ಹವಿ ಸವಿ ತೋರಣ – ೯ – ಬಾಲ್ಯದೊಟ್ಟಿಂಗೆ ಬೆಳೆಯಲಿ ಜೀವನ ಮೌಲ್ಯಂಗೊ

ಲೇಖನ

 

ಪ್ರತಿಯೊಬ್ಬನ ಬದ್ಕಿಲ್ಲಿಯೂ ಬಾಲ್ಯ ಹೇಳಿದರೆ ವಿಶೇಶ ಮಹತ್ವದ ಕಾಲ. ಅವನ ಮುಂದಾಣ ಜೀವನವ ರೂಪಿಸುವ ಸಮಯ ಹೇಳಿ ಬೇಕಾದರೂ ಹೇಳ್ಲಕ್ಕು. ಅದಕ್ಕೆ ಬೇಕಾಗಿಯೇ ನಮ್ಮ ಹಿರಿಯರು ಸಣ್ಣದಿಪ್ಪಗಲೇ ಮಕ್ಕೊಗೆ ಒಳ್ಳೆಯ ಸಂಸ್ಕಾರ ಕೊಡೆಕು ಹೇಳುದು.

ಬಾಲ್ಯ ಹೇಳಿದರೆ ಹನ್ನೆರಡು ವರ್ಷದ ಒಳಾಣ ಸಮಯ. ನಮ್ಮ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರಂಗಳ ಕೊಡ್ಲೆ ತುಂಬಾ ಒಳ್ಳೆಯ ಕಾಲ ಅದು. ಹಸಿ ಮಣ್ಣಿನ ಹಾಂಗಿದ್ದ ಮನಸ್ಸಿನ ಬೇಕಾದ ಆಕೃತಿಗೆ ತಿದ್ದಲೆ ತುಂಬ ಸುಲಭ. ಮೊದಲಾಗಿದ್ದರೆ ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಬ್ಬೆ ಹೇಳಿ ಕೊಡು ಕುಟುಂಬ ಇಪ್ಪಗ ಮಕ್ಕೊಗೆ ಸಂಸ್ಕಾರ ಕೊಡ್ಲೆ ಕಷ್ಟ ಇತ್ತಿದ್ದಿಲ್ಲೆ. ಕೂಡು ಕುಟುಂಬಲ್ಲಿ ಎಲ್ಲರೊಟ್ಟಿಂಗೆ ಬೆಳವಗ ಒಳ್ಳೆಯ ಅಭ್ಯಾಸಂಗೊ ತನ್ನಷ್ಟಕೇ ಬಂದು ಕೊಂಡಿದ್ದತ್ತು.

ಕೆಲವೆಲ್ಲ ಈಗಾಣವಕ್ಕೆ ತುಂಬ ಸಣ್ಣ ವಿಶಯ ಹೇಳಿ ಆವ್ತರೂ ಆ ಕಾಲಲ್ಲಿ ಪ್ರತಿಯೊಂದು ವಿಶಯಕ್ಕೂ ಅದರದ್ದೇ ಆದ ಮಹತ್ವ ಇದ್ದತ್ತು. ಮಕ್ಕೊಗೆ ಸಣ್ಣಾದಿಪ್ಪಗಲೇ ದೇವರ ಮೇಲೆ ಶ್ರದ್ಧೆ, ಭಕ್ತಿ ಬಪ್ಪ ಹಾಂಗಿದ್ದ ವಾತಾವರಣ ಮನೆಲಿಪ್ಪಗ ಅವು ಮುಂದೆಯೂ ಅದರನ್ನೇ ಅಭ್ಯಾಸ ಮಾಡಿ ಆಗಿರ್ತು. ಅಜ್ಜನೋ, ಅಪ್ಪನೋ, ಅಣ್ಣನೋ ಆರಾರು ಮನೆಯ ಹಿರಿಯರು ಜೆಪ ಮಾಡುಗ, ಪೂಜೆ ಮಾಡುಗ ಮಕ್ಕಳೂ ಒಟ್ಟಿಂಗೆ ಕೂದು ಶ್ರದ್ಧೆಲಿ ಅದರ ನೋಡಿ ಕಲಿತ್ತವು . ಉದಿಯಪ್ಪಗ ಎದ್ದಲ್ಲಿಂದ ಹಿಡುದು ಇರುಳು ಮನುಗುವ ವರೆಗೂ ಮಕ್ಕೊ ಹಿರಿಯರ ಕಣ್ಣಳತೆ ದೂರಲ್ಲೇ ಇದ್ದ ಕಾರಣ ಮಕ್ಕಳ ಬೆಳವಣಿಗೆಯೊಟ್ಟಿಂಗೆ ಅವರ ಸಂಸ್ಕಾರವೂ ರೂಪುಗೊಂಡಿರ್ತು.

ಮಕ್ಕಳತ್ರೆ ಸಣ್ಣ, ಸಣ್ಣ ಕೆಲಸ ಮಾಡ್ಲೆ ಹೇಳುದು ಮೊದಲಿಂಗೆ ಎಲ್ಲಾ ಮನೆಗಳಲ್ಲೂ ಇದ್ದತ್ತು. ಪೂಜೆಗೆ ಹೂಗು ಕೊಯ್ವಲೆ, ಪುಟ್ಟುಂಬೆಗೆ ತಿಂಬಲೆ ಹಾಕಲೆ, ಪಾತ್ರ ತೊಳದು ಮಡುಗಿದ್ದರ ಒಳ ಕೊಂಡೋಪಲೆ ಎಲ್ಲ ಮಕ್ಕಳತ್ರೆ ಹೇಳುದು. ಹೂಗಿನ ಸೆಸಿಗೋ, ನೆಟ್ಟಿ ಕಾಯಿ ಸೆಸಿಗೋ ನೀರು ಹಾಕುತ್ತರೆ ಮಕ್ಕಳನ್ನೂ ಸೇರ್ಸುದು. ಹಾಂಗಿದ್ದ ಕೆಲಸಂಗಳ ಸಣ್ಣಾದಿಪ್ಪಗಲೇ ಕಲಿಸಿದರೆ ಮಕ್ಕೊಗೆ ಆ ಅಭ್ಯಾಸ ರೂಢಿಗೆ ಬಂದಿರ್ತು. ಮಕ್ಕೊ ಹಿರಿಯರ ಒಟ್ಟಿಂಗೆ ಇಪ್ಪಷ್ಟು ಹೊತ್ತುದೆ ಅವರತ್ರೆ ಚೆಂದಕೆ ಮಾತಾಡಿಂಡು, ಜೀವನ ಸಂಸ್ಕಾರಂಗಳ ಕಲುಶುಲೆ ಬಂಙ ಆಗಿಂಡಿತ್ತಿಲ್ಲೆ. ನೀತಿ ಕಥೆಗೊ, ಪುರಾಣ ಕಥೆಗೊ, ಸಣ್ಣ ಸಣ್ಣ ಪದ್ಯಂಗಳ ಎಲ್ಲ ಹೇಳಿಕೊಡ್ಲೂ ತುಂಬಾ ಸುಲಭ ಆಗ್ಯೊಂಡಿತ್ತು. ಮನೆಗೆ ಆರಾದರು ಅತಿಥಿಗೂ ಬಂದರೆ ಅವರತ್ರೆ ಮಾತಾಡ್ಲೆ, ಆಸರಿಂಗೆ ಕೊಡ್ಲೆ ಎಲ್ಲ ಸಹಜವಾಗಿ ಅಭ್ಯಾಸ ಆಗಿಂಡಿದ್ದತ್ತು..

ಆದರೆ ಈಗ ಎಲ್ಲರದ್ದೂ ಸಣ್ಣ ಕುಟುಂಬ. ಅಬ್ಬೆ, ಅಪ್ಪ ಇಬ್ಬರೂ ಉದ್ಯೋಗಲ್ಲಿ ಇಪ್ಪವು. ಅಜ್ಜ, ಅಜ್ಜಿ ಕೂಡ ಅವರೊಟ್ಟಿಂಗೆ ಇರ್ತವಿಲ್ಲೆ. ಪೇಟೆ ಜೀವನದ ಹಾಂಗಿದ್ದ ಆಧುನಿಕ ಬದುಕು ಈಗಾಣದ್ದು. ಅಷ್ಟಪ್ಪಗ ಸಹಜವಾಗಿಯೇ ಮಕ್ಕೊ ಹೆಚ್ಚು ಕಲಿಯೆಕು, ಒಳ್ಳೆ ಶಾಲೆಗೆ ಕಳ್ಸೆಕು, ಹೆಚ್ಚು ಅಂಕ ಗಳಿಸೆಕು ಹೇಳುವ ಭಾವನೆ ಬತ್ತು. ಆ ಹೊಡೆಂಗೆ ಗಮನ ಹೋಪಗ ನಮ್ಮ ಮಕ್ಕಳ ಮೂಲಭೂತ ಸಂಸ್ಕಾರಂಗೊಕ್ಕೆ ಚ್ಯುತಿ ಬತ್ತು. ಹಿರಿಯರಿಂಗೆ ಗೌರವ ಕೊಡುದು, ಮನೆಗೆ ಆರಾದರು ಬಂದರೆ ಆಸರಿಂಗೆ ಕೇಳೆಕು ಹೇಳುದೆಲ್ಲ ಇತ್ತೀಚೆಗೆ ತುಂಬಾ ಕಮ್ಮಿ ಆಯಿದು.
ನಮ್ಮ ಸನಾತನ ಧರ್ಮದ ಬಗ್ಗೆ, ನಮ್ಮ ಜಾತಿಯ ಬಗ್ಗೆ, ನಮ್ಮ ಸಂಸ್ಕಾರಂಗಳ ಬಗ್ಗೆ ಹೆಚ್ಚು ಮಹತ್ವ ಬಪ್ಪ ಹಾಂಗಿದ್ದ ವಾತಾವರಣ ಇಂದು ಕಮ್ಮಿ ಆವ್ತಾಯಿದ್ದು. ಹೊರನೋಟಕ್ಕೆ ಮಕ್ಕೊ ಸಂಸ್ಕಾರವಂತರ ಹಾಂಗೆ ಕಂಡರೂ, ಅವಕ್ಕೆ ಅದರ ಬಗ್ಗೆ ಜ್ಞಾನ ಇರ್ತಿಲ್ಲೆ. ತಲೆ ಬಾಚುವಲ್ಲಿಂದ ಹಿಡುದು ಹಾಕುವ ಅಂಗಿಯ ಬಗ್ಗೆ ಕೂಡ ಒಂದು ಶಿಸ್ತು ಅಚ್ಚುಕಟ್ಟುತನ ಕಾಣೆಯಾಯಿದು. ಮಕ್ಕಳ ಮೃದು ಮನಸ್ಸಿನ ವಿಕಾರಗೊಳಿಸುವ ಹೆರಾಣ ಆಕರ್ಷಣೆಗಳೇ ಇಂದು ಹೆಚ್ಚಾವ್ತಾಯಿದ್ದು. ಜಂಗಮವಾಣಿ ಕೈಲಿ ಹಿಡಿದರೆ ಮಕ್ಕಳ ಪುಟ್ಟು ಮನಸ್ಸಿನ ಹಾಳು ಮಾಡುವ ಹಾಂಗಿದ್ದ ವಿಶಯಂಗೊ ಮಾಂತ್ರ ಕಾಂಬದು. ಹಾಂಗಾಗಿ ಮಕ್ಕಳ ಬಾಲ್ಯದ ವಿಶಯಲ್ಲಿ ಅಬ್ಬೆ ಅಪ್ಪ ತುಂಬಾ ಜಾಗ್ರತೆ ಮಾಡೆಕು.

ಮಕ್ಕೊ ಅನುಕರಣೆ ಮಾಡುದು ಬೇಗ. ಹಿರಿಯರ ನೋಡಿ ಅವು ಮಾಡುವ ಹಾಂಗೆ ಮಾಡ್ಲೆ ಮಕ್ಕೊಗೆ ತುಂಬಾ ಆಶೆ ಅಪ್ಪದು. ಅದಕ್ಕೆ ಬೇಕಾಗಿ ಮನೆಯ ಹಿರಿಯರೇ ಮಕ್ಕೊಗೆ ಮಾರ್ಗದರ್ಶನ ಕೊಡೆಕು. ಉಂಬಲೆ, ತಿಂಬಲೆ ಕೂಡ ಸಣ್ಣಾದಿಪ್ಪಗಲೇ ಹೇಳಿಕೊಡೆಕು. ಉಂಬಂದ ಮೊದಲು ಕೈ ತೊಳವದು, ಇನ್ನೊಬ್ಬರು ತಿಂದದು, ಅವು ಕಚ್ಚಿದ ಬಾಕಿ ಎಲ್ಲ ನಾವು ತಿಂಬಲಾಗ ಹೇಳುದರ ಮಕ್ಕೊಗೆ ಸಣ್ಣಾದಿಪ್ಪಗ ಕಲುಶೆಕು. ಕೂಸುಗೊಕ್ಕಂತೂ ಮೈ ಮುಚ್ಚುವ ಅಂಗಿ ಹಾಕಲೆ ಹೇಳಿಕೊಡೆಕು.

” ಕೂಸುಗಳ ದೇಹ ಹೇಳಿದರೆ ದೇವರ ಗರ್ಭ ಗುಡಿಯಷ್ಟೇ ಪವಿತ್ರ ” ಹೇಳಿ ನಮ್ಮ ಹಿರಿಯರು ಹೇಳುಗು. ಕೈಯಿಲ್ಲದ್ದ, ಮೈ ಕಾಂಬ ಹಾಂಗಿದ್ದ ಅಂಗಿ ಹಾಕಿದರೆ ನಮ್ಮ ಗೌರವ ಕಮ್ಮಿ ಆವ್ತು ಹೇಳುವ ವಿಷಯವ ಮಗಳಿಂಗೆ ಅರ್ಥ ಅಪ್ಪಾಂಗೆ ಅಬ್ಬೆ ಹೇಳೆಕು. ಬೊಟ್ಟು, ಬಳೆ, ಎಲ್ಲ ಹಾಕುವ ವಿಶಯಲ್ಲೂ ಹಾಂಗೇ. ಮಕ್ಕಳ ಶೈಕ್ಷಣಿಕ ವಿಚಾರಕ್ಕೆ ಮಹತ್ವ ಕೊಡುವಷ್ಟೇ ಶ್ರದ್ಧೆ ಅವರ ಸಂಸ್ಕಾರಂಗೊಕ್ಕೂ ಕೊಡೆಕು. ಇಂದು ನಮ್ಮ ಸಮಾಜ ಎದುರಿಸುವ ಸಮಸ್ಯೆಗಳ ಕಾಂಬಗ ಮಕ್ಕೊಗೆ ಒಳ್ಳೆಯ ಸಂಸ್ಕಾರ ಕೊಟ್ಟು, ಅವರಲ್ಲಿ ಚೆಂದದ ಜೀವನ ಮೌಲ್ಯಂಗಳ ತಿಳಿಸಿ, ಅವು ಸಮಾಜಲ್ಲಿ ಒಳ್ಳೆ ವ್ಯಕ್ತಿಯಾಗಿ ಬೆಳವ ಹಾಂಗೆ ಮಾಡೆಕಾದ ಜವಾಬ್ದಾರಿ ಅಬ್ಬೆ ಅಪ್ಪನದ್ದು. ಅವರ ಬಾಲ್ಯದೊಟ್ಟಿಂಗೆ ಜೀವನ ಮೌಲ್ಯಂಗಳೂ ಬೆಳೆಯಲಿ.

ಪ್ರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *