ನಂತೂರು : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶಂಕರಶ್ರೀ ಸಭಾಭವನದಲ್ಲಿ ಶ್ರೀ ಭಾರತೀ ಪದವಿ ಕಾಲೇಜಿನ ಐಟಿ ಅಸೋಸಿಯೇಶನ್ ನೇತೃತ್ವದಲ್ಲಿ ಟೆಕ್‌ಟಿಸ್-2019 ಎಂಬ ಇಂಟರ್‌ಕ್ಲಾಸ್ ಸ್ಪರ್ಧಾವಳಿಯನ್ನು ಆಯೋಜಿಸಲಾಗಿತ್ತು. ಅಭ್ಯಾಗತರಾಗಿ ನಿಮಂತ್ರಿತರಾಗಿದ್ದ ಕಾಕುಂಜೆ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್ ಮೆನೇಜಿಂಗ್ ಡೈರೆಕ್ಟರ್ ಶ್ರೀ ಜಿ.ಕೆ.ಭಟ್ಟ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಸಂಘಟಿಸಿ, ನಿಭಾಯಿಸುವ ಮತ್ತು ಕಾಲೇಜಿನ ಇತರ ವಿಭಾಗದ ವಿದ್ಯಾರ್ಥಿಗಳಿಗೆ ಸರ್ಧೆ ಆಯೋಜನೆ ಅತ್ಯುತ್ತಮವಾಗಿದೆ. ಉಪನ್ಯಾಸಕರ ಬೆಂಬಲ, ಪ್ರೋತ್ಸಾಹ, ಮಾರ್ಗದರ್ಶನವೂ ಗಮನಾರ್ಹವಾಗಿದೆ. ಇಂತಹ ಕಾರ್ಯಕ್ರಮಗಳಿಗೆ ನಿರಂತರ ಬೆಂಬಲ ನೀಡುತ್ತೇವೆ ಎಂದು ಹೇಳಿದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಈಶ್ವರಪ್ರಸಾದ್ ಎ. ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಬಿಸಿಎ ವಿಭಾಗದ ಉಪನ್ಯಾಸಕ ಶ್ರೀ ಸತ್ಯನಾರಾಯಣಪ್ರಸಾದ್, ಪ.ಪೂ. ಕಾಲೇಜು ಪ್ರಾಂಶುಪಾಲೆ ಶ್ರೀಮತಿ ವಿದ್ಯಾ ಭಟ್ಟ, ಹಿರಿಯ ಉಪನ್ಯಾಸಕಿ ಶ್ರೀಮತಿ ಸುಭದ್ರಾ ಭಟ್ಟ, ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕು.ದಾಕ್ಷಾಯಿಣಿ ಸ್ವಾಗತಿಸಿ, ಐಟಿ ಅಸೋಸಿಯೇಶನ್ ಕೋಆರ್ಡಿನೇಟರ್ ಶ್ರೀ ಶರತ್ ವಂದಿಸಿದರು. ವಿದ್ಯಾರ್ಥಿನಿ ಕು. ಅರ್ಚನಾ ನಿರೂಪಿಸಿದರು.
ಇದರಸಮಾರೋಪದಲ್ಲಿ
ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಶ್ರೀ ರವೀಶ್ವರ ಎಸ್. ಅವರು ಮಾತನಾಡಿ, ಕಂಪ್ಯೂಟರ್ ಅಂದರೆ ಅವಕಾಶಗಳ ಭಂಡಾರ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸದುಪಯೋಗಪಡಿಸಿಕೊಳ್ಳಬೇಕು. ಸ್ಪರ್ಧೆಗಳಲ್ಲಿ ಸೋಲು ಗೆಲುವು ಖಚಿತ. ಸೋಲನ್ನು ಸವಾಲಾಗಿ ಸ್ವೀಕರಿಸಿ, ಗೆಲುವನ್ನು ಗುರಿ ಸಾಧಿಸುವುದಕ್ಕೆ ಅನುಕೂಲವಾಗುವಂತೆ ಯೋಜನೆ ರೂಪಿಸಬೇಕು ಎಂದು ಹೇಳಿದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಈಶ್ವರಪ್ರಸಾದ್ ಎ. ಅಧ್ಯಕ್ಷತೆ ವಹಿಸಿ, ಮಾತನಾಡಿ, ಧನಾತ್ಮಕ ಚಿಂತನೆಯ ಮೂಲಕ ಬೆಳವಣಿಗೆ ಸಾಧಿಸುವ ಛಲವನ್ನು ವಿದ್ಯಾರ್ಥಿಗಳು ಹೊಂದಿರಬೇಕು ಎಂದರು.
ಪಪೂ ಕಾಲೇಜು ಪ್ರಾಂಶುಪಾಲೆ ಶ್ರೀಮತಿ ವಿದ್ಯಾ ಭಟ್ಟ ಹಿರಿಯ ಉಪನ್ಯಾಸಕಿ ಶ್ರೀಮತಿ ಸುಭದ್ರಾ ಭಟ್ಟ ಬಿಸಿಎ ವಿಭಾಗದ ಉಪನ್ಯಾಸಕ ಶ್ರೀ ಸತ್ಯನಾರಾಯಣಪ್ರಸಾದ್, ಕು. ಅನುಷಾ ಎಸ್.ರೈ, ಕು. ಅಕ್ಷತಾ, ಕು.ಕಾವ್ಯಾ, ಹಿರಿಯ ಕನ್ನಡ ಉಪನ್ಯಾಸಕಿ ಶ್ರೀಮತಿ ಗಂಗಾರತ್ನ ಮುಗುಳಿ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಕು. ಸಂಧ್ಯಾ ಸ್ವಾಗತಿಸಿ, ಶ್ರೀ ಧನುಷ್ ವಂದಿಸಿದರು. ಐಟಿ ಅಸೋಸಿಯೇಶನ್ ಕೋಆರ್ಡಿನೇಟರ್ ಶ್ರೀ ಶರತ್ ಸ್ಪರ್ಧೆಗಳ ವಿಜೇತರ ಪಟ್ಟಿ ವಾಚಿಸಿದರು. ಶ್ರೀ ವೆಂಕಟೇಶ್, ಕು. ಶ್ವೇತಾ, ಕು.ಯಶಸ್ವೀ, ಶ್ರೀ ಕೃಷ್ಣಪ್ರಸಾದ್ ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾರ್ಥಿನಿ ಕು. ಗಂಗಾ ಎಸ್.ಹೆಗ್ಡೆ ನಿರೂಪಿಸಿದರು.