ಬದುಕಿನ ಪಥ ಬದಲಾಗಿದ್ದು ಶ್ರೀಗುರುಗಳ ಮಾರ್ಗದರ್ಶನದಿಂದ ” : ಗೀತಾ ಮಂಜುನಾಥ ಹೆಗಡೆ ,ಕೆರೆಮನೆ

  ” ಸುಮಾರು ಹದಿನೇಳು ವರ್ಷಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಆಧುನಿಕ ಬದುಕಿನಿಂದ ಧಾರ್ಮಿಕ, ಸೌಹಾರ್ದಯುತ ನೆಮ್ಮದಿಯ ಬದುಕಿನ ಪಥ ತೆರೆದುಕೊಂಡಿದ್ದು ಶ್ರೀಗುರು ಸೇವೆಯಿಂದ. ಜೀವನದ ಶೈಲಿ, ರೀತಿ ನೀತಿಗಳು,ಸಂಸ್ಕಾರಗಳು ಸಂಪೂರ್ಣ ಬದಲಾಗಿದ್ದು ಶ್ರೀಗುರುಗಳ ಆಶೀರ್ವಚನಗಳ ಪ್ರೇರಣೆಯಿಂದ ” ಎಂದು ಶ್ರದ್ಧೆಯಿಂದ ನುಡಿಯುವವರು ಹೊನ್ನಾವರ ಮಂಡಲ ಅಪ್ಸರಕೊಂಡ ವಲಯದ ಗುಣವಂತೆ ಕೆರೆಮನೆಯ ಮಂಜುನಾಥ ಹೆಗಡೆಯವರ ಪತ್ನಿ ಗೀತಾ ಎಂ.ಹೆಗಡೆ. ಸಿದ್ಧಾಪುರ ತಾಲೂಕಿನ ಕ್ಯಾದಗಿ ಗಜಾನನ ಹೆಗಡೆ, ಸೀತಮ್ಮ ದಂಪತಿಗಳ ಪುತ್ರಿಯಾದ ಗೀತಾ ಸ್ವಯಂ ಇಚ್ಛೆಯಿಂದ ಮಾಸದ ಮಾತೆಯಾಗಿ […]

Continue Reading

ಕಿರಿಯ ಚಿತ್ರಕಲಾವಿದ

  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಯ ತಾಲೂಕಿನ ಪ್ರಶಾಂತ ಮತ್ತು ಸೌಮ್ಯ ಅವರ ಸುಪುತ್ರ ಸಾತ್ವಿಕ ಗಣೇಶ್ ಉಜಿರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿರೆ ಯಲ್ಲಿ 7 ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಚಿತ್ರಕಲೆಗೆ ಯಾವುದೇ ಗುರುವಿಲ್ಲದೆ ತಾನೇ ಸ್ವಯಂ ಅಭ್ಯಾಸ ಮಾಡಿ ಚಿತ್ರಕಲೆಯಲ್ಲಿ ನಿಪುಣನಾಗಿದ್ದಾರೆ. ಕೊರೋನಾ ಮಹಾಮಾರಿ ವಿಶ್ವವನ್ನು ವ್ಯಾಪಿಸಿ ಲಾಕ್ ಡೌನ್ ನಿಂದ ಚಟುವಟಿಕೆಗಳನ್ನು ನಡೆಸಲು ಅಸಾಧ್ಯವಾದಾಗ ಆ ಸಮಯದ ಸದುಪಯೋಗ ಪಡಿಸಿಕೊಂಡರು ಸಾತ್ವಿಕ್ ಗಣೇಶ. ಈ ಒಂದು ವರ್ಷದ ಅವಧಿಯಲ್ಲಿ […]

Continue Reading

ಗೋಮಾತೆಯ ಸೇವೆಯಲ್ಲಿ ಭಾಗಿಯಾಗುವುದೇ ಅವಿಸ್ಮರಣೀಯ ಅನುಭವ ” : ವನಮಾಲಾ ಬಿ. ಭಟ್, ಆರ್ಲಪದವು

” ನಮ್ಮ ದೇಶದ ಸಂಸ್ಕೃತಿಯ ಪ್ರತೀಕ ಗೋಮಾತೆ, ಅವಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ ‘ ಎಂಬ ಶ್ರೀಗುರುಗಳ ಮಾತುಗಳ ಪ್ರೇರಣೆಯಿಂದ ಮಾಸದ ಮಾತೆಯಾಗಿ ಸೇವೆ ಮಾಡಲು ಮುಂದೆ ಬಂದೆ.‌ ಗೋಮಾತೆಯ ಸೇವೆ ನಿಜಕ್ಕೂ ಅವಿಸ್ಮರಣೀಯ ಅನುಭವ ನೀಡಿದೆ ” ಎನ್ನುವವರು ಉಪ್ಪಿನಂಗಡಿ ಮಂಡಲದ ಬೆಟ್ಟಂಪಾಡಿ ವಲಯದ ಆರ್ಲಪದವು ನಿವಾಸಿಗಳಾಗಿರುವ ಬಾಲಕೃಷ್ಣ ಭಟ್ ಇವರ ಪತ್ನಿ ವನಮಾಲಾ ಭಟ್ ಅವರು. ವಾದ್ಯಕೋಡಿ ಗಣಪತಿ ಭಟ್, ಶಂಕರಿ ಅಮ್ಮ ದಂಪತಿಗಳ ಪುತ್ರಿಯಾದ ವನಮಾಲಾ ಅವರು ಮಾತೃತ್ವಮ್ ಯೋಜನೆಯ ಮೂಲಕ ಒಂದು […]

Continue Reading

ಚದುರಂಗ ಚತುರೆ ಚಿತ್ಕಲ ವಿ ಭಟ್ಟ

  ದ್ವಿತೀಯ ಪಿ. ಯು. ಸಿ ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 588 ಅಂಕ ಪಡೆದು ರಾಜ್ಯ ಕ್ಕೆ 9 ನೇ ಸ್ಥಾನ ಹಾಗು ಎಸ್. ಎಸ್ ಎಲ್ ಸಿ ಯಲ್ಲಿ 93% ಪಡೆದ ಕುಮಾರಿ ಚಿತ್ಕಲ ವಿ. ಭಟ್ಟ ಆಟಪಾಠಗಳೆರಡರಲ್ಲೂ ಸೈ ಎನಿಸಿಕೊಂಡ ಸಾಧಕಿ. ಇವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಿ ಜಿ ವೆಂಕಟೇಶ್ ಮತ್ತು ಛಾಯಾ ಅವರ ಸುಪುತ್ರಿ ಪ್ರಸ್ತುತ ಪೂರ್ಣಪ್ರಜ್ಞ ಕಾಲೇಜು ಉಡುಪಿ ಯಲ್ಲಿ ಪ್ರಥಮ ಬಿಕಾಮ್ ವ್ಯಾಸಂಗ ಮಾಡುತ್ತಿದ್ದಾರೆ. ತನ್ನ […]

Continue Reading

ಶ್ರೀಗುರು ಚರಣ ಸೇವೆಯ ಕುಸುಮಗಳು : ಕಮಲಾ ಸುಬ್ರಹ್ಮಣ್ಯ ಹೆಗಡೆ

  ಒಂದು ಮನೆಯ ಪ್ರತಿಯೊಬ್ಬ ಸದಸ್ಯನೂ ಶ್ರೀಗುರುಗಳ ಸೇವೆಯಲ್ಲಿ ತೊಡಗಿಸಿಕೊಂಡರೆ ಆ ಮನೆಯವರನ್ನೆಲ್ಲ ‘ ಶ್ರೀಗುರು ಸೇವೆಯ ಚರಣ ಕುಸುಮಗಳು ‘ ಎಂದು ಹೇಳಬಹುದಲ್ಲವೇ ? ಅಂತಹ ಒಂದು ಕುಟುಂಬ ಹೊನ್ನಾವರ ಮಂಡಲದ ಹೊನ್ನಾವರ ವಲಯದ ನೀಲ್ಕೋಡು ಗುಬ್ಬಿಮನೆಯ ಸುಬ್ರಹ್ಮಣ್ಯ ಹೆಗಡೆ ಅವರ ಪತ್ನಿ ಕಮಲಾ ಎಸ್. ಹೆಗಡೆ ಅವರದ್ದು. ” ನಮ್ಮ ಸೇವೆಯ ಬಗ್ಗೆ ಹೇಳಲೇನಿದೆ..? ಶ್ರೀಗುರುಗಳ ಅನುಗ್ರಹ, ಆಶೀರ್ವಾದದಿಂದ ನಾವೆಲ್ಲ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳುವ ಪುಣ್ಯ ದೊರಕಿದೆ. ‌ಇದಕ್ಕಿಂತ ಮಿಗಿಲಾದ ಸೌಭಾಗ್ಯ ಇನ್ನೇನಿದೆ ” […]

Continue Reading

ಭರತನಾಟ್ಯದಲ್ಲಿ ಯಶಸ್ಸಿನ ಮೆಟ್ಟಿಲೇರುತ್ತಿರುವ ಯಶಸ್ ಭಟ್

ಭರತನಾಟ್ಯವು ಕರ್ನಾಟಕದ ಜನಪ್ರಿಯ ಶಾಸ್ತ್ರೀಯ ನೃತ್ಯ. ಅಂತಹ ನೃತ್ಯಕಲೆಯಲ್ಲಿ ಗಮನಸೆಳೆಯುತ್ತಿರುವ ಯೆಶಸ್ ಭಟ್ಟ ವೈ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಿರ್ಮಲ್ ಭಟ್ ಮತ್ತು ರೇಷ್ಮಾ ನಿರ್ಮಲ್ ಭಟ್ ಅವರ ಸುಪುತ್ರ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ಮಾತಿದೆ. ಇವರ ತಾಯಿ ವಿದುಷಿ ಶ್ರೀಮತಿ ನಿರ್ಮಲ್ ಭಟ್ ರವರೇ ಯೆಶಸ್ ಭಟ್ ವೈ ರವರ ಭರತನಾಟ್ಯದ ಗುರು. ಮಂಗಳೂರು ಮ್ಯೂಸಿಕ್ ಮತ್ತು ಕಲ್ಚರಲ್ ಅಸೋಸಿಯೇಷನ್ (ರಿ) 2011ರಲ್ಲಿ ನಡೆಸಿದ “ಕಲಾಸಂಗಮ” ನಾಟ್ಯಂಜಲಿ […]

Continue Reading

ಗೋಮಾತೆಯ ಸೇವೆಗೆ ಸರಳ ಹಾದಿ ; ಮಾತೃತ್ವಮ್ :ಸುಜಾತ ಮೈಸೂರು

  ” ಶ್ರೀಗುರುಸೇವೆಯಲ್ಲಿ, ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಂಡಾಗ ದೊರಕುವ ನೆಮ್ಮದಿ, ಸಂತಸ ಬಣ್ಣನೆಗೆ ಸಿಗುವಂಥದ್ದಲ್ಲ. ಶ್ರೀಗುರು ಕೃಪೆಯೂ ಹಾಗೆಯೇ, ಬದುಕಿನಲ್ಲಿ ಅನೇಕ ಸಮಸ್ಯೆಗಳು ತಲೆದೋರಿದಾಗ ಸುಜ್ಞಾನವೆಂಬ ಬೆಳಕನ್ನು ನೀಡಿ ಆ ತೊಂದರೆಗಳನ್ನು ನಿವಾರಿಸುವುದು ಶ್ರೀಗುರುಗಳ ಅನುಗ್ರಹ. ಅದನ್ನು ಮಾತಿನ ಮೂಲಕವಾಗಲಿ, ಅಕ್ಷರಗಳ ಮೂಲಕವಾಗಲಿ ವಿವರಿಸಲು ಸಾಧ್ಯವಿಲ್ಲ. ಶ್ರೀಗುರುಗಳ ಮಹತ್ವದ ಯೋಜನೆಯಾದ ಮಾತೃತ್ವಮ್ ಮಾತೆಯರಿಗೆ ಮನೆಯಲ್ಲಿದ್ದುಕೊಂಡೇ ಗೋಸೇವೆ ಮಾಡಲು ದೊರಕಿದ ಅತ್ಯಂತ ಸುಲಭ ಹಾಗೂ ಸರಳವಾದ ಹಾದಿ . ಯಾರಿಗೂ ಯಾವುದೇ ಒತ್ತಡವಿಲ್ಲದೆ ಮಾಡಬಹುದಾದ ಸೇವೆಯಿದು ” ಎನ್ನುವವರು […]

Continue Reading

ಸಾಧನೆಯ ಹಾದಿಯತ್ತ ಚಿನ್ಮಯಿ ವಿ. ಭಟ್ಟ

  ಎನ್. ಸಿ. ಸಿ (ನೇವಿ )ನಡೆಸಿದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದ ಚಿನ್ಮಯಿ ವಿ. ಭಟ್ಟ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಿ. ಜಿ ವೆಂಕಟೇಶ್ ಮತ್ತು ಛಾಯಾ ದಂಪತಿಯ ಸುಪುತ್ರಿ. 2010 ರಲ್ಲಿ ರಾಜ್ಯ ಮಟ್ಟದ ಅಬಕಾಸ್ ನಲ್ಲಿ ಪ್ರಥಮ ಸ್ಥಾನ, ರಾಷ್ಟ್ರ ಮಟ್ಟದಲ್ಲೂ ಪ್ರಥಮ ಸ್ಥಾನ ಗಳಿಸಿದ ಇವರು ಹೀಗೆ ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕುತ್ತ ಬಂದಿದ್ದಾರೆ. ನಂತರ 2012 -ರಾಜ್ಯ ಮಟ್ಟದ science exhibition […]

Continue Reading

ಬದುಕಿನ ಸತ್ಯಪಥದ ದರ್ಶನ ಶ್ರೀಗುರು ಸೇವೆಯಿಂದ : ಸತ್ಯಶೋಭಾ ಕೈಲಾರು

” ಕತ್ತಲು ತುಂಬಿದ ಕೋಣೆಯನ್ನು ಬೆಳಗಲು ಹಣತೆ ಹೇಗೆ ಮುಖ್ಯವೋ, ಮಾನವನ ಜೀವನದಲ್ಲಿ ತುಂಬಿರುವ ಅಜ್ಞಾನವೆಂಬ ಕತ್ತಲನ್ನು ಕಳೆದು ಸುಜ್ಞಾನವೆಂಬ ಬೆಳಕಿನ ಪಥದತ್ತ ಸಾಗಲು ಶ್ರೀಗುರುಗಳ ಕಾರುಣ್ಯ ಅತೀ ಅಗತ್ಯ , ಭ್ರಮೆಯ ಬದುಕಿನ ಪೊರೆ ಸರಿದು ಸತ್ಯಪಥದ ಹಾದಿ ತೋರುವ ಶ್ರೀಗುರುಸೇವೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡಾಗ ದೊರಕುವ ನೆಮ್ಮದಿ, ಶಾಂತಿ ಅವರ್ಣನೀಯ ” ಉಪ್ಪಿನಂಗಡಿ ಮಂಡಲದ, ಉಪ್ಪಿನಂಗಡಿ ವಲಯದ ಕೈಲಾರು ಸತ್ಯನಾರಾಯಣ ಭಟ್ಟರ ಪತ್ನಿ ಸತ್ಯಶೋಭಾ ಅವರ ಮಾತುಗಳು ಇವು. ಸೀಮಾ ಗುರಿಕ್ಕಾರರಾಗಿದ್ದ ಮೊಗ್ರ ಎನ್. ಗೋಪಾಲಕೃಷ್ಣಯ್ಯ […]

Continue Reading

ಬಾಲ ಪ್ರತಿಭೆ

  ಯಕ್ಷಗಾನದಲ್ಲಿ ಚಂಡೆ, ಮದ್ದಲೆಯೂ ತನ್ನದೇ ಆದ ಮಹತ್ವ ಪಡೆದಿದೆ. ಅಂತಹ ಕಲೆಯಲ್ಲಿ ಮುನ್ನಡೆಯುತ್ತಿರುವ ಹನ್ನೆರಡು ವರ್ಷದ ಶ್ರೀವತ್ಸ. ಈತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗುಡ್ಡೆದಿಂಬ ಮಂಜುನಾಥ್ ಮತ್ತು ಅರ್ಚನಾ ಅವರ ಸುಪುತ್ರ. ಅಜ್ಜ ಸೂರ್ಯನಾರಾಯಣ ಚಂಡೆ ಹಾಗೂ ತಂದೆ ಮಂಜುನಾಥ್ ಮದ್ದಲೆ ವಾದಕರು ಹಾಗಾಗಿ ರಕ್ತಗತವಾಗಿ ಬಳುವಳಿಯಾಗಿ ಬಂದ ಕಲೆ. ಹೀಗೆ ಬಾಲ್ಯದಿಂದಲೇ ಮನೆಯಲ್ಲಿ ಕಲಾ ಸರಸ್ವತಿಯ ಆರಾಧನೆಯ ಪ್ರಭಾವದಿಂದ ಬಾಲ್ಯದಿಂದಲೇ ಚಂಡೆ, ಮದ್ದಲೆಗಳನ್ನು ನುಡಿಸುತ್ತ ಬೆಳೆದು ಬಂದಿದ್ದರಿಂದ ಚೆಂಡೆವಾದನದ ಮೇಲೆ ಹೆಚ್ಚು ಒಲವು […]

Continue Reading

ಪರಮಾನುಗ್ರಹದ ಪರಮಪದ ಬಯಸುವ ಸೇವಾಬಿಂದುಗಳು : ಸಾವಿತ್ರಿ ಜಿ. ಭಟ್ ಮತ್ತು ಪುತ್ರಿಯರು

ಮಂಗಳೂರು ಮಂಡಲದ , ವಿಟ್ಲ ವಲಯದ ಸಾವಿತ್ರಿ ಜಿ.ಭಟ್ ಹಾಗೂ ಪುತ್ರಿಯರ ಪರಿಚಯವಿಲ್ಲದ ಶ್ರೀಮಠದ ಶಿಷ್ಯರು ವಿರಳ ಎನ್ನಬಹುದು. ಈ ಮೂವರೂ ಮಾತೃತ್ವಮ್ ಯೋಜನೆಯ ಮೂಲಕ ಗುರಿ ತಲುಪಿದ ಮಾಸದ ಮಾತೆಯರಾಗಿದ್ದಾರೆ. ಶ್ರೀಗುರುಸೇವೆಯಲ್ಲಿಯೇ ಬದುಕಿನ ನೆಮ್ಮದಿ, ಶಾಂತಿ ಕಾಣುತ್ತಿರುವ ಈ ಮಾತೆಯರ ಬದುಕಿನಲ್ಲಿ ಶ್ರೀಮಠದ ಸೇವೆಗೆ ಮೊದಲ ಆದ್ಯತೆಯನ್ನು ಕಾಣಬಹುದು. ಇವರ ಸೇವೆಗೆ ಪರಿಮಿತಿ ಎಂಬುದೇ ಇಲ್ಲ. ‘ಪೂರ್ಣತೆಯ ಬದುಕಿನೆಡೆಗೆ ಸಾಗಲು ಧರ್ಮ ಮಾರ್ಗವನ್ನು ತೋರಿ ಗುರುಗಳೇ ‘ ಎಂಬ ಪ್ರಾರ್ಥನೆ ಈ ಮೂರೂ ಕುಟುಂಬಗಳದ್ದು. ಮನೆಗಳು […]

Continue Reading

ಅಕ್ಕ ತಂಗಿಯ ಯಕ್ಷಗಾನ ಪಯಣ

  ಕರ್ನಾಟಕದ ವಿಶಿಷ್ಟ ಕಲೆಗಳಲ್ಲಿ ಯಕ್ಷಗಾನ ಪ್ರಮುಖ ಸ್ಥಾನ ಪಡೆದಿದೆ. ಯಕ್ಷಗಾನ ಕಲಾವಿದರು ತೊಡುವ ವೇಷ, ಭೂಷಣ, ಅವರ ಮಾತುಗಾರಿಕೆ, ಕುಣಿತ ನೋಡುವದಕ್ಕೆ ಆನಂದ. ಅಂತಹ ಕಲೆಯಲ್ಲಿ ಸಾಧನೆಗೈಯ್ಯುತ್ತಿರುವ ಶ್ರೀಜಾ ಮತ್ತು ಶ್ರೀಪೂಜಾ ಕಾಸರಗೋಡಿನ ಬದಿಯಡ್ಕದ ಉದನೇಶ್ ಕುಂಬಳೆ ಮತ್ತು ದೇವಕಿಯ ಸುಪುತ್ರಿಯರು. ಇಬ್ಬರು ತಮ್ಮ ಏಳನೇ ವಯಸ್ಸಿನಲ್ಲೇ ರಂಗಸಿರಿ ಸಂಸ್ಕೃತಿಕ ವೇದಿಕೆ (ರಿ )ಬದಿಯಡ್ಕ ಎಂಬ ಸಂಸ್ಥೆಯಲ್ಲಿ ಗುರುಗಳಾದ ಸೂರ್ಯ ನಾರಾಯಣ ಪದಕಣ್ಣಾಯ ಬಾಯರು ಇವರಿಂದ ಯಕ್ಷಗಾನವನ್ನು ಕಲಿಯಲು ಆರಂಭಿಸಿದರು. *”ಹಲವಾರು ಕಡೆ ಸಹೋದರಿಯರ ಯಕ್ಷಗಾನ […]

Continue Reading

” ಬದುಕಿಗೆ ದೊರಕಿದ ಸೂಕ್ತ ಮಾರ್ಗದರ್ಶನ ಶ್ರೀಗುರುಸೇವೆ ” : ರಾಜರಾಜೇಶ್ವರಿ ಎಸ್ ಭಟ್, ಸುಳ್ಯ

  ” ಹಿರಿಯ ಗುರುಗಳ ಕಾಲದಿಂದಲೇ ನನ್ನ ತವರುಮನೆಯವರು ಗುರು ಭಕ್ತರು, ನನಗೆ ರಾಜರಾಜೇಶ್ವರಿ ಎಂಬ ಹೆಸರಿಡಲು ಸೂಚಿಸಿದವರು ಹಿರಿಯ ಗುರುಗಳು. ಎಳವೆಯಿಂದಲೇ‌ ತವರಿನಲ್ಲಿ ದೊರಕಿದ ಮಾರ್ಗದರ್ಶನದ ಫಲವಾಗಿ ನನಗೆ ಶ್ರೀಗುರು ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು, ಗೋವುಗಳೆಂದರೆ ತುಂಬಾ ಪ್ರೀತಿ, ಪೇಟೆಯಲ್ಲಿ ಹಸುಗಳನ್ನು ಸಾಕುವುದು ಸುಲಭವಲ್ಲ, ಈಗ ಶ್ರೀಗುರುಸೇವೆ ಹಾಗೂ ಗೋಮಾತೆಯ ಸೇವೆ ಮಾಡುವ ಅವಕಾಶ ದೊರಕಿದ್ದು ಪೂರ್ವ ಜನ್ಮದ ಸುಕೃತ ” ಎಂದು ನುಡಿಯುವವರು ಕಡೆಂಗೋಡ್ಲು ಮೂಲದ ಪ್ರಸ್ತುತ ಮುಳ್ಳೇರಿಯ ಮಂಡಲದ ಸುಳ್ಯ ನಿವಾಸಿಗಳಾಗಿರುವ ಫ್ರೊ. […]

Continue Reading

ನೃತ್ಯಾರಾಧಕಿ ಸುಪ್ರೀತಾ

  ದೇವಾನಾಮಿದಮಾಮನಂತಿ ಮುನಯಃ ಕಾಂತಂ ಕ್ರತುಂ ಚಾಕ್ಷುಷಮ್ | ರುದ್ರೇಣಾಭಿಮುಖಕ್ರತೌವ್ಯತಿರಕರೇ ಸ್ವಾಂಗೇ ವಿಭಕ್ತಂ ವಿಧಾ || ತ್ರೈಗುಣ್ಯೋದ್ಭವಮತ್ರಲೋಕಚರಿತಂ ನಾನಾರಸಂದೃಶ್ಯತೇ | ನಾಟ್ಯಂ ಭಿನ್ನರುಚಿರ್ಜನಸ್ಯ ಬಹುಧಾಪ್ಯೇಕಂ ಸಮಾರಾಧನಮ್ || ಎಂಬುದಾಗಿ ನೃತ್ಯವನ್ನು ತನ್ನ ಮಾಲವಿಕಾಗ್ನಿಮಿತ್ರ ಎಂಬ ನಾಟಕದಲ್ಲಿ ಕವಿಕುಲಗುರುವಾದ ಕಾಳಿದಾಸನು ಹಾಡಿಹೊಗಳಿದ್ದಾನೆ. ಅಡವು,ಮುದ್ರೆ,ಆಂಗಿಕಾಭಿನಯ,ಕುಡಿ-ಕಡೆ-ಕಿಡಿನೋಟಗಳು, ಆಭರಣಗಳು, ನೂಪುರದ ನಿನಾದ, ಸಂಗೀತದೊಂದಿಗಿನ ಸಂಬಂಧ, ಜತಿಗಳ ಜೊತೆಗಿನ ಒಡನಾಟದಿಂದ ಪರಿಪಕ್ವವಾದ ನೃತ್ಯವು ಎಂತಹವರನ್ನೇ ಆದರೂ ತನ್ನ ಒಡಲಲ್ಲಿ ಸೆಳೆದಿಟ್ಟು ಅಲೆ-ಅಲೆಯಾಗಿ ಒಳಗಿಳಿಯುತ್ತದೆ. ನಾಟ್ಯದೇವತೆಯಾದ ಶಿವನ ಆರಾಧನೆಯು ನೃತ್ಯದಿಂದಲೂ ಸಾಧ್ಯ. ತನ್ನ ಆರನೇ ವಯಸ್ಸಿನಲ್ಲಿ […]

Continue Reading

” ಗೋಮಾತೆಯನ್ನು ಮಾತೆಯಂತೆ ಪ್ರೀತಿಸಬೇಕು ” : ಸರಸ್ವತಿ ಎಸ್. ಭಟ್, ತೆಕ್ಕೆಕರೆ

  ” ನಮ್ಮ ಪೂಜ್ಯ ಶ್ರೀ ಗಳು ಗೋರಕ್ಷಾ ಅಭಿಯಾನ ಆರಂಭಿಸಿದ ಮೇಲೆ ಗೋಮಾತೆಯನ್ನು ಆರ್ಥಿಕ ದೃಷ್ಟಿಯಿಂದ ನೋಡುವವರಲ್ಲಿ ಒಂದಿಷ್ಟು ಬದಲಾವಣೆ ಕಾಣಿಸುತ್ತಿದೆ. ದನ ಎಂದರೆ ಧನ ಎಂಬ ಭಾವನೆಯನ್ನು ಬದಿಗೆ ಸರಿಸಿ ಗೋಮಾತೆ ಎಂದರೆ ಶ್ರೀಮಾತೆ ಎಂಬ ಪೂಜ್ಯ ಭಾವ ಹೊಂದಿದ್ದಾರೆ , ಕೆಲವೇ ವರ್ಷಗಳಲ್ಲಿ ಮರೆಯಾಗಿ ಹೋಗಲಿದ್ದ ಅನೇಕ ಭಾರತೀಯ ಗೋತಳಿಗಳ ಸಂರಕ್ಷಣೆಯ ದೃಷ್ಟಿಯಿಂದ ಶ್ರೀಗುರುಗಳು ಕೈಗೊಂಡ ವ್ಯವಸ್ಥಿತವಾದ ಯೋಜನೆಯು ಇಂದು ಅನೇಕ ಮಂದಿಗೆ ಭಾರತೀಯ ತಳಿಯ ಹಸುಗಳ ಮಹತ್ವದ ಬಗ್ಗೆ ಅರಿವು ಮೂಡಿಸುವಲ್ಲಿ […]

Continue Reading

ಬೆಳೆಯುವ ಸಿರಿ ಮೊಳಕೆಯಲ್ಲಿ

  ಕಲೆಯು ಭಾವನೆಗಳ ಪ್ರತಿಬಿಂಬ. ಎಳೆವಯಸ್ಸಿನಲ್ಲಿಯೇ ಕಲೆ ಸಂಸ್ಕೃತಿಯೆಡೆಗೆ ಇರುವ ಒಲುಮೆ ಮನುಜನನ್ನು ಎತ್ತರಕ್ಕೆ ಏರಿಸುವಲ್ಲಿ ಏಣಿಯಂತೆ ಸಹಕಾರಿಯಾಗುತ್ತದೆ. ತನ್ನ ಎಳವೆಯಲ್ಲಿ ಮನಸ್ಸಿಗೆ ಮುದ ನೀಡುವ ಕಲೆಯೆಡೆಗೆ ಅಭಿರುಚಿ ಬೆಳೆಸಿಕೊಳ್ಳುತ್ತಿರುವ ಪುಟ್ಟ ಪ್ರತಿಭೆ ಅಭಿರಾಮ್.ಎಸ್.ಭಟ್. ಈತ ಬೆಂಗಳೂರು ನಿವಾಸಿಗಳಾದ ಶ್ರೀಯುತ ಸುರೇಶ್ ಕುಕ್ಕಾಜೆ ಹಾಗೂ ಶ್ರೀಮತಿ ಗೀತಾಂಜಲಿ ದಂಪತಿಯ ಸುಪುತ್ರ. ಪ್ರಸ್ತುತ ಪೂರ್ಣಪ್ರಜ್ಞಶಾಲೆಯಲ್ಲಿ ಎರಡನೇ ತರಗತಿಯಂದ ವೈಶಿಷ್ಟ್ಯ ಶ್ರೇಣಿಯೊಂದಿಗೆ ಉತ್ತೀರ್ಣನಾಗಿರುತ್ತಾನೆ. ಬಾಲ್ಯದಿಂದಲೇ ತನ್ನ ತಾಯಿಯಿಂದ ಕಥೆಗಳನ್ನು ಕೇಳುತ್ತಾ ಚಿಗುರುತ್ತಿರುವ ಅಭಿರಾಮ ತನ್ನೆದುರಿಗೆ ಇರುವವರು ಮಂತ್ರಮುಗ್ಧರಾಗುವ ಹಾಗೆ ಕಥೆ […]

Continue Reading

” ನಂಬಿ ಕೆಟ್ಟವರಿಲ್ಲವೋ ಶ್ರೀಚರಣಗಳ….” : ಇಂದಿರಾ ಶ್ಯಾನುಬಾಗ್ , ಶಿರಸಿ

  ” ಬದುಕಿನ ಹಾದಿಯಲ್ಲಿ ಕತ್ತಲು ಕವಿದಂತೆ ಅತಿ ಕಠಿಣ ಕಷ್ಟ ಬಂದಾಗಲೂ ಶ್ರೀಚರಣಗಳ ಮೇಲಿನ ಭರವಸೆ ಕಳೆದುಕೊಳ್ಳ ಬೇಡಿ, ವಿಧಿ ಲಿಖಿತವನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ, ಆದರೆ ಶ್ರೀ ಗುರುಚರಣಗಳನ್ನು ಆಶ್ರಯಿಸಿದವರಿಗೆ ಮನಸ್ಸಿನ ಮಾಯೆಯ ಪೊರೆಯನ್ನು ಸರಿಸಿ ,ಭಗವಂತನ ದಿವ್ಯಾನುಗ್ರಹ ಪಡೆಯುವ ಹಾದಿ ತೋರುವ ಸದ್ಗುರುಗಳು ಸಾಂತ್ವನದ ಭರವಸೆಯನ್ನು ಅನುಗ್ರಹಿಸುತ್ತಾರೆ. ಇದು ನಮ್ಮ ಬದುಕಿನ ಅನುಭವದ ನುಡಿಗಳು ” ಎಂದು ಶರಣಾಗತ ಭಾವದಿಂದ ‌ನುಡಿಯುವವರು ಸಿದ್ದಾಪುರ ಮಂಡಲದ ಅಂಬಾಗಿರಿ ವಲಯದ ಲಕ್ಷ್ಮಣ ಶ್ಯಾನುಬಾಗ್ ಅವರ ಪತ್ನಿ […]

Continue Reading

ಚಿತ್ರ ಜೀವಂತಿಕೆಯ ಕಲಾವಿದ ಯುವ ಉದ್ಯಮಿ ಪ್ರದೀಪ

  ಈತನ ಕೈಗಳಲ್ಲಿ ಮೂಡಿದ ಚಿತ್ರಗಳು ನೋಡುಗರ ಚಿತ್ತದಲ್ಲಿ ಬೆರಗು ಮೂಡಿಸುತ್ತದೆ. ಯಾವ ಚಿತ್ರಕಲಾ ಶಾಲೆಯಲ್ಲಿಯೂ ಅಭ್ಯಾಸ ಮಾಡಿಲ್ಲವಾದರೂ ನುರಿತ ಕಲಾವಿದನಂತೆ ಚಿತ್ರಗಳಲ್ಲಿ ಜೀವಂತಿಕೆ ಮೂಡಿಸುವ ಯುವ ಕಲಾವಿದ ಇನ್ನೊಂದೆಡೆಯಲ್ಲಿ ಯಶಸ್ವೀ ಉದ್ಯಮಿಯೂ ಹೌದು, ವಿದ್ಯಾರ್ಥಿಯೂ ಹೌದು. ಅವರೇ ಕಾಸರಗೋಡು ಜಿಲ್ಲೆಯ ಗೋಪಾಲಕೃಷ್ಣ ಭಟ್ ಮತ್ತು ಸವಿತಲಕ್ಷ್ಮೀ ಅವರ ಸುಪುತ್ರ ಪ್ರದೀಪ ಎಂ.ಜಿ. *ಸೌರಶಕ್ತಿಯನ್ನು ಸಮಾಜಕ್ಕೆ ಪರಿಚಯಿಸುತ್ತಿರುವ ಉದ್ಯಮಿ* ಎಸ್. ಎಸ್. ಎಲ್.ಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ತಮಗೆ ಆಸಕ್ತಿ ಇರುವ ಶಿಕ್ಷಣ ಕ್ಷೇತ್ರವಾದ ಎಲೆಕ್ಟ್ರಾನಿಕ್ಸ್ […]

Continue Reading

ಗೋಮಾತೆಯ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಶೈಲಾ ಶ್ರೀಕಾಂತ್ ಹೆಗಡೆ

” ಮೂವತ್ತಮೂರು ಕೋಟಿ ದೇವತೆಗಳ ನಿವಾಸ ಸ್ಥಾನವಾದ ಗೋಮಾತೆಯ ಒಡಲು ಪುಣ್ಯದ ಕಡಲು. ನಮ್ಮ ತಾಯಿಯ ರಕ್ಷಣೆಯನ್ನು ಯಾವ ರೀತಿಯಲ್ಲಿ ಮಾಡುತ್ತೇವೆಯೋ ಅದೇ ರೀತಿಯಲ್ಲಿ ಗೋಮಾತೆಯ ಸಂರಕ್ಷಣೆಯ ಜವಾಬ್ದಾರಿಯನ್ನು ನಾವು ವಹಿಸಬೇಕು, ಆಗಲೇ ಸಮಾಜದಲ್ಲಿ ಗೋಸಂರಕ್ಷಣಾ ಯೋಜನೆಗಳು ಸಫಲವಾಗಬಹುದು. ಇದಕ್ಕಾಗಿ ನಮ್ಮ ಸಂಸ್ಥಾನದವರ ಮಾರ್ಗದರ್ಶನದಂತೆ ಮುಂದೆ ಸಾಗಿದರೆ ಮುಂದೊಂದು ದಿನ ಗೋಮಾತೆ ವಿಶ್ವ ವಂದ್ಯೆಯಾಗಬಹುದು ” ಗೋವು ಹಾಗೂ ತಮ್ಮ ನಡುವಿನ ಭಾವನಾತ್ಮಕ ಸಂಬಂಧದ ಬಗ್ಗೆ ತಿಳಿಸುತ್ತಾ ತಮ್ಮ ಮನದ ಅನಿಸಿಕೆಗಳನ್ನು ಈ ರೀತಿಯಾಗಿ ಬಿಚ್ಚಿಟ್ಟವರು ಬೆಂಗಳೂರು […]

Continue Reading

ಸಂಗೀತ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಗೈಯುತ್ತಿರುವ ಶ್ರೀರಂಜಿನಿ.

  ದಿನೇದಿನೇ ಸಂಗೀತದ ಶಿಖರ ಸಾಧನೆಯ ಮೆಟ್ಟಿಲೇರುತ್ತಿರುವ ಶ್ರೀರಂಜಿನಿ , ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಚಿದಾನಂದ ಮತ್ತು ಗಾಯತ್ರಿ ಹೆಚ್.ಸಿ ಅವರ ಸುಪುತ್ರಿ . ಬಾಲ್ಯದಿಂದಲೇ ಸಂಗೀತದ ಕಡೆ ತನ್ನ ಚಿತ್ತವನಿತ್ತು ಅಜ್ಜಿ, ತಂದೆ ಮತ್ತು ತಾಯಿಯಿಂದ ಸಂಗೀತ ಸಂಸ್ಕಾರವನ್ನು ಪಡೆದು ಒಂದನೇ ತರಗತಿಯಿಂದ 10ನೇ ತರಗತಿವರೆಗೆ ಶಾಲಾ ಮಟ್ಟದ ಹಾಡು, ನೃತ್ಯ, ಅಭಿನಯ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ಹಲವಾರು ಬಹುಮಾನಗಳನ್ನು ಗಳಿಸಿದ್ದಾರೆ. ನಂತರ ವಿದುಷಿ ವಸುಧಾ ಶರ್ಮ ಸಾಗರ ಇವರಲ್ಲಿ ಹಿಂದುಸ್ತಾನಿ ಶಾಸ್ತ್ರೀಯ […]

Continue Reading