ಬದಿಯಡ್ಕ: ಶ್ರೀಭಾರತೀ ವಿದ್ಯಾಪೀಠದಲ್ಲಿ ೨೦೧೯-೨೦ನೆಯ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಹರ್ಷೋಲ್ಲಾಸದಿಂದ ನಡೆಸಲಾಯಿತು. ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ನಾವು ಎಷ್ಟು ಅಂಕ ಪಡೆದರೂ ಕಡಿಮೆಯೇ. ಅಂಕ ಗಳಿಸುವುದರ ಜೊತೆಗೆ ಸರ್ಜನಾತ್ಮಕ ಕ್ರಿಯಾಶೀಲತೆಯೂ ಇರಬೇಕು ಎಂದು ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಪಂಜಿತ್ತಡ್ಕ ಅವರು ಶಾಲಾ ನೀತಿ-ನಿಯಮಗಳನ್ನು ತಿಳಿಸಿ, ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಮುನ್ನುಗ್ಗಬೇಕು ಎಂದು ಹೇಳಿದರು.
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾಪೀಠದ ಪೂರ್ವವಿದ್ಯಾರ್ಥಿ ಶ್ರೀಕೃಷ್ಣ ಶರ್ಮಾ ಕಡಪ್ಪು ಪ್ರಶಂಸಾ ಗೌರವವನ್ನು ಸ್ವೀಕರಿಸಿ ಮಾತನಾಡಿ ನಮ್ಮ ಲಕ್ಷ್ಯ, ಗುರಿ ಉನ್ನತವಾಗಿದ್ದರೆ ಮಾತ್ರ ಸಾಧನೆಯನ್ನು ಮಾಡಬಹುದು. ನನ್ನ ಗುರಿ ನನ್ನ ಹೆತ್ತವರಿಗೆ ನನ್ನ ಮುಂದಿನ ವಿದ್ಯಾಭ್ಯಾಸ ಹೊರೆಯಾಗದಂತೆ ಆಗಬೇಕು ಎಂದರು.
ರಕ್ಷಕ ಸಂಘದ ಅಧ್ಯಕ್ಷ ಗಣೇಶ ಪೈ ಬದಿಯಡ್ಕ, ಖಜಾಂಚಿ ರಾಜಗೋಪಾಲ ಚುಳ್ಳಿಕ್ಕಾನ ಶುಭಹಾರೈಸಿದರು. ಶಿಕ್ಷಕಿ ಶ್ರೀಮತಿ ಮಮತಾ ಸಾವಿತ್ರಿ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಮತಿ ರಶ್ಮಿ ಸಮ್ಮಾನ ಪತ್ರ ವಾಚಿಸಿದರು. ಸ್ಪೂರ್ತಿ ಸ್ವಾಗತಿಸಿ, ಆಕಾಶ್ ಸಿ. ಎಸ್. ವಂದಿಸಿದರು. ಹತ್ತನೆಯ ತರಗತಿಯ ವಿದ್ಯಾರ್ಥಿಗಳಾದ ನಿಖಿತಾ ಕೆ., ಪ್ರತೀಕ ಕೆ. ನಿರೂಪಿಸಿದರು.