ಕುಮಟಾ: ಕುಮಟಾ ತಾಲೂಕಿನ 7ನೆಯ ಕನ್ನಡ ಸಾಹಿತ್ಯ ಸಮ್ಮೇಳನವು
ದಿನಾಂಕ 16.02.19 ಮತ್ತು 17.02.19ರ ಶನಿವಾರ ಹಾಗೂ ಭಾನುವಾರದಂದು ಕತಗಾಲ್ ಎಸ್.ಕೆ.ಪಿ. ಶಾಲೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಕು. ರಾಮಕೃಷ್ಣ ಭಟ್ಟ, ಕು. ನೇಹಾ ಭಟ್ಟ ಮತ್ತು ಕು. ಸ್ವಾತಿ ಭಟ್ಟ ಮಕ್ಕಳ ಕವಿ ಗೋಷ್ಠಿಯಲ್ಲಿ ಸ್ವರಚಿತ ಕವನ/ಚುಟುಕು ವಾಚನ ಮಾಡಿದರು.
ಕು. ಸಂಜ್ಞಾ ಭಟ್ಟ ಮತ್ತು ಕು.ಸ್ವಾತಿ ಭಟ್ಟ ಕಥಾಸ್ಪರ್ಧೆಯಲ್ಲಿ ಭಾಗವಹಿಸಿ, ಮೊದಲನೆಯ ಹಾಗೂ ಎರಡನೆಯ ಸ್ಥಾನ ಗಳಿಸಿ ಶಾಲೆಗೆ ಹೆಮ್ಮೆ ತಂದರು. ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಪ್ರಶಂಸೆ ವ್ಯಕ್ತಪಡಿಸಿದರು.