ಶಂಕರ ನಮನದ ಉದ್ದೇಶ ಶಾಂಕರ ಪೀಠವನ್ನು, ಅದ್ವೈತಿಗಳನ್ನು ಅವಮಾನಿಸುವುದಾಗಿತ್ತೇ ???

ಲೇಖನ

ಸಿರಸಿ ಸಮೀಪದ ಸೋಂದಾ ಸ್ವರ್ಣವಳ್ಳಿಯಲ್ಲಿ ನಡೆದ ‘ಶಂಕರ ನಮನ’ದ ಮುಖ್ಯ ಉದ್ದೇಶ ಶಾಂಕರ ಪೀಠವನ್ನು ಅವಮಾನಿಸುವುದಾಗಿತ್ತೇ ಎಂಬ ಪ್ರಶ್ನೆ , ಅನುಮಾನವನ್ನು ಆ ಸಮಾರಂಭದ ಮಾಧ್ಯಮ ವರದಿಗಳು ಶಾಂಕರ ಅನುಯಾಯಿ ಗಳಲ್ಲಿ ಹುಟ್ಟು ಹಾಕಿದೆ ..

ಕಾರಣ ಇಷ್ಟೇ – ಮಾಧ್ಯಮ ವರದಿಗಳ ಪ್ರಕಾರ ಶಂಕರ ನಮನ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀ ಯತಿಗಳು ಮಾತನಾಡುತ್ತ ಶ್ರೀ ಶಂಕರರೇ ಸ್ಥಾಪಿಸಿದ ಅವಿಚ್ಛಿನ್ನ ಪರಂಪರೆ ಹೊಂದಿರುವ (ಹೆಸರು ಹೇಳದೆಯೇ)”ಶ್ರೀ ರಾಮಚಂದ್ರಾಪುರ ಮಠ ಪತನದತ್ತ ಹೊರಟಿದೆ” ಎಂಬ ಮಾತನ್ನು ಆಡಿರುವುದು ಶ್ರೀ ರಾಮಚಂದ್ರಾಪುರ ಮಠದ ಅಪಾರ ಶಿಷ್ಯ ಭಕ್ತರ , ಅದ್ವೈತಿಗಳ ಆತ್ಮಾಭಿಮಾನ ಕೆಣಕಿದೆ !

ಪ್ರಭು ಶ್ರೀರಾಮನಿಂದ ಪೂಜಿಸಲ್ಪಟ್ಟ ಶ್ರೀ ಚಂದ್ರಮೌಳೀಶ್ವರ , ವಿಶ್ವದ ಏಕೈಕ ಅವಿಚ್ಛಿನ್ನ ಗುರು ಪರಂಪರೆಯನ್ನು ಹೊಂದಿದ, ಲಕ್ಷಾಂತರ ಭಕ್ತರ ಶ್ರದ್ದಾ ಕೇಂದ್ರವಾಗಿರುವ ಶಂಕರ ಮಠವೊಂದು ಪತನವಾಗುತ್ತಿದೆ ಎಂಬ ಶ್ರೀಗಳೊಬ್ಬರ ಮಾತಿನ ಹಿಂದಿನ ಉದ್ದೇಶ , ಕೊಡುವ ಸಂದೇಶ ಚರ್ಚಾ ವಸ್ತುವೇ ಸರಿ .

ಅಷ್ಟಕ್ಕೂ ಶ್ರೀ ಮಠ ಪತನದತ್ತ ಹೊರಟಿದೆಎನ್ನುವುದಾದರೆ ಅದರ ಅರ್ಥವನ್ನೂ ಕೂಡ ತಿಳಿಸುವ ಸೌಜನ್ಯ ಅಥವಾ ಛಾತಿ ಯಾನ್ನು ಆ ಸಮಾರಂಭ ಮಾಡಬೇಕಿತ್ತು . ಶ್ರೀ ಮಠ ಪತನದತ್ತ ಎಂದರೆ ಯಾವುದನ್ನು ಉದ್ದೇಶಿಸಿ ಹೇಳಿದ್ದು ಎನ್ನುವಪ್ರಶ್ನೆ ಸನಾತನಿಗಳಲ್ಲಿ ಹುಟ್ಟು ಹಾಕಿದೆ . ಇಲ್ಲಿ ಮಠ ಎಂದರೆ ಶ್ರೀ ಮಠದ ಆಡಳಿತ ವ್ಯವಸ್ಥೆಯೇ , ಶ್ರೀ ಮಠದ ಶಿಷ್ಯ ಭಕ್ತರೇ ಅಥವಾ ಶ್ರೀ ಮಠದ ಬೇರೆ ಇನ್ಯಾವುದೇ ಅಂಗವೇ ?

ಇವೆಲ್ಲವನ್ನೂ ಸೇರಿ ಅಥವಾ ಇವೆಲ್ಲವನ್ನೂ ಮಿಗಿಲುಗೊಂಡು ಆಗಿರುವುದು ಶ್ರೀ ಮಠ ಎನ್ನುವ ವ್ಯವಸ್ಥೆ . ಹೀಗಿರುವಾಗ ಇಲ್ಲಿ ಆಡಿರುವ ಮಾತು ಶ್ರೀ ರಾಮಚಂದ್ರಾಪುರ ಮಠದ ಯಾವ ಅಂಗಕ್ಕೆ ಉದ್ದೇಶಿಸಿ ಹೇಳಿದ್ದು ಎನ್ನುವುದು ಸ್ಪಷ್ಟವೇ ಆಗುವುದಿಲ್ಲ

ಅವರ ಮುಂದುವರೆದ ಮಾತುಗಳನ್ನೇ ತೆಗೆದು ಕೊಂಡರೆ ಶ್ರೀ ರಾಮಚಂದ್ರಾಪುರ ಮಠದ ಪ್ರಸ್ತುತ ಪೀಠಾಧಿಪತಿಗಳಿಗೆ ಮೇಲೆ ಇರುವ ಇನ್ನೂ ತೀರ್ಮಾನವಾಗದ ಒಂದು ಆರೋಪ; ಆ ವಿಷಯದ ಬಗೆಗೆ ಮಾತನಾಡುತ್ತಾ ಸಂತೃಸ್ತರು ಹಾಗೂ ಆ ಪೀಠಾಧಿಪತಿಗಳ ಆತ್ಮೀಯರೆಂದು ಹೇಳಿಕೊಂಡ ಕೆಲವರು ಹೇಳಿದದನ್ನು ಕೇಳಿದ ಮೇಲೆ ಆ ಆರೋಪವನ್ನು ನಂಬಬೇಕಾಯಿತು ಎಂಬುದಾಗಿ !

 

ನಮ್ಮ ಧಾರ್ಮಿಕ ಹಾಗೂ ನ್ಯಾಯಾಂಗ ವ್ಯವಸ್ಥೆಯ ಅತ್ಯಂತ ಮೂಲಭೂತ ತತ್ವ ‘ಸಹಜ ನ್ಯಾಯ’. ಯಾವುದೇ ಒಂದು ತೀರ್ಮಾನವನ್ನು ಮಾಡಬೇಕಾದರೆ ಮೊದಲು ಮಾಡಬೇಕಾದ್ದು ಅದಕ್ಕೆ ಸಂಭಂದಿಸಿದ ವ್ಯಕ್ತಿಗಳ , ಸಂಸ್ಥೆಗಳ ಅಭಿಪ್ರಾಯ ತಿಳಿದು ಸೂಕ್ತ ಸಾಕ್ಷ್ಯಾಧಾರ ಪರಿಶೀಲಿಸಿ ತೀರ್ಮಾನ ಮಾಡಬೇಕು ಮತ್ತು ಕೊಡಬೇಕು ! ಇಲ್ಲಿ ಆ ಸಹಜ ನ್ಯಾಯವೂ ಪರಿ ಪಾಲನೆಯಾಗಲಿಲ್ಲವೇ .. ಅದೂ ಯತಿಗಳಿಂದ !!!!

ಹಾಂ . ಇನ್ನೂ ಒಂದು ವೈರುಧ್ಯ ಪೂರ್ಣವಾದ ಅಭಿಪ್ರಾಯ ಅದೇ ಶಂಕರ ನಮನ ದಿಂದ ಹೊರ ಬಿದ್ದಿದೆ .

ಹವ್ಯಕ ಮಹಾಸಭಾದ ಆಡಳಿತ ಮಂಡಳಿ ಬದಲಾಗಿ , ಶ್ರೀ ರಾಮಚಂದ್ರಾಪುರ ಮಠದ ಕುರಿತಾದ ತನ್ನ ನಿಲುವನ್ನು ತಿದ್ದಿ ಕೊಂಡಲ್ಲಿ ಅಖಿಲ ಹವ್ಯಕ ಒಕ್ಕೊಟ ತನ್ನನ್ನು ತಾನು ಮಹಾಸಭೆಯಲ್ಲಿ ವಿಲೀನ ಗೊಳಿಸಿಕೊಳ್ಳುತ್ತದಂತೆ . ಅಂದರೆ ಆಡಳಿತ ಮಂಡಳಿ ಸಂಸ್ಥೆ ಎರಡು ಬೇರೆ ಬೇರೆ ವಿಷಯಗಳು . ಆದರೆ ಅದೇ ಮಠದ ವಿಷಯಕ್ಕೆ ಬಂದರೆ ಪೀಠಾಧಿಪತಿಗಳ ಮೇಲಿರುವ ಅಪಾದನೆಯಿಂದ ಮಠ ಪತನದತ್ತ ಹೊರಟಿದೆಯಂತೆ .

 

ಈ ವೈರುಧ್ಯಗಳನ್ನು ನೋಡಿದಾಗ ಎಲ್ಲರ ಹೆಮ್ಮೆಯ ಮಠ ಶಂಕರ ಪೀಠ ಶ್ರೀ ರಾಮಚಂದ್ರಾಪುರ ಮಠ ಸೂಕ್ತ ಪೀಠಾಧಿಪತಿಗಳಿಲ್ಲದೆ ಪತನದ ದಾರಿಯಲ್ಲಿ ಹೋಗಬೇಕು ಎನ್ನುವ ಕಾರಣದಿಂದಲೇ ಈಗಿನ ಪೀಠಾಧಿಪತಿಗಳ ಮೇಲೆ ಆರೋಪಗಳು ಸೃಷ್ಠಿಯಾಗುತ್ತಿವೆಯೇ ಎಂಬ ಅನುಮಾನಗಳಿಗೆ ಹೌದು ಎಂದು ಹೇಳುವಂತಹ ಸಾಕಷ್ಟು ಪುರಾವೆಗಳು ಈ ರೀತಿಯಲ್ಲಿ ಸಿಗುತ್ತಿವೆ !!!!

 

ಇವೆಲ್ಲವನ್ನೂ ಸ್ಥೂಲವಾಗಿ ಗಮನಿಸಿದ ನಮ್ಮಂತಹ ಒಬ್ಬ ಸಾಮಾನ್ಯ ಶಂಕರ ಭಗವತ್ಪಾದರ ಅನುಯಾಯಿ , ಅದ್ವೈತಿಗಳಿಗೆ ಅನಿಸುವುದು- ಶಂಕರರ ಪರಂಪರೆ ತಮ್ಮದೆಂದು ಹೇಳಿಕೊಳ್ಳುವ ಅದ್ವೈತ ಮಠಗಳು ಶಂಕರರಿಂದಲೇ ಸ್ಥಾಪನೆಯಾದ ಮತ್ತೊಂದು ಮಠವನ್ನು , ಆ ಮಠದ ಲಕ್ಷಾಂತರ ಶಿಷ್ಯ ಭಕ್ತರ ಆತ್ಮಾಭಿಮಾನವನ್ನು ಕೆಣಕಿ ಅವಮಾನ ಮಾಡುವ ಉದ್ದೇಶ ಈ ಶಂಕರ ನಮನಕಿತ್ತೇ ಎನ್ನುವುದು !!!

 

ನಮ್ಮ ಅನಿಸಿಕೆ ಸುಳ್ಳಾಗಲಿ . ನಾವು ನೋಡಿದ ಎಲ್ಲಾ ವರದಿಗಳೂ ಸುಳ್ಳಾಗಲಿ , ಹವ್ಯಕರಿಗೆ ಶ್ರೀ ಶಂಕರ ಭಗವತ್ಪಾದರ ವರ ಪ್ರಸಾದವಾಗಿರುವ ಎಲ್ಲಾ ಹವ್ಯಕ ಮಠಗಳೂ ಕೂಡ ಯಾವುದೇ ಒಳಸಂಚಿಗೆ ತಮ್ಮನ್ನು ಬಲಿ ಕೊಟ್ಟು ಕೊಳ್ಳದೆ ಆಚಂದ್ರಾರ್ಕ ಶಂಕರ ತತ್ವಗಳನ್ನು ನಮಗೆಲ್ಲರಿಗೂ ಧಾರೆ ಎರೆಯುತ್ತಿರಲಿ !!!

 

ನಮಸ್ಕಾರಗಳೊಂದಿಗೆ
ಒಬ್ಬ ಹವ್ಯಕ – ಒಬ್ಬ ಅದ್ವೈತಿ !

Author Details


Srimukha

1 thought on “ಶಂಕರ ನಮನದ ಉದ್ದೇಶ ಶಾಂಕರ ಪೀಠವನ್ನು, ಅದ್ವೈತಿಗಳನ್ನು ಅವಮಾನಿಸುವುದಾಗಿತ್ತೇ ???

  1. That was a first public function of the ‘Shadnyantris’ (Conspirators). Those who used to hold closed door secret meetings had arranged that ‘Public Function’ giving a colour of ‘Spiritual Function’ in the name of ‘Shankara Namana’. Purpose was to spew venom against our Sri Ramachandrapura Math, against our Swamiji and also against our ‘Akhila Havyaka Mahasabha, Bengaluru’. Major part of the time was spent for making defamatory remarks against our Swamiji and in criticizing our ‘Akhila Havyaka Mahasabha, Bengaluru’ without much discussing on Shankara’s ‘Advaita’ spiritualism. Three Swamiji’s had directly participated in the programme. One senior Swamiji and his Junior were represented in their absentia by their Math’s Administrator, who also much spoke against our Sri Matha and our Pujya Swamiji. Avani Math (Kolar), Nelamangala Math, Harihara Pura Math (Koppa, Chikkamagaluru), Koodli Sringeri Math (Shivamogga) and Balekudru Matha, (Kundapura, Udupi) who are all in Sree Adi Shankaracharya tradition were conspicuously absent. It was like a ‘political function’ which lacked spirituality. By hateful talks of three Swamijis present and the talks of the Representative of the other two Senior and Junior Swamijis ‘Hate Messages’ were sent against our Sri Matha and Swamiji to malign the image of our Sri Matha and our Swamiji. Positive development is that many of the devotees and disciples who had attended the programme did not relish the ‘hate talks’ of their own Swamiji and also the ‘hate talks’ of the invited Swamijis present and of dignitaries.

Leave a Reply

Your email address will not be published. Required fields are marked *