ಶ್ರೀರಾಘವೇಂದ್ರಭಾರತೀ ಸವೇದ ಸಂಸ್ಕ್ರತ ಮಹಾವಿದ್ಯಾಲಯದ ವಾಣೀಪೂಜಾ ಮತ್ತು ವಾರ್ಷಿಕೋತ್ಸವ

ಶಿಕ್ಷಣ

ವಿದ್ಯೆಯ ಸಾರ್ಥಕತೆಯು ಅದರ ಆಚರಣೆಯಲ್ಲಿದೆ : ಪ್ರಮೋದ ಪಂಡಿತ

 

ವೇದ-ಸಂಸ್ಕ್ರತಗಳ ಮಹತ್ತ್ವವು ಕೇವಲ ಅಧ್ಯಯನದಲ್ಲಿಲ್ಲ; ಅದರ ಆಚರಣೆಯಲ್ಲಿದೆ. ಆಚಾರವಂತನಾದ ವಿದ್ವಾಂಸನಿಗೇ ಜಗತ್ತು ಗೌರವವನ್ನು ಕೊಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳೆಲ್ಲರೂ ಜೀವನದಲ್ಲಿ ಆಚಾರ – ವಿಚಾರಗಳ ಶುದ್ಧತೆಯನ್ನು ಅಳವಡಿಸಿಕೊಳ್ಳಬೇಕು. ಇದರಿಂದ ವಿದ್ವಾಂಸ  ಹಾಗೂ ಅವನು ಕಲಿತ ವಿದ್ಯಾಲಯ ಎರಡೂ ಕೀರ್ತಿ ಪಡೆಯುತ್ತವೆ. ನಮ್ಮ ಪೂರ್ವಾಚಾರ್ಯರಿಂದ ಸ್ಥಾಪಿತವಾದ ಈ ವಿದ್ಯಾಲಯವು ನಮ್ಮೆಲ್ಲರ ಆರಾಧ್ಯ ಶ್ರೀಸಂಸ್ಥಾನದವರ ಕೃಪಾಶೀರ್ವಾದದಿಂದ ಸಾವಿರಾರು ವಿದ್ಯಾರ್ಥಿಗಳ ಆಶ್ರಯ ಸ್ಥಾನವಾಗಲಿ. ನಾಡಿನ ಎಲ್ಲ ವಿದ್ಯಾಲಯಗಳಿಗೆ ಆದರ್ಶವಾಗಲಿ, ಎಂದು ವಿದ್ಯಾವಿಭಾಗದ ಕಾರ್ಯದರ್ಶಿಗಳಾದ ಶ್ರೀ ಪ್ರಮೋದ ಪಂಡಿತರು ನುಡಿದರು.

 

ಶ್ರೀಮಠದ ಅಂಗಸಂಸ್ಥೆಯಾದ ಶ್ರೀರಾಘವೇಂದ್ರಭಾರತೀ ಸವೇದ ಸಂಸ್ಕ್ರತ ಮಹಾವಿದ್ಯಾಲಯದ ವಾಣೀಪೂಜಾ ಮತ್ತು ವಾರ್ಷಿಕೋತ್ಸವದಲ್ಲಿ ಮುಖ್ಯ ಅಭ್ಯಾಗತರಾಗಿ ಅವರು ಮಾತನಾಡಿದರು.

 

ಅಭ್ಯಾಗತರಾದ ಮುಗ್ವಾ ಗಾಮ ಪಂಚಾಯತ್ ಅಧ್ಯಕ್ಷ ಶ್ರೀ ಟಿ. ಎಸ್. ಹೆಗಡೆ ಕೊಂಡಕೆರೆಯವರು ಮಾತನಾಡಿ, ವೇದ-ಸಂಸ್ಕ್ರತಗಳ ಉತ್ಕರ್ಷಕ್ಕೆ ಮತ್ತು ಕಾಲೇಜಿನ ಅಭಿವೃದ್ಧಿಗೆ ತನ್ನ ವೈಯಕ್ತಿಕ ನೆಲೆಯಲ್ಲಿ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷನಾಗಿ ಪೂರ್ಣ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.

 

ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ವೇ.ಮೂ. ಸುಬ್ರಹ್ಮಣ್ಯ ಭಟ್ಟರು ವಹಿಸಿದ್ದರು.
ಪ್ರಾಚಾರ್ಯ ವಿದ್ವಾನ್ ಗಣೇಶ ಭಟ್ಟರು ಪ್ರಸ್ತಾಪಿಸಿ, ಅತಿಥಿಗಳನ್ನು ಪರಿಚಯಿಸಿದರು.
ಪೂರ್ವ ಪ್ರಾಚಾರ್ಯ ವಿದ್ವಾನ್ ಶ್ರೀ ವಿ. ಜಿ. ಹೆಗಡೆ ಗುಡ್ಗೆ, ಆಡಳಿತ ಮಂಡಳಿಯ ಸದಸ್ಯ ಶ್ರೀ ಸುಬ್ರಾಯ ಹೆಗಡೆ ತಡಾಣಿ ವೇದಿಕೆಯಲ್ಲಿದ್ದರು.

 

ಉಪಾಧ್ಯಕ್ಷ ವಿದ್ವಾನ್ ಶಂಕರ ಭಟ್ಟ ಗಾಣ್ಗೆರೆ ವಂದಿಸಿದರು. ಡಾ. ನಾಗಪತಿ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *