರಮದ ತಯಾರಿ ಆವ್ತಾ ಇಕ್ಕು. ಪೂಜೆ ಹೇಳುಗ ನೆಂಪಪ್ಪದು ಹೂಗನ್ನೇ. ಹಾಂಗಾಗಿ ಈ ಸರ್ತಿ ಹೂಗು ಕೊಯ್ವ ವಿಶಯವನ್ನೇ ಬರವಲೆ ತೆಕ್ಕೊಂಡೆ. ಪೂಜೆಗೆ ಹೂಗು ಕೊಯ್ವದರ್ಲಿ ಎಂತ ವಿಶೇಶಯಿದ್ದೂಳಿ ಗ್ರೇಶೆಡಿ. ಅದರ್ಲೂ ಒಂದಿಷ್ಟು ವಿಶಯಂಗೊ ಇದ್ದು. ನಿತ್ಯಪೂಜೆ ಇಪ್ಪ ಮನೆಯ ಹೆಮ್ಮಕ್ಕೊಗೆ ಅದರ ಅನುಭವಯಿದ್ದು. ಅದೂದೆ ಒಂದು ರೀತಿಯ ಪೂಜೆಯಷ್ಟೇ ಶ್ರದ್ಧೆಲಿ ಮಾಡುವ ಕೆಲಸ. ಉದಿಯಪ್ಪಗ ಪೂಜೆಯಿಪ್ಪ ಮನೆಗಳಲ್ಲಿ ಹೆಮ್ಮಕ್ಕೊಗೆ ಗಡಿಬಿಡಿ ಅಪ್ಪದೇ […]

Continue Reading

ಹವಿ – ಸವಿ ತೋರಣ – ೩ – ದಧಿಯ ಮಥಿಸುವ ಸಮಯ

  ನಮ್ಮ ಹಿರಿಯರು ನಮಗೆ ದಿನಚರಿ ಹೇಂಗಿದ್ದರೆ ಒಳ್ಳೆದು ಹೇಳಿ ಒಂದಿಷ್ಟು ಚೆಂದದ ಪಾಠ ಕಲಿಶಿದ್ದವು. ಅದರ ಈಗಾಣವಕ್ಕೆ ಅನುಸರಿಸಲೆ ಬಂಙವೇ ಆವ್ತು ಹೇಳಿ ಕಂಡರೂ ಅದೆಂತರಾಳಿ ನೋಡಿಂಡು ಬಪ್ಪೊ°. ಒಂದೊಂದು ಮನೆಯ ಕ್ರಮಲ್ಲಿ ರಜ ರಜಾ ವೆತ್ಯಾಸಂಗೊ ಇದ್ದರೂ ಮನೆಯ ಹೆರಿಯರು ಹೇಳುವ ಪಾಠ ಸಾಧಾರಣ ಒಂದೇ ಆಗಿಕ್ಕು. ಹಾಸಿಗೆಂದ ಏಳುಗಳೇ ದೇವರ ಸ್ಮರಣೆ ಮಾಡಿ ಎದ್ದಿಕ್ಕಿ , ಮತ್ತೆ ಮಂಗಳಕರವಾದ ಸುವಸ್ತುಗಳ ನೋಡೆಕು ಹೇಳಿಯೇ ಮದಲಾಣವು ಹೇಳುದು. ಮಂಗಲಕರ ಹೇಳಿದರೆ ಎಂತರ ಗೊಂತಿದ್ದನ್ನೇ ? […]

Continue Reading

ಪ್ರಯೋಗಸಮವೇತ ಅರ್ಥಸ್ಮಾರಕಾಃ ಮಂತ್ರಾಃ

ವೇದವು ಕೈದೋರುವ ಪರಮಪುರುಷನ ಆರಾಧನೆಗಾಗಿ ಸಂಚಾರವನ್ನು ಬಿಟ್ಟು ಯತಿಗಳು ಒಂದೆಡೆ ನೆಲೆನಿಂತು, ಮನಸ್ಸನ್ನು ಭಗವಂತನಲ್ಲಿಯೇ ನೆಲೆನಿಲ್ಲಿಸಿ ಆತ್ಮಕಲ್ಯಾಣವನ್ನು ಸಾಧಿಸುವ, ಶಿಷ್ಯರನ್ನು ಆ ದಿಕ್ಕಿನಲ್ಲಿ ಬರುವಂತೆ ಅನುಗ್ರಹಿಸುವ ಪರಮಪವಿತ್ರವಾದ ಕಾಲ ಚಾತುರ್ಮಾಸ್ಯ ಕಾಲ. ಪರಮಪೂಜ್ಯ ಶ್ರೀಸಂಸ್ಥಾನದವರು ಹೀಗೆ ಚಾತುರ್ಮಾಸ್ಯವನ್ನು ಸಂಕಲ್ಪಿಸಿ, ವೇದವೇದ್ಯನ ಆರಾಧನೆಯಲ್ಲಿ ನಿರತರಾಗಿರುವಾಗ, ಆ ವೇದಪುರುಷನ ಆಶಯವೇನು, ಅವನ ಶಾಸನವೇನು ಎಂದು ಪೂರ್ಣವಾಗಿ ತಿಳಿಸುವ ಅನುಪಮ ಸಾಹಿತ್ಯವಾದ ವೇದಮಂತ್ರಗಳ ಪಾರಾಯಣ, ಅನುಸಂಧಾನ, ಯಾಗಗಳು ನಡೆಯುವುದು ಒಂದು ರೀತಿಯಲ್ಲಿ ಗುರುವಿನ ಹೆಜ್ಜೆಗೆ ಗೆಜ್ಜೆಯಾದಂತೆ. ಹಾಗೆ ಗುರುವಿನ ಜೊತೆ ಸಾಗಲು […]

Continue Reading

ಹವಿ – ಸವಿ ತೋರಣ – ಉದಯಕಾಲದೊಳ್ ಎದ್ದು – ೨

  ‘ ಉದಯ ಕಾಲದೊಳ್ ಎದ್ದು ಗೋಪಿಯು ದಧಿಯ ಮಥಿಸುವೆನೆಂಬ ಸಮಯದಿ….’ ಅಪ್ಪು.. ಅದು ಅಜ್ಜಿದೆ ದೆನಿ. ಉದೆಕಾಲಕ್ಕೆ ಎದ್ದು ಅಜ್ಜಿ ಮೊಸರು ಕಡವ ಗೌಜಿ.. ಮನೆ ಹೆಮ್ಮಕ್ಕೊ ಪ್ರತಿ ದಿನವೂ ಬೇಗ ಏಳುವ ಸಂಪ್ರದಾಯ ನಮ್ಮಲ್ಲಿ ರೂಢಿಗೆ ಬಯಿಂದು. ಹೆಮ್ಮಕ್ಕೊ ಮಾಂತ್ರಲ್ಲ, ಇದು ಎಲ್ಲರಿಂಗೂ ಅನ್ವಯ ಆವ್ತು. ‘ ಬ್ರಾಹ್ಮಿ ಮುಹೂರ್ತದಲ್ಲಿ ಭಾಗ್ಯಲಕ್ಷ್ಮಿ ಬಂದು ನಮ್ಮ ಏಳ್ಸುತ್ತಾಡ. ಅಜ್ಜಿ ಯೇವಗಲೂ ಹೇಳುವ ಮಾತಿದು. ಆ ಹೊತ್ತಿಂಗೆ ನಾವು ಎದ್ದರೆ ನವಗೆ ಬದುಕಿಲ್ಲಿ ಎಲ್ಲಾ ಸೌಭಾಗ್ಯಂಗಳು ಸಿಕ್ಕುತ್ತಡ. […]

Continue Reading