ಮೈಸೂರಿನಲ್ಲಿ ಆರ್ಷಶಿಕ್ಷಣ ಶಿಬಿರ : ಬೇಸಿಗೆ ರಜೆಯಲ್ಲಿ ಭಾರತೀಯತೆಯ ಪಾಠ

ಶಿಕ್ಷಣ

ಆತ್ಮೀಯ ಧರ್ಮಬಂಧುಗಳೇ,
ನಮ್ಮ ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಪರಿಚಯವು ಆಗಬೇಕಾದದ್ದು ಅತ್ಯಂತ ಅಗತ್ಯ. ಈ ಶ್ರೀಮಂತ ಸಂಸ್ಕೃತಿಯ ಪರಿಚಯವನ್ನು ಮಾಡಿಕೊಡುವುದೇ ನಾವು ನಮ್ಮ ಮಕ್ಕಳಿಗೆ ಮಾಡಬಹುದಾದ ದೊಡ್ಡ ಉಪಕಾರ.
ಆದರೆ ಈ ಸಂಸ್ಕೃತಿಯ ಪರಿಚಯವನ್ನು ಕೊಡುವುದು ಹೇಗೆ?

 

ಇಲ್ಲಿದೆ ಪರಿಹಾರ:
ಮೈಸೂರಿನ ಬ್ರಹ್ಮ ಸಂಸತ್ ಸಂಸ್ಥೆಯು, ಭಾರತೀ ಯೋಗಧಾಮ ಈ ಸಂಸ್ಥೆಯ ಸಹಯೋಗದೊಂದಿಗೆ ಡಾ. ಶ್ರೀ ಶಂಕರನಾರಾಯಣ ಜೋಯಿಸ್ ರವರ ನೇತೃತ್ವದಲ್ಲಿ ಆರ್ಷ ಶಿಕ್ಷಣ ಶಿಬಿರವನ್ನು ಆಯೋಜಿಸಿದೆ.

ಯಾವಾಗ?
ಏಪ್ರಿಲ್ 26ರಿಂದ ಮೇ 10ರ ವರೆಗೆ (15 ದಿನಗಳು)

ಎಲ್ಲಿ?
ವಿಜಯಗಿರಿ, ಭಾರತೀ ಯೋಗಧಾಮ, ಉತ್ತನಹಳ್ಳಿ, ಮೈಸೂರು.

 

ತಿಳಿಸಿ ಕೊಡಲಾಗುವ ವಿಷಯಗಳು
* ವೇದದ ಸೂಕ್ತಗಳು.
* ಸಂಧ್ಯಾವಂದನೆಯ ಮಂತ್ರಗಳು.
* ಭಾರತೀಯ ಸಂಸ್ಕೃತಿಗೆ ಸಂಬಂಧಪಟ್ಟ- ವಿದ್ಯೆ, ಶಿಕ್ಷಣ, ಗುರು, ಆಸ್ತಿಕತೆ, ಕರ್ತವ್ಯ, ಪಾಪ – ಪುಣ್ಯಗಳು.
* ದೇವರಪೂಜೆ.
* ಜೀವನದಲ್ಲಿ ಯಶಸ್ವಿಯಾಗುವ ಸೂತ್ರಗಳು.
* ಏಕಾಗ್ರತೆ ಮೊದಲಾದ ವಿಷಯಗಳನ್ನು ಕುರಿತ ಪಾಠಪ್ರವಚನಗಳಿರುತ್ತವೆ.
* ಕಥೆಯ ರೂಪದಲ್ಲಿ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವುದು ಈ ಶಿಬಿರದ ವೈಶಿಷ್ಟ್ಯ.

ಪಾಠ ಪ್ರವಚನಗಳಲ್ಲಿ ನುರಿತ ಅಧ್ಯಾಪಕರು ಶಿಕ್ಷಣವನ್ನು ನೀಡುತ್ತಾರೆ.

ನಿತ್ಯವೂ ಬೆಳಿಗ್ಗೆ ಆಸನ ಮತ್ತು ಪ್ರಾಣಾಯಾಮದ ತರಗತಿಗಳು ಇರುತ್ತವೆ.

ಯಾರು ಭಾಗವಹಿಸಬಹುದು?
ಆಸಕ್ತರಾದ 10ರಿಂದ 16 ವರ್ಷ ವಯಸ್ಸಿನ ತ್ರಿಮತಸ್ಥ ಬ್ರಾಹ್ಮಣ ವಿದ್ಯಾರ್ಥಿ ವಿದ್ಯಾರ್ಥಿನಿಯರು.

ಪ್ರವೇಶ ಶುಲ್ಕ : ₹ 1000

ಮೊದಲು ಬಂದ 80 ವಿದ್ಯಾರ್ಥಿ ಗಳಿಗೆ ಮಾತ್ರ ಅವಕಾಶವಿರುತ್ತದೆ.

 

ವಿ.ಸೂ.:
ನೋಂದಣಿಗೆ ಕೊನೆಯ ದಿನಾಂಕ ಏಪ್ರಿಲ್ 10, 2019
ಸಂದರ್ಶನದ ಮೂಲಕ ವಿದ್ಯಾರ್ಥಿಗಳನ್ನು ಆರಿಸಿಕೊಳ್ಳಲಾಗುತ್ತದೆ.
ಆಸಕ್ತರು ಈ ಸುವರ್ಣ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಪ್ರಾರ್ಥನೆ.

ತಮ್ಮ ಪರಿಚಯದ ತ್ರಿಮತಸ್ಥ ಬ್ರಾಹ್ಮಣರಿಗೆ ತಿಳಿಸಿ ಅವರ ಮಕ್ಕಳೂ ಪಾಲ್ಗೊಳ್ಳುವಂತೆ ಮಾಡಬಹುದಾಗಿದೆ.

ನೋಂದಣಿ ಹಾಗೂ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
9480772575
9880771888

Author Details


Srimukha

Leave a Reply

Your email address will not be published. Required fields are marked *